ಸಿದ್ದು ಕಾಂಗ್ರೆಸ್ `ವೈಟ್‍ವಾಶ್’ ಮಾಡಿ ಮನೆಗೆ ಹೋಗುತ್ತಾರೆ
ಮೈಸೂರು

ಸಿದ್ದು ಕಾಂಗ್ರೆಸ್ `ವೈಟ್‍ವಾಶ್’ ಮಾಡಿ ಮನೆಗೆ ಹೋಗುತ್ತಾರೆ

December 2, 2019

ಹುಣಸೂರು,ಡಿ.1(ಎಸಿಪಿ/ಹೆಚ್‍ಎಸ್‍ಎಂ)- ಡಿಸೆಂಬರ್ 9ರ ನಂತರ ಕಾಂಗ್ರೆಸ್‍ನಲ್ಲಿ ಬದಲಾವಣೆ ಬರಲಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್‍ನ್ನು ವೈಟ್‍ವಾಶ್ ಮಾಡಿ ಮನೆಗೆ ತೆರಳುತ್ತಾರೆ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಹೇಳಿದರು.

ಹುಣಸೂರಿನ ವಾಲ್ಮೀಕಿ ಭವನದಲ್ಲಿ ಬಿಜೆಪಿ ಅಭ್ಯರ್ಥಿ ಎ.ಹೆಚ್.ವಿಶ್ವನಾಥ್ ಪರವಾಗಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಂತರ ಸುದ್ದಿಗೋಷ್ಠಿ ನಡೆಸಿ, ಕ್ರಿಕೆಟ್‍ನಲ್ಲಿ ಸರಣಿ ಸೋಲುಕಂಡರೆ `ವೈಟ್‍ವಾಶ್’ ಅಂತಾರೆ ಅದೇ ರೀತಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಸರಣಿ ಸೋಲು ತಂದುಕೊಡುವ ಮೂಲಕ ಸಿದ್ದ ರಾಮಯ್ಯ ಆ ಪಕ್ಷವನ್ನು ವೈಟ್‍ವಾಶ್ ಮಾಡಿ ಮನೆಗೆ ಹೋಗುತ್ತಾರೆ ಎಂದು ವಿಶ್ಲೇಷಿಸಿದರು.

ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಸೋಲನುಭವಿಸಿತು. ಆ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ನಾನೇ ನಾನೇ ಎಂದು ಹೋರಾಟ ನಡೆಸಿದ ಸಿದ್ದರಾಮಯ್ಯ ಸೋತು ಸುಣ್ಣವಾದರು. ಕಾಂಗ್ರೆಸ್ ಪಕ್ಷ ಕೇವಲ ಒಂದೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾ ಯಿತು. ಇದಕ್ಕಿಂತ ಅವಮಾನ ಬೇರೊಂದಿಲ್ಲ. ಇಷ್ಟರಲ್ಲಾ ಗಲೇ ಸಿದ್ದರಾಮಯ್ಯನವರು ತಮ್ಮ ಸ್ಥಾನಕ್ಕೆ ರಾಜೀ ನಾಮೆ ನೀಡಿ ಮನೆ ಸೇರಬೇಕಾಗಿತ್ತು. ಆದರೆ ಅವರು ಈ ಉಪಚುನಾವಣೆಯಲ್ಲೂ ಕಾಂಗ್ರೆಸ್‍ಗೆ ಸರಣಿ ಸೋಲು ನೀಡುವ ಮೂಲಕ ಆ ಪಕ್ಷವನ್ನು ವೈಟ್‍ವಾಶ್ ಮಾಡಿಯೇ ಮನೆ ಸೇರುವುದು ಖಚಿತ ಎಂದರು.

ಸಿದ್ದರಾಮಯ್ಯ ದುರಹಂಕಾರದಿಂದಾಗಿ ಕಾಂಗ್ರೆಸ್ ಮುಖಂಡರೇ ಅವರಿಂದ ದೂರ ಹೋಗಿದ್ದಾರೆ. ಉಪ ಚುನಾವಣೆ ಪ್ರಚಾರದಲ್ಲಿ ಯಾರಾದರೂ ಹಿರಿಯ ಕಾಂಗ್ರೆಸ್ ಮುಖಂಡರು ಅವರ ಜೊತೆ ಇರುವು ದನ್ನು ನೋಡಲು ಸಾಧ್ಯವಾಗುತ್ತಿದೆಯೇ? ಸಿದ್ದರಾಮಯ್ಯ ಅವರನ್ನು ನಾವೇನು ಟೀಕಿಸಬೇಕಾಗಿಲ್ಲ. ಅವರದೇ ಪಕ್ಷದಲ್ಲಿದ್ದ ರೋಷನ್ ಬೇಗ್ ಅವರು ಸಿದ್ದರಾಮ ಯ್ಯರ ದುರಹಂಕಾರ ಮತ್ತು ದರ್ಪದ ಬಗ್ಗೆ ನೀಡಿರುವ ಹೇಳಿಕೆಗಳೇ ಕಾಂಗ್ರೆಸ್ ಮುಗಿಸಲು ಸಿದ್ದರಾಮಯ್ಯ ಹೇಗೆ ಕಾರಣ ಎಂಬುದನ್ನು ತೋರಿಸುತ್ತದೆ ಎಂದರು.

ಬಿಜೆಪಿ ಅಭ್ಯರ್ಥಿ ಎ.ಹೆಚ್.ವಿಶ್ವನಾಥ್ ಬಗ್ಗೆ ಸಿದ್ದ ರಾಮಯ್ಯ ಮತ್ತು ಕುಮಾರಸ್ವಾಮಿ ಹಗುರವಾಗಿ ಮಾತ ನಾಡುತ್ತಿದ್ದಾರೆ. ಕಳೆದ 45 ವರ್ಷಗಳಿಂದ ಯಾವುದೇ ಕಪ್ಪುಚುಕ್ಕೆ ಇಲ್ಲದೆ ರಾಜಕಾರಣ ಮಾಡಿಕೊಂಡು ಬಂದಿರುವ ಪ್ರಬುದ್ಧ ರಾಜಕಾರಣಿ ವಿಶ್ವನಾಥ್ ಅವ ರಿಗೆ ಕಾಂಗ್ರೆಸ್‍ನಲ್ಲಿ ಕಿರುಕುಳ ನೀಡಲಾಯಿತು ಎಂಬ ಕಾರಣಕ್ಕೆ ಅವರು ಜೆಡಿಎಸ್‍ಗೆ ಹೋದರು.

ಅಲ್ಲಿ ಅವರಿಗೆ ರಾಜ್ಯ ಅಧ್ಯಕ್ಷ ಸ್ಥಾನವನ್ನು ಕೊಡಲಾಗಿತ್ತು. ಶಾಸಕರೂ ಆಗಿದ್ದರು. ರಾಜ್ಯಾಧ್ಯಕ್ಷನಾಗಿ ಪುರಸಭೆ ಯಲ್ಲಿ ಕೇವಲ 1 ಸೀಟನ್ನು ಕೂಡಾ ತಮ್ಮ ಆಪ್ತರಿಗೆ ಕೊಡ ಲಾಗಲಿಲ್ಲ. ತಾವೂ ಪ್ರತಿನಿಧಿಸುವ ಕ್ಷೇತ್ರದ ಅಭಿವೃದ್ಧಿಗೆ ಬೇಕಾದಷ್ಟು ಅನುದಾನ ತರಲು ಆಗಲಿಲ್ಲ. ಸ್ವಾಭಿಮಾನಿ ಯಾಗಿರುವ ಅವರು ಪಂಚತಾರಾ ಹೋಟೆಲ್ ಮುಂದೆ ಮುಖ್ಯಮಂತ್ರಿಗಳ ಭೇಟಿಗಾಗಿ ಕಾಯುತ್ತಾ ನಿಂತಿರುವ ಪರಿಸ್ಥಿತಿ ಇತ್ತು ಅಂದರೆ ಸ್ವಾಭಿಮಾನವಿರುವ ಯಾರು ತಾನೇ ಜೆಡಿಎಸ್‍ನಲ್ಲಿ ಇರುತ್ತಾರೆ? ಎಂದು ಪ್ರಶ್ನಿಸಿದ ಅವರು, ವಿಶ್ವನಾಥ್ ಅಧಿಕಾರಕ್ಕೆ ಅಂಟಿಕೊಳ್ಳದೆ ತನ್ನ ಹಾಗೂ ತನಗೆ ಮತ ನೀಡಿದ ಮತದಾರರ ಸ್ವಾಭಿಮಾನಕ್ಕೆ ಧಕ್ಕೆಯುಂಟಾದಾಗ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದಿರುವುದು ತಪ್ಪೇ? ಎಂದು ಪ್ರಶ್ನಿಸಿದರು.

ಸಂಪೂರ್ಣ ಬಹುಮತವಿಲ್ಲದಿದ್ದರೂ ಅಧಿಕಾರದ ದುರಾಸೆಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚಿಸಿತ್ತು. ಅವೆರಡೂ ಪಕ್ಷಗಳು `ದುಷ್ಮನ್ ಕಹಾ ಹೈ ಅಂದರೆ ಬಗಲ್ ಮೇ ಹೈ’ ಎಂಬಂತಿ ದ್ದವು. ಕಾಂಗ್ರೆಸ್‍ಗೆ ಜೆಡಿಎಸ್ ಹಾಗೂ ಜೆಡಿಎಸ್‍ಗೆ ಕಾಂಗ್ರೆಸ್ ದುಷ್ಮನ್ ಆಗಿತ್ತು. ರಾಜ್ಯದಲ್ಲಿ ನಡೆದದ್ದು, ಮೈತ್ರಿ ಸರ್ಕಾರ ಅಲ್ಲ. ಅದು ದುಷ್ಮನಿ ಸರ್ಕಾರವಾಗಿತ್ತು. ಇತ್ತೀಚೆಗೆ ದೇವೇಗೌಡರು ಮತ್ತೆ ಅವೆರಡೂ ಪಕ್ಷಗಳು ಒಂದಾಗುವ ಬಗ್ಗೆ ಅದ್ಯಾವ ಅರ್ಥದಲ್ಲಿ ಹೇಳುತ್ತಿ ದ್ದಾರೋ ಗೊತ್ತಿಲ್ಲ ಎಂದು ಪ್ರಸಾದ್ ವ್ಯಂಗ್ಯವಾಡಿದರು.

ಜೆಡಿಎಸ್ ಮೇಲೆ ಕಿಡಿ: ಜೆಡಿಎಸ್ ನಿಜವಾಗಿಯೂ ಒಂದು ರಾಜಕೀಯ ಪಕ್ಷವೇ? ಎಂದು ಪ್ರಶ್ನಿಸಿದ ಅವರು, ಎಲ್ಲಿ ಬೆಂಕಿ ಹಾಕುತ್ತಾರೋ? ಅಲ್ಲಿ ಕೈ ಕಾಯಿಸಿ ಕೊಳ್ಳು ವವರು ಜೆಡಿಎಸ್‍ನವರು. ಅವರ ಮೇಲೆ ಕಾಂಗ್ರೆಸ್ ನವರಿಗೆ ಇನ್ನೂ ನಂಬಿಕೆ ಇದೆಯೇ? ಮೈತ್ರಿ ಮುರಿದು ಬಿದ್ದ ಮೇಲೆ ಒಬ್ಬರಿಗೊಬ್ಬರು ಬೈದಾಡಿಕೊಂಡಿದ್ದಾರೆ. ಇಂತಹವರು ಮತ್ತೆ ಮೈತ್ರಿ ಮಾಡಿಕೊಂಡರೆ ಅದು ಉಳಿಯುತ್ತದೆಯೇ ಎಂದು ಪ್ರಶ್ನಿಸಿದರು. ಮಾಜಿ ಸಚಿವ ರೇವಣ್ಣ ಅವರು, ಜ್ಯೋತಿಷ್ಯಮಂಡಳಿ ಕಟ್ಟಿ ಅದಕ್ಕೆ ಅಧ್ಯಕ್ಷರಾಗುವುದು ಒಳ್ಳೆಯದು. ದೇವೇಗೌಡ, ಕುಮಾರಸ್ವಾಮಿ ಮತ್ತು ರೇವಣ್ಣ ಯಾವಾಗ ಏನು ಹೇಳುತ್ತಾರೋ ಯಾರಿಗೆ ಗೊತ್ತು. ಅವರೆಲ್ಲಾ ಹೇಳಿ ದಂತೆ ನಡೆದುಕೊಂಡಿದ್ದಾರಾ ಎಂದು ಪ್ರಶ್ನಿಸಿದ ಪ್ರಸಾದ್ ಅವರ ಮಾತುಗಳಿಗೆ ಯಾವುದೇ ಮನ್ನಣೆ ಇಲ್ಲ. ಯಾರ ಮಾತು ನಂಬಬೇಕು ಎಂಬುದನ್ನು ಜನರೇ ತೀರ್ಮಾನಿಸಲಿದ್ದಾರೆ ಎಂದರು. ಉಪಚುನಾವಣೆ ಯಲ್ಲಿ 15 ಕ್ಷೇತ್ರಗಳಲ್ಲೂ ಬಿಜೆಪಿ ಜಯಭೇರಿ ಬಾರಿ ಸಲಿದ್ದು, ಸಿಎಂ ಯಡಿಯೂರಪ್ಪನವರೇ ಇನ್ನೂ ಮೂರೂವರೆ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಸಂಸದ ವಿ.ಶ್ರೀನಿ ವಾಸಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಸದ ಪ್ರತಾಪ್‍ಸಿಂಹ, ಶಾಸಕ ರಾದ ಅಪ್ಪಚ್ಚುರಂಜನ್, ಹರ್ಷವರ್ಧನ್, ನಿರಂಜನ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಶಿವಣ್ಣ, ನಗರಾ ಧ್ಯಕ್ಷ ರಾಜೇಂದ್ರ, ಎಂಸಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಬಸವೇಗೌಡ, ಮಾಜಿ ಶಾಸಕ ಜಿ.ಎನ್. ನಂಜುಂಡ ಸ್ವಾಮಿ, ಮುಖಂಡ ನಾಗರಾಜ್ ಮಲ್ಲಾಡಿ ಇತರರಿದ್ದರು.

Translate »