ಮೈಸೂರಿನಲ್ಲಿ ನ.30ಕ್ಕೆ ರಾಜನ್-ನಾಗೇಂದ್ರ ಸಂಗೀತ ಕಾರ್ಯಕ್ರಮ
ಮೈಸೂರು

ಮೈಸೂರಿನಲ್ಲಿ ನ.30ಕ್ಕೆ ರಾಜನ್-ನಾಗೇಂದ್ರ ಸಂಗೀತ ಕಾರ್ಯಕ್ರಮ

October 20, 2019

ಮೈಸೂರು, ಅ.19(ಪಿಎಂ)- ಕನ್ನಡ ಚಲನಚಿತ್ರ ರಂಗದಲ್ಲಿ ಸಂಗೀತ ನಿರ್ದೇಶನದ ಮೂಲಕ ಜೇನಿನ ಹೊಳೆಯನ್ನೇ ಹರಿಸಿದ್ದ ರಾಜನ್-ನಾಗೇಂದ್ರ ಸಹೋ ದರರ ಜೋಡಿಯ ಸಂಗೀತ ಕಾರ್ಯಕ್ರಮ ಮೈಸೂ ರಿನಲ್ಲಿ ನವೆಂಬರ್ 30ರಂದು ನಡೆಯಲಿದೆ.

ರಾಜನ್-ನಾಗೇಂದ್ರ ಟ್ರಸ್ಟ್ ವತಿಯಿಂದ ಅಂದು ಕಲಾ ಮಂದಿರದಲ್ಲಿ ಈ ಸಂಗೀತ ಕಾರ್ಯಕ್ರಮ ಆಯೋ ಜಿಸುತ್ತಿದ್ದು, ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಸಂಗೀತ ಕಾರ್ಯಕ್ರಮದ ವಿವರ ನೀಡಿದ ನಿರೂಪಕ ರವಿ ಸಂತೋಷ್, ಅಂದು ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಒಂದು ಕಾಲದಲ್ಲಿ ರಾಜನ್-ನಾಗೇಂದ್ರ ಜೋಡಿ ಕನ್ನಡ ಚಿತ್ರ ರಂಗದಲ್ಲಿ ಸಂಗೀತದ ಹೊಳೆ ಯನ್ನೇ ಹರಿಸಿದೆ. ಕನ್ನಡವೂ ಸೇರಿ ದಂತೆ ತೆಲುಗು, ತಮಿಳು ಚಿತ್ರ ಗಳು ಹೀಗೆ 350ಕ್ಕೂ ಹೆಚ್ಚು ಚಿತ್ರಗಳಿಗೆ ಈ ಜೋಡಿ ಸಂಗೀತ ನಿರ್ದೇಶನ ನೀಡಿದೆ. ಕೇಂದ್ರ ಸರ್ಕಾರ ರಾಜನ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡುವಂತೆ ನಾಡಿನ ಸಮಸ್ತರು ಒತ್ತಾಯಿಸಬೇಕಿದೆ ಎಂದು ತಿಳಿಸಿದರು.

ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ರಾಜನ್ ಅವರ ಶಿಷ್ಯರಾದ ಅನುರಾಧ ಭಟ್, ಅಜಯ್ ವಾರಿಯರ್ ಸೇರಿ ದಂತೆ ಹಲವು ಗಾಯಕರು ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ ಗೀತೆಗಳನ್ನು ಸಾದರಪಡಿಸಲಿದ್ದಾರೆ. ಮೈಸೂರಿನ ನಿಂಬುಜಾ ದೇವಿ ದೇವಸ್ಥಾನಕ್ಕೆ ಕಾಣಿಕೆ ನೀಡುವ ಸಲು ವಾಗಿ ಈ ಕಾರ್ಯಕ್ರಮ ಆಯೋಜಿಸಿದ್ದು, ಪ್ರವೇಶ ದರ ಸೇರಿದಂತೆ ಕಾರ್ಯಕ್ರಮದ ರೂಪುರೇಷೆ ಸಂಬಂಧ ಇನ್ನಷ್ಟು ವಿವರಗಳನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು. ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ನೀಡಲು ಆಸಕ್ತರಿದ್ದರೆ ಟ್ರಸ್ಟ್ ಅನ್ನು ಸಂಪರ್ಕಿಸಬಹುದು ಎಂದು ಹೇಳಿದರು. 82 ವರ್ಷ ವಯೋಮಾನದ ಹಿರಿಯ ಸಂಗೀತ ನಿರ್ದೇ ಶಕ ರಾಜನ್ ಸಹ ಗೋಷ್ಠಿಯಲ್ಲಿದ್ದರು. ಅಲ್ಲದೆ, ರಾಜನ್ ಪುತ್ರ ಅನಂತ್, ಟ್ರಸ್ಟ್‍ನ ಸದಸ್ಯ ವೆಂಕಟೇಶ್, ಪತ್ರಕರ್ತ ಸಿ.ಮಹೇಶ್ವರನ್ ಮತ್ತಿತರರು ಹಾಜರಿದ್ದರು.

Translate »