ನವದೆಹಲಿ,ಡಿ.1- ಈರುಳ್ಳಿ ಬೆಲೆ ತಗ್ಗು ವಂತೆ ಮಾಡಲು ಕೇಂದ್ರ ಸರ್ಕಾರ ವಿದೇಶದಿಂದ ಈರುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿ ಕೊಳ್ಳಲು ಮುಂದಾಗಿದೆ. ಈಜಿಪ್ಟ್‍ನಿಂದ ಈರುಳ್ಳಿ ಭಾರತಕ್ಕೆ ಆಮದಾಗುತ್ತಿದೆ. ಟರ್ಕಿಯಿಂದಲೂ ಹೆಚ್ಚುವರಿಯಾಗಿ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈಜಿಪ್ಟ್‍ನಿಂದ 6090 ಟನ್ ಮತ್ತು ಟರ್ಕಿಯಿಂದ 11 ಸಾವಿರ ಟನ್ ಈರುಳ್ಳಿ ಆಮದು ಮಾಡಿಕೊಳ್ಳಲಾಗುವುದು ಎಂದು ಸರ್ಕಾರದ ಮೂಲಗಳು ಹೇಳಿವೆ. ಡಿಸೆಂಬರ್ 2 ಅಥವಾ 3ನೇ ವಾರದ ವೇಳೆಗೆ ಈ ಈರುಳ್ಳಿ ಭಾರತದ ಮಾರುಕಟ್ಟೆಗಳಲ್ಲಿ ಲಭ್ಯವಾಗ ಲಿದೆ. ಈರುಳ್ಳಿ…
ನಾಳೆಯಿಂದ ಮೊಬೈಲ್ ಕರೆ ದರ ಏರಿಕೆ!
December 2, 2019ಮುಂಬೈ,ಡಿ.1- ದರ ಏರಿಕೆ ಎಂಬುದು ದೇಶದ ಜನಸಾಮಾನ್ಯರಿಗೆ ಒಂದಲ್ಲ ಒಂದು ರೀತಿಯಲ್ಲಿ ಪೆಟ್ಟು ನೀಡುತ್ತಲೇ ಇದೆ. ಇತ್ತೀಚೆಗೆ ಈರುಳ್ಳಿ, ಪೆಟ್ರೋಲ್ ದರ ಏರಿಕೆಯಾಗಿದ್ದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿತ್ತು. ಈಗ ಎಲ್ಲರ ಪ್ರೀತಿಯ ಮೊಬೈಲ್ ಫೋನ್ ಸರದಿ. ಏರ್‍ಟೆಲ್, ಐಡಿಯಾ-ವೊಡಾಫೋನ್ ಮತ್ತು ರಿಲಯನ್ಸ್ ಜಿಯೋ ಕಂಪೆನಿ ಗಳು ಕರೆ ದರ ಏರಿಕೆಗೆ ಮುಂದಾಗಿವೆ. ಖಾಸಗಿ ಟೆಲಿಕಾಂ ಕಂಪೆನಿಗಳು ಕಳೆ ದೆರಡು ತ್ರೈಮಾಸಿಕಗಳಲ್ಲಿ ಹೆಚ್ಚು ನಷ್ಟ ಅನುಭವಿಸಿದ್ದರಿಂದ ನಷ್ಟ ಸರಿದೂಗಿಸಿ ಕೊಳ್ಳಲು ಕರೆ ದರ ಹೆಚ್ಚಳದ ಮಾತನಾಡಿದ್ದವು. ಅದರಂತೆ…
ಆರೋಗ್ಯ, ಸಾರಿಗೆ, ಆರ್ಥಿಕ ಸಹಾಯ ಸೌಲಭ್ಯ ವಿಸ್ತರಣೆಗೆ ಕಟ್ಟಡ ಕಾರ್ಮಿಕರ ಆಗ್ರಹ
December 2, 2019ಮೈಸೂರು,ಡಿ.1(ಆರ್‍ಕೆ)- ಆರೋಗ್ಯ, ಸಾರಿಗೆ, ಆರ್ಥಿಕ ಸಹಾಯ ಹಾಗೂ ಪಿಂಚಣಿ ಸೌಲಭ್ಯಗಳನ್ನು ಸರ್ಕಾರ ವಿಸ್ತರಿ ಸಬೇಕೆಂದು ಕಟ್ಟಡ ಕಾರ್ಮಿಕರು ಇಂದಿಲ್ಲಿ ಸರ್ಕಾರವನ್ನು ಆಗ್ರಹಿಸಿದ್ದಾರೆ. ಕರ್ನಾಟಕ ಸಂಯುಕ್ತ ಕಟ್ಟಡ ಕಾರ್ಮಿ ಕರ ಸಂಘದ ಆಶ್ರಯದಲ್ಲಿ ಮೈಸೂರಿನ ಶ್ರೀ ಹರ್ಷ ರಸ್ತೆಯಲ್ಲಿರುವ ಗೋವರ್ಧನ ಹೋಟೆಲ್‍ನಲ್ಲಿ ನಡೆದ ಸಮಾವೇಶದಲ್ಲಿ ತಮಗೆ ಸೌಲಭ್ಯ ನೀಡಬೇಕೆಂದು ಆಗ್ರಹಿಸಿ ನಾಳೆ(ಡಿ.2) ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲು ಕಟ್ಟಡ ಕಾರ್ಮಿ ಕರು ನಿರ್ಧರಿಸಿದರು. ಎಐಯುಟಿಯುಸಿ ಮೈಸೂರು ಜಿಲ್ಲಾ ಸಮಿತಿ ಜಿಲ್ಲಾಧ್ಯಕ್ಷ ಯಶೋಧರ್ ಅಧ್ಯಕ್ಷತೆ ವಹಿಸಿದ್ಧ ಸಮಾವೇಶದಲ್ಲಿ ಕಾರ್ಮಿಕರ…
ಸಂಶೋಧನೆ ಮೂಲಕ ಮೈಸೂರು ವಿವಿಗೆ ಹೆಸರು ತನ್ನಿ
December 2, 2019ಮೈಸೂರು,ಡಿ.1(ಆರ್‍ಕೆಬಿ)- ವಿದ್ಯಾರ್ಥಿಗಳು ಮಾಡುವ ಸಂಶೋಧನೆಗಳ ಪುಸ್ತಕ ತರುತ್ತಿದ್ದೇವೆ ಎಂಬುದು ಒಂದು ಭಾಗವಾದರೆ, ವಿವಿಯ ಪ್ರಗತಿ ತೋರಿಸಲು ಉತ್ತಮ ಸಂಶೋಧನಾ ಲೇಖನಗಳನ್ನು ನ್ಯಾಕ್ ಅಥವಾ ಇನ್ನಾವುದೇ ಸಂಸ್ಥೆಗಳು ಕೇಳುತ್ತವೆ. ಇದರಿಂದ ವಿವಿಗೆ ಮತ್ತು ವಿಭಾಗಕ್ಕೆ ಒಳ್ಳೆಯ ಹೆಸರು ಬರಲು ಸಾಧ್ಯ. ಈ ಬಗ್ಗೆ ವಿದ್ಯಾರ್ಥಿಗಳು ಗಮನ ಹರಿಸಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ತಿಳಿಸಿದರು. ಮೈಸೂರು ಮಾನಸಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ `ಸಂವಿಧಾನ ದಿನಾಚರಣೆ ಹಾಗೂ ಸಂವಿಧಾನ ಪ್ರಸ್ತಾವನೆ ಅನಾ ವರಣ’ ಕಾರ್ಯಕ್ರಮಕ್ಕೆ…
ಮಂಗಳಮ್ಮರ `ದಿವ್ಯ ಶಿಕ್ಷಣ ದೀವಿಗೆ-ಶ್ರೀಮಾತೆ’, ಲೀಲಾಪ್ರಕಾಶ್‍ರ `ಕನ್ನಡ ಪಂಚರಾತ್ರಮ್’ ಕೃತಿ ಬಿಡುಗಡೆ
December 2, 2019ಮೈಸೂರು,ಡಿ.1(ವೈಡಿಎಸ್)-ಯಾದವ ಗಿರಿಯ ಶ್ರೀ ರಾಮಕೃಷ್ಣ ಆಶ್ರಮದ ಸಭಾಂ ಗಣದಲ್ಲಿ ಸಿ.ಎಸ್.ಮಂಗಳಮ್ಮ ವಿರಚಿತ `ದಿವ್ಯ ಶಿಕ್ಷಣ ದೀವಿಗೆ-ಶ್ರೀಮಾತೆ’ ಹಾಗೂ ಪ್ರವಚನ ಪಟು ಕೆ.ಲೀಲಾ ಪ್ರಕಾಶ್ ಅವರ `ಕನ್ನಡ ಪಂಚರಾತ್ರಮ್’ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಡಾ.ಕೆ.ಕೃಷ್ಣಮೂರ್ತಿ ಸಂಶೋಧನ ಪ್ರತಿ ಷ್ಠಾನ, ವಿದ್ಯುತ್ ಪ್ರಕಾಶನ ಸಂಯುಕ್ತಾ ಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಪುಸ್ತಕಗಳನ್ನು ಬಿಡುಗಡೆಗೊಳಿಸಿದರು. ನಂತರ ಮಾತ ನಾಡಿ, ದಿವ್ಯ ಶಿP್ಷÀಣ ದೀವಿಗೆ-ಶ್ರೀಮಾತೆ ಕೃತಿಯು ದಿವ್ಯತ್ರಯ ಸಾಹಿತ್ಯಕ್ಕೆ ಒಳ್ಳೆಯ ಕೊಡುಗೆ. ದಿವ್ಯತ್ರಯ ಸಾಹಿತ್ಯ ಕನ್ನಡ, ಇಂಗ್ಲಿಷ್, ಬೇರೆ ಬೇರೆ ಭಾಷೆಗಳಲ್ಲಿದ್ದು, ಅಗಾಧವಾಗಿ…
ಸಾಧಕರಿಗೆ `ಆಚಾರ್ಯ ಶ್ರೀ ವಿದ್ಯಾರಣ್ಯ ರಾಜ್ಯೋತ್ಸವ’ ಪ್ರಶಸ್ತಿ ಪ್ರದಾನ
December 2, 2019ಮೈಸೂರು, ಡಿ.1(ಎಸ್‍ಪಿಎನ್)- ವಿವಿಧ ಕ್ಷೇತ್ರದ ಹತ್ತು ಮಂದಿ ಸಾಧಕರಿಗೆ `ಆಚಾರ್ಯ ಶ್ರೀ ವಿದ್ಯಾರಣ್ಯ ರಾಜೋ ತ್ಸವ’ ಪ್ರಶಸ್ತಿಯನ್ನು ಡಾ.ರಾಜಶೇಖರ ಆಸ್ಪತ್ರೆ ಸಂಸ್ಥಾಪಕ ಡಾ.ಹೆಚ್.ಬಿ.ರಾಜ ಶೇಖರ್ ನೀಡಿ, ಗೌರವಿಸಿದರು. ಮೈಸೂರು ರೋಟರಿ ಐಡಿಯಲ್ ಜಾವಾ ಸಭಾಂಗಣದಲ್ಲಿ ಹಿಮಾಲಯ ಫೌಂಡೇ ಷನ್ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ `ಆಚಾರ್ಯ ಶ್ರೀ ವಿದ್ಯಾರಣ್ಯ ರಾಜ್ಯೋತ್ಸವ ಪ್ರಶಸ್ತಿ’ ಯನ್ನು ಪ್ರದಾನ ಮಾಡಿದರು. ಭಜನಾ ಕ್ಷೇತ್ರದ ವೆಂಕಟರಾಮಯ್ಯ, ಮೈಸೂರು ಸಾಂಪ್ರದಾಯಿಕ ಚಿತ್ರಕಲಾ ಕ್ಷೇತ್ರದ ಮೀರಾ ಕುಮಾರ್, ಶಿಕ್ಷಣ ಕ್ಷೇತ್ರದ ವಿ.ಶ್ರೀಕಂಠಸ್ವಾಮಿ ದೀಕ್ಷಿತ್, ಜ್ಯೋತಿಷ್ಯ…
`ಸಾಂವಿಧಾನಿಕ ಮೀಸಲಾತಿ’ ಸಾಮಾಜಿಕ ನ್ಯಾಯವೇ ಹೊರತು ತಾರತಮ್ಯವಲ್ಲ
December 2, 2019ಮೈಸೂರು, ಡಿ.1(ಪಿಎಂ)- `ಸಾಂವಿ ಧಾನಿಕ ಮೀಸಲಾತಿ’ ಸಾಮಾಜಿಕ ನ್ಯಾಯವೇ ಹೊರತು ತಾರತಮ್ಯವಲ್ಲ ಎಂದು ಮೈಸೂರು ವಿವಿ ಆಡಳಿತಾಂಗ ಕುಲಸಚಿವ ಪ್ರೊ. ಆರ್.ಶಿವಪ್ಪ ಪ್ರತಿಪಾದಿಸಿದರು. ಮೈಸೂರು ವಿವಿ ಸಂಶೋಧನಾ ವಿದ್ಯಾರ್ಥಿಗಳ ಸಂಘ, ದಲಿತ ವಿದ್ಯಾರ್ಥಿ ಒಕ್ಕೂಟದ ಜಂಟಿ ಆಶ್ರಯದಲ್ಲಿ ವಿವಿಯ ಇಎಂಎಂಆರ್‍ಸಿ ಸಭಾಂಗಣದಲ್ಲಿ `ಮೀಸ ಲಾತಿಯ ಸಾಂವಿಧಾನಿಕ ನೀತಿ’ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾ ಟಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಹಿಂದುಳಿದ ಹಾಗೂ ಶೋಷಿತ ಸಮು ದಾಯಗಳು ಮುಖ್ಯ ವಾಹಿನಿಯಿಂದ ದೂರವೇ ಉಳಿಯುವಂತಾಗಿದೆ….
ನಗರ ಬಸ್ ನಿಲ್ದಾಣದಿಂದ ವಿವೇಕಾನಂದ ವೃತ್ತದವರೆಗೆ ನೂತನ ಬಸ್ ಸಂಚಾರ
December 2, 2019ಮೈಸೂರು,ಡಿ.1(ಎಸ್‍ಪಿಎನ್)-ಮೈಸೂರು ನಗರ ಬಸ್ ನಿಲ್ದಾಣದಿಂದ ಶಿವದೇವಾ ಲಯ-ವಿವೇಕಾನಂದ ವೃತ್ತದವರೆಗೆ ನೂತನ ಬಸ್(ಮಾ.ಸಂ:81) ಸಂಚಾರ ನ.29ರಿಂದ ಆರಂಭಗೊಂಡಿದೆ. ವಿವೇಕಾನಂದನಗರ, ಅರವಿಂದನಗರ, ಕುವೆಂಪುನಗರದ ಸುತ್ತಮುತ್ತಲ ನಿವಾಸಿಗಳ ಅನುಕೂಲಕ್ಕಾಗಿ ಮಾರ್ಗ ಸಂಖ್ಯೆ:81ರ ಬಸ್ ಸಂಚಾರ ಆರಂಭಿಸಲಾಗಿದೆ. ಪ್ರತಿದಿನ ನಗರ ಬಸ್ ನಿಲ್ದಾಣದಿಂದ ಅಗ್ರಹಾರ, ಸಿದ್ದಪ್ಪ ವೃತ್ತ, ಆರ್‍ಟಿಓ ವೃತ್ತ, ಅಶೋಕ ವೃತ್ತ, ಕೆ.ಜಿ.ಕೊಪ್ಪಲು, ಅಪೋಲೋ ಆಸ್ಪತ್ರೆ, ಕಾವೇರಿ ಸ್ಕೂಲ್, ಅರವಿಂದನಗರ, ಶಿವದೇವಾ ಲಯ ಹಾಗೂ ವಿವೇಕಾನಂದ ವೃತ್ತದಲ್ಲಿ ಬಸ್ ಸಂಚಾರ ಕೊನೆಗೊಳ್ಳಲಿದೆ. ಬೆಳಿಗ್ಗೆ 10.25 ನಿಮಿಷಕ್ಕೆ ಆರಂಭವಾಗುವ ಬಸ್ ಸಂಚಾರ, ತದನಂತರ…
ಕನ್ನಡದಲ್ಲೇ ವಾದ ಮಂಡಿಸಿದರೆ ಹೆಚ್ಚು ಪರಿಣಾಮಕಾರಿ
December 1, 2019ಮೈಸೂರು,ನ.30(ವೈಡಿಎಸ್)- ನ್ಯಾಯ ವಾದಿಗಳು ಇಂಗ್ಲಿಷ್ ಭಾಷೆಗಿಂತ ಕನ್ನಡ ದಲ್ಲಿ ವಾದ ಮಂಡಿಸಿದರೆ ಪ್ರಕರಣದ ಒಳಾಂಶಗಳನ್ನು ಹೆಚ್ಚು ಪರಿಣಾಮ ಕಾರಿ ಯಾಗಿ ನ್ಯಾಯಾಲಯಕ್ಕೆ ತಿಳಿಸಿಕೊಟ್ಟಂ ತಾಗುತ್ತದೆ ಎಂದು ಮೈಸೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸುರೇಶ್ ಕೆ.ಒಂಟಿಗೋಡಿ ಸಲಹೆ ನೀಡಿದರು. ನ್ಯಾಯಾಲಯದ ಆವರಣದಲ್ಲಿ ಮೈಸೂರು ವಕೀಲರ ಸಂಘ ಶನಿವಾರ ಆಯೋಜಿ ಸಿದ್ದ ಕನ್ನಡ ರಾಜ್ಯೋತ್ಸವವನ್ನು ಉದ್ಘಾ ಟಿಸಿ ಮಾತನಾಡಿ, ಕನ್ನಡದಲ್ಲಿ ವಾದ ಮಂಡನೆ ಮಾಡುವ ಶಕ್ತಿಯಿದ್ದರೂ ಇಂಗ್ಲಿಷ್‍ನಲ್ಲೇ ಮಾಡುತ್ತೇವೆ. ಅದರೆ, ಇಂಗ್ಲೀಷ್‍ನಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಮಂಡನೆ ಮಾಡಲು…
ಉಪ ಚುನಾವಣೆ ನಂತರ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ
December 1, 2019ಬೆಂಗಳೂರು, ನ.30(ಕೆಎಂಶಿ)- ವಿಧಾನಸಭಾ ಉಪ ಚುನಾವಣೆ ನಂತರ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಮಾಜಿ ಗೃಹ ಸಚಿವ ಹಾಗೂ ಕಾಂಗ್ರೆಸ್ ಶಾಸಕ ರಾಮಲಿಂಗಾ ರೆಡ್ಡಿ ಭವಿಷ್ಯ ನುಡಿದಿದ್ದಾರೆ. ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ 6ಕ್ಕಿಂತ ಕಡಿಮೆ ಸ್ಥಾನ ಪಡೆದು ಅಧಿಕಾರ ಕಳೆದು ಕೊಳ್ಳಲಿದೆ ಎಂದು ಪಕ್ಷದ ಕಚೇರಿಯಲ್ಲಿ ಕರೆದಿದ್ದ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು. ಸೋಲುವ ಪಕ್ಷಕ್ಕೆ ಮತ್ತೆ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಸದಸ್ಯರು ವಲಸೆ ಹೋಗುವುದಿಲ್ಲ, ಈಗಾಗಲೇ ಬಿಜೆಪಿ ಸೇರಿರುವ 17 ಅನರ್ಹ…









