ದಸರಾ ಚಲನಚಿತ್ರ ಕಾರ್ಯಾಗಾರಕ್ಕೆ ನೋಂದಣಿ ಆರಂಭ
ಮೈಸೂರು

ದಸರಾ ಚಲನಚಿತ್ರ ಕಾರ್ಯಾಗಾರಕ್ಕೆ ನೋಂದಣಿ ಆರಂಭ

September 15, 2019

ಮೈಸೂರು,ಸೆ.14- ಮೈಸೂರು ದಸರಾ ಚಲನಚಿತ್ರೋತ್ಸವ ಉಪಸಮಿತಿ ವತಿ ಯಿಂದ ಚಲನಚಿತ್ರ ತಯಾರಿಕೆಯಲ್ಲಿ ಕಥೆ ಮತ್ತು ಚಿತ್ರಕಥೆ ಬಗ್ಗೆ 3 ದಿನಗಳ ಕಾರ್ಯಾ ಗಾರವನ್ನು ಆಯೋಜಿಸಲಾಗಿದ್ದು, ಕಾರ್ಯಾಗಾರಕ್ಕೆ ಸೆ.15ರಿಂದ ನೋಂದಣಿ ಆರಂಭಿಸಲಾಗಿದೆ ಎಂದು ಚಲನಚಿತ್ರ ಉಪ ಸಮಿತಿ ಕಾರ್ಯದರ್ಶಿಗಳು ತಿಳಿಸಿದ್ದಾರೆ. ಕಾರ್ಯಾಗಾರವು ಸೆ.20ರಿಂದ 22ರವರೆಗೆ 3 ದಿನಗಳ ಕಾಲ ಮೈಸೂರು ವಿವಿ ವಿಜ್ಞಾನ ಭವನದಲ್ಲಿ ನಡೆಯಲಿದೆ. ಕನ್ನಡದ ಹೆಸರಾಂತ ಚಲನಚಿತ್ರ ನಿರ್ದೇಶಕರಾದ ಪಿ.ಶೇಷಾದ್ರಿ, ಲಿಂಗದೇವರು, ಜೋಗಿಯವರು, ಬಿ.ಸುರೇಶ್ ಹಾಗೂ ಹೆಸರಾಂತ ಚಲನಚಿತ್ರ ತರಬೇತಿ ಸಂಸ್ಥೆಗಳ ಪರಿಣತ ಸಂಪನ್ಮೂಲ ವ್ಯಕ್ತಿಗಳು ಕಥೆ ಮತ್ತು ಚಿತ್ರಕಥೆ ತಯಾರಿಕೆಯ ವಿವಿಧ ಮಜಲುಗಳ ಕುರಿತಂತೆ ಶಿಬಿರಾರ್ಥಿಗಳೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಲಿದ್ದಾರೆ. ಈ ಕಾರ್ಯಾಗಾರದಲ್ಲಿ ಭಾಗವಹಿಸುವವರಿಗೆ ದಸರಾ ಚಲನಚಿತ್ರೋತ್ಸವ ಉಪಸಮಿತಿ ವತಿಯಿಂದ ಪ್ರಮಾಣ ಪತ್ರಗಳನ್ನು ನೀಡಲಾಗು ವುದು. ಆಸಕ್ತಿಯುಳ್ಳ ವಿದ್ಯಾರ್ಥಿಗಳು/ಸಾರ್ವಜನಿಕರು ನಿಗದಿತ ನಮೂನೆಯಲ್ಲಿ ಅರ್ಜಿ ಭರ್ತಿ ಮಾಡಿ ಸೆ.19ರ ಸಂಜೆ 5.30ರೊಳಗಾಗಿ ಧನ್ವಂತರಿ ರಸ್ತೆಯಲ್ಲಿರುವ ವಾರ್ತಾ ಭವನ ಕಚೇರಿ ವೇಳೆಯಲ್ಲಿ ನೋಂದಾಯಿಸಿಕೊಳ್ಳಬಹುದು. ಗರಿಷ್ಠ 120 ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ಸಾರ್ವಜನಿಕರಿಗೆ ನೋಂದಣಿ ಶುಲ್ಕ ರೂ.400/- ಇದ್ದು, ವಿದ್ಯಾರ್ಥಿಗಳಿಗೆ ಶುಲ್ಕ ರೂ.200/- ನಿಗದಿಪಡಿಸಲಾಗಿದೆ. ವಿದ್ಯಾರ್ಥಿಗಳು ಆಯಾ ಕಾಲೇಜಿನಿಂದ ಪಡೆದ ಗುರುತಿನ ಪತ್ರದ ಪ್ರತಿ, 2 ಪಾಸ್‍ಪೆÇೀರ್ಟ್ ಅಳತೆಯ ಭಾವಚಿತ್ರ ಸಲ್ಲಿಸತಕ್ಕದ್ದು. ಕಾರ್ಯಾಗಾರಕ್ಕೆ ನೋಂದಣಿಯಾದವರಿಗೆ ಐನಾಕ್ಸ್ ಚಿತ್ರಮಂದಿರದಲ್ಲಿ ನಡೆಯುವ ದಸರಾ ಚಲನಚಿತ್ರೋತ್ಸವದ ಚಲನಚಿತ್ರಗಳನ್ನು ವೀಕ್ಷಿಸಲು ಪೂರಕ (Complementary) ಪಾಸ್‍ಗಳನ್ನು ನೀಡಲಾಗುತ್ತದೆ. ಮಾಹಿತಿಗೆ ಮನು, ಮೊ.9448092049. ಹಾಗೂ ಡಾ.ರಾಘವೇಂದ್ರ.ಎಸ್.ಜಿ. ಮೊ.9964585008 ಅವರನ್ನು ಸಂಪರ್ಕಿಸಬಹುದು.

Translate »