ಮೈಸೂರು,ಸೆ.14(ಪಿಎಂ)- ಮೈಸೂರು ಜಿಲ್ಲೆಯಾದ್ಯಂತ ಶನಿವಾರ ನಡೆದ ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ ರಾಜಿ ಸಂಧಾನಕ್ಕೆ ಸ್ವೀಕರಿಸಿದ್ದ 12,162 ಪ್ರಕರಣ ಗಳ ಪೈಕಿ 4,109 ವಿಲೇವಾರಿಗೊಂಡು ಒಟ್ಟು 31.65 ಕೋಟಿ ರೂ. (31,65,70,794 ರೂ.) ಮೊತ್ತದ ಪರಿಹಾರದೊಂದಿಗೆ ವ್ಯಾಜ್ಯಗಳು ಇತ್ಯರ್ಥವಾದವು.
ಮೈಸೂರಿನ ಕೃಷ್ಣರಾಜ-ಬುಲೇ ವಾರ್ಡ್ ರಸ್ತೆಯ ಜಿಲ್ಲಾ ನ್ಯಾಯಾಲಯ, ಜಯನಗರದ ವಿಸ್ತøತ ನ್ಯಾಯಾಲಯ ಸಂಕೀರ್ಣ ಸೇರಿದಂತೆ 31 ಲೋಕ್ ಅದಾ ಲತ್ ನ್ಯಾಯಪೀಠಗಳನ್ನು ರಚನೆ ಮಾಡಿ ದ್ದರೆ, ನಂಜನಗೂಡು, ಕೆಆರ್ ನಗರ, ಹೆಚ್‍ಡಿ.ಕೋಟೆ, ಪಿರಿಯಾಪಟ್ಟಣ, ಹುಣ ಸೂರು ಹಾಗೂ ತಿ.ನರಸೀಪುರ ತಾಲೂಕು ನ್ಯಾಯಾಲಯಗಳಲ್ಲಿ ತಲಾ 2 ಲೋಕ್ ಅದಾಲತ್ ನ್ಯಾಯಪೀಠಗಳನ್ನು ವ್ಯವಸ್ಥೆ ಗೊಳಿಸಲಾಗಿತ್ತು. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿ ಯಿಂದ ನಡೆದ 2019ನೇ ಸಾಲಿನ 3ನೇ ಅದಾಲತ್ ಇದಾಗಿದ್ದು, ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ವ್ಯವಸ್ಥೆಗೊಳಿಸಿದ್ದ ಒಟ್ಟು 43 ನ್ಯಾಯಪೀಠಗಳಿಗೆ ತಲಾ ಒಬ್ಬರು ನ್ಯಾಯಾಧೀಶರು ಹಾಗೂ ಪ್ರಾಧಿಕಾರದ ಪ್ಯಾನೆಲ್ ವಕೀಲರನ್ನು ನಿಯೋಜಿಸಲಾಗಿತ್ತು.
2,392 ವ್ಯಾಜ್ಯ ಪೂರ್ವ ಪ್ರಕರಣಗಳ ಪೈಕಿ 259 ವಿಲೇವಾರಿಗೊಂಡು 2.40 ಕೋಟಿ ರೂ. (2,40,30,494 ರೂ.) ಮೊತ್ತದ ವ್ಯಾಜ್ಯ ಇತ್ಯರ್ಥಗೊಂಡಿತು. ನ್ಯಾಯಾ ಲಯದಲ್ಲಿ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಸ್ವೀಕಾರವಾಗಿದ್ದ 9,770 ಪ್ರಕರಣಗಳ ಪೈಕಿ 3,850 ವಿಲೇವಾರಿ ಯಾಗುವ ಮೂಲಕ 29.25 ಕೋಟಿ ರೂ. (29,25,40,300 ರೂ.) ಮೊತ್ತದ ವ್ಯಾಜ್ಯ ಇತ್ಯರ್ಥವಾಯಿತು.
ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ ಇತರೆ ಸಿವಿಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಸ್ವೀಕರಿಸಿದ್ದ 29 ಪ್ರಕರಣಗಳೂ ವಿಲೇವಾರಿ ಯಾಗುವ ಮೂಲಕ 62,189 ರೂ. ಮೊತ್ತದ ವ್ಯಾಜ್ಯ ಇತ್ಯರ್ಥಗೊಂಡಿತು. ಇದೇ ವ್ಯಾಪ್ತಿಯ ಬ್ಯಾಂಕ್ ವಸೂಲಾತಿ ಪ್ರಕ ರಣಗಳಲ್ಲಿ 2,363ರ ಪೈಕಿ 230 ವಿಲೇವಾರಿ ಗೊಂಡವು. ಇದರಲ್ಲಿ 1,279 ಪ್ರಕರಣಗಳು ಮೈಸೂರು ನಗರ ವ್ಯಾಪ್ತಿಗೆ ಸೇರಿದ್ದಾಗಿದ್ದವು.
ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕ ರಣಗಳಿಗೆ ಸಂಬಂಧಿಸಿದಂತೆ 143 ಬ್ಯಾಂಕ್ ವಸೂಲಾತಿ ಪ್ರಕರಣಗಳ ಪೈಕಿ 15 ವಿಲೇ ವಾರಿಯಾಗುವ ಮೂಲಕ 16.57 ಲಕ್ಷ ರೂ. (16,57,362 ರೂ.) ಮೊತ್ತದ ವ್ಯಾಜ್ಯಕ್ಕೆ ಮುಕ್ತಿ ಸಿಕ್ಕಿತು. ರಾಜೀಯಾಗಬಲ್ಲ ಅಪರಾಧ ಪ್ರಕರಣಗಳಲ್ಲಿ 1,631ರ ಪೈಕಿ 591 ವಿಲೇವಾರಿಯಾಗುವ ಮೂಲಕ 21.63 ಲಕ್ಷ ರೂ. (21,63,100) ಮೊತ್ತದ ವ್ಯಾಜ್ಯ ಇತ್ಯರ್ಥವಾಯಿತು. ಕಾರ್ಮಿಕರ ವ್ಯಾಜ್ಯಕ್ಕೆ ಸಂಬಂಧಿಸಿದಂತೆ 44ರ ಪೈಕಿ ಕೇವಲ 6 ವಿಲೇವಾರಿಗೊಳ್ಳುವ ಮೂಲಕ 42 ಸಾವಿರ ರೂ. ಮೊತ್ತದ ವ್ಯಾಜ್ಯಕ್ಕೆ ತೆರೆ ಬಿದ್ದಿತು. ಭೂಸ್ವಾಧೀನಕ್ಕೆ ಸಂಬಂಧಿಸಿ ದಂತೆ ಸ್ವೀಕೃತಿಗೊಂಡಿದ್ದ ನಾಲ್ಕು ಪ್ರಕರಣ ಗಳು ವಿಲೇವಾರಿಯಾಗುವಲ್ಲಿ ವಿಫಲ ಗೊಂಡವು. ಮೋಟಾರು ಅಪಘಾತ ಪರಿ ಹಾರ ನ್ಯಾಯಾಧೀಕರಣ ಪ್ರಕರಣ (ಎಂಎ ಸಿಟಿ ಕೇಸ್) 682ರ ಪೈಕಿ 139 ವಿಲೇ ವಾರಿ ಆಗುವ ಮೂಲಕ 5.84 ಕೋಟಿ ರೂ. (5,84, 58,980 ರೂ.) ಮೊತ್ತದ ವ್ಯಾಜ್ಯ ಅಂತ್ಯಗೊಂಡಿತು. ವೈವಾಹಿಕ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ 81 ಪ್ರಕ ರಣಗಳ ಪೈಕಿ 25 ಇತ್ಯರ್ಥಗೊಂಡು 75 ಸಾವಿರ ರೂ. ಮೊತ್ತದ ಪರಿಹಾರಕ್ಕೆ ಸಂಧಾನವಾಯಿತು. ಚೆಕ್ಕು ಅಮಾನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ 1,801ರ ಪೈಕಿ 400 ಇತ್ಯರ್ಥಗೊಂಡು 12.88 ಕೋಟಿ ರೂ. (12,88,34,853 ರೂ.) ಮೊತ್ತಕ್ಕೆ ಸಂಧಾನವಾಯಿತು. ಇತೆರೆ ಸಿವಿಲ್ ಪ್ರಕ ರಣಗಳ ಸಂಬಂಧ 2,945ರ ಪೈಕಿ 662 ವಿಲೇವಾರಿಗೊಂಡು 10 ಕೋಟಿ ರೂ. (10,00,49,055 ರೂ.) ಮೊತ್ತಕ್ಕೆ ವ್ಯಾಜ್ಯ ಇತ್ಯರ್ಥವಾಯಿತು. 2,439 ಇತರೆ ಅಪರಾಧ ಪ್ರಕರಣಗಳ ಪೈಕಿ 2,012 ವಿಲೇವಾರಿಯಾಗಿ 12.50 ಲಕ್ಷ ರೂ. (12,50,950 ರೂ.) ಮೊತ್ತದ ಪರಿಹಾರಕ್ಕೆ ಒಪ್ಪಂದವಾಯಿತು.
ಲೋಕ ಅದಾಲತ್‍ನಲ್ಲಿ 15 ಜೋಡಿಗೆ ಹೊಸ ಜೀವನ: ವಿಚ್ಛೇದನ ಕೋರಿ ಬಂದು ಒಂದಾಗಿ ಮರಳಿದವರಿಗೆ ಶುಭ ಹಾರೈಕೆ
ಮೈಸೂರು, ಸೆ.14(ಎಸ್‍ಬಿಡಿ)- ಮೈಸೂರಿನಲ್ಲಿ ನಡೆದ ಲೋಕ ಅದಾಲತ್, ಸಂತಸ ಹಾಗೂ ಸ್ಮರಣೀಯ ಸಂಗತಿಗೆ ಸಾಕ್ಷಿಯಾಯಿತು. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗ ದಲ್ಲಿ ಶನಿವಾರ ನಡೆದ ಲೋಕ ಅದಾಲತ್‍ನಲ್ಲಿ ಸಾವಿರಾರು ಪ್ರಕರಣಗಳ ವಿಲೇವಾರಿ ಆಯಿತು. ಈ ಮೂಲಕ ವಿವಿಧ ಕಾರಣದಿಂದ ವಿಚ್ಛೇದನ ಕೋರಿದ್ದ 15 ದಂಪತಿ ಒಂದಾಗಿದ್ದು ವಿಶೇಷವಾಗಿತ್ತು. ಮೈಸೂರಿನ 5 ಕೌಟುಂಬಿಕ ನ್ಯಾಯಾಲಯಗಳ 100 ಪ್ರಕರಣಗಳು ಇತ್ಯರ್ಥವಾಗಿದ್ದು, 15 ದಂಪತಿ ಮನಃಸ್ತಾಪ ಮರೆತು ಇನ್ನು ಮುಂದೆ ಒಂದಾಗಿ ಬಾಳುವ ಸಂಕಲ್ಪದೊಂದಿಗೆ ಮನೆಗೆ ಮರಳಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಮೈಸೂರು ಜಿಲ್ಲಾ ಪ್ರಧಾನ ನ್ಯಾಯಾಧೀಶರಾದ ಎಸ್.ಕೆಒಂಟಿಗೋಡಿ ಅವರು ಒಂದಾದ ದಂಪತಿಗೆ ಬುದ್ಧಿ ವಾದ ಹೇಳಿ, ಸಂತೋಷದಿಂದ ಜೀವನ ನಡೆಸುವಂತೆ ಹಾರೈಸಿದರು.
ಸರಳ ಕಾರ್ಯಕ್ರಮ ಏರ್ಪಡಿಸಿ ಒಂದಾದ ದಂಪತಿಗೆ ಪರಸ್ಪರ ಸಿಹಿ ತಿನ್ನಿಸಿ, ಹೂಗುಚ್ಛ ನೀಡಿ, ಶುಭಕೋರಿ ಬೀಳ್ಕೊಡಲಾಯಿತು. ಈ ವಿಶೇಷ ಸಂದರ್ಭಕ್ಕೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ನ್ಯಾಯಾಧೀಶರಾದ ಬಿ.ಪಿ.ದೇವಮಾನೆ, ಪ್ರಧಾನ ಕೌಟುಂಬಿಕ ಜಿಲ್ಲಾ ನ್ಯಾಯಾಧೀಶರಾದ ಶ್ರೀಮತಿ ಯಾದವ್ ಶಾಂತಿ, ನ್ಯಾಯಾಧೀಶ ಎನ್.ಎಸ್ ಪಾಟೀಲ್ ಸೇರಿದಂತೆ ಕೌಟುಂಬಿಕ ನ್ಯಾಯಾಲಯದ ಐವರು ನ್ಯಾಯಾಧೀಶರು ಮತ್ತಿತರರು ಸಾಕ್ಷಿಯಾಗಿದ್ದರು.
ಇತ್ಯರ್ಥವಾದ ಒಟ್ಟು 100 ಪ್ರಕರಣಗಳಲ್ಲಿ ನ್ಯಾಯಾಧೀಶ ಎನ್.ಎಸ್.ಪಾಟೀಲ್ ಅವರ ನ್ಯಾಯಪೀಠದಲ್ಲೇ 34 ಪ್ರಕರಣಗಳ ಇತ್ಯರ್ಥವಾಗಿದ್ದು ವಿಶೇಷ. ಯಾವುದೋ ಕೆಟ್ಟ ಸಂದರ್ಭದಲ್ಲಿ ದೂರವಾಗುವ ನಿರ್ಧಾರಕ್ಕೆ ಬಂದು, ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದ ದಂಪತಿಗಳ ಮನಃಸ್ತಾಪ ತೊಡೆದು ಒಂದು ಮಾಡುವ ಮೂಲಕ ಹೊಸ ಜೀವನ ಕಲ್ಪಿಸುವಲ್ಲಿ ಯಶಸ್ವಿಯಾದ ನ್ಯಾಯಾಧೀಶರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.