ನಗರ ಬಸ್ ನಿಲ್ದಾಣದಿಂದ ವಿವೇಕಾನಂದ ವೃತ್ತದವರೆಗೆ ನೂತನ ಬಸ್ ಸಂಚಾರ
ಮೈಸೂರು

ನಗರ ಬಸ್ ನಿಲ್ದಾಣದಿಂದ ವಿವೇಕಾನಂದ ವೃತ್ತದವರೆಗೆ ನೂತನ ಬಸ್ ಸಂಚಾರ

December 2, 2019

ಮೈಸೂರು,ಡಿ.1(ಎಸ್‍ಪಿಎನ್)-ಮೈಸೂರು ನಗರ ಬಸ್ ನಿಲ್ದಾಣದಿಂದ ಶಿವದೇವಾ ಲಯ-ವಿವೇಕಾನಂದ ವೃತ್ತದವರೆಗೆ ನೂತನ ಬಸ್(ಮಾ.ಸಂ:81) ಸಂಚಾರ ನ.29ರಿಂದ ಆರಂಭಗೊಂಡಿದೆ. ವಿವೇಕಾನಂದನಗರ, ಅರವಿಂದನಗರ, ಕುವೆಂಪುನಗರದ ಸುತ್ತಮುತ್ತಲ ನಿವಾಸಿಗಳ ಅನುಕೂಲಕ್ಕಾಗಿ ಮಾರ್ಗ ಸಂಖ್ಯೆ:81ರ ಬಸ್ ಸಂಚಾರ ಆರಂಭಿಸಲಾಗಿದೆ. ಪ್ರತಿದಿನ ನಗರ ಬಸ್ ನಿಲ್ದಾಣದಿಂದ ಅಗ್ರಹಾರ, ಸಿದ್ದಪ್ಪ ವೃತ್ತ, ಆರ್‍ಟಿಓ ವೃತ್ತ, ಅಶೋಕ ವೃತ್ತ, ಕೆ.ಜಿ.ಕೊಪ್ಪಲು, ಅಪೋಲೋ ಆಸ್ಪತ್ರೆ, ಕಾವೇರಿ ಸ್ಕೂಲ್, ಅರವಿಂದನಗರ, ಶಿವದೇವಾ ಲಯ ಹಾಗೂ ವಿವೇಕಾನಂದ ವೃತ್ತದಲ್ಲಿ ಬಸ್ ಸಂಚಾರ ಕೊನೆಗೊಳ್ಳಲಿದೆ. ಬೆಳಿಗ್ಗೆ 10.25 ನಿಮಿಷಕ್ಕೆ ಆರಂಭವಾಗುವ ಬಸ್ ಸಂಚಾರ, ತದನಂತರ 11.30, 12.50, 13.50, 17.25 ಹಾಗೂ 18.30ಕ್ಕೆ ನಿಲ್ದಾಣ ಬಿಡುತ್ತದೆ. ಅದೇ ರೀತಿ ವಿವೇಕಾನಂದ ವೃತ್ತದಿಂದ ಬೆಳಿಗ್ಗೆ 9.55, 11.00, 12.20, 14.45, 16.55, 17.55ಕ್ಕೆ ಬಸ್ ಸಂಚಾರ ಆರಂಭವಾಗಲಿದೆ.

Translate »