ದಸರಾ ಗಜಪಡೆ ಮಾವುತರು, ಕಾವಾಡಿಗಳ ಮಕ್ಕಳಿಗೆ ಟೆಂಟ್ ಶಾಲೆ ಆರಂಭ
ಮೈಸೂರು

ದಸರಾ ಗಜಪಡೆ ಮಾವುತರು, ಕಾವಾಡಿಗಳ ಮಕ್ಕಳಿಗೆ ಟೆಂಟ್ ಶಾಲೆ ಆರಂಭ

September 15, 2019

ಮೈಸೂರು, ಸೆ.14(ಎಂಟಿವೈ)- ನಾಡಹಬ್ಬ ದಸರಾ ಮಹೋತ್ಸವದ ಗಜಪಡೆಯೊಂದಿಗೆ ವಿವಿಧ ಆನೆ ಶಿಬಿರದಿಂದ ಆಗಮಿಸಿ ಅರಮನೆ ಆವರಣ ದಲ್ಲಿ ಬೀಡುಬಿಟ್ಟಿರುವ ದಸರಾ ಆನೆಗಳ ಮಾವು ತರು, ಕಾವಾಡಿಗಳ ಮಕ್ಕಳಿಗಾಗಿ ಶಿಕ್ಷಣ ಇಲಾಖೆ ತೆರೆದಿರುವ ಟೆಂಟ್ ಶಾಲೆಯನ್ನು ಶನಿವಾರ ಶಾಸಕ ಎಸ್.ಎ.ರಾಮದಾಸ್ ಉದ್ಘಾಟಿಸಿದರು.

ಮಾವುತರು ಹಾಗೂ ಕಾವಾಡಿಗಳು ಕುಟುಂ ಬದ ಸದಸ್ಯರನ್ನು ಜತೆಗೇ ಕರೆತಂದಿದ್ದು, ಅರಮನೆ ಆವರಣದಲ್ಲಿ ಟೆಂಟ್‍ಗಳಲ್ಲಿ ವಾಸಿಸುತ್ತಿದ್ದಾರೆ. 50 ದಿನಗಳ ಕಾಲ ದಸರಾ ಗಜಪಡೆಯೊಂದಿಗೆ ಅರಮನೆ ಅಂಗಳದಲ್ಲೇ ಇರುವ ಮಕ್ಕಳು ಶಿಕ್ಷಣ ದಿಂದ ವಂಚಿತರಾಗುವುದನ್ನು ತಡೆಗಟ್ಟಲು ಕಳೆದ ಹಲವು ವರ್ಷಗಳಿಂದ ಟೆಂಟ್ ಶಾಲೆ ಮೂಲಕ ಶಿಕ್ಷಣ ನೀಡÀಲಾಗುತ್ತಿದೆ. ದಕ್ಷಿಣ ವಲಯದ ಬಿಇಒ ಕಚೇರಿಯಿಂದ ನಿರ್ಮಿಸಲಾಗಿದ್ದ ಟೆಂಟ್ ಶಾಲೆ ಯನ್ನು ಶನಿವಾರ ಬೆಳಿಗ್ಗೆ ಶಾಸಕ ಎಸ್.ಎ.ರಾಮ ದಾಸ್ ಉದ್ಘಾಟಿಸಿ, ಮೊದಲ ದಿನ ಶಾಲೆಗೆ ಹಾಜ ರಾಗಿದ್ದ 18 ಮಕ್ಕಳಿಗೆ ಸಮವಸ್ತ್ರ, ಪಠ್ಯ ಪುಸ್ತಕ ವಿತರಿಸಿದರು. ಬಳಿಕ ಮಧ್ಯಾಹ್ನದ ಬಿಸಿಯೂಟ ಬಡಿಸುವುದರೊಂದಿಗೆ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿ, ಕುಶಲೋಪರಿ ವಿಚಾರಿಸಿದರು.

ವಾರಕ್ಕೊಂದು ಸಂವಾದ: ಬಳಿಕ ಪತ್ರಕರ್ತ ರೊಂದಿಗೆ ಎಸ್.ಎ.ರಾಮದಾಸ್ ಮಾತನಾಡಿ, ಮಾವುತರು, ಕಾವಾಡಿಗಳ ಮಕ್ಕಳಿಗೆ ಟೆಂಟ್ ಶಾಲೆ ಆರಂಭಿಸಲಾಗಿದೆ. ಮತ್ತೊಂದು ತಂಡ ದಲ್ಲಿ ಇನ್ನಷ್ಟು ಮಕ್ಕಳು ಶಾಲೆಗೆ ಆಗಮಿಸಲಿದ್ದಾರೆ. ನಗರ ವಾತಾವರಣ, ಕಾಡಿನ ವಾತಾವರಣದ ಮಿಲನಕ್ಕೆ ವಿಶೇಷ ಕಾರ್ಯಕ್ರಮ ರೂಪಿಸಲಾಗು ವುದು. ಪ್ರತಿವಾರ ಒಂದೊಂದು ಶಾಲೆಯ ಮಕ್ಕಳನ್ನು ಟೆಂಟ್ ಶಾಲೆಗೆ ಕರೆತಂದು ಆನೆಗಳನ್ನು ಪರಿಚಯಿಸುವುದರೊಂದಿಗೆ ಮಾವುತರ ಮಕ್ಕ ಳೊಂದಿಗೆ ಬೆರೆಯಲು ಕಾರ್ಯಕ್ರಮ ರೂಪಿಸು ವಂತೆ ಡಿಡಿಪಿಐಗೆ ಸೂಚನೆ ನೀಡಲಾಗಿದೆ. ಇದ ರಿಂದ ಅನುಭವ ಹಾಗೂ ಕಲಿಕಾ ಮಟ್ಟ ವಿನಿ ಮಯಗೊಳ್ಳುತ್ತದೆ. ಅಲ್ಲದೆ, ಟೆಂಟ್ ಶಾಲೆ ಮಕ್ಕಳ ಅನುಭವ ಹಂಚಿಕೆಗೆ ಸ್ಪರ್ಧೆ, ಅವರಲ್ಲಿರುವ ಕಲೆ ಹೊರತರಲು ಕಾರ್ಯಕ್ರಮ, ಚಿತ್ರಕಲಾ ಸ್ಪರ್ಧೆ, ಕಾಡಿನಲ್ಲಿ ಕಂಡ ದೃಶ್ಯ, ಮೈಸೂರಿಗೆ ಬಂದ ನಂತರ ನೋಡಿದ ಜಾಗ ಕುರಿತಂತೆ ಚಿತ್ರ ಬರೆಯುವುದು, ನಾಡಿನ ಮತ್ತು ಕಾಡಿನ ಮಕ್ಕಳೊಂದಿಗೆ ಸಂವಾದ ಏರ್ಪಡಿಸಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ವಿವಿಧ ಚಟುವಟಿಕೆ ಹಮ್ಮಿಕೊಳ್ಳುವಂತೆ ಸೂಚಿಸ ಲಾಗಿದೆ ಎಂದು ಶಾಸಕರು ತಿಳಿಸಿದರು.

ಡಿಡಿಪಿಐ ಪಾಂಡುರಂಗ ಮಾತನಾಡಿ, ಮಾವು ತರು, ಕಾವಾಡಿಗಳ ಮಕ್ಕಳಿಗೆ ಶಿಕ್ಷಣದೊಂದಿಗೆ ವಿವಿಧ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳಲು ಕಾರ್ಯಕ್ರಮ ರೂಪಿಸಲಾಗಿದೆ. ನೃತ್ಯ, ಚಿತ್ರಕಲೆ, ನಾಟಕದ ತರಬೇತಿಯೊಂದಿಗೆ ಸರ್ವಾಂ ಗೀಣ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮ ಆಯೋಜಿಸಲು ಕ್ರಮ ಕೈಗೊಳ್ಳಲಾಗಿದೆ. ಶಾಲೆ ಯಲ್ಲಿ ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ, ಪಠ್ಯ ಪುಸ್ತಕ ನೀಡಲಾಗಿದ್ದು, ಪ್ರತಿದಿನ ಮಧ್ಯಾಹ್ನ ಬಿಸಿ ಯೂಟದ ವ್ಯವಸ್ಥೆ ಮಾಡಲಾಗಿದೆ. ನುರಿತ ಶಿಕ್ಷಕ ರನ್ನು ನಿಯೋಜಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ದಕ್ಷಿಣ ವಲಯದ ಬಿಇಒ ಶಿವ ಕುಮಾರ್, ಟೆಂಟ್ ಶಾಲೆಯ ನೋಡಲ್ ಅಧಿಕಾರಿ ಕುಸುಮ, ಬಿಆರ್‍ಸಿ ಸಿ.ನಾಗೇಶ್, ಡಯೆಟ್ ಉಪ ನ್ಯಾಸಕಿ ತಾರಾಮಣಿ, ಬಿಆರ್‍ಪಿ ಮಂಜುನಾಥ್, ಅಂಕೇಶ್, ಜಲಜಾಕ್ಷಿ, ಸಿಆರ್‍ಪಿ ವೀಣಾಶ್ರೀ, ಕಾವ್ಯ, ಟೆಂಟ್ ಶಾಲೆ ಶಿಕ್ಷಕರಾದ ಬಸವರಾಜು, ನಾಗೇಂದ್ರ, ಸುಬ್ಬಲಕ್ಷ್ಮೀ ಇನ್ನಿತರರು ಉಪಸ್ಥಿತರಿದ್ದರು.

Translate »