ಸಾಧಕರಿಗೆ `ಆಚಾರ್ಯ ಶ್ರೀ ವಿದ್ಯಾರಣ್ಯ ರಾಜ್ಯೋತ್ಸವ’ ಪ್ರಶಸ್ತಿ ಪ್ರದಾನ
ಮೈಸೂರು

ಸಾಧಕರಿಗೆ `ಆಚಾರ್ಯ ಶ್ರೀ ವಿದ್ಯಾರಣ್ಯ ರಾಜ್ಯೋತ್ಸವ’ ಪ್ರಶಸ್ತಿ ಪ್ರದಾನ

December 2, 2019

ಮೈಸೂರು, ಡಿ.1(ಎಸ್‍ಪಿಎನ್)- ವಿವಿಧ ಕ್ಷೇತ್ರದ ಹತ್ತು ಮಂದಿ ಸಾಧಕರಿಗೆ `ಆಚಾರ್ಯ ಶ್ರೀ ವಿದ್ಯಾರಣ್ಯ ರಾಜೋ ತ್ಸವ’ ಪ್ರಶಸ್ತಿಯನ್ನು ಡಾ.ರಾಜಶೇಖರ ಆಸ್ಪತ್ರೆ ಸಂಸ್ಥಾಪಕ ಡಾ.ಹೆಚ್.ಬಿ.ರಾಜ ಶೇಖರ್ ನೀಡಿ, ಗೌರವಿಸಿದರು.

ಮೈಸೂರು ರೋಟರಿ ಐಡಿಯಲ್ ಜಾವಾ ಸಭಾಂಗಣದಲ್ಲಿ ಹಿಮಾಲಯ ಫೌಂಡೇ ಷನ್ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ `ಆಚಾರ್ಯ ಶ್ರೀ ವಿದ್ಯಾರಣ್ಯ ರಾಜ್ಯೋತ್ಸವ ಪ್ರಶಸ್ತಿ’ ಯನ್ನು ಪ್ರದಾನ ಮಾಡಿದರು.

ಭಜನಾ ಕ್ಷೇತ್ರದ ವೆಂಕಟರಾಮಯ್ಯ, ಮೈಸೂರು ಸಾಂಪ್ರದಾಯಿಕ ಚಿತ್ರಕಲಾ ಕ್ಷೇತ್ರದ ಮೀರಾ ಕುಮಾರ್, ಶಿಕ್ಷಣ ಕ್ಷೇತ್ರದ ವಿ.ಶ್ರೀಕಂಠಸ್ವಾಮಿ ದೀಕ್ಷಿತ್, ಜ್ಯೋತಿಷ್ಯ ಕ್ಷೇತ್ರದ ಎಸ್.ನಾಗೇಂದ್ರ ಜೋಯಿಸ್, ಆಧ್ಯಾತ್ಮ ಕ್ಷೇತ್ರದ ವಾಸುದೇವ ಅಗ್ನಿಹೋತ್ರಿ, ಉದ್ಯಮಿ ಎನ್.ಮಹೇಶ್ ಶೆಣೈ, ಧಾರ್ಮಿಕ ಕ್ಷೇತ್ರದ ಡಿ.ಟಿ.ಪ್ರಕಾಶ್, ದೇವತಾ ಅಲಂಕಾರ ಸೋತ್ರಂ ಕಿರಣ್‍ಕುಮಾರ್‍ಶಾಸ್ತ್ರಿ, ಎನ್.ಶ್ರೀಧರ್ ದೀಕ್ಷಿತ್ ಅವರನ್ನು ಸನ್ಮಾನಿಸಿದರು.

ನಂತರ ಮಾತನಾಡಿದ ಅವರು, ಆಚಾರ್ಯ ಶ್ರೀ ವಿದ್ಯಾರಣ್ಯರ ತತ್ವಾದರ್ಶಗಳು ಇಂದಿನ ಯುವ ಪೀಳಿಗೆಗೆ ದಾರಿದೀಪವಾಗಿದೆ. ಕನ್ನಡ ನಾಡು-ನುಡಿ ಹಾಗೂ ಸಂಸ್ಕøತಿಗೆ ನೀಡಿ ರುವ ಕೊಡುಗೆ ಅಪಾರ. ಅಲ್ಲದೆ, ಹಕ್ಕ-ಬುಕ್ಕರಿಗೆ ವಿಜಯನಗರ ಸ್ಥಾಪಿಸುವಂತೆ ಪ್ರೇರೇಪಿಸಿ, ಅವನತಿ ಅಂಚಿನಲ್ಲಿದ್ದ ಸನಾ ತನ ಪರಂಪರೆಯನ್ನು ಅಭಿವೃದ್ಧಿ ಗೊಳಿ ಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.

ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣ ಕುಮಾರ್ ಮಾತನಾಡಿ, ವಿದ್ಯಾರಣ್ಯರು ಧಾರ್ಮಿಕ, ಆಧ್ಯಾತ್ಮ ಕ್ಷೇತ್ರದಲ್ಲಿ ಪ್ರಸಿದ್ದ ಹೊಂದಿ ದ್ದರು. 14ನೇ ಶತಮಾನದಲ್ಲಿ ವಿಜಯ ನಗರ ಸಾಮ್ರಾಜ್ಯವನ್ನು ಸ್ಥಾಪಿಸಲು ಹಕ್ಕ-ಬುಕ್ಕರಿಗೆ ನೆರವಾದರು. ಅವಸಾನ ಅಂಚಿನ ಲ್ಲಿದ್ದ ಕನ್ನಡ ನಾಡು-ನುಡಿ ಹಾಗೂ ಸನಾ ತನ ಪರಂಪರೆಯ ಉಳಿವಿಗೆ ಇವರ ಕೊಡುಗೆ ಸಾಕಷ್ಟಿದೆ. ಇವರ ಹೆಸರಿನಲ್ಲಿ ಪ್ರಶಸ್ತಿ ಲಭಿಸು ವುದು ಸಾಮಾನ್ಯ ಸಂಗತಿಯಲ್ಲ ಎಂದರು.

ವೇದಿಕೆಯಲ್ಲಿ ದಾಸ್ತಿ ಶಿಕ್ಷಣ ಸಂಸ್ಥೆಯ ಡಾ.ಡಿ.ತಿಮ್ಮಯ್ಯ, ಹಿರಿಯ ಸಾಹಿತಿ ಪ್ರೊ. ಕೆ.ಭೈರವಮೂರ್ತಿ, ಸಂಸ್ಕøತಿ ಚಿಂತಕ ಗುರು ರಾಜ ಪೋಶೆಟ್ಟಿಹಳ್ಳಿ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್, ಅನಂತ ದೀಕ್ಷಿತ್, ಎಂ.ವಿ.ನಾಗೇಂದ್ರಬಾಬು ಸೇರಿ ದಂತೆ ಮತ್ತಿತರರು ಉಪಸ್ಥಿತರಿದ್ದರು.

Translate »