ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಆರಂಭಕ್ಕೆ ಕೇವಲ 14 ದಿನ ಬಾಕಿಯಿದೆ. ಈ ಹಿನ್ನೆಲೆ ಯಲ್ಲಿ ಅರ್ಜುನ ನೇತೃ ತ್ವದ 12 ಆನೆಗಳಿಗೂ ಪೌಷ್ಟಿಕ ಆಹಾರ ನೀಡಿ ತಯಾರಿ ನೀಡಲಾಗು ತ್ತಿದೆ. ಅಲ್ಲದೆ ಪ್ರತಿ ದಿನ ಬೆಳಿಗ್ಗೆ 7.10ಕ್ಕೆ ಅರ ಮನೆಯಿಂದ ಬನ್ನಿ ಮಂಟಪದ ಪಂಜಿನ ಕವಾಯಿತು ಮೈದಾನ ದವರೆಗೆ ತಾಲೀಮು ನಡೆಸಲಾಗುತ್ತದೆ. ಬೆಳಿಗ್ಗೆ 8.45ಕ್ಕೆ ಪಂಜಿನ ಕವಾಯಿತು ಮೈದಾನಕ್ಕೆ ತಲುಪುವ ಆನೆಗಳಿಗೆ ಕೆಲ ಕಾಲ ವಿಶ್ರಾಂತಿಗೆ ಸಮಯ ನೀಡಿ, 9ಕ್ಕೆ ವಾಪಸ್ ಕರೆತರಲಾಗುತ್ತದೆ. ಸಂಜೆ 4…
ಲೋಕ್ ಅದಾಲತ್‍ನಲ್ಲಿ ಒಂದೇ ದಿನ 4,109 ಪ್ರಕರಣ ವಿಲೇವಾರಿ
September 15, 2019ಮೈಸೂರು,ಸೆ.14(ಪಿಎಂ)- ಮೈಸೂರು ಜಿಲ್ಲೆಯಾದ್ಯಂತ ಶನಿವಾರ ನಡೆದ ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ ರಾಜಿ ಸಂಧಾನಕ್ಕೆ ಸ್ವೀಕರಿಸಿದ್ದ 12,162 ಪ್ರಕರಣ ಗಳ ಪೈಕಿ 4,109 ವಿಲೇವಾರಿಗೊಂಡು ಒಟ್ಟು 31.65 ಕೋಟಿ ರೂ. (31,65,70,794 ರೂ.) ಮೊತ್ತದ ಪರಿಹಾರದೊಂದಿಗೆ ವ್ಯಾಜ್ಯಗಳು ಇತ್ಯರ್ಥವಾದವು. ಮೈಸೂರಿನ ಕೃಷ್ಣರಾಜ-ಬುಲೇ ವಾರ್ಡ್ ರಸ್ತೆಯ ಜಿಲ್ಲಾ ನ್ಯಾಯಾಲಯ, ಜಯನಗರದ ವಿಸ್ತøತ ನ್ಯಾಯಾಲಯ ಸಂಕೀರ್ಣ ಸೇರಿದಂತೆ 31 ಲೋಕ್ ಅದಾ ಲತ್ ನ್ಯಾಯಪೀಠಗಳನ್ನು ರಚನೆ ಮಾಡಿ ದ್ದರೆ, ನಂಜನಗೂಡು, ಕೆಆರ್ ನಗರ, ಹೆಚ್‍ಡಿ.ಕೋಟೆ, ಪಿರಿಯಾಪಟ್ಟಣ, ಹುಣ ಸೂರು ಹಾಗೂ ತಿ.ನರಸೀಪುರ…
ಸೆ.22ರಂದು ‘ಸೆಲೆಬ್ರೇಷನ್ ಮೈಸೂರು ಮ್ಯಾರಥಾನ್’
September 15, 2019ಮೈಸೂರು,ಸೆ.14-ಸೆಲೆಬ್ರೇಷನ್ ರನ್ ಸೀರಿಸ್‍ನ ಅಂಗವಾಗಿ ಓಟದ ಸರಣಿ ಆಚ ರಣೆಯ ವ್ಯವಸ್ಥಾಪಕ ಸಂಸ್ಥೆಯಾದ ‘ಲೈಫ್ ಈಸ್ ಕಾಲಿಂಗ್ ಸ್ಪೋಟ್ರ್ಸ್’ ಸಂಸ್ಥೆಯು ಸೆ.22ರಂದು ‘ಸೆಲೆಬ್ರೇಷನ್ ಮೈಸೂರು ಮ್ಯಾರಥಾನ್’ ಆಚರಣೆಯ 9ನೇ ಆವೃತ್ತಿ ಯನ್ನು ಹಮ್ಮಿಕೊಂಡಿದೆ. ಮೈಸೂರಿನ ಅರಮನೆಯ ಬಲರಾಮ ಗೇಟ್ ಮ್ಯಾರ ಥಾನ್ ಆರಂಭದ ಸ್ಥಳವಾಗಿದೆ. ಮ್ಯಾರಥಾನ್ ಉದ್ಘಾಟನಾ ಸಮಾ ರಂಭದಲ್ಲಿ ಸುತ್ತೂರು ಮಠದ ಶ್ರೀ ಶಿವ ರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತು ಶಾಸಕ ಎಸ್.ಎ.ರಾಮದಾಸ್ ಉಪಸ್ಥಿತರಿರುವರು. ಈ ಓಟವು ನಸುಕಿನ 4.45ಕ್ಕೆ ಆರಂಭ ವಾಗುತ್ತದೆ. 42 ಕಿಲೋಮೀಟರ್‍ನ…
ದೇಶ ಅಭಿವೃದ್ಧಿಗೊಳ್ಳುತ್ತಿದ್ದರೂ ಆದಿವಾಸಿ ಕುಟುಂಬಗಳ ಸ್ಥಿತಿ-ಗತಿ ಸುಧಾರಿಸಿಲ್ಲ
September 15, 2019ಮೈಸೂರು,ಸೆ.14(ಎಸ್‍ಪಿಎನ್)-ನಮ್ಮ ದೇಶ ಅಭಿ ವೃದ್ಧಿಗೊಳ್ಳುತ್ತಿದ್ದರೂ ಆದಿವಾಸಿ ಕುಟುಂಬಗಳ ಸಾಮಾ ಜಿಕ ಸ್ಥಿತಿ-ಗತಿ ಮಾತ್ರ ಸುಧಾರಿಸಿಲ್ಲ ಎಂದು ಮಧ್ಯ ಪ್ರದೇಶ ಸರ್ಕಾರದ ಆದಿವಾಸಿ ಕಲ್ಯಾಣ ಸಚಿವ ಓಂಕಾರ ಸಿಂಗ್ ಮರ್ಕಮ್ ತೀವ್ರ ಬೇಸರ ವ್ಯಕ್ತಪಡಿಸಿದರು. ಮೈಸೂರು ಮಹಾರಾಜ ಕಾಲೇಜು ಶತಮಾನೋ ತ್ಸವ ಭವನದಲ್ಲಿ ಭಾರತ್ ಆದಿವಾಸಿ ಸಮನ್ವಯ ಮಂಚ್ ಹಾಗೂ ಕರ್ನಾಟಕ ರಾಜ್ಯ ಮೂಲ ಆದಿವಾಸಿ ವೇದಿಕೆ ಸಹಯೋಗದೊಂದಿಗೆ ಆಯೋಜಿಸಿರುವ ಎರಡು ದಿನಗಳ `ಮೂಲ ಆದಿವಾಸಿಗಳ ಹಕ್ಕು ಮತ್ತು ಅಧಿಕಾರ ದಿನಾಚರಣೆ-2019ರ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು. ಪ್ರಸ್ತುತ…
ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ವಿವಿಧ ಸೇವಾ ಕಾರ್ಯಕ್ರಮ
September 15, 2019ಮೈಸೂರು, ಸೆ.14(ಪಿಎಂ)- ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ದೇಶದಾದ್ಯಂತ ಬೂತ್ ಮಟ್ಟದಲ್ಲಿ ಸೇವಾ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಂ ಡಿದ್ದು, ಅದೇ ರೀತಿ ಮೈಸೂರು ನಗರದ ಮೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 797 ಬೂತ್‍ಗಳಲ್ಲಿ ಏಳು ದಿನಗಳ ಕಾಲ ವಿವಿಧ ಸೇವಾ ಕಾರ್ಯಕ್ರಮ ಗಳನ್ನು ಆಯೋಜಿಸಲಾಗಿದೆ ಎಂದು ಸೇವಾ ಸಪ್ತಾಹ ಮೈಸೂರು ನಗರ ಸಂಚಾಲಕ ಹಾಗೂ ನಗರಪಾಲಿಕೆ ಸದಸ್ಯ ಶಿವಕುಮಾರ್ ತಿಳಿಸಿದರು. ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿನಿಂದ ಸೆ.20ರವರೆಗೆ…
ಸಿಸಿಬಿ ಪೊಲೀಸರಿಂದ ಖದೀಮನ ಸೆರೆ: ಚಿನ್ನ, ಬೆಳ್ಳಿ ಆಭರಣ, ಕೋವಿ, ದೇವರ ವಿಗ್ರಹ ವಶ
September 15, 2019ಮೈಸೂರು, ಸೆ. 14 (ಆರ್‍ಕೆ)- ಖದೀಮ ನನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 4 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣ, ಕೋವಿ ಹಾಗೂ ದೇವರ ವಿಗ್ರಹಗಳನ್ನು ವಶ ಪಡಿಸಿಕೊಂಡಿದ್ದಾರೆ. ಕೊಡಗು ಜಿಲ್ಲೆ, ಮಡಿ ಕೇರಿ ತಾಲೂಕು, ನಾಲಡಿ ಗ್ರಾಮದ ನಿವಾಸಿ ಕೆ.ಸಿ. ಚಿನ್ನಪ್ಪ ಅವರ ಮಗ ಕೆ.ಸಿ. ಅಶೋಕ ಅಲಿಯಾಸ್ ಅಶೋಕ ರಾಜಪ್ಪ (30) ಬಂಧಿತ ಆರೋಪಿ. ಮೈಸೂರಿನ ಹೆಬ್ಬಾಳು ಸೂರ್ಯ ಬೇಕರಿ ಸರ್ಕಲ್ ಬಳಿಯ ಮುತ್ತೂಟ್ ಫಿನ್‍ಕಾಪ್ ಎದುರು ಕಾರ್ಯಾಚರಣೆ ನಡೆ ಸಿದ ಪೊಲೀಸರು,…
ಅನ್ಯರ ಪಾಲಾಗುತ್ತಿದೆ ಚಾಮುಂಡೇಶ್ವರಿ ದೇವಸ್ಥಾನದ ಆಸ್ತಿ
September 15, 2019ಮೈಸೂರು,ಸೆ.14(ಪಿಎಂ)-ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದ ಸುಪರ್ದಿಗೆ ಅಂದು ಮೈಸೂರು ಮಹಾ ರಾಜರು ಕೆಆರ್ ನಗರ ತಾಲೂಕಿನ ಅರ್ಜುನ ಹಳ್ಳಿ ಮತ್ತು ಗಳಿಗೆಕೆರೆಹುಂಡಿಯಲ್ಲಿ ಸುಮಾರು 100 ಎಕರೆ ಭೂಮಿಯನ್ನು ದಾನವಾಗಿ ನೀಡಿ ದ್ದರು. ಆದರೆ ಮುಜರಾಯಿ ಇಲಾಖೆ ದೇವ ಸ್ಥಾನದ ಈ ಆಸ್ತಿ ಉಳಿಸಿಕೊಳ್ಳುವಲ್ಲಿ ವಿಫಲ ವಾಗಿದೆ ಎಂದು ನಾಲ್ವಡಿ ಫೌಂಡೇಷನ್ ಅಧ್ಯಕ್ಷ ನಂದೀಶ್ ಜಿ.ಅರಸ್ ತಿಳಿಸಿದರು. ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಜರು ದೇವಸ್ಥಾನಕ್ಕೆ ಸದರಿ ಗ್ರಾಮಗಳಲ್ಲಿ ಸುಮಾರು 100 ಎಕರೆ…
ಮಧ್ಯಪ್ರದೇಶದ ವೃದ್ಧನ ತಲೆಮೇಲೆ ಕೊಂಬು!
September 15, 2019ಕತ್ತರಿಸಿದಷ್ಟೂ ದೊಡ್ಡದಾಗುತ್ತಿದ್ದ ಕೋಡಿಗೆ ಕಡೆಗೂ ಶಸ್ತ್ರಚಿಕಿತ್ಸೆ ಭೋಪಾಲ್, ಸೆ.14- `ನಿನಗೇನು ತಲೆ ಮೇಲೆ ಕೊಂಬಿದೆಯಾ’? ಗ್ರಾಮೀಣ ಭಾಗದಲ್ಲಿ ಯಾರಾದರೂ ತಾನೇ ಮೇಲು ಎಂದು ಮೆರೆ ಯಲೆತ್ನಿಸಿದರೆ ಅಂತಹವರನ್ನು ಹಳಬರು ಪ್ರಶ್ನಿ ಸುತ್ತಿದ್ದ ರೀತಿ ಇದು! ಅರೆ, ಇಲ್ಲೊಬ್ಬ ವೃದ್ಧ ವ್ಯಕ್ತಿಗೆ ನಿಜ ವಾಗಿಯೂ ತಲೆ ಮೇಲೆ ಕೊಂಬು ಬೆಳೆದಿದೆ. ಕತ್ತರಿಸಿದ ಹಾಗೆಲ್ಲಾ ಮತ್ತೂ ಬೆಳೆಯುತ್ತಲೇ ಇದೆ! 74 ವರ್ಷದ ವೃದ್ಧ ಮಧ್ಯಪ್ರದೇಶದ ರಹ್ಲಿ ಗ್ರಾಮದ ಶ್ಯಾಮ್‍ಲಾಲ್ ಯಾದವ್‍ಗೆ ತಲೆಯ ಮೇಲೆ ಕೋಡು ಬೆಳೆಯುತ್ತಿದೆ. ಅವರು ಹಲವು ವರ್ಷಗಳಿಂದ…
ಮೈಸೂರಲ್ಲಿ ದಸರಾ ಸಿವಿಲ್ ಕಾಮಗಾರಿ ಆರಂಭ
September 14, 2019ಮೈಸೂರು,ಸೆ.13(ಆರ್‍ಕೆ)- ಮೈಸೂರು ನಗರದ ವಿವಿಧೆಡೆ 5.7 ಕೋಟಿ ರೂ.ಗಳ ದಸರಾ ಸಿವಿಲ್ ಕಾಮಗಾರಿಗಳನ್ನು ಮಹಾ ನಗರಪಾಲಿಕೆಯು ತರಾತುರಿಯಲ್ಲಿ ಆರಂಭಿಸಿದೆ. ಕಳೆದ ಬಾರಿಯ ದಸರಾ ಅನುದಾನವೇ ಬಾಕಿ ಇದ್ದರೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಅನುದಾನ ಕೊಡಿಸುತ್ತೇನೆ ಎಂದು ಧೈರ್ಯ ಹೇಳಿರುವುದರಿಂದ ಮೈಸೂರು ಮಹಾನಗರ ಪಾಲಿಕೆಯು ಸದ್ದಿಲ್ಲದೇ ಟೆಂಡರ್ ಮೂಲಕ 15 ದಿನಗಳ ಗಡುವು ನೀಡಿ ಹಲವು ಗುತ್ತಿಗೆದಾರರಿಗೆ ಕೆಲಸ ಮಾಡಲು ಆದೇಶ ನೀಡಿದೆ. ಸೆಪ್ಟೆಂಬರ್ 11ರಿಂದ 15 ದಿನದಲ್ಲಿ ಅಥವಾ ಅತೀ ಹೆಚ್ಚು ಎಂದರೆ ಸೆಪ್ಟೆಂಬರ್…
ದಸರಾ ಆನೆ ಹಾಗೂ ಕುದುರೆಗಳಿಗೆ ಸಿಡಿಮದ್ದು ತಾಲೀಮು
September 14, 2019ಮೈಸೂರು,ಸೆ.13(ಎಂಟಿವೈ)-ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ಗಜ ಪಡೆ ಹಾಗೂ ಅಶ್ವಪಡೆಗೆ ಶುಕ್ರವಾರ ಅರ ಮನೆಯ ವರಾಹ ಗೇಟ್ ಬಳಿಯಿ ರುವ ವಾಹನ ನಿಲುಗಡೆಯ ಸ್ಥಳದಲ್ಲಿ ಈ ಸಾಲಿನ ಮೊದಲ ಸಿಡಿಮದ್ದು ಸಿಡಿಸುವ ತಾಲೀ ಮನ್ನು ಯಶಸ್ವಿಯಾಗಿ ನಡೆಸಲಾಯಿತು. ಜಂಬೂಸವಾರಿ ಹಾಗೂ ಬನ್ನಿ ಮಂಟ ಪದ ಪಂಜಿನ ಕವಾಯಿತು ವೇಳೆ ವಿಜ ಯದ ಸಂಕೇತವಾಗಿ 21 ಸುತ್ತು ಕುಶಾಲ ತೋಪು ಸಿಡಿಸುವ ಪರಂಪರೆಯಿದೆ. ಈ ಹಿನ್ನೆಲೆಯಲ್ಲಿ ಜಂಬೂಸವಾರಿ ಮೆರವಣಿಗೆ ಯಲ್ಲಿ ಜನಸಂದಣಿಯ ನಡುವೆ ಸಾಗಲಿ ರುವ ಆನೆ, ಕುದುರೆಗಳು ಕುಶಾಲ…










