ಪ್ರತ್ಯೇಕ ಲೋಗೋ ನಿರ್ಮಾಣಕ್ಕೆ ಆಹ್ವಾನ
ಮೈಸೂರು

ಪ್ರತ್ಯೇಕ ಲೋಗೋ ನಿರ್ಮಾಣಕ್ಕೆ ಆಹ್ವಾನ

September 15, 2019

ಮೈಸೂರು,ಸೆ.14-ದಸರಾ ಕ್ರೀಡಾ ಉಪ ಸಮಿತಿ ವತಿಯಿಂದ ದಸರಾ ಕ್ರೀಡೆಗೆ ಮಾನ್ಯತೆ ನೀಡಲು ದಸರಾ ಕ್ರೀಡಾಕೂಟ ಮುಖ್ಯಮಂತ್ರಿ ಕಪ್ ಎಂಬ ನಾಮ ಶೀರ್ಷಿಕೆ ಯಲ್ಲಿ ನಾಡಿನ ಕಲೆ, ಕ್ರೀಡೆ ಮತ್ತು ಸಂಸ್ಕøತಿಯನ್ನು ಒಳಗೊಂಡ ಪ್ರತ್ಯೇಕ ಲೋಗೋ ವನ್ನು ಸಿದ್ಧಪಡಿಸಲು ತೀರ್ಮಾನಿಸಲಾಗಿದೆ. ಜಿಲ್ಲೆ ಮತ್ತು ರಾಜ್ಯದ ಪ್ರಗತಿಪರ ಚಿಂತಕರು, ಸಂಘ ಸಂಸ್ಥೆಗಳು, ಶಾಲಾ-ಕಾಲೇಜಿನ ವಿದ್ಯಾರ್ಥಿ ಗಳು, ವೃತ್ತಿಪರರು ಲೋಗೋ ತಯಾರಿಸಿ ಸೆ.17ರೊಳಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಾಮುಂಡಿ ವಿಹಾರ ಕ್ರೀಡಾಂಗಣ, ನಜರ್‍ಬಾದ್, ಮೈಸೂರು ಇಲ್ಲಿಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ದೂ.ಸಂ. 0821-2564179 ಸಂಪರ್ಕಿಸಬಹುದು.

Translate »