ಮೈಸೂರು,ಅ.20(ಪಿಎಂ)- ದೇಶದಲ್ಲಿ ಹಿಂದುತ್ವ ಉಳಿದಿದ್ದರೆ ಅದಕ್ಕೆ ಮಹಾರಾಣಾ ಪ್ರತಾಪ್ ಸಿಂಹರ ಅಪಾರ ಕೊಡುಗೆಯೂ ಕಾರಣ ಎಂದು ಕರ್ನಾಟಕ ಕ್ಷತ್ರಿಯ ಒಕ್ಕೂಟದ ಅಧ್ಯಕ್ಷ ಹಾಗೂ ವಕೀಲ ಉದಯಸಿಂಗ್ ಅಭಿಪ್ರಾಯಪಟ್ಟರು. ಮೈಸೂರು ಇಟ್ಟಿಗೆಗೂಡಿನ ಚನ್ನಮ್ಮ ಚನ್ನಬಸಪ್ಪ ಕಲ್ಯಾಣ ಮಂಟಪದಲ್ಲಿ ಶ್ರೀಮಹಾ ರಾಣಾ ಪ್ರತಾಪ್ ಸಿಂಹಜೀ ರಜಪೂತ್ ಕ್ಷತ್ರಿಯ ಸಮಾಜ್ ವತಿಯಿಂದ ಭಾನುವಾರ ಹಮ್ಮಿ ಕೊಂಡಿದ್ದ ಶ್ರೀಮಹಾರಾಣಾ ಪ್ರತಾಪ್ ಸಿಂಹ ಅವರ 479ನೇ ಜಯಂತೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಮೊಗಲರನ್ನು ಹಿಮ್ಮೆಟ್ಟಿಸಿ ಹಿಂದುತ್ವ ಉಳಿಸಿ ಬೆಳೆಸಿದ ಮಹಾರಾಣಾ ಪ್ರತಾಪ್ ಸಿಂಹ ಅವರು…
ಆಡಳಿತ ನಡೆಸಿದ ಎಲ್ಲಾ ಪಕ್ಷಗಳಿಂದಲೂ ಅಸಂಘಟಿತ ಕಾರ್ಮಿಕರ ನಿರ್ಲಕ್ಷ್ಯ
October 21, 2019ಮೈಸೂರು,ಅ.20(ಪಿಎಂ)-ದೇಶದಲ್ಲಿರುವ ಶೇ.90 ರಷ್ಟು ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕೆ ಆಡಳಿತ ನಡೆಸಿದ ಯಾವುದೇ ಪಕ್ಷಗಳು ಕೊಡುಗೆ ನೀಡಿಲ್ಲ ಎಂದು ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಬೇಸರ ವ್ಯಕ್ತಪಡಿಸಿದರು. ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಜಿಲ್ಲಾ ಕಾಯಕ ಸಮಾಜಗಳ ಒಕ್ಕೂಟದ ವತಿಯಿಂದ `ದೇಶದ ಆರ್ಥಿಕ ಹಿಂಜರಿತ: ಕೇಂದ್ರ ಸರ್ಕಾರದ ಕಾರ್ಯ ವೈಖರಿ’ ಕುರಿತಂತೆ ಭಾನುವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಕೃಷಿ ಕ್ಷೇತ್ರ, ಗುಡಿ ಕೈಗಾರಿಕೆ ಸೇರಿದಂತೆ ಇನ್ನಿತರ ಕ್ಷೇತ್ರ ಗಳಲ್ಲಿ ಶೇ.90ರಷ್ಟು ಅಸಂಘಟಿತ ಕಾರ್ಮಿಕರಿದ್ದು, ಇವರ…
ಆರ್‍ಸಿಇಪಿ ಒಪ್ಪಂದ ವಿರೋಧಿಸಿ ಅ.24ರಂದು ಮೈಸೂರಲ್ಲಿ ರೈತರ ಪ್ರತಿಭಟನೆ
October 21, 2019ಮೈಸೂರು, ಅ.20(ಆರ್‍ಕೆಬಿ)- ಕೇಂದ್ರ ಸರ್ಕಾರ ರೈತರು, ಕೈಗಾರಿಕೆಗಳ ಹಿತದೃಷ್ಟಿಗೆ ಧಕ್ಕೆ ತರಲಿರುವ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಬಾರದೆಂದು ಆಗ್ರಹಿಸಿ ಅ.24 ರಂದು ಮೈಸೂರಿನಲ್ಲಿ ಪ್ರತಿಭಟನೆ ಹಮ್ಮಿಕೊಂಡಿ ರುವುದಾಗಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ಆರ್.ವಿದ್ಯಾಸಾಗರ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿ, ಈ ಹಿಂದೆ ಚೀನಾದಿಂದ ರೇಷ್ಮೆ ಆಮದು ಮಾಡಿಕೊಂಡ ನಂತರ ದೇಶದ ರೇಷ್ಮೆ ವಲಯಕ್ಕೆ ಆದ ಹಾನಿ ರೀತಿಯಲ್ಲೇ ಈ ಮುಕ್ತ ವ್ಯಾಪಾರ…
ಈ ರಸ್ತೆ ಅಭಿವೃದ್ಧಿ ಒಂದೆಡೆ ಸಂಚಾರಕ್ಕೆ ಕಂಟಕ ಪ್ರಾಯ!
October 21, 2019ಮೈಸೂರು,ಅ.20(ಎಸ್‍ಬಿಡಿ)- ಮೈಸೂರಿನ ಗಾಯತ್ರಿಪುರಂನ ರಸ್ತೆಯೊಂದರಲ್ಲಿ ವಿಚಿತ್ರ ಸಮಸ್ಯೆಯಿಂದಾಗಿ ಸಂಚಾರಕ್ಕೆ ಅಡ್ಡಿ ಯಾಗಿರುವುದಲ್ಲದೆ, ಅಪಘಾತವೂ ಹೆಚ್ಚುತ್ತಿವೆ. ಗಾಯತ್ರಿಪುರಂ-ಕ್ಯಾತಮಾರನಹಳ್ಳಿ ಮುಖ್ಯರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗಿದೆ. ಈ ರಸ್ತೆ ಕ್ಯಾತಮಾರನಹಳ್ಳಿ, ಉದಯಗಿರಿ ಸೇರಿದಂತೆ ಸುತ್ತಮುತ್ತಲ ಬಡಾವಣೆಗಳನ್ನು ಸಂಪರ್ಕಿಸುವುದರಿಂದ ಯಾವಾಗಲೂ ವಾಹನ ದಟ್ಟಣೆ ಇದ್ದೇ ಇರುತ್ತದೆ. ಒಂದು ಸ್ಥಳವನ್ನು ಹೊರತುಪಡಿಸಿ ಉಳಿದ ರಸ್ತೆ ಸುಗಮ ಸಂಚಾರಕ್ಕೆ ಅಗತ್ಯವಾದಷ್ಟು ವಿಸ್ತಾರ ವಾಗಿದೆ. ಆದರೆ ಆ ಒಂದು ಸ್ಥಳದಲ್ಲಾಗುವ ಅದ್ವಾನದಿಂದ ಇಡೀ ಈ ರಸ್ತೆ ಸಂಚಾ ರಕ್ಕೇ ಅಡ್ಡಿಯಾಗುತ್ತಿದೆ. ಗಾಯತ್ರಿಪುರಂ 2ನೇ ಹಂತದ ವ್ಯಾಪ್ತಿಯಲ್ಲಿರುವ ಈ…
ಇಂದು `ಮೈಸೂರು ಡರ್ಬಿ’
October 20, 2019ಮೈಸೂರು,ಅ.19-ಮೈಸೂರಿನ ರೇಸ್ ಪ್ರಿಯರು ಭಾರೀ ಕುತೂಹಲದಿಂದ ನಿರೀಕ್ಷಿಸುತ್ತಿದ್ದ ‘ಮೈಸೂರು ಡರ್ಬಿ-2019’ (ಗ್ರೇಡ್-1) ನಾಳೆ (ಭಾನುವಾರ) ಮೈಸೂರು ರೇಸ್‍ಕೋರ್ಸ್‍ನಲ್ಲಿ ನಡೆಯಲಿದೆ. ಈಗಾ ಗಲೇ ಡರ್ಬಿಯಲ್ಲಿ ಭಾಗವಹಿಸಲು ದೇಶದ ವಿವಿಧ ಸ್ಟಡ್ ಫಾರಂಗಳಿಂದ ಬಂದಿರುವ ಅತ್ಯುತ್ತಮ ಕುದುರೆಗಳ ಬಗ್ಗೆ ರೇಸಿಂಗ್ ಉತ್ಸಾಹಿಗಳಲ್ಲಿ ತುಂಬಾ ಕುತೂಹಲ ಉಂಟಾಗಿದೆ. ಮೈಸೂರು ರೇಸ್ ಕ್ಲಬ್ ಅಧ್ಯಕ್ಷರಾದ ಡಾ.ಎನ್.ನಿತ್ಯಾನಂದರಾವ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಬಾರಿಯ ಮೈಸೂರು ಡರ್ಬಿಯಲ್ಲಿ ಕ್ಯಾಟಲಿಸ್ಟ್ ಪ್ರಾಪರ್ಟೀಸ್ ಮತ್ತು ಎವಿಆರ್ ಗ್ರೂಪ್ ಪ್ರಾಯೋಜಕತ್ವ ಗಿಟ್ಟಿಸುವಲ್ಲಿ ಯಶಸ್ವಿಯಾಗಿವೆ. ಕಳೆದ ಕೆಲ ದಶಕಗಳಿಂದ ರೇಸಿಂಗ್…
ಕೊಳಚೆ ನಿವಾಸಿಗಳಿಗೆ ಮನೆ, ಇಡಬ್ಲ್ಯೂಎಸ್ ಮನೆಗಳಿಗೆ ಮೂಲ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ
October 20, 2019ಮೈಸೂರು, ಅ.19(ಪಿಎಂ)- ಮೈಸೂರು ನಗರದ ಕೊಳಚೆ ಪ್ರದೇಶದ ನಿವಾಸಿಗಳಿಗೆ ಮನೆ ಮಂಜೂರು ಮಾಡಬೇಕು ಹಾಗೂ ರಾಮಕೃಷ್ಣನಗರ `ಹೆಚ್’ ಬ್ಲಾಕ್‍ನ ಇಡಬ್ಲ್ಯೂಎಸ್ (ಆರ್ಥಿಕ ವಾಗಿ ಹಿಂದುಳಿದ ವರ್ಗ) ಮನೆಗಳಿಗೆ ಮೂಲ ಸೌಲಭ್ಯ ಕಲ್ಪಿಸ ಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಗತಿಪರ ಚಿಂತಕರ ವೇದಿಕೆ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ಪುರಭವನದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಮೈಸೂರು ನಗರದ ಕೊಳಚೆ ನಿವಾಸಿಗಳಿಗೆ ಮನೆಗಳನ್ನು ಮಂಜೂರು ಮಾಡಬೇಕು. ಜೊತೆಗೆ ಹಕ್ಕು ಪತ್ರಗಳನ್ನು ನೀಡಬೇಕು ಎಂದು ಆಗ್ರಹಿಸಿದರು. ರಾಮಕೃಷ್ಣನಗರ…
ಮೈಸೂರಿನಲ್ಲಿ ನ.30ಕ್ಕೆ ರಾಜನ್-ನಾಗೇಂದ್ರ ಸಂಗೀತ ಕಾರ್ಯಕ್ರಮ
October 20, 2019ಮೈಸೂರು, ಅ.19(ಪಿಎಂ)- ಕನ್ನಡ ಚಲನಚಿತ್ರ ರಂಗದಲ್ಲಿ ಸಂಗೀತ ನಿರ್ದೇಶನದ ಮೂಲಕ ಜೇನಿನ ಹೊಳೆಯನ್ನೇ ಹರಿಸಿದ್ದ ರಾಜನ್-ನಾಗೇಂದ್ರ ಸಹೋ ದರರ ಜೋಡಿಯ ಸಂಗೀತ ಕಾರ್ಯಕ್ರಮ ಮೈಸೂ ರಿನಲ್ಲಿ ನವೆಂಬರ್ 30ರಂದು ನಡೆಯಲಿದೆ. ರಾಜನ್-ನಾಗೇಂದ್ರ ಟ್ರಸ್ಟ್ ವತಿಯಿಂದ ಅಂದು ಕಲಾ ಮಂದಿರದಲ್ಲಿ ಈ ಸಂಗೀತ ಕಾರ್ಯಕ್ರಮ ಆಯೋ ಜಿಸುತ್ತಿದ್ದು, ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಸಂಗೀತ ಕಾರ್ಯಕ್ರಮದ ವಿವರ ನೀಡಿದ ನಿರೂಪಕ ರವಿ ಸಂತೋಷ್, ಅಂದು ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ ಎಂದು…
ಸ್ವಯಂ ರಕ್ಷಣೆಗಿರುವ ಸಮರ ಕಲೆ ಕರಾಟೆ
October 20, 2019ಮೈಸೂರು, ಅ.19(ಪಿಎಂ)- ಮೈಸೂರು ವಿವಿ ಸಹ ಯೋಗದೊಂದಿಗೆ ಆಲ್ ಇಂಡಿಯಾ ಕರಾಟೆ ಡೋ ಮತ್ತು ಕೊಬುಡೋ ಪ್ರೊಮೋಷನ್ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿರುವ ಕರಾಟೆ ಮತ್ತು ಕೊಬುಡೋ ರಾಷ್ಟ್ರ ಮಟ್ಟದ ಪಂದ್ಯಾವಳಿಗೆ ಶನಿವಾರ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ. ಹೇಮಂತ್‍ಕುಮಾರ್ ಚಾಲನೆ ನೀಡಿದರು. ಮೈಸೂರು ವಿವಿಯ ಸ್ಪೋಟ್ರ್ಸ್ ಪೆವಿಲಿಯನ್‍ನ ಒಳಾಂ ಗಣ ಕ್ರೀಡಾಂಗಣದಲ್ಲಿ ಫೌಂಡೇಷನ್‍ನ 9ನೇ ವಾರ್ಷಿಕೋ ತ್ಸವದ ಅಂಗವಾಗಿ ಏರ್ಪಡಿಸಿರುವ ಕರಾಟೆ ಮತ್ತು ಕೊಬುಡೋ ಪಂದ್ಯಾವಳಿಗೆ ಕುಲಪತಿಗಳು ಚಾಲನೆ ನೀಡಿ ದರು. ಬಳಿಕ ಮಾತನಾಡಿದ ಅವರು, ಕರಾಟೆ…
ಮೈಸೂರಿನಲ್ಲಿ ರೈತ ಸಂಘದಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ
October 20, 2019ಮೈಸೂರು, ಅ.19(ಪಿಎಂ)- ಕೃಷಿ ಕ್ಷೇತ್ರ ಹಾಗೂ ಆಹಾರ ಉತ್ಪನ್ನಗಳನ್ನು ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‍ಸಿಇಪಿ) ಮುಕ್ತ ವ್ಯಾಪಾರ ಒಪ್ಪಂದದ ವ್ಯಾಪ್ತಿಗೆ ತರಬಾರದೆಂದು ಆಗ್ರಹಿಸಿ ಅ.24ರಂದು ಮೈಸೂರಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳ ಲಾಗಿದೆ ಎಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸೂರು ಕುಮಾರ್ ತಿಳಿಸಿದರು. ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಹಾರ ಉತ್ಪನ್ನಗಳು ಹಾಗೂ ಕೃಷಿ ಕ್ಷೇತ್ರವನ್ನು ಆರ್‍ಸಿಇಪಿ ಮುಕ್ತ ವ್ಯಾಪಾರ…
ಮಹಾರಾಷ್ಟ್ರ, ಹರಿಯಾಣ ವಿಧಾನಸಭೆಚುನಾವಣಾ ಬಹಿರಂಗ ಪ್ರಚಾರಕ್ಕೆ ತೆರೆ
October 20, 2019ಇಂದು ಮನೆ ಮನೆ ಪ್ರಚಾರಕ್ಕೆ ಅವಕಾಶ ಮುಂಬೈ: ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ತೆರೆಬಿದ್ದಿದೆ. ನಾಳೆ ಅಭ್ಯರ್ಥಿ ಗಳು ಮನೆ ಮನೆಗೆ ತೆರಳಿ ಪ್ರಚಾರ ಮಾಡಲು ಅವಕಾಶ ಮಾಡಿಕೊಡಲಾಗಿದೆ. ರಾಜಕೀಯ ಪಕ್ಷಗಳು ಮತದಾರರ ಮನವೊಲಿಸಲು ಅಂತಿಮ ಸುತ್ತಿನ ಪ್ರಯತ್ನ ಮಾಡಲಿದ್ದಾರೆ. ಮಹಾರಾಷ್ಟ್ರದ 288 ಮತ್ತು ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಇದೇ ಅ.21ಕ್ಕೆ ನಡೆಯಲಿದೆ. ಇದೇ ವೇಳೆ 17 ರಾಜ್ಯಗಳ 2 ಲೋಕಸಭಾ ಮತ್ತು 51 ವಿಧಾನಸಭಾ ಕ್ಷೇತ್ರಗಳಿಗೂ ಮತದಾನವಾಗ ಲಿದೆ….









