ಪೇದೆ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಕೈದಿಗಳಿಗೆ ಏಳು ವರ್ಷ ಜೈಲು ಶಿಕ್ಷೆ
ಮೈಸೂರು

ಪೇದೆ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಕೈದಿಗಳಿಗೆ ಏಳು ವರ್ಷ ಜೈಲು ಶಿಕ್ಷೆ

December 3, 2019

ಮೈಸೂರು, ಡಿ.2(ಎಸ್‍ಬಿಡಿ)-ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಕೆ.ಆರ್.ಆಸ್ಪತ್ರೆಯಲ್ಲಿ ರುವ ಜೈಲ್ ವಾರ್ಡಿನಿಂದ ತಪ್ಪಿಸಿಕೊಂಡಿದ್ದ ಇಬ್ಬರು ಕೈದಿಗಳಿಗೆ ಮೈಸೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸೋಮವಾರ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಮೈಸೂರು ಕಾರಾಗೃಹ ವಾಸಿಗಳಾದ ಸುನೀಲ್ ಹಾಗೂ ಸತೀಶ್‍ಗೆ ಶಿಕ್ಷೆ ವಿಧಿಸಲಾಗಿದೆ. ವಿವಿಧ ಪ್ರಕರಣಗಳಲ್ಲಿ ಜೈಲು ಸೇರಿದ್ದ ಸತೀಶ್, ಸುನೀಲ್ ಹಾಗೂ ತಿಮ್ಮರಾಜು ಅನಾರೋಗ್ಯದಿಂದ ಬಳಲು ತ್ತಿದ್ದರೆಂದು ಕೆ.ಆರ್. ಆಸ್ಪತ್ರೆಯ ಜೈಲ್ ವಾರ್ಡ್‍ಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿತ್ತು. 2011ರ ಜ.18ರಂದು ಈ ಮೂವರೂ ಅಲ್ಲಿಂದ ತಪ್ಪಿಸಿಕೊಳ್ಳುವ ಉz್ದÉೀಶದಿಂದ ಸಂಚು ರೂಪಿಸಿದ್ದರು.

ತಿಮ್ಮರಾಜು ನೆಲದಲ್ಲಿ ಹೊರಳಾಡಿ, ಪಿಟ್ಸ್ ಬಂದ ವನಂತೆ ನಟಿಸಿದ್ದ. ವಾರ್ಡಿನ ಹೊರಗೆ ಪಹರೆಯಿದ್ದ ಸಿಎಆರ್ ಸಿಬ್ಬಂದಿ ರಾಧಾಕೃಷ್ಣ, ತಿಮ್ಮರಾಜುಗೆ ಏನಾ ಯಿತೆಂದು ವಿಚಾರಿಸಲು ಸೆಲ್ ಬಳಿಗೆ ಬಂದಿದ್ದಾರೆ. ಆಗ ತಿಮ್ಮರಾಜುಗೆ ಪಿಟ್ಸ್ ಬಂದಿದೆ ಸರ್ ಎಂದು ಸತೀಶ್ ಹಾಗೂ ಸುನಿಲ್ ತಿಳಿಸುತ್ತಾರೆ. ಅಲ್ಲದೆ ಹತ್ತಿರಕ್ಕೆ ಬಂದು ಕಂಬಿಯ ಒಳಗೆ ಕೈಹಾಕಿ, ರಾಧಾ ಕೃಷ್ಣ ಅವರ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದು, ಪ್ರಜ್ಞೆ ತಪ್ಪುವಂತೆ ಮಾಡಿ, ಅವರ ಜೇಬಿನಲ್ಲಿದ್ದ ಸೆಲ್‍ನ ಬೀಗದ ಕೀ ಕಿತ್ತುಕೊಂಡು, ಸೆಲ್‍ನೊಳಗೆ ತಳ್ಳಿ, ಅಲ್ಲಿಂದ ಪರಾರಿಯಾಗಿದ್ದರು.

ಕೆಲ ಸಮಯದ ಬಳಿಕ ಸಾವರಿಸಿಕೊಂಡು ಮೇಲೆದ್ದ ರಾಧಾಕೃಷ್ಣ, ಘಟನೆ ಬಗ್ಗೆ ದೇವರಾಜ ಪೆÇಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ತನಿಖೆ ನಡೆಸಿ, ಮೂವರನ್ನೂ ಬಂಧಿಸಿ, ನ್ಯಾಯಾ ಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದರು. ಆದರೆ ವಿಚಾರಣೆ ವೇಳೆ ತಿಮ್ಮರಾಜು ಮೃತಪಟ್ಟಿದ್ದು, ಸುನೀಲ್ ಹಾಗೂ ಸತೀಶ್ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೈಸೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜೆರಾಲ್ಡ್ ರುಡಾಲ್ಫ್ ಮೆಂಡೋನ್ಸಾ ಅವರು 7 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ, ತೀರ್ಪು ನೀಡಿದ್ದಾರೆ.

ಇಂದು ಸುಗಮ್ಯ ಕ್ರೀಡೋತ್ಸವ ಕಾರ್ಯಕ್ರಮ
ಮೈಸೂರು, ಡಿ.2- ಗ್ರಾಮ್ರ್ ಸುಗಮ್ಯ ಶಿಕ್ಷ ಕಾರ್ಯಕ್ರಮ, ಸಾರ್ವ ಜನಿಕ ಶಿಕ್ಷಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ “ಸುಗಮ್ಯ ಕ್ರೀಡೋತ್ಸವ 2019 ಡಿ.3ರಂದು ಬೆಳಿಗ್ಗೆ 10 ಗಂಟೆಗೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯಲಿದೆ. ಶಾಸಕ ಜಿ.ಟಿ.ದೇವೇಗೌಡ ಕ್ರೀಡೋ ತ್ಸವಕ್ಕೆ ಚಾಲನೆ ನೀಡುವರು. ವಿಶೇಷ ಆಹ್ವಾನಿತರಾಗಿ ಅಂತಾ ರಾಷ್ಟ್ರೀಯ ಖೋ-ಖೋ ಕ್ರೀಡಾಪಟು ಮೇಘ.ಕೆ.ಎಸ್ ಆಗಮಿಸ ಲಿದ್ದಾರೆ. ಗ್ರಾಮ್ ಕಾರ್ಯನಿರ್ವಾಹಕ ಡಾ||ಬಸವರಾಜು.ಆರ್ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಾರ್ವ ಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಡಾ. ಪಾಂಡು ರಂಗ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾ ಯಕ ನಿರ್ದೇಶಕರಾದ ಸುರೇಶ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೃಷ್ಣ, ಜಿಲ್ಲಾ ಪಂಚಾಯತ್ ಸದಸ್ಯೆ ಪ್ರೇಮಕುಮಾರಿ ಮಹ ದೇವಸ್ವಾಮಿ ಸೇರಿದಂತೆ ಮತ್ತಿತರರು ಭಾಗವಹಿಸುವರು.

Translate »