ನಿತ್ಯ ದಸರಾ ಆನೆಗಳ ತಾಲೀಮು
ಮೈಸೂರು

ನಿತ್ಯ ದಸರಾ ಆನೆಗಳ ತಾಲೀಮು

September 15, 2019

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಆರಂಭಕ್ಕೆ ಕೇವಲ 14 ದಿನ ಬಾಕಿಯಿದೆ. ಈ ಹಿನ್ನೆಲೆ ಯಲ್ಲಿ ಅರ್ಜುನ ನೇತೃ ತ್ವದ 12 ಆನೆಗಳಿಗೂ ಪೌಷ್ಟಿಕ ಆಹಾರ ನೀಡಿ ತಯಾರಿ ನೀಡಲಾಗು ತ್ತಿದೆ. ಅಲ್ಲದೆ ಪ್ರತಿ ದಿನ ಬೆಳಿಗ್ಗೆ 7.10ಕ್ಕೆ ಅರ ಮನೆಯಿಂದ ಬನ್ನಿ ಮಂಟಪದ ಪಂಜಿನ ಕವಾಯಿತು ಮೈದಾನ ದವರೆಗೆ ತಾಲೀಮು ನಡೆಸಲಾಗುತ್ತದೆ. ಬೆಳಿಗ್ಗೆ 8.45ಕ್ಕೆ ಪಂಜಿನ ಕವಾಯಿತು ಮೈದಾನಕ್ಕೆ ತಲುಪುವ ಆನೆಗಳಿಗೆ ಕೆಲ ಕಾಲ ವಿಶ್ರಾಂತಿಗೆ ಸಮಯ ನೀಡಿ, 9ಕ್ಕೆ ವಾಪಸ್ ಕರೆತರಲಾಗುತ್ತದೆ. ಸಂಜೆ 4 ಗಂಟೆಗೆ ಮತ್ತೊಮ್ಮೆ ತಾಲೀಮಿಗೆ ಕರೆದೊಯ್ಯಲಾಗುತ್ತದೆ. ಪ್ರತಿ ದಿನ ಬನ್ನಿ ಮಂಟಪದಲ್ಲಿ ಹಿರಿಯ ನಾಗರಿಕರು, ಮಕ್ಕಳು ಸೇರಿದಂತೆ ನೂರಾರು ಮಂದಿ ದಸರಾ ಗಜಪಡೆಯನ್ನು ದೂರದಿಂದಲೇ ನಿಂತು ಕಣ್ತುಂಬಿಕೊಳ್ಳುತ್ತಿದ್ದಾರೆ.

Translate »