ಮೈಸೂರಿನಲ್ಲಿ ಬ್ಯಾಡ್ಮಿಂಟನ್ ತರಬೇತಿ ಕೇಂದ್ರ ಆರಂಭ
ಮೈಸೂರು

ಮೈಸೂರಿನಲ್ಲಿ ಬ್ಯಾಡ್ಮಿಂಟನ್ ತರಬೇತಿ ಕೇಂದ್ರ ಆರಂಭ

October 20, 2019

ಮೈಸೂರು, ಅ.19(ಪಿಎಂ)- ಮೈಸೂರು ಮತ್ತು ಸುತ್ತಮುತ್ತಲ ಬ್ಯಾಡ್ಮಿಂಟನ್ ಪಟುಗಳಿಗೆ ಉತ್ತಮ ತರಬೇತಿ ಸೌಲಭ್ಯ ಒದಗಿ ಸುವ ಉದ್ದೇಶದಿಂದ ಬೆಂಗಳೂರಿನ ಯಾದವ್ ಪ್ರೊ ಬ್ಯಾಡ್ಮಿಂ ಟನ್ ಅಕಾಡೆಮಿ ವತಿಯಿಂದ ಮೈಸೂರಿನಲ್ಲಿ ತರಬೇತಿ ಕೇಂದ್ರ ಆರಂಭಿಸಲಾಗಿದೆ ಎಂದು ಅಕಾಡೆಮಿಯ ಮುಖ್ಯ ತರಬೇತು ದಾರ ಕೆ.ಜಗದೀಶ್ ಯಾದವ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬೋಗಾದಿಯ ಆದಿತ್ಯ ಸ್ಪೋಟ್ರ್ಸ್ ಅರೇನಾದಲ್ಲಿ ನಮ್ಮ ಅಕಾಡೆಮಿ ವತಿಯಿಂದ ತರಬೇತಿ ಕೇಂದ್ರ ಕಳೆದ ತಿಂಗಳಿಂದ ಕಾರ್ಯಾರಂಭ ಮಾಡಿದೆ. ಮೈಸೂರು ಕೇಂದ್ರ ಕ್ಕಾಗಿ ಇಂಡೋನೇಷಿಯಾದ ಆಲ್ವಿನ್ ಇಸ್‍ಕ್ಯಾಂಡಿ ಅವರನ್ನು ಮುಖ್ಯ ತರಬೇತುದಾರನ್ನಾಗಿ ನೇಮಿಸಲಾಗಿದೆ ಎಂದು ಹೇಳಿದರು.

2024ರಲ್ಲಿ ಜರುಗುವ ಒಲಂಪಿಕ್ ಕ್ರೀಡೆಯಲ್ಲಿ ಬ್ಯಾಡ್ಮಿಂಟನ್ ನಲ್ಲಿ ಭಾರತಕ್ಕೆ ಸ್ಥಾನ ದೊರೆಯಬೇಕೆಂಬ ದೂರದೃಷ್ಟಿಯನ್ನು ಅಕಾಡೆಮಿ ಹೊಂದಿದೆ. ಅಕಾಡೆಮಿಯಲ್ಲಿ ತರಬೇತಿ ಪಡೆದ ಪಟು ಗಳು ಹಲವು ಮಹತ್ತರ ಸಾಧನೆ ಮಾಡಿದ್ದಾರೆ. ಈ ಪೈಕಿ ಇತ್ತೀಚಿನ ಕೆಲ ಸಾಧನೆಗಳನ್ನು ಹೇಳುವುದಾದರೆ, ಮಾಲ್ಡೀವ್ಸ್ ಫೂಚರ್ ಸೀರಿಸ್ 2019ರ ಪಂದ್ಯಾವಳಿಯಲ್ಲಿ ವೈಭವ್ ಮತ್ತು ಪ್ರಕಾಶ್ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಅದೇ ರೀತಿ ಮಾಲ್ಡೀವ್ಸ್ ಚಾಲೆಂಜ್ ಸೀರಿಸ್ 2019ರಲ್ಲಿ ಸಾಯಿ ಪ್ರತೀಕ್ ಮತ್ತು ಅಶ್ವಿನಿಭಟ್ ಬೆಳ್ಳಿ ಪದಕ, ಮಾಲ್ಡೀವ್ಸ್ ಚಾಲೆಂಜ್ ಸೀರಿಸ್ 2019ರಲ್ಲಿ ಶಿಖಾ ಗೌತಮ್ ಮತ್ತು ಅಶ್ವಿನಿಭಟ್ ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ ಎಂದರು. ತರಬೇತಿಗೆ ಮಾಸಿಕ 3 ಸಾವಿರ ರೂ. ಶುಲ್ಕ ನಿಗದಿ ಮಾಡಿದ್ದು, ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ಆಟಗಾರರಿಗೆ ಶುಲ್ಕದಲ್ಲಿ ರಿಯಾಯಿತಿ ನೀಡಲಾಗುವುದು. ಪ್ರತಿಭಾನ್ವಿತರನ್ನು ಬೆಂಗ ಳೂರಿನ ನಮ್ಮ ಎಕ್ಸ್‍ಲೆನ್ಸ್ ಕೇಂದ್ರಕ್ಕೆ ಕಳುಹಿಸಿ ಅತ್ಯುನ್ನತ ಮಟ್ಟದ ತರಬೇತಿ ನೀಡುವ ಮೂಲಕ ಅವರ ಮುಂದಿನ ಹಂತಕ್ಕೆ ಅಗತ್ಯ ಪ್ರೋತ್ಸಾಹ ನೀಡಲಾಗುವುದು. ಮೈಸೂರಿನಲ್ಲಿ ರಾಜ್ಯ ಮಟ್ಟದ ಪಂದ್ಯಾ ವಳಿ ಆಯೋಜಿಸಲು ಉದ್ದೇಶಿಸಲಾಗಿದೆ. ಅಂತೆಯೇ ರಾಷ್ಟ್ರ ಮಟ್ಟದ ಪಂದ್ಯಾವಳಿ ನಡೆಸಲು ಚಿಂತನೆ ನಡೆಸುತ್ತಿದ್ದೇವೆ ಎಂದರು. ಅಕಾಡೆಮಿ ಅಧ್ಯಕ್ಷ ವಿನಾಯಕ್, ಕಾರ್ಯದರ್ಶಿ ಅಂಜನ್‍ಗೌಡ, ಬ್ಯಾಡ್ಮಿಂಟನ್ ಮಾಜಿ ಆಟಗಾರ್ತಿ ಮೊನಿಷಾ ವಿನಾಯಕ್, ಆದಿತ್ಯ ಸ್ಪೋಟ್ರ್ಸ್ ಅರೇನಾ ಸಂಸ್ಥೆಯ ನಾಗರಾಜ್ ಗೋಷ್ಠಿಯಲ್ಲಿದ್ದರು.

Translate »