ಮಹಾರಾಷ್ಟ್ರ, ಹರಿಯಾಣ ವಿಧಾನಸಭೆಚುನಾವಣಾ ಬಹಿರಂಗ ಪ್ರಚಾರಕ್ಕೆ ತೆರೆ
ಮೈಸೂರು

ಮಹಾರಾಷ್ಟ್ರ, ಹರಿಯಾಣ ವಿಧಾನಸಭೆಚುನಾವಣಾ ಬಹಿರಂಗ ಪ್ರಚಾರಕ್ಕೆ ತೆರೆ

October 20, 2019

ಇಂದು ಮನೆ ಮನೆ ಪ್ರಚಾರಕ್ಕೆ ಅವಕಾಶ
ಮುಂಬೈ: ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ತೆರೆಬಿದ್ದಿದೆ. ನಾಳೆ ಅಭ್ಯರ್ಥಿ ಗಳು ಮನೆ ಮನೆಗೆ ತೆರಳಿ ಪ್ರಚಾರ ಮಾಡಲು ಅವಕಾಶ ಮಾಡಿಕೊಡಲಾಗಿದೆ. ರಾಜಕೀಯ ಪಕ್ಷಗಳು ಮತದಾರರ ಮನವೊಲಿಸಲು ಅಂತಿಮ ಸುತ್ತಿನ ಪ್ರಯತ್ನ ಮಾಡಲಿದ್ದಾರೆ. ಮಹಾರಾಷ್ಟ್ರದ 288 ಮತ್ತು ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಇದೇ ಅ.21ಕ್ಕೆ ನಡೆಯಲಿದೆ. ಇದೇ ವೇಳೆ 17 ರಾಜ್ಯಗಳ 2 ಲೋಕಸಭಾ ಮತ್ತು 51 ವಿಧಾನಸಭಾ ಕ್ಷೇತ್ರಗಳಿಗೂ ಮತದಾನವಾಗ ಲಿದೆ. ಈ ಪೈಕಿ ಉತ್ತರಪ್ರದೇಶದ 11, ಗುಜ ರಾತ್‍ನ 6, ಕೇರಳ 5, ಬಿಹಾರ 5, ಸಿಕ್ಕಿಂ 3, ಪಂಜಾಬ್‍ನ 4, ಅಸ್ಸಾಂನ 2, ತಮಿಳುನಾಡಿನ 2, ರಾಜಸ್ಥಾನದ 2, ಹಿಮಾಚಲ ಪ್ರದೇಶದ 2, ಒರಿಸ್ಸಾದ 1, ತೆಲಂಗಾಣದ 1, ಮಧ್ಯಪ್ರದೇಶದ 1, ಛತ್ತೀಸ್‍ಗಡ 1, ಮೇಘಾಲಯ 1, ಪಾಂಡಿಚೇರಿ 1 ಮತ್ತು ಅರುಣಾಚಲ ಪ್ರದೇಶದ 1 ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಅ.24 ರಂದು ಫಲಿತಾಂಶ ಪ್ರಕಟವಾಗಲಿದೆ. ಇನ್ನು ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 3,237 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1169 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ರಾಜ ನಾಥ್ ಸಿಂಗ್, ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹಲವರು ಬಿಜೆಪಿ ಪರವಾಗಿ ಮಹಾ ರಾಷ್ಟ್ರ, ಹರಿಯಾಣದಲ್ಲಿ ಮತಯಾಚನೆ ಮಾಡಿ ದ್ದಾರೆ. ಇತ್ತ ಕಾಂಗ್ರೆಸ್-ಎನ್‍ಸಿಪಿ ಮೈತ್ರಿ ಪರ ವಾಗಿ ಕಾಂಗ್ರೆಸ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಬಿರುಸಿನ ಪ್ರಚಾರ ಮಾಡಿದ್ದಾರೆ.

Translate »