`ಸಾಂವಿಧಾನಿಕ ಮೀಸಲಾತಿ’ ಸಾಮಾಜಿಕ ನ್ಯಾಯವೇ ಹೊರತು ತಾರತಮ್ಯವಲ್ಲ
ಮೈಸೂರು

`ಸಾಂವಿಧಾನಿಕ ಮೀಸಲಾತಿ’ ಸಾಮಾಜಿಕ ನ್ಯಾಯವೇ ಹೊರತು ತಾರತಮ್ಯವಲ್ಲ

December 2, 2019

ಮೈಸೂರು, ಡಿ.1(ಪಿಎಂ)- `ಸಾಂವಿ ಧಾನಿಕ ಮೀಸಲಾತಿ’ ಸಾಮಾಜಿಕ ನ್ಯಾಯವೇ ಹೊರತು ತಾರತಮ್ಯವಲ್ಲ ಎಂದು ಮೈಸೂರು ವಿವಿ ಆಡಳಿತಾಂಗ ಕುಲಸಚಿವ ಪ್ರೊ. ಆರ್.ಶಿವಪ್ಪ ಪ್ರತಿಪಾದಿಸಿದರು.

ಮೈಸೂರು ವಿವಿ ಸಂಶೋಧನಾ ವಿದ್ಯಾರ್ಥಿಗಳ ಸಂಘ, ದಲಿತ ವಿದ್ಯಾರ್ಥಿ ಒಕ್ಕೂಟದ ಜಂಟಿ ಆಶ್ರಯದಲ್ಲಿ ವಿವಿಯ ಇಎಂಎಂಆರ್‍ಸಿ ಸಭಾಂಗಣದಲ್ಲಿ `ಮೀಸ ಲಾತಿಯ ಸಾಂವಿಧಾನಿಕ ನೀತಿ’ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾ ಟಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಹಿಂದುಳಿದ ಹಾಗೂ ಶೋಷಿತ ಸಮು ದಾಯಗಳು ಮುಖ್ಯ ವಾಹಿನಿಯಿಂದ ದೂರವೇ ಉಳಿಯುವಂತಾಗಿದೆ. ಈ ನಿಟ್ಟಿ ನಲ್ಲಿ ಸಮಾಜ ಹಾಗೂ ಸರ್ಕಾರಗಳನ್ನು ವಿದ್ಯಾರ್ಥಿ ಸಮೂಹ ಎಚ್ಚರಿಸುವ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

ಹಿಂದುಳಿದ ಹಾಗೂ ಶೋಷಿತ ವರ್ಗ ಗಳ ಜೀವನಮಟ್ಟ ಇಂದಿಗೂ ಸುಧಾ ರಣೆ ಕಂಡಿಲ್ಲ. ಈ ಸಮುದಾಯಗಳನ್ನು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ವಾಗಿ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ವಿದ್ಯಾವಂತರು ಸರ್ಕಾರದ ಗಮನ ಸೆಳೆಯಬೇಕು ಎಂದರು.

ಜನಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತಂತೆ ಸಮೀಕ್ಷೆ ನಡೆಸು ವುದೂ ಸೇರಿದಂತೆ ನಾನಾ ಮಾರ್ಗಗಳಲ್ಲಿ ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಕೊಡುಗೆ ನೀಡಬಹುದು. ಇದರಿಂದ ಸರ್ಕಾರ ಹಾಗೂ ಜನಪ್ರತಿನಿಧಿಗಳು ತಮ್ಮ ಅವಧಿಯಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಕ್ರಮ ಗಳ ಬಗ್ಗೆ ಸೂಕ್ತ ಕ್ರಮ ವಹಿಸಲು ಸಹಕಾರಿ ಆಗಲಿದೆ. ಈ ನಿಟ್ಟಿನಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಪ್ರಜ್ಞಾವಂತಿಕೆ ಮೆರೆಯ ಬೇಕು ಎಂದು ನುಡಿದರು.

ಇದೇ ವೇಳೆ ಕುಲಸಚಿವರು ಸಂವಿಧಾನದ ಪ್ರತಿಜ್ಞಾವಿಧಿ ಬೋಧಿಸಿದರು. ಬಳಿಕ `ಮೀಸ ಲಾತಿಯ ಸಂವಿಧಾನಿಕ ನೀತಿ’ ಕುರಿತು ಭಾರತ ಸರ್ಕಾರದ ಕಾರ್ಮಿಕ ಸಚಿವಾಲಯದ ಸೊಲ್ಲಾಪುರ ಪ್ರಾದೇಶಿಕ ಪಿಎಫ್ ಆಯುಕ್ತ ಪ್ರೊ.ಆರ್.ಹೇಮಂತ್ ತಿರ್ಪುಡೆ ಉಪ ನ್ಯಾಸ ನೀಡಿದರು. ಸಂಶೋಧನಾ ವಿದ್ಯಾರ್ಥಿ ಗಳ ಸಂಘದ ಅಧ್ಯಕ್ಷ ಎಸ್.ಮರಿ ದೇವಯ್ಯ, ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಆರ್. ಸಂದೇಶ್ ಮತ್ತಿತರರು ಹಾಜರಿದ್ದರು.

Translate »