ಹಿಂದುತ್ವದ ಉಳಿವಿಗೆ ಮಹಾರಾಣಾ ಪ್ರತಾಪ್ ಸಿಂಹರ ಕೊಡುಗೆ ಅಪಾರ
ಮೈಸೂರು

ಹಿಂದುತ್ವದ ಉಳಿವಿಗೆ ಮಹಾರಾಣಾ ಪ್ರತಾಪ್ ಸಿಂಹರ ಕೊಡುಗೆ ಅಪಾರ

October 21, 2019

ಮೈಸೂರು,ಅ.20(ಪಿಎಂ)- ದೇಶದಲ್ಲಿ ಹಿಂದುತ್ವ ಉಳಿದಿದ್ದರೆ ಅದಕ್ಕೆ ಮಹಾರಾಣಾ ಪ್ರತಾಪ್ ಸಿಂಹರ ಅಪಾರ ಕೊಡುಗೆಯೂ ಕಾರಣ ಎಂದು ಕರ್ನಾಟಕ ಕ್ಷತ್ರಿಯ ಒಕ್ಕೂಟದ ಅಧ್ಯಕ್ಷ ಹಾಗೂ ವಕೀಲ ಉದಯಸಿಂಗ್ ಅಭಿಪ್ರಾಯಪಟ್ಟರು.

ಮೈಸೂರು ಇಟ್ಟಿಗೆಗೂಡಿನ ಚನ್ನಮ್ಮ ಚನ್ನಬಸಪ್ಪ ಕಲ್ಯಾಣ ಮಂಟಪದಲ್ಲಿ ಶ್ರೀಮಹಾ ರಾಣಾ ಪ್ರತಾಪ್ ಸಿಂಹಜೀ ರಜಪೂತ್ ಕ್ಷತ್ರಿಯ ಸಮಾಜ್ ವತಿಯಿಂದ ಭಾನುವಾರ ಹಮ್ಮಿ ಕೊಂಡಿದ್ದ ಶ್ರೀಮಹಾರಾಣಾ ಪ್ರತಾಪ್ ಸಿಂಹ ಅವರ 479ನೇ ಜಯಂತೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಮೊಗಲರನ್ನು ಹಿಮ್ಮೆಟ್ಟಿಸಿ ಹಿಂದುತ್ವ ಉಳಿಸಿ ಬೆಳೆಸಿದ ಮಹಾರಾಣಾ ಪ್ರತಾಪ್ ಸಿಂಹ ಅವರು ಮಹಾ ಪರಾಕ್ರಮಿ. ಹೀಗೆ ರಜಪೂತ್ ಕ್ಷತ್ರಿಯ ಸಮಾಜದ ನಮ್ಮ ಪೂರ್ವಿಕರು ಹಿಂದುತ್ವ ಉಳಿಸಲು ತ್ಯಾಗ ಬಲಿದಾನ ಮಾಡಿದ್ದಾರೆ. ಇಂತಹ ಸಮಾಜದಲ್ಲಿ ನಾವು ಜನ್ಮತಾಳಿರುವುದು ನಮ್ಮ ಪುಣ್ಯ. ದೇಶ ವನ್ನು ಆಳಿದ ಸಮುದಾಯ ನಮ್ಮದು. ಆದರೆ ಪ್ರಸ್ತುತ ಸಮಾಜದ ಪರಿಸ್ಥಿತಿ ಬಗ್ಗೆ ನಾವು ಅವಲೋಕನ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.

ಮಹಾರಾಣಾ ಪ್ರತಾಪ್ ಸಿಂಹ ಸೇರಿ ದಂತೆ ಸಮುದಾಯದ ಧೀರ ನಾಯಕರ ಬಗ್ಗೆ ನಮ್ಮ ಮನೆಗಳಲ್ಲಿ ಮಕ್ಕಳಿಗೆ ತಿಳಿಸಿ ಕೊಡಬೇಕು. ನಮ್ಮ ಸಮಾಜದಲ್ಲಿ ಕೆಲ ವರು ಪರಿಚಯ ಮಾಡಿಕೊಳ್ಳುವ ವೇಳೆ ನಮ್ಮದು ಅತ್ಯಂತ ಸಣ್ಣ ಸಮಾಜ ಎಂದು ಹೇಳಿಕೊಳ್ಳುತ್ತಾರೆ. ಸಂಖ್ಯೆ ಕಡಿಮೆ ಇದ್ದರೂ ನಾವು ಆಳ್ವಿಕೆ ನಡೆಸಿದ ಪರಂಪರೆ ಎಂಬುದು ನಮ್ಮ ಹೆಮ್ಮೆ. ಇದನ್ನು ನಾವು ಗಮನದಲ್ಲಿ ಇರಿಸಿಕೊಳ್ಳಬೇಕು. ನಮ್ಮ ಸಮುದಾಯ ಸಂಖ್ಯೆಯಲ್ಲಿಯೂ ಕಡಿಮೆಯೇನಿಲ್ಲ. ರಾಜ್ಯ ದಲ್ಲಿ ಒಂದೂಕಾಲು ಕೋಟಿ ಜನಸಂಖ್ಯೆ ಹೊಂದಿದೆ ಎಂದು ಹೇಳಿದರು.

ಪರಕೀಯರು ಹಾಗೂ ದೇಶದ್ರೋಹಿ ಗಳ ವಿರುದ್ಧ ಹೋರಾಡುತ್ತ ನಮ್ಮ ಸಮು ದಾಯ ಇಡೀ ಭಾರತದಲ್ಲಿ ವಿಸ್ತರಿಸಿದೆ. ಇಂತಹ ಪರಂಪರೆ ಹೊಂದಿರುವ ನಮ್ಮ ಸಮಾಜ ಉಪಪಂಗಡಗಳಾಗಿ ವಿಂಗಡನೆ ಗೊಳ್ಳುವ ಮೂಲಕ ಬಲಹೀನವಾಗ ದಂತೆ ಎಚ್ಚರ ವಹಿಸಬೇಕು. ಈಗಾಗಲೇ 28 ಪಂಗಡಗಳಾಗಿ ಸಣ್ಣ ಸಮುದಾಯ ಎಂದು ಗುರುತಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜಸ್ತಾನದ ಭಾರತ ಸಾಧು ಸಮಾ ಜದ ಚೇತನ ಗೂರೂಜಿ ಹಾಗೂ ಗುಜ ರಾತ್‍ನ ಕಾಯವರ ವಡೋದರದ ದಿವೇಶ್ ಬ್ರಹ್ಮಾಚಾರಿ ಸಾನಿಧ್ಯ ವಹಿಸಿ ದ್ದರು. ಮಾಜಿ ಮೇಯರ್ ಶ್ರೀಕಂಠಯ್ಯ, ಪಿರಿಯಾಪಟ್ಟಣ ಪುರಸಭಾ ಸದಸ್ಯ ಮಂಜುನಾಥಸಿಂಗ್, ಮೈಸೂರು ಮಹಾ ನಗರ ಪಾಲಿಕೆ ಸದಸ್ಯ ಸತ್ಯರಾಜ್, ಶ್ರೀ ಮಹಾರಾಣಾ ಪ್ರತಾಪ್ ರಜಪೂತ್ ಮಂಡಲ್‍ನ ಅಧ್ಯಕ್ಷ ಪೃಥ್ವಿಸಿಂಗ್, ಕರ್ನಾ ಟಕ ರಜಪೂತ್ ಮಹಾಸಭಾದ ಅಧ್ಯಕ್ಷ ಜೆ.ಕೃಷ್ಣಸಿಂಗ್, ಕರ್ನಾಟಕ ರಾಜ್ಯ ಅಖಿಲ ಭಾರತೀಯ ಕ್ಷತ್ರಿಯ ಮಹಾಸಭಾದ ಅಧ್ಯಕ್ಷ ಪ್ರೇಮ್‍ಸಿಂಗ್, ತಮಿಳುನಾಡಿನ ರಜಪೂತ್ ಬೊಂದಿಲ್‍ನ ಅಧ್ಯಕ್ಷ ಭವಾನಿ ಸಿಂಗ್, ತಮಿಳುನಾಡಿನ ಕೊಯಮತ್ತೂ ರಿನ ಬೊಂದಿಲ್ ಸಮಾಜ್ ಅಧ್ಯಕ್ಷ ಯುವರಾಜ್ ಸಿಂಗ್, ಶ್ರೀಮಹಾರಾಣಾ ಪ್ರತಾಪ್ ಸಿಂಹಜೀ ರಜಪೂತ್ ಕ್ಷತ್ರಿಯ ಸಮಾಜ್ ಅಧ್ಯಕ್ಷ ಸತ್ಯನಾರಾಯಣಸಿಂಗ್ ಮತ್ತಿತರರು ಹಾಜರಿದ್ದರು.

Translate »