ಮುಂಬೈ,ಡಿ.1- ದರ ಏರಿಕೆ ಎಂಬುದು ದೇಶದ ಜನಸಾಮಾನ್ಯರಿಗೆ ಒಂದಲ್ಲ ಒಂದು ರೀತಿಯಲ್ಲಿ ಪೆಟ್ಟು ನೀಡುತ್ತಲೇ ಇದೆ. ಇತ್ತೀಚೆಗೆ ಈರುಳ್ಳಿ, ಪೆಟ್ರೋಲ್ ದರ ಏರಿಕೆಯಾಗಿದ್ದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿತ್ತು. ಈಗ ಎಲ್ಲರ ಪ್ರೀತಿಯ ಮೊಬೈಲ್ ಫೋನ್ ಸರದಿ. ಏರ್‍ಟೆಲ್, ಐಡಿಯಾ-ವೊಡಾಫೋನ್ ಮತ್ತು ರಿಲಯನ್ಸ್ ಜಿಯೋ ಕಂಪೆನಿ ಗಳು ಕರೆ ದರ ಏರಿಕೆಗೆ ಮುಂದಾಗಿವೆ.
ಖಾಸಗಿ ಟೆಲಿಕಾಂ ಕಂಪೆನಿಗಳು ಕಳೆ ದೆರಡು ತ್ರೈಮಾಸಿಕಗಳಲ್ಲಿ ಹೆಚ್ಚು ನಷ್ಟ ಅನುಭವಿಸಿದ್ದರಿಂದ ನಷ್ಟ ಸರಿದೂಗಿಸಿ ಕೊಳ್ಳಲು ಕರೆ ದರ ಹೆಚ್ಚಳದ ಮಾತನಾಡಿದ್ದವು. ಅದರಂತೆ ಈಗ ಐಡಿಯಾ-ವೊಡಾಫೆÇೀನ್ ಸಮೂಹ ಮತ್ತು ಭಾರ್ತಿ ಏರ್‍ಟೆಲ್ ಸಂಸ್ಥೆಗಳು ಡಿ.3ರಿಂದ ಕರೆ ದರಗಳನ್ನು ಏರಿಕೆ ಮಾಡಲಿವೆ. ದರ ಏರಿಕೆ ಜತೆಗೇ ಹೊಸ ಪ್ಲ್ಯಾನ್‍ಗಳನ್ನು ಪರಿಚಯಿಸುವುದಾಗಿಯೂ ಹೇಳಿವೆ.
ಜಿಯೋ: ರಿಲಯನ್ಸ್ ಜಿಯೋ ಡಿಸೆಂಬರ್ 6ರಿಂದ ಕರೆಗಳ ದರವನ್ನು ಶೇ.47ರಷ್ಟು ಏರಿಕೆ ಮಾಡುವುದಾಗಿ ಹೇಳಿದೆ. ಜತೆಗೆ `ಆಲ್ ಇನ್ ಒನ್’ ಎಂಬ ಹೊಸ ಯೋಜನೆಯನ್ನೂ ಪರಿಚಯಿಸುವುದಾಗಿ ಜಿಯೋ ಹೇಳಿಕೊಂಡಿದೆ.
ಏರ್‍ಟೆಲ್: ಪ್ಲ್ಯಾನ್‍ಗಳಲ್ಲಿ ಶೇ.42ರಷ್ಟು ದರ ಏರಿಕೆಯಾಗಲಿದೆ ಎಂದು ಏರ್‍ಟೆಲ್ ಹೇಳಿದೆ. ಕರೆ ಮತ್ತು ಡಾಟಾ ದರಗಳಲ್ಲಿ 50 ಪೈಸೆಯಿಂದ 2.85 ರೂ.ವರೆಗೆ ಏರಿಕೆಯಾಗ ಲಿದೆ. ಅನ್‍ಲಿಮಿಟೆಡ್ ಯೋಜನೆಯನ್ನೂ ಪರಿಚಯಿಸುವುದಾಗಿಯೂ ಕಂಪೆನಿ ಹೇಳಿದೆ.
ವಡಾಪೋನ್: ಪ್ರೀಪೇಯ್ಡನಲ್ಲಿ 2 ದಿನ, 28 ದಿನ, 84 ದಿನ ಮತ್ತು 365 ದಿನಗಳ ಪ್ಲ್ಯಾನ್‍ಗಳು ಇರಲಿವೆ. ಹಿಂದಿನ ಪ್ಲ್ರಾನ್‍ಗೆ ಹೋಲಿಸಿದರೆ ದರ ಶೇ.42ರಷ್ಟು ಏರಿಕೆಯಾಗಲಿದೆ ಎಂದು ಐಡಿಯಾ-ವಡಾಫೋನ್ ಸಮೂಹ ಹೇಳಿಕೊಂಡಿದೆ.
ಕಾಂಬೋ ಪ್ಲ್ಯಾನ್‍ಗಳಲ್ಲಿ 49 ರೂ, 79 ರೂ. ದರವಿದ್ದರೆ, 28 ದಿನ ವ್ಯಾಲಿಡಿಟಿ ಇರ ಲಿದೆ. ಅನ್‍ಲಿಮಿಟೆಡ್ ಪ್ಯಾಕ್‍ನಲ್ಲಿ 28 ದಿನಗಳ ವ್ಯಾಲಿಡಿಟಿಯಿದ್ದು, 149 ರೂ.ಗಳಿಂದ 399 ರೂ.ವರೆಗೆ ದರವಿರಲಿದೆ. ಇವುಗಳಲ್ಲಿ ಅನ್‍ಲಿಮಿಟೆಡ್ ವಾಯ್ಸ್ ಕಾಲ್‍ಗಳು ಮತ್ತು ಮಾಸಿಕ 2 ಜಿಬಿ ಇಂಟರ್ನೆಟ್ ಡಾಟಾದಿಂದ ನಿತ್ಯ 3 ಜಿಬಿ ವರೆಗೆ ಇಂಟರ್ನೆಟ್ ಡಾಟಾ ಡೌನ್‍ಲೋಡ್ ಸೌಕರ್ಯವಿದೆ. 84 ದಿನಗಳ ಅನ್‍ಲಿಮಿಟೆಡ್ ಪ್ಯಾಕ್‍ನಲ್ಲಿ 379 ರೂ.ಗಳಿಂದ 699 ರೂ.ವರೆಗೆ ಪ್ಲ್ಯಾನ್ ಇದೆ. ಒಂದು ವರ್ಷ ವ್ಯಾಲಿಡಿಟಿ ಇರುವ ಅನ್‍ಲಿಮಿಟೆಡ್ ಪ್ಲ್ಯಾನ್‍ಗಳೂ ಇದ್ದು 1499 ರೂ.ಗಳಿಂದ 2399 ರೂ.ವರೆಗೆ ಇಂಟರ್ನೆಟ್ ಡಾಟಾಗಳಿಗೆ ಅನುಗುಣವಾಗಿ ಪ್ಲ್ಯಾನ್‍ಗಳಿರಲಿವೆ ಎಂದೂ ವೊಡಾಫೋನ್ ಹೇಳಿಕೊಂಡಿದೆ.