ಮೈಸೂರು,ಸೆ.13(ಆರ್‍ಕೆ)-ಗಣಪತಿ ವಿಸರ್ಜನೆ ಬಂದೋಬಸ್ತ್ ಕರ್ತವ್ಯಕ್ಕೆ ತೆರಳಿದ್ದ ಮೈಸೂರು ಸಿಸಿಬಿ ಕಾನ್‍ಸ್ಟೇಬಲ್ ಬೆಳ ಗಾವಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಮುಂಜಾನೆ ಸಂಭವಿಸಿದೆ. ಮೈಸೂರಿನ ಸಿಸಿಬಿಯ ಆರ್ಥಿಕ ಅಪ ರಾಧ ಮತ್ತು ಮಾದಕ ದ್ರವ್ಯ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಿ.ಪ್ರಮೋದ್(28) ನೇಣಿಗೆ ಶರ ಣಾದವರು. ಮೂಲತಃ ತಿ.ನರಸೀಪುರ ನಿವಾಸಿ ವೆಂಕಟೇಶ್ ಅವರ ಮಗನಾದ ವಿ.ಪ್ರಮೋದ್, ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಬಿಇ ಪದವಿ ಮಾಡಿದ್ದರು. ಮೂರು ವರ್ಷಗಳ ಹಿಂದೆ ಪೊಲೀಸ್ ಇಲಾಖೆಗೆ ಸೇರಿದ್ದ ಪ್ರಮೋದ್ ಸಿಸಿಬಿಯಲ್ಲಿ ಕಾನ್‍ಸ್ಟೇಬಲ್…
ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್: ಇಬ್ಬರ ಬಂಧನ
September 14, 2019ಮೈಸೂರು,ಸೆ.13(ವೈಡಿಎಸ್)-ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಕ್ರಮ ವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿ ರುವ ಸಿಸಿಬಿ ಪೊಲೀಸರು ಇಬ್ಬರನ್ನು ಬಂಧಿಸಿ, 45 ಗ್ಯಾಸ್ ಸಿಲಿಂಡರ್, 3180 ರೂ. ನಗದು ವಶಪಡಿಸಿಕೊಂಡಿದ್ದಾರೆ. ಹೆಬ್ಬಾಳ್‍ನ ಮಹದೇಶ್ವರ ಬಡಾವಣೆ ನಿವಾಸಿ, ಗಹನ್ ಎಂಟರ್ ಪ್ರೈಸಸ್ ಮಾಲೀಕ ಗಿರಿಗೌಡ(59), ಹೆಬ್ಬಾಳ್‍ನ ಹನುಮಾನ್ ಹೋಂ ಅಪ್ಲೆಯನ್ಸಸ್ ಮಾಲೀಕ ವಾಗಾರಂ(42) ಬಂಧಿತರು. ಮೊದಲ ಪ್ರಕರಣದಲ್ಲಿ ಕುಂಬಾರಕೊಪ್ಪಲು-ಮಂಚೇಗೌಡನಕೊಪ್ಪಲು ಮುಖ್ಯ ರಸ್ತೆಯಲ್ಲಿರುವ ಗಹನ್ ಎಂಟರ್‍ಪ್ರೈಸಸ್ ಅಂಗಡಿಯಲ್ಲಿ ಅಕ್ರಮ ವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದಾರೆ ಎಂಬ ಖಚಿತ…
ಸಾಂಪ್ರದಾಯಿಕ ಉಡುಗೆ-ತೊಡುಗೆ, ನೃತ್ಯದೊಂದಿಗೆ ಮೆರವಣಿಗೆ
September 14, 2019ಮೈಸೂರು, ಸೆ.13(ಎಂಟಿವೈ)- ಅರಣ್ಯ ಹಕ್ಕು ಕಾಯ್ದೆ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಮೈಸೂ ರಿನಲ್ಲಿ ಶುಕ್ರವಾರ ವಿವಿಧ ರಾಜ್ಯಗಳ ಆದಿವಾಸಿ ಮುಖಂಡರು ಸಾಂಪ್ರದಾಯಿಕ ನೃತ್ಯದೊಂದಿಗೆ ಮೆರವಣಿಗೆ ನಡೆಸಿ ಗಮನ ಸೆಳೆದರು. ಮೈಸೂರಿನ ಮಹಾರಾಜ ಕಾಲೇಜಿನ ಶತ ಮಾನೋತ್ಸವ ಭವನದಲ್ಲಿ ಆದಿವಾಸಿ ಸಮನ್ವಯ ಮಂಚ್ ಹಾಗೂ ರಾಜ್ಯ ಮೂಲ ಆದಿವಾಸಿ ವೇದಿಕೆ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ `ಮೂಲ ಆದಿವಾಸಿ ಹಕ್ಕು ಅಧಿಕಾರ ದಿವಸ್’ ಕಾರ್ಯಕ್ರಮ ದಲ್ಲಿ ದೇಶದ 22 ರಾಜ್ಯಗಳಿಂದ ಆದಿವಾಸಿ ಮುಖಂ ಡರು ಆಗಮಿಸಿದ್ದು, ವಿವಿಧ…
ತಮ್ಮ 14 ತಿಂಗಳ ಅಧಿಕಾರದ ಬಗ್ಗೆ ಮಾಜಿ ಸಿಎಂಕುಮಾರಸ್ವಾಮಿ ಆತ್ಮಾವಲೋಕನ ಮಾಡಿಕೊಳ್ಳಲಿ
September 14, 2019ಮೈಸೂರು, ಸೆ.13(ಆರ್‍ಕೆಬಿ)- ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ 14 ತಿಂಗಳ ಅಧಿಕಾರಾವಧಿಯಲ್ಲಿ ಯಾವ ರೀತಿ ಅಧಿಕಾರ ನಡೆಸಿದ್ದರು ಎಂಬ ಬಗ್ಗೆ ತಾಯಿ ಚಾಮುಂಡೇಶ್ವರಿ ಎದುರು ನಿಂತುಕೊಂಡು ಒಮ್ಮೆ ಯೋಚನೆ ಮಾಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ವಸತಿ ಸಚಿವ ವಿ.ಸೋಮಣ್ಣ ಇಂದಿಲ್ಲಿ ಕುಮಾರ ಸ್ವಾಮಿ ಅವರಿಗೆ ಟಾಂಗ್ ನೀಡಿದರು. ಮೈಸೂರಿನ ಮುಡಾ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹ ಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಯುವಕರಂತೆ ಸುತ್ತಾಡಿದ್ದಾರೆ….
ಕ್ಯಾಂಟೀನ್ ವಿರುದ್ಧ ಮಹಾರಾಣಿ ವಿದ್ಯಾರ್ಥಿನಿಯರ ಪ್ರತಿಭಟನೆ
September 14, 2019ಮೈಸೂರು,ಸೆ.13(ಆರ್‍ಕೆಬಿ)-ಕ್ಯಾಂಟೀನ್ ಸ್ವಚ್ಛ ವಾಗಿಲ್ಲ. ಗುಣಮಟ್ಟದ ಉಪಾಹಾರ ನೀಡುತ್ತಿಲ್ಲ ಎಂದು ಆರೋಪಿಸಿ ಮೈಸೂರು ಮಹಾರಾಣಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಕ್ಯಾಂಟೀನ್ ಬಳಿ ಮಹಾರಾಣಿ ಕಲಾ ಕಾಲೇಜಿನ ವಿದ್ಯಾರ್ಥಿನಿ ಯರು ಶುಕ್ರವಾರ ಪ್ರತಿಭಟನೆ ನಡೆಸಿದರು. ಕ್ಯಾಂಟೀನ್ ಮುಂದೆ ಜಮಾಯಿಸಿದ ನೂರಾರು ವಿದ್ಯಾರ್ಥಿ ನಿಯರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು. ಸ್ಥಳಕ್ಕೆ ಶಾಸಕರು ಬರಬೇಕು ಎಂದು ಪಟ್ಟು ಹಿಡಿದರು. ವಿಷಯ ಅರಿತ ಶಾಸಕ ಎಲ್.ನಾಗೇಂದ್ರ ಜಿಲ್ಲಾ ಆರೋಗ್ಯ ಅಧಿಕಾರಿ ಮತ್ತು ಇನ್ನಿತರ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿಯರ ದೂರುಗಳನ್ನು…
ಇಡಿ, ಸಿಬಿಐ, ಲೋಕಾಯುಕ್ತಗಳಿಗೆ ಹೆಚ್ಚಿನ ಬಲ ನೀಡಲು ಆಗ್ರಹಿಸಿ ಶಿಲ್ಪಿ ಊದುವ ಪ್ರತಿಭಟನೆ
September 14, 2019ಮೈಸೂರು, ಸೆ.13(ಆರ್‍ಕೆಬಿ)- ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿರುವ ಜಾರಿ ನಿರ್ದೇ ಶನಾಲಯ ಮತ್ತು ಸಿಬಿಐ, ಲೋಕಾಯುಕ್ತ ಗಳಿಗೆ ಹೆಚ್ಚಿನ ಬಲ ನೀಡಿ, ಭ್ರಷ್ಟ ರಾಜ ಕಾರಣಿಗಳು ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿಯ ಮೈಸೂರು ಜಿಲ್ಲಾ ಘಟಕದ ಕಾರ್ಯಕರ್ತರು ಶುಕ್ರವಾರ ಮೈಸೂರು ಡಿಸಿ ಕಚೇರಿ ಬಳಿ ಶಿಲ್ಪಿಗಳನ್ನು ಊದುವ ಮೂಲಕ ಪ್ರತಿಭಟನೆ ನಡೆಸಿದರು. ಬಂಧಿಸಲ್ಪಟ್ಟಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ದೊಡ್ಡ ಮತ್ತು ಗಂಭೀರ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ. ಜಾತಿವಾದಿಗಳಿಂದ ಹೋರಾಟವೂ ನಡೆ ದಿದೆ….
ರಾಜೇಶ್ ಕೃಷ್ಣನ್ ಸಂಗೀತ `ಸಿರಿ’
September 14, 2019ಮೈಸೂರು,ಸೆ.13 (ವೈಡಿಎಸ್)-ತಂಪಾದ ಇಳಿಸಂಜೆಯ ತುಂತುರು ಮಳೆಯಲ್ಲಿ ಬಣ್ಣ-ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕೃತ ಗೊಂಡಿದ್ದ ವೇದಿಕೆಯಲ್ಲಿ ಗಾಯಕ ರಾಜೇಶ್ ಕೃಷ್ಣನ್ ಅವರ ಗಾಯನ ಸಂಗೀತ ಪ್ರಿಯರನ್ನು ತಲೆದೂಗು ವಂತೆ ಮಾಡಿತು. ಮಾನಸಗಂಗೋತ್ರಿಯ ಬಯಲು ರಂಗ ಮಂದಿರದಲ್ಲಿ ಸಿರಿ 3ರ ಸಂಭ್ರಮದ ಅಂಗ ವಾಗಿ ಗುರುವಾರ ಸಂಜೆ ಆಯೋಜಿಸಿದ್ದ ಸಂಗೀತ ರಸಸಂಜೆಯಲ್ಲಿ ಹಿನ್ನೆಲೆಗಾಯಕ ರಾಜೇಶ್ ಕೃಷ್ಣ ಅವರ ಸುಮಧುರ ಕಂಠದಲ್ಲಿ ಹೊರಹೊಮ್ಮಿದ ಹಾಡುಗಳು ಸಂಗೀತ ಪ್ರಿಯರಿಗೆ ಮುದ ನೀಡಿದವು. ರಾಜೇಶ್ ಕೃಷ್ಣನ್ ಅವರು ವೇದಿಕೆಗೆ ಆಗಮಿಸು ವುದಕ್ಕೂ ಮುನ್ನ ವಿದ್ಯಾರ್ಥಿಗಳು,…
ಹಿಂದಿಯೇತರ ಭಾಷಿಗರಿಗೆ ಉದ್ಯೋಗ ಸಿಗದಂತೆ ಕೇಂದ್ರದಿಂದ ಪಿತೂರಿ: ಮಾಜಿ ಸಿಎಂ ಸಿದ್ದರಾಮಯ್ಯ
September 14, 2019ಬೆಂಗಳೂರು: ಕನ್ನಡದಲ್ಲಿ ಐಬಿಪಿಎಸ್ ಪರೀಕ್ಷೆ ಬರೆಯಲು ಕೇಂದ್ರ ಸರ್ಕಾರ ಅವ ಕಾಶ ಕಲ್ಪಿಸದಿರುವ ಬಗ್ಗೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದು, ಹಿಂದಿಯೇತರ ಭಾಷಿಗರಿಗೆ ಬ್ಯಾಂಕ್ ಉದ್ಯೋಗ ಸಿಗದಂತೆ ತಡೆಯುವ ಪಿತೂರಿ ಎಂದಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ರಾಜ್ಯದಿಂದ 26 ಬಿಜೆಪಿಯ ಸಂಸದರು ಕೇಂದ್ರಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯದಲ್ಲಿಯೂ ಬಿಜೆಪಿಯದ್ದೇ ಸರ್ಕಾರವಿದೆ. ಆದರೂ ಸಹ ಐಬಿಪಿಎಸ್ ಪರೀಕ್ಷೆಯಲ್ಲಿ ರಾಜ್ಯದ ಪರೀಕ್ಷಾರ್ಥಿಗಳಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಡಲು ಬಿಜೆಪಿ ನಾಯಕರು ವಿಫಲರಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು…
ಪಂಚ ರಾಜ್ಯಗಳ ಜೊತೆ ಕರ್ನಾಟಕಕ್ಕೂಚುನಾವಣೆ ಸಾಧ್ಯತೆ
September 13, 2019ಕೆ.ಆರ್.ಪೇಟೆ,ಸೆ.12(ಶ್ರೀನಿವಾಸ್)-ರಾಜ್ಯದ 17 ಕ್ಷೇತ್ರ ಗಳಿಗೆ ಉಪಚುನಾವಣೆ ನಡೆಯುವ ಬಗ್ಗೆ ಅನುಮಾನ ವಿದ್ದು, ಕೇಂದ್ರ ಸರ್ಕಾರ ಮಹಾರಾಷ್ಟ್ರ, ದೆಹಲಿ, ಜಾರ್ಖಂಡ್ ಸೇರಿದಂತೆ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಜೊತೆಗೆ ಕರ್ನಾಟಕ ವಿಧಾನಸಭೆಗೂ ಸಾರ್ವತ್ರಿಕ ಚುನಾ ವಣೆ ನಡೆಸುವ ಸಾಧ್ಯತೆ ಇದೆ. ಹೀಗಾಗಿ ಕಾರ್ಯಕರ್ತರು ಈಗಿನಿಂದಲೇ ಪಕ್ಷ ಸಂಘಟಿಸಿ ಚುನಾವಣೆ ಎದುರಿಸಲು ಸಿದ್ಧರಾಗಬೇಕು. ಯಾವುದೇ ಚುನಾವಣೆ ನಡೆದರೂ, ಸ್ಥಳೀಯ ಅಭ್ಯರ್ಥಿಯನ್ನೇ ಕಣಕ್ಕಿಳಿಸಿ ಗೆಲ್ಲಿಸಿ ನನ್ನ ಶಕ್ತಿ ಏನೆಂದು ತೋರಿಸುತ್ತೇನೆ. ಪಕ್ಷದ್ರೋಹಿ ನಾರಾಯಣಗೌಡನಿಗೆ ತಕ್ಕ ಪಾಠ ಕಲಿಸದೆ ಬಿಡುವುದಿಲ್ಲ ಎಂದು ಮಾಜಿ ಪ್ರಧಾನಿ…
ಕಾರಿಗೆ ಲಾರಿ ಡಿಕ್ಕಿ: ಆರ್‍ಟಿಓ ಬ್ರೇಕ್ ಇನ್ಸ್‍ಪೆಕ್ಟರ್ ಸಾವು
September 13, 2019ತಿ.ನರಸೀಪುರ, ಸೆ.12(ಎಸ್‍ಕೆ)- ಲಾರಿ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಚಾಮ ರಾಜನಗರ ಪ್ರಾದೇ ಶಿಕ ಸಾರಿಗೆ ಇಲಾಖೆಯ ಬ್ರೇಕ್ ಇನ್ಸ್‍ಪೆಕ್ಟರ್ ಸಾವನ್ನಪ್ಪಿ, ಕಾರು ಚಾಲಕ ತೀವ್ರವಾಗಿ ಗಾಯಗೊಂಡ ಘಟನೆ ತಾಲೂಕಿನ ಸೋಸಲೆ ಬಳಿ ಗುರುವಾರ ಸಂಜೆ ಸಂಭವಿಸಿದೆ. ಮೂಲತಃ ಮಳವಳ್ಳಿ ತಾಲೂಕು ಬ್ಲಫ್ ನಿವಾಸಿಯಾಗಿದ್ದು, ಹಾಲಿ ಮೈಸೂರಿನ ರಾಜೀವ್‍ನಗರದಲ್ಲಿ ವಾಸವಿದ್ದ ಆರ್‍ಟಿಓ ಬ್ರೇಕ್ ಇನ್ಸ್‍ಪೆಕ್ಟರ್ ಅಬ್ದುಲ್ ನಸೀಮ್ (45) ಅಪಘಾತದಲ್ಲಿ ಮೃತಪಟ್ಟವ ರಾಗಿದ್ದು, ಕಾರು ಚಾಲಕ ಮೈಸೂರಿನ ಫಾರುಕ್ ತೀವ್ರವಾಗಿ ಗಾಯಗೊಂಡು, ಕೆ.ಆರ್.ಆಸ್ಪತ್ರೆ ಯಲ್ಲಿ…










