ಈ ರಸ್ತೆ ಅಭಿವೃದ್ಧಿ ಒಂದೆಡೆ ಸಂಚಾರಕ್ಕೆ ಕಂಟಕ ಪ್ರಾಯ!
ಮೈಸೂರು

ಈ ರಸ್ತೆ ಅಭಿವೃದ್ಧಿ ಒಂದೆಡೆ ಸಂಚಾರಕ್ಕೆ ಕಂಟಕ ಪ್ರಾಯ!

October 21, 2019

ಮೈಸೂರು,ಅ.20(ಎಸ್‍ಬಿಡಿ)- ಮೈಸೂರಿನ ಗಾಯತ್ರಿಪುರಂನ ರಸ್ತೆಯೊಂದರಲ್ಲಿ ವಿಚಿತ್ರ ಸಮಸ್ಯೆಯಿಂದಾಗಿ ಸಂಚಾರಕ್ಕೆ ಅಡ್ಡಿ ಯಾಗಿರುವುದಲ್ಲದೆ, ಅಪಘಾತವೂ ಹೆಚ್ಚುತ್ತಿವೆ.

ಗಾಯತ್ರಿಪುರಂ-ಕ್ಯಾತಮಾರನಹಳ್ಳಿ ಮುಖ್ಯರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗಿದೆ. ಈ ರಸ್ತೆ ಕ್ಯಾತಮಾರನಹಳ್ಳಿ, ಉದಯಗಿರಿ ಸೇರಿದಂತೆ ಸುತ್ತಮುತ್ತಲ ಬಡಾವಣೆಗಳನ್ನು ಸಂಪರ್ಕಿಸುವುದರಿಂದ ಯಾವಾಗಲೂ ವಾಹನ ದಟ್ಟಣೆ ಇದ್ದೇ ಇರುತ್ತದೆ. ಒಂದು ಸ್ಥಳವನ್ನು ಹೊರತುಪಡಿಸಿ ಉಳಿದ ರಸ್ತೆ ಸುಗಮ ಸಂಚಾರಕ್ಕೆ ಅಗತ್ಯವಾದಷ್ಟು ವಿಸ್ತಾರ ವಾಗಿದೆ. ಆದರೆ ಆ ಒಂದು ಸ್ಥಳದಲ್ಲಾಗುವ ಅದ್ವಾನದಿಂದ ಇಡೀ ಈ ರಸ್ತೆ ಸಂಚಾ ರಕ್ಕೇ ಅಡ್ಡಿಯಾಗುತ್ತಿದೆ. ಗಾಯತ್ರಿಪುರಂ 2ನೇ ಹಂತದ ವ್ಯಾಪ್ತಿಯಲ್ಲಿರುವ ಈ ರಸ್ತೆ ಒಂದು ಸ್ಥಳದಲ್ಲಿ ಮಾತ್ರ ಅತ್ಯಂತ ಕಿರಿದಾಗಿದೆ. ಉದ್ಯಾನ ಹಾಗೂ ಮೋರಿ ಇರುವ ಸ್ಥಳದಲ್ಲಿ ಸುಮಾರು 50-60 ಮೀ. ರಸ್ತೆಯನ್ನು ವಿಸ್ತಾರಗೊಳಿಸದಿರುವುದು ಸಮಸ್ಯೆಗಳಿಗೆ ಕಾರಣವಾಗಿದೆ. ಎರಡೂ ಕಡೆಯಿಂದ ಸುಗಮವಾಗಿ ಬರುವ ವಾಹನಗಳು ಈ ಸ್ಥಳದಲ್ಲಿ ಜಾಮ್ ಆಗುತ್ತವೆ. ಒಂದರ ಹಿಂದೊಂದು ಸಂಚರಿ ಸುವ ದುಸ್ಥಿತಿ ಇದೆ. ಶಾಲಾ ವಾಹನಗಳೂ ಇಲ್ಲಿ ಹೆಚ್ಚಾಗಿ ಸಂಚರಿಸುತ್ತವೆ. ರಸ್ತೆ ಕಿರಿ ದಾಗಿರುವುದನ್ನು ತಕ್ಷಣಕ್ಕೆ ಗಮನಿಸಲಾ ಗದೆ ಅನೇಕರು ಅಪಘಾತ ಮಾಡಿಕೊಂಡಿ ದ್ದಾರೆ. ಈ ಜಾಗದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಪಾದಚಾರಿಗಳು ಪ್ರಾಣ ಭಯದಲ್ಲೇ ಓಡಾಡುವಂತಾಗಿದೆ.

ವಿಸ್ತಾರವಾದ ರಸ್ತೆಯ ನಡುವೆ ಒಂದಿಷ್ಟು ದೂರ ಮಾತ್ರ ಕಿರಿದಾಗಿರುವ ಕಾರಣ ಅಪಘಾತ ಸಂಭವಿಸುತ್ತಿವೆ. ಜನಪ್ರತಿ ನಿಧಿಗಳಾಗಲೀ, ಅಧಿಕಾರಿಗಳಾಗಲೀ ಯಾರೊಬ್ಬರೂ ಸಮಸ್ಯೆ ಬಗ್ಗೆ ಗಮನ ಹರಿಸುತ್ತಿಲ್ಲ. ಅವೈಜ್ಞಾನಿಕವಾಗಿ ರಸ್ತೆ ಅಭಿವೃದ್ಧಿಗೊಳಿಸಿ ಕೈತೊಳೆದುಕೊಂಡಿ ದ್ದಾರೆ. ಗಂಭೀರ ಅಪಘಾತ ಸಂಭವಿಸುವ ಮುನ್ನ ರಸ್ತೆಯನ್ನು ಸರಿಪಡಿಸಬೇಕೆಂದು ಸ್ಥಳೀಯರು ಆಗ್ರಹಪಡಿಸಿದ್ದಾರೆ.

ಎರಡೂ ಕಡೆ ರಸ್ತೆ ಅಗಲೀಕರಣ ಮಾಡಿ, ಅಭಿವೃದ್ಧಿಪಡಿಸಲಾಗಿದೆ. ಆದರೆ ಮಧ್ಯದಲ್ಲಿ ರಸ್ತೆ ಕಿರಿದಾಗಿರುವುದು ಕ್ಯಾತ ಮಾರನಹಳ್ಳಿ, ಗಾಯತ್ರಿಪುರಂ, ಉದಯ ಗಿರಿ, ಕಲ್ಯಾಣಗಿರಿ, ರಾಜೀವ್ ನಗರ, ಜ್ಯೋತಿ ನಗರ, ರಾಘವೇಂದ್ರನಗರ ಸೇರಿದಂತೆ ಹಲವಾರು ಕಡೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಒಂದೆಡೆ ಸಂಚಾರಕ್ಕೆ ಕಂಟಕ ಪ್ರಾಯವಾಗಿದೆ. ನಮ್ಮ ಅಧಿಕಾರಿ ವರ್ಗದ ಜ್ಞಾನ ಸಂಪತ್ತನ್ನು ಈ ಕಾಮಗಾರಿ ಸಾರು ತ್ತದೆ. ಆದರೆ ಇವರು ಮಾಡಿದ ತಪ್ಪಿಗೆ ಜನ ಪರಿತಪಿಸಬೇಕಾಗಿ ಬಂದಿರುವುದು ಅತ್ಯಂತ ದುಃಖದ ಸಂಗತಿ ಎಂದು ಹಿರಿಯ ನಾಗರಿಕರ ವಿಷಾದ ವ್ಯಕ್ತಪಡಿಸಿದ್ದಾರೆ.

Translate »