ಮೈಸೂರು,ಡಿ.1(ಆರ್‍ಕೆ)- ಆರೋಗ್ಯ, ಸಾರಿಗೆ, ಆರ್ಥಿಕ ಸಹಾಯ ಹಾಗೂ ಪಿಂಚಣಿ ಸೌಲಭ್ಯಗಳನ್ನು ಸರ್ಕಾರ ವಿಸ್ತರಿ ಸಬೇಕೆಂದು ಕಟ್ಟಡ ಕಾರ್ಮಿಕರು ಇಂದಿಲ್ಲಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಕರ್ನಾಟಕ ಸಂಯುಕ್ತ ಕಟ್ಟಡ ಕಾರ್ಮಿ ಕರ ಸಂಘದ ಆಶ್ರಯದಲ್ಲಿ ಮೈಸೂರಿನ ಶ್ರೀ ಹರ್ಷ ರಸ್ತೆಯಲ್ಲಿರುವ ಗೋವರ್ಧನ ಹೋಟೆಲ್‍ನಲ್ಲಿ ನಡೆದ ಸಮಾವೇಶದಲ್ಲಿ ತಮಗೆ ಸೌಲಭ್ಯ ನೀಡಬೇಕೆಂದು ಆಗ್ರಹಿಸಿ ನಾಳೆ(ಡಿ.2) ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲು ಕಟ್ಟಡ ಕಾರ್ಮಿ ಕರು ನಿರ್ಧರಿಸಿದರು.
ಎಐಯುಟಿಯುಸಿ ಮೈಸೂರು ಜಿಲ್ಲಾ ಸಮಿತಿ ಜಿಲ್ಲಾಧ್ಯಕ್ಷ ಯಶೋಧರ್ ಅಧ್ಯಕ್ಷತೆ ವಹಿಸಿದ್ಧ ಸಮಾವೇಶದಲ್ಲಿ ಕಾರ್ಮಿಕರ ಆರೋಗ್ಯ ಚಿಕಿತ್ಸಾ ಸೌಲಭ್ಯಗಳನ್ನು ಕುಟುಂ ಬದ ಸದಸ್ಯರಿಗೂ ವಿಸ್ತರಿಸಬೇಕು. ಬೆಂಗಳೂ ರಿನಲ್ಲಿ ನೀಡುತ್ತಿರುವ ಬಸ್ ಪಾಸ್ ಸೌಲಭ್ಯ ಗಳನ್ನು ರಾಜ್ಯದ ಇತರ ನಗರಗಳ ಕಟ್ಟಡ ಕಾರ್ಮಿಕರಿಗೂ ನೀಡಬೇಕು, ಮನೆ ನಿರ್ಮಾಣ, ಖರೀದಿಸಲು ನೀಡುವ ಸಹಾಯ ಧನದ ನಿರ್ಬಂಧಗಳನ್ನು ಸರಳೀಕರಿಸಬೇಕು, ಪಿಂಚಣಿ ಸೌಲಭ್ಯವನ್ನು 6 ಸಾವಿರ ರೂ. ಗಳಿಗೆ ಹೆಚ್ಚಿಸಬೇಕು, ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಗೆಂದು ಸಂಗ್ರಹಿಸುತ್ತಿರುವ ಶುಲ್ಕದ ಹಣವನ್ನು ಸದರಿ ಉದ್ದೇಶಕ್ಕೆ ಮಾತ್ರ ಬಳಸಬೇಕೆಂದು ಒತ್ತಾಯಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಕೇಂದ್ರ ಸರ್ಕಾರವು ಕಾರ್ಮಿಕ ಕಾಯ್ದೆ ಗಳನ್ನು ಬದಲಾಯಿಸಿ ನಾಲ್ಕು ಲೇಬರ್ ಕೋಡ್‍ಗಳನ್ನು ತರಲು ಮುಂದಾಗಿದ್ದು, ಅದರಲ್ಲಿ ಸಾಮಾಜಿಕ ಭದ್ರತಾ ಕೋಡ್ ನಲ್ಲಿರುವ ಅಂಶಗಳ ಪ್ರಕಾರ ಕಾರ್ಮಿಕ ಮಂಡಳಿ ಗಳನ್ನು ಮುಚ್ಚಲು ಹುನ್ನಾರ ನಡೆಸುತ್ತಿದೆ ಎಂದು ಸಭೆಯಲ್ಲಿ ಆರೋಪಿಸಿದರು.
ಶೈಕ್ಷಣಿಕ ಸಹಾಯ ಧನ, ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ಧನ, ಅಪಘಾತ ಪರಿಹಾರ ಧನ, ಕಾರ್ಮಿಕರ ಅನಿಲ ಭಾಗ್ಯ, ಗೃಹಲಕ್ಷ್ಮಿ ಬಾಂಡ್ ಸೇರಿದಂತೆ ಹಲವು ಸೌಲಭ್ಯಗಳನ್ನು ಕಟ್ಟಡ ಕಾರ್ಮಿಕರಿಗೆ ಒದಗಿಸ ಬೇಕೆಂಬ ಒತ್ತಾಯ ಸಭೆಯಲ್ಲಿ ಕೇಳಿ ಬಂದಿತು. ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ರಾಜ್ಯ ಉಪಾಧ್ಯಕ್ಷ ಎ.ದೇವದಾಸ್, ಎಐಯು ಟಿಯುಸಿ ಜಿಲ್ಲಾ ಕಾರ್ಯದರ್ಶಿ ಚಂದ್ರ ಶೇಖರ್ ಮೇಟಿ, ಜಿಲ್ಲಾ ಸಮಿತಿ ಸದಸ್ಯ ಮುದ್ದುಕೃಷ್ಣ, ರಾಜು ಸೇರಿದಂತೆ ಹಲ ವರು ಸಭೆಯಲ್ಲಿ ಉಪಸ್ಥಿತರಿದ್ದರು.