ಮೈಸೂರು,ಡಿ.1(ವೈಡಿಎಸ್)-ಯಾದವ ಗಿರಿಯ ಶ್ರೀ ರಾಮಕೃಷ್ಣ ಆಶ್ರಮದ ಸಭಾಂ ಗಣದಲ್ಲಿ ಸಿ.ಎಸ್.ಮಂಗಳಮ್ಮ ವಿರಚಿತ `ದಿವ್ಯ ಶಿಕ್ಷಣ ದೀವಿಗೆ-ಶ್ರೀಮಾತೆ’ ಹಾಗೂ ಪ್ರವಚನ ಪಟು ಕೆ.ಲೀಲಾ ಪ್ರಕಾಶ್ ಅವರ `ಕನ್ನಡ ಪಂಚರಾತ್ರಮ್’ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು.
ಡಾ.ಕೆ.ಕೃಷ್ಣಮೂರ್ತಿ ಸಂಶೋಧನ ಪ್ರತಿ ಷ್ಠಾನ, ವಿದ್ಯುತ್ ಪ್ರಕಾಶನ ಸಂಯುಕ್ತಾ ಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಪುಸ್ತಕಗಳನ್ನು ಬಿಡುಗಡೆಗೊಳಿಸಿದರು. ನಂತರ ಮಾತ ನಾಡಿ, ದಿವ್ಯ ಶಿP್ಷÀಣ ದೀವಿಗೆ-ಶ್ರೀಮಾತೆ ಕೃತಿಯು ದಿವ್ಯತ್ರಯ ಸಾಹಿತ್ಯಕ್ಕೆ ಒಳ್ಳೆಯ ಕೊಡುಗೆ. ದಿವ್ಯತ್ರಯ ಸಾಹಿತ್ಯ ಕನ್ನಡ, ಇಂಗ್ಲಿಷ್, ಬೇರೆ ಬೇರೆ ಭಾಷೆಗಳಲ್ಲಿದ್ದು, ಅಗಾಧವಾಗಿ ಬೆಳೆದಿದೆ ಎಂದು ಹೇಳಿದರು.
ಅತ್ಯುನ್ನತ ಆದರ್ಶ: ಬಹುಮುಖ ವ್ಯಕ್ತಿತ್ವ ವುಳ್ಳ ಶಾರದಾದೇವಿ ಅವರು ಶಿಕ್ಷಣ ತಜ್ಞೆ, ಭಾರತೀಯ ಸ್ತ್ರೀಯತ್ವದ ಅತ್ಯುನ್ನತ ಆದರ್ಶ. ಅವರು ಜಗತ್ತಿಗೆ ಭಗವಂತನ ಮಾತೃತ್ವದ ಪ್ರಕಟಣೆ ನಾನು ಎಂದು ಹೇಳಿದ್ದಾರೆ. ಶ್ರೀಮಾತೆಯು ವಿವೇಕಾನಂದ, ರಾಮಕೃಷ್ಣ ರಂತೆ ಮೇಲ್ನೋಟಕ್ಕೆ ಎದ್ದು ಕಾಣುವುದಿಲ್ಲ. ಅಂದರೆ, ಗಂಗೆ, ಯಮುನ ಮೇಲ್ನೋಟಕ್ಕೆ ಎದ್ದು ಕಾಣುತ್ತಾರೆ. ಆದರೆ, ಸರಸ್ವತಿ ಗುಪ್ತ ಗಾಮಿನಿ. ಹಾಗಾಗಿ ಶ್ರೀಮಾತೆ ಶಾರದಾ ದೇವಿ ಸರಸ್ವತಿ ಇದ್ದಂತೆ ಎಂದರು.
ಕೃತಿ ಕರ್ತೃ ಮಂಗಳಮ್ಮ ಅವರು ಈ ಕೃತಿಯಲ್ಲಿ ಶಾರದಾದೇವಿ ಅವರ ಕುರಿತ ಹೊಸ ಅಂಶಗಳನ್ನು ಸಂಶೋಧಿಸಿ ಹೃದಯ ಸ್ಪರ್ಶಿಯಾಗಿ ಬರೆದಿದ್ದಾರೆ. ಶಾರದಾದೇವಿ ಅವರನ್ನು ಕುರಿತು ಹಲವು ಪುಸ್ತಕಗಳಿ ದ್ದರೂ ಅವುಗಳಲ್ಲಿ ಸಿಗದಿರುವ ಕೆಲವು ಅಂಶಗಳು ಈ ಕೃತಿಯಲ್ಲಿದೆ. ಇದು ಸಂಶೋ ಧನಾಪರವೂ ಹೌದು, ಬೋಧಪ್ರದವೂ ಹೌದು ಎಂದು ತಿಳಿಸಿದರು.
ಡಾ.ಕೆ.ಲೀಲಾಪ್ರಕಾಶ್‍ರವರ ಕನ್ನಡ ಪಂಚರಾತ್ರಮ್ ಕೃತಿ ನಾಟಕವಾಗಿದ್ದು, ಇದು ಸ್ತ್ರೀ ಪಾತ್ರವೇ ಇಲ್ಲದ ಗಂಡು ನಾಟಕ ವಾಗಿದೆ. ಇದರಲ್ಲಿ ಕುರುಕ್ಷೇತ್ರ ಯುದ್ಧವೇ ನಡೆಯುವುದಿಲ್ಲ. ಬದಲಿಗೆ ದುರ್ಯೋ ಧನ ಪಾಂಡವರಿಗೆ ಅರ್ಧ ರಾಜ್ಯವನ್ನು ಬಿಟ್ಟು ಕೊಡುತ್ತಾನೆ. ಈ ಮೂಲಕ ಸಮಾಜಕ್ಕೆ ಯುದ್ಧವೊಂದೇ ಎಲ್ಲದಕ್ಕೂ ಪರಿಹಾರ ವಲ್ಲ ಎಂಬ ಸಂದೇಶ ನೀಡಿದ್ದಾರೆ ಎಂದರು.
ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷ ಮುಕ್ತಿದಾನಂದಜೀ ಮಹಾರಾಜ್, ಸಾಹಿತಿ ಪ್ರೊ.ಕೆ.ಭೈರವಮೂರ್ತಿ, ಕಸಾಪ ಅಧ್ಯಕ್ಷ ವೈ.ಡಿ.ರಾಜಣ್ಣ, ಕೃತಿಕರ್ತೃಗಳಾದ ಸಿ.ಎಸ್. ಮಂಗಳಮ್ಮ, ಕೆ.ಲೀಲಾಪ್ರಕಾಶ್, ರಂಗ ಕರ್ಮಿ ಹೆಚ್.ಎಸ್.ಉಮೇಶ್, ವಿದ್ಯುತ್ ಪ್ರಕಾಶನ ಸಂಸ್ಥಾಪಕ ಕೇಶವಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.