ಕನ್ನಡದಲ್ಲೇ ವಾದ ಮಂಡಿಸಿದರೆ ಹೆಚ್ಚು ಪರಿಣಾಮಕಾರಿ
ಮೈಸೂರು

ಕನ್ನಡದಲ್ಲೇ ವಾದ ಮಂಡಿಸಿದರೆ ಹೆಚ್ಚು ಪರಿಣಾಮಕಾರಿ

December 1, 2019

ಮೈಸೂರು,ನ.30(ವೈಡಿಎಸ್)- ನ್ಯಾಯ ವಾದಿಗಳು ಇಂಗ್ಲಿಷ್ ಭಾಷೆಗಿಂತ ಕನ್ನಡ ದಲ್ಲಿ ವಾದ ಮಂಡಿಸಿದರೆ ಪ್ರಕರಣದ ಒಳಾಂಶಗಳನ್ನು ಹೆಚ್ಚು ಪರಿಣಾಮ ಕಾರಿ ಯಾಗಿ ನ್ಯಾಯಾಲಯಕ್ಕೆ ತಿಳಿಸಿಕೊಟ್ಟಂ ತಾಗುತ್ತದೆ ಎಂದು ಮೈಸೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸುರೇಶ್ ಕೆ.ಒಂಟಿಗೋಡಿ ಸಲಹೆ ನೀಡಿದರು.

ನ್ಯಾಯಾಲಯದ ಆವರಣದಲ್ಲಿ ಮೈಸೂರು ವಕೀಲರ ಸಂಘ ಶನಿವಾರ ಆಯೋಜಿ ಸಿದ್ದ ಕನ್ನಡ ರಾಜ್ಯೋತ್ಸವವನ್ನು ಉದ್ಘಾ ಟಿಸಿ ಮಾತನಾಡಿ, ಕನ್ನಡದಲ್ಲಿ ವಾದ ಮಂಡನೆ ಮಾಡುವ ಶಕ್ತಿಯಿದ್ದರೂ ಇಂಗ್ಲಿಷ್‍ನಲ್ಲೇ ಮಾಡುತ್ತೇವೆ. ಅದರೆ, ಇಂಗ್ಲೀಷ್‍ನಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಮಂಡನೆ ಮಾಡಲು ಆಗುವುದಿಲ್ಲವೆಂದು ಗೊತ್ತಿ ದ್ದರೂ ಪ್ರಯತ್ನಿಸುತ್ತೇವೆ ಎಂದರು.

ಕನ್ನಡದಲ್ಲಿ ವಾದ ಮಂಡಿಸಿ: ಯಾವು ದೊಂದು ಪ್ರಕರಣವನ್ನು ಕನ್ನಡ ಭಾಷೆ ಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ನ್ಯಾಯಾ ಲಯದಲ್ಲಿ ಮಂಡನೆ ಮಾಡಿದರೆ ಪ್ರಕರಣದ ಒಳಾಂಶಗಳು, ಆಗುಹೋಗುಗಳನ್ನು ನ್ಯಾಯಾ ಲಯಕ್ಕೆ ತಿಳಿಸಿದಂತಾಗುತ್ತದೆ. ಕೆಲ ವರು ನ್ಯಾಯವಾದಿಗಳು ಆರಂಭದಲ್ಲಿ ಇಂಗ್ಲಿಷ್ ನಲ್ಲಿ ಎರಡು ಲೈನ್ ಮಾತನಾಡಿದ ನಂತರ ಕನ್ನಡದಲ್ಲಿ ವಾದಿಸುತ್ತಾರೆ. ಜತೆಗೆ ಕನ್ನಡ ದಲ್ಲಿ ಹೇಳಿದ್ದನ್ನೇ ಇಂಗ್ಲಿಷ್‍ನಲ್ಲಿ. ಇಂಗ್ಲಿಷ್ ನಲ್ಲಿ ಹೇಳಿದ್ದನ್ನೇ ಕನ್ನಡದಲ್ಲಿ ಹೇಳುತ್ತಾರೆ. ಕೇಳಲು ನಮಗೂ ಬೇಸರವಾಗುತ್ತದೆ. ಹಾಗಾಗಿ ನಾನು ಕೆಲವು ನ್ಯಾಯವಾದಿಗಳಿಗೆ ಕನ್ನಡದಲ್ಲೇ ಮಾತನಾಡಿ ಎಂದು ಹೇಳಿ ದ್ದೇನೆ ಎಂದು ಹಾಸ್ಯ ಧಾಟಿಯಲ್ಲಿ ಹೇಳಿದರು.

ಕನ್ನಡದಲ್ಲೇ ತೀರ್ಪು: ಕನ್ನಡದಲ್ಲಿ ವಾದ ಮಂಡಿಸಿದರೆ ಇಂಗ್ಲಿಷ್ ಬರಲ್ಲವೆಂದು ಯಾರೂ ತಿಳಿದುಕೊಳ್ಳುವುದಿಲ್ಲ. ನಾನೂ ಸಹ ಕೆಲವು ಸಂದರ್ಭಗಳಲ್ಲಿ ಕನ್ನಡದಲ್ಲಿ ತೀರ್ಪು ಬರೆದಿದ್ದೇನೆ. ಇಂಗ್ಲಿಷ್‍ನಲ್ಲಿ ಬಹಳ ಸರಾಗವಾಗಿ ತೀರ್ಪನ್ನು ಬರೆಯ ಬಹುದು. ಆದರೆ, ಕನ್ನಡದಲ್ಲಿ ತೀರ್ಪು ಬರೆಯ ಬೇಕಾದರೆ ಹೆಚ್ಚು ಶಬ್ದಗಳ ಸಂಗ್ರ ಹಣೆ, ಶ್ರಮ ಬೇಕಾಗುತ್ತದೆ. ಕನ್ನಡದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ತೀರ್ಪು ಬರೆದರೆ ಅದನ್ನು ಕಕ್ಷಿದಾರರು ಓದಿ, ತಮ್ಮ ಪ್ರಕ ರಣದ ಆಗು-ಹೋಗುಗಳನ್ನು ತಿಳಿದು ಕೊಳ್ಳಲು ಅನುಕೂಲವಾಗುತ್ತದೆ. ಆದ್ದ ರಿಂದ ತೀರ್ಪುಗಳು, ವಾದ-ಪ್ರತಿವಾದದ ಅರ್ಜಿಗಳನ್ನು ಕನ್ನಡದಲ್ಲೇ ಬರೆಯೋಣ. ಆ ಮೂಲಕ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸೋಣ ಎಂದರು.

ತಮಿಳುನಾಡು, ಮಹಾರಾಷ್ಟ್ರದಲ್ಲಿ ಇತರೆ ರಾಜ್ಯಗಳ ಜನರು ಹಿಂದಿ, ಇಂಗ್ಲಿಷ್‍ನಲ್ಲಿ ವಿಳಾಸ ಕೇಳಿದರೆ ಯಾರೊಬ್ಬರೂ ಪ್ರತಿ ಕ್ರಿಯಿಸುವುದಿಲ್ಲ. ಬದಲಾಗಿ ಆಯಾ ರಾಜ್ಯದ ಭಾಷೆಯಲ್ಲಿ ಮಾತನಾಡಿದರೆ ಮಾತ್ರ ವಿಳಾಸ ತಿಳಿಸುತ್ತಾರೆ. ಆದರೆ, ನಮ್ಮ ರಾಜ್ಯದಲ್ಲಿ ಅವರ ಭಾಷೆಯಲ್ಲೇ ಮಾತನಾಡುತ್ತೇವೆ. ಹಾಗಾ ಗದೆ ಕನ್ನಡದಲ್ಲೇ ಮಾತನಾಡಬೇಕು. ಆ ಮೂಲಕ ಭಾಷೆ ಉಳಿವಿಗೆ ಶ್ರಮಿಸಬೇಕು. ಮನೆಯಲ್ಲಿ ಮಕ್ಕಳೊಂದಿಗೆ ಕನ್ನಡದಲ್ಲೇ ಮಾತನಾಡಬೇಕು ಎಂದು ಹೇಳಿದರು.

ಕನ್ನಡ ರಾಜ್ಯೋತ್ಸವದ ವೇಳೆ ಕನ್ನಡ ಭಾಷೆ, ಸಂಸ್ಕøತಿ ಬಗ್ಗೆ ಮಾತನಾಡುತ್ತೇವೆ. ನಂತರ ಮರೆಯುತ್ತಿದ್ದಾರೆ. ಪ್ರಸ್ತುತ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗಿದ್ದರೂ ನಮ್ಮ ಮಾತೃ ಭಾಷೆ ಬಗ್ಗೆ ಅಭಿಮಾನವಿಟ್ಟುಕೊಂಡು ಬೆಳೆಸಲು ಶ್ರಮಿಸಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕನ್ನಡ ಭಾಷೆ ಯನ್ನು ವೃತ್ತಿಯಲ್ಲಿ ಬಳಸಿ ಅಭಿಮಾನ ತೋರಿದ ವಕೀಲರಾದ ಟಿ.ಪಿ.ಕುಮಾರ್, ಪಾಲಹಳ್ಳಿ ನಾಗೇಂದ್ರ ಅವರನ್ನು ಸನ್ಮಾನಿಸ ಲಾಯಿತು. ಕನ್ನಡ ಪುಸ್ತಕ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಂ.ಎನ್. ನಂದೀಶ್ ಹಂಚೆ, ಕರ್ನಾಟಕ ರಾಜ್ಯ ವಕೀ ಲರ ಪರಿಷತ್ ಸದಸ್ಯ ಬಿ.ಆರ್.ಚಂದ್ರ ಮೌಳಿ, ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್.ಆನಂದ ಕುಮಾರ್, ಉಪಾ ಧ್ಯಕ್ಷ ಎಸ್.ಬಿ.ಶಿವಣ್ಣೇಗೌಡ, ಕಾರ್ಯ ದರ್ಶಿ ಬಿ.ಶಿವಣ್ಣ ಉಪಸ್ಥಿತರಿದ್ದರು.

Translate »