ಸ್ವಯಂ ರಕ್ಷಣೆಗಿರುವ ಸಮರ ಕಲೆ ಕರಾಟೆ
ಮೈಸೂರು

ಸ್ವಯಂ ರಕ್ಷಣೆಗಿರುವ ಸಮರ ಕಲೆ ಕರಾಟೆ

October 20, 2019

ಮೈಸೂರು, ಅ.19(ಪಿಎಂ)- ಮೈಸೂರು ವಿವಿ ಸಹ ಯೋಗದೊಂದಿಗೆ ಆಲ್ ಇಂಡಿಯಾ ಕರಾಟೆ ಡೋ ಮತ್ತು ಕೊಬುಡೋ ಪ್ರೊಮೋಷನ್ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿರುವ ಕರಾಟೆ ಮತ್ತು ಕೊಬುಡೋ ರಾಷ್ಟ್ರ ಮಟ್ಟದ ಪಂದ್ಯಾವಳಿಗೆ ಶನಿವಾರ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ. ಹೇಮಂತ್‍ಕುಮಾರ್ ಚಾಲನೆ ನೀಡಿದರು.

ಮೈಸೂರು ವಿವಿಯ ಸ್ಪೋಟ್ರ್ಸ್ ಪೆವಿಲಿಯನ್‍ನ ಒಳಾಂ ಗಣ ಕ್ರೀಡಾಂಗಣದಲ್ಲಿ ಫೌಂಡೇಷನ್‍ನ 9ನೇ ವಾರ್ಷಿಕೋ ತ್ಸವದ ಅಂಗವಾಗಿ ಏರ್ಪಡಿಸಿರುವ ಕರಾಟೆ ಮತ್ತು ಕೊಬುಡೋ ಪಂದ್ಯಾವಳಿಗೆ ಕುಲಪತಿಗಳು ಚಾಲನೆ ನೀಡಿ ದರು. ಬಳಿಕ ಮಾತನಾಡಿದ ಅವರು, ಕರಾಟೆ ಒಂದು ರಕ್ಷಣಾ ಚಟುವಟಿಕೆಯಾಗಿದೆ. ಈ ಸಮರ ಕಲೆ ಚೀನಾ ದೇಶದಲ್ಲಿ ಹುಟ್ಟಿಕೊಂಡಿತು ಎಂದು ಭಾವಿಸಿದ್ದೇನೆ. ಕರಾಟೆ ಇದೀಗ ಭಾರತವೂ ಸೇರಿದಂತೆ ವಿಶ್ವದಲ್ಲಿ ತನ್ನ ಛಾಪು ಮೂಡಿಸುತ್ತಿದೆ. ಈ ರಕ್ಷಣಾ ಕಲೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಅನೇಕ ಸಂಸ್ಥೆಗಳು ಶ್ರಮಿಸುತ್ತಿವೆ. ಕರಾಟೆ ಪಟು ಗಳು ಇನ್ನೂ ಹೆಚ್ಚು ಹೆಚ್ಚು ಕಲಿಯಲು ಮುಂದಾಗಬೇಕು ಎಂದು ಸಲಹೆ ನೀಡಿದರು. ಮೈಸೂರು ವಿವಿಯ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ಅಧ್ಯಯನ ವಿಭಾಗದ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಎಂ.ಚಂದ್ರಕುಮಾರ್ ಮಾತ ನಾಡಿ, ಕರಾಟೆ ಎಂಬುದೊಂದು ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವ ಅದ್ಭುತ ಕಲೆ. ಇದನ್ನು ಕರಗತ ಮಾಡಿ ಕೊಂಡರೆ ಎದುರಾಳಿಗಳನ್ನು ಎದುರಿಸಲು ಪ್ರಮುಖ ಅಸ್ತ್ರವಾಗಲಿದೆ. ಇಲ್ಲಿ ಭಾಗವಹಿಸಿರುವ ಪಟುಗಳು ಉತ್ತಮ ಪ್ರದರ್ಶನ ನೀಡಿ ಎಂದು ಹಾರೈಸಿದರು.

`ಎಲ್ಲಾ ವಿಭಾಗಗಳಲ್ಲೂ ಕ್ರಮವಾಗಿ ಮೂರು ಸ್ಥಾನ ಗಳನ್ನು ನೀಡಲಾಗುವುದು. ಪ್ರಥಮ ಸ್ಥಾನಕ್ಕೆ ಚಿನ್ನ ಲೇಪಿತ ಪದಕ, ದ್ವಿತೀಯ ಸ್ಥಾನಕ್ಕೆ ಬೆಳ್ಳಿ ಪದಕ ಹಾಗೂ ತೃತೀಯ ಸ್ಥಾನಕ್ಕೆ ಕಂಚಿನ ಪದಕ ನೀಡಲಾಗುವುದು’ ಎಂದು ಫೌಂಡೇ ಷನ್‍ನ ಜಂಟಿ ಕಾರ್ಯದರ್ಶಿ ಕ್ಯೋಶಿ ಫೌಸ್ಟಿನ್ ಮೋಸಸ್ ತಿಳಿಸಿದರು. ನಾಳೆ (ಅ.20) ಸಂಜೆ 4.30ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ನೀಡಲಾಗುವುದು. ಹಿರಿಯ ಕರಾಟೆ ಪಟು ಶಿಹಾನ್ ಫಾಸ್ಟಿನ್ ನಿಗ್ಲಿ, ಫೌಂಡೇಷನ್‍ನ ಅಧ್ಯಕ್ಷ ಹನ್ಸಿ ಡಾ.ಎಸ್.ರೆಥಿನಮ್, ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ಮತ್ತಿತರರು ಹಾಜರಿದ್ದರು.

Translate »