ಪಂಚ ರಾಜ್ಯಗಳ ಜೊತೆ ಕರ್ನಾಟಕಕ್ಕೂಚುನಾವಣೆ ಸಾಧ್ಯತೆ
ಮೈಸೂರು

ಪಂಚ ರಾಜ್ಯಗಳ ಜೊತೆ ಕರ್ನಾಟಕಕ್ಕೂಚುನಾವಣೆ ಸಾಧ್ಯತೆ

September 13, 2019

ಕೆ.ಆರ್.ಪೇಟೆ,ಸೆ.12(ಶ್ರೀನಿವಾಸ್)-ರಾಜ್ಯದ 17 ಕ್ಷೇತ್ರ ಗಳಿಗೆ ಉಪಚುನಾವಣೆ ನಡೆಯುವ ಬಗ್ಗೆ ಅನುಮಾನ ವಿದ್ದು, ಕೇಂದ್ರ ಸರ್ಕಾರ ಮಹಾರಾಷ್ಟ್ರ, ದೆಹಲಿ, ಜಾರ್ಖಂಡ್ ಸೇರಿದಂತೆ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಜೊತೆಗೆ ಕರ್ನಾಟಕ ವಿಧಾನಸಭೆಗೂ ಸಾರ್ವತ್ರಿಕ ಚುನಾ ವಣೆ ನಡೆಸುವ ಸಾಧ್ಯತೆ ಇದೆ. ಹೀಗಾಗಿ ಕಾರ್ಯಕರ್ತರು ಈಗಿನಿಂದಲೇ ಪಕ್ಷ ಸಂಘಟಿಸಿ ಚುನಾವಣೆ ಎದುರಿಸಲು ಸಿದ್ಧರಾಗಬೇಕು. ಯಾವುದೇ ಚುನಾವಣೆ ನಡೆದರೂ, ಸ್ಥಳೀಯ ಅಭ್ಯರ್ಥಿಯನ್ನೇ ಕಣಕ್ಕಿಳಿಸಿ ಗೆಲ್ಲಿಸಿ ನನ್ನ ಶಕ್ತಿ ಏನೆಂದು ತೋರಿಸುತ್ತೇನೆ. ಪಕ್ಷದ್ರೋಹಿ ನಾರಾಯಣಗೌಡನಿಗೆ ತಕ್ಕ ಪಾಠ ಕಲಿಸದೆ ಬಿಡುವುದಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಇಂದಿಲ್ಲಿ ಗುಡುಗಿದರು.

ಶಾಸಕ ನಾರಾಯಣಗೌಡ ಅನರ್ಹರಾದ ಬಳಿಕ ಕ್ಷೇತ್ರದಾ ದ್ಯಂತ ಉಪ ಚುನಾವಣೆ ಕಾವೇರುತ್ತಿದ್ದು, ಇದಕ್ಕೆ ಪೂರಕ ವಾಗಿ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಹೆಚ್.ಡಿ.ದೇವೇ ಗೌಡರು ತಮ್ಮ ಪುತ್ರ ಹೆಚ್.ಡಿ.ರೇವಣ್ಣ ಅವರೊಡಗೂಡಿ ಗುರುವಾರ ಮಧ್ಯಾಹ್ನ 3.30ಕ್ಕೆ ಹೆಲಿಕಾಪ್ಟರ್‍ನಲ್ಲಿ ಆಗಮಿಸಿ ಪಟ್ಟಣದ ಜಯಮ್ಮ ಶಿವಲಿಂಗೇಗೌಡ ಸಮುದಾಯ ಭವನ ದಲ್ಲಿ ಆಯೋಜಿಸಿದ್ದ ತಾಲೂಕು ಜೆಡಿಎಸ್ ಕಾರ್ಯ ಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅನರ್ಹ ಶಾಸಕರ ಪ್ರಕರಣವನ್ನು ಸರ್ವೋಚ್ಛ ನ್ಯಾಯಾ ಲಯ ಇನ್ನೂ ಕೈಗೆತ್ತಿಕೊಂಡಿಲ್ಲ ಎಂಬ ಮಾಹಿತಿಯಿದೆ. ದಯಮಾಡಿ ನ್ಯಾಯಾಧೀಶರು ಈ ಪ್ರಕರಣವನ್ನು ಗಂಭೀರ ವಾಗಿ ಪರಿಗಣಿಸಿ ಪಕ್ಷಾಂತರ ಮಾಡುವ ದ್ರೋಹಿಗಳಿಗೆ ಬುದ್ಧಿ ಕಲಿಸಬೇಕು ಎಂದು ಮನವಿ ಮಾಡಿದರು.

ಕೆ.ಆರ್.ಪೇಟೆ ತಾಲೂಕಿನ ಜೆಡಿಎಸ್ ಕಾರ್ಯಕರ್ತರು ಯಾವತ್ತೂ ಹಣಕ್ಕೆ ಮಾರು ಹೋದವರಲ್ಲ. ಆದರೆ ಬದ ಲಾದ ರಾಜಕೀಯ ವ್ಯವಸ್ಥೆಯಲ್ಲಿ ಈಗ ಅನರ್ಹಗೊಂಡಿ ರುವ ವ್ಯಕ್ತಿ ಚುನಾವಣೆಗೆ 4 ಕೋಟಿ ಬೇಕು. ನನಗೆ ಹಣ ಕೊಡಿ ಗೆದ್ದು ಬರುತ್ತೇನೆ ಎಂದು ಹೇಳಿ ನನ್ನನ್ನು ಹಾಗೂ ನನ್ನ ಪಕ್ಷವನ್ನು ಯಾಮಾರಿಸಿದ. ಅದರ ಬಗ್ಗೆ ನಾನು ವಿಸ್ತøತ ವಾಗಿ ಈಗ ಮಾತನಾಡಲು ಹೋಗಲ್ಲ. ಮುಂದೆ ಬರುತ್ತೇನೆ. ಕೆ.ಆರ್.ಪೇಟೆ ಕ್ಷೇತ್ರದ ಜೆಡಿಎಸ್ ಬೆಳವಣಿಗೆ ಬಗ್ಗೆ ವಿಸ್ತøತ ವಾಗಿ ಮಾತನಾಡುತ್ತೇನೆ. ಎದೆಗುಂದಬೇಡಿ. ನಿಮ್ಮೊಂ ದಿಗೆ ನಾನಿದ್ದೇನೆ. ನನ್ನ ಕಾರ್ಯಕರ್ತ ಬಂಧುಗಳ ಮನೆ-ಮನೆ ಬಾಗಿಲಿಗೆ ತೆರಳಿ ಕೈ ಮುಗಿದು ಬೇಡಿ ಪಕ್ಷದ ಅಭ್ಯರ್ಥಿ ಗೆಲ್ಲಿಸಿ ಕೊಡುತ್ತೇನೆ ಎಂದು ಹೇಳಿ ಹೆಲಿಕಾಪ್ಟರ್ ಟೇಕ್ ಆಫ್ ಆಗಬೇಕಿದೆ. ನನ್ನನ್ನು ಕಳುಹಿಸಿಕೊಡಿ ಎಂದು ಹೇಳಿ ತೆರಳಿದರು.

ಜೆಡಿಎಸ್‍ಗೆ ಟೋಪಿ ಹಾಕಿದವರಿಗೆ ಬುದ್ಧಿ ಕಲಿಸಿ: ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಕೆ.ಆರ್.ಪೇಟೆ ಯಲ್ಲಿ ರಾಜಕೀಯ ಭಾಷಣದ ಅವಶ್ಯಕತೆಯಿಲ್ಲ. ಪುಟ್ಟ ರಾಜು, ನಾರಾಯಣಗೌಡರಂತಹವರು ನಮ್ಮ ಪಕ್ಷಕ್ಕೆ ಬರ್ತಾರೆ, ಹೋಗ್ತಾರೆ. ಇದೆಲ್ಲಾ ಒಂದು ಲೆಕ್ಕವೇ? ನನ್ನನ್ನು ಬಿಜೆಪಿಗೆ ಸೇರ್ತೀನಿ ಅಂತ ಮಾಧ್ಯಮದವರು ದಿನನಿತ್ಯ ಹೇಳಿಕೆ ಕೊಡ್ತಾ ಇದ್ದಾರೆ. ಅದು ಶುದ್ಧ ಸುಳ್ಳು. ನಮಗೆ ಬೇರೆ ಪಕ್ಷದ ಗುರುತೂ ಗೊತ್ತಿಲ್ಲ. ನಾನು ರಾಜ ಕಾರಣ ಮಾಡುತ್ತಿರುವುದು ದೇವೇಗೌಡರಿಗಾಗಿ. ನನ್ನ ಅಂತ್ಯವೂ ಜೆಡಿಎಸ್‍ನಿಂದಲೇ ನಮ್ಮ ಪಕ್ಷಕ್ಕೆ ಟೋಪಿ ಹಾಕಿ ಹೋದವರಿಗೆ ಬುದ್ಧಿ
ಕಲಿಸಲು ಕಾರ್ಯರ್ತರು ರೆಡಿಯಾಗಿ ಎಂದು ಹೇಳಿದರು.

ತಾಯಿಗೆ ದ್ರೋಹ ಮಾಡಿದವರು ಉದ್ಧಾರವಾಗಲ್ಲ: ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಮಾತನಾಡಿ, ಪಕ್ಷಾಂತರ ಸಹಜ ಕ್ರಿಯೆ. ನಾನೂ ಕೂಡಾ ಬೇರೆ ಪಕ್ಷದಿಂದ ಬಂದವನೇ. ಆದರೆ ಈ ರೀತಿ ಮಧ್ಯದಲ್ಲಿ ನಂಬಿದವರಿಗೆ ಚೂರಿ ಹಾಕಿ ಹೋಗಿಲ್ಲ. ಈ ಬಗ್ಗೆ ಮತದಾ ರರು ನಿರ್ಣಯಿಸಬೇಕು. ಕೆ.ಆರ್.ಪೇಟೆಗೆ ಚುನಾವಣೆ ಬೇಕಿತ್ತಾ. ಯಾವುದೇ ಪಕ್ಷವೂ ತಾಯಿ ಸಮಾನ. ತಾಯಿಗೆ ದ್ರೋಹ ಮಾಡಿದವರು ಉದ್ಧಾರವಾಗಲ್ಲ ಎಂದು ಪಕ್ಷ ತೊರೆದಿರುವ ಅನರ್ಹ ಶಾಸಕ ನಾರಾಯಣಗೌಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ದಲಿತರಿಗೆ ಹೆಚ್ಚು ಸೌಲಭ್ಯ ಕೊಟ್ಟವರು ಹೆಚ್‍ಡಿಡಿ: ಶಾಸಕ ಡಾ.ಅನ್ನದಾನಿ ಮಾತನಾಡಿ, ದೇವೇಗೌಡರು ಹೀಗೆ ಬಂದು ಹಾಗೆ ಹೋಗಿ ರಾಜಕಾರಣ ಮಾಡಿದವರಲ್ಲ. ಕರ್ನಾ ಟಕದ ರಾಜಕಾರಣ ಇರುವವರೆಗೂ ದೇವೇಗೌಡರ ಹೆಸರು ಇದ್ದೆ ಇರುತ್ತೆ. ದಲಿತ ಬಂಧುಗಳಿಗೆ ಅತೀ ಹೆಚ್ಚು ಸೌಲಭ್ಯಗಳನ್ನು ಕೊಟ್ಟ ಕೀರ್ತಿ ಅಂಬೇಡ್ಕರ್ ನಂತರದ ಸ್ಥಾನ ದೇವೇಗೌಡರಿಗೆ ಸಲ್ಲುತ್ತದೆ. ಮಾಜಿ ಸಚಿವ ದಲಿತ ನಾಯಕ ಬಸವಲಿಂಗಪ್ಪನವರ ಕನಸನ್ನು ನನಸು ಮಾಡಿದ್ದಾರೆ. ನಾನೂ ಕೂಡಾ ಮಳವಳ್ಳಿಯಿಂದ ಬರುತ್ತೇನೆ. ಪ್ರತಿಯೊಬ್ಬ ದಲಿತ ಬಂಧುಗಳಿಗೇ ದೇವೇಗೌಡರ ಕೆಲಸಗಳನ್ನು ತಿಳಿಸುತ್ತೇನೆ ಎಂದರು.

ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಸಭೆ ಉದ್ಘಾಟಿಸಿದರು. ಸಭೆಯಲ್ಲಿ ಶಾಸಕರಾದ ಅನ್ನದಾನಿ, ಬಾಲಕೃಷ್ಣ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಜಿಪಂ ಮಾಜಿ ಅಧ್ಯಕ್ಷೆ ಜೆ.ಪ್ರೇಮಕುಮಾರಿ, ಉಪಾಧ್ಯಕ್ಷೆ ಗಾಯತ್ರಿ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಟಿ.ಮಂಜು, ಸದಸ್ಯರಾದ ಬಿ.ಎಲ್.ದೇವರಾಜು, ರಾಮದಾಸ್, ಪಕ್ಷದ ಹಿರಿಯ ಮುಖಂಡ ಕೃಷ್ಣೇಗೌಡ, ತಾಪಂ ಮಾಜಿ ಉಪಾಧ್ಯಕ್ಷ ಜಾನಕಿರಾಂ, ಜಿಪಂ ಮಾಜಿ ಸದಸ್ಯ ಮಂಜೇಗೌಡ, ಪುರಸಭೆ ಮಾಜಿ ಅಧ್ಯಕ್ಷ ಕೆ.ಟಿ.ಗಂಗಾಧರ್, ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಸ್.ಎಲ್.ರಮೇಶ್, ಮಾಜಿ ನಿರ್ದೇಶಕ ರಘು, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ರಾಜು, ಮಾಜಿ ಅಧ್ಯಕ್ಷ ಎಂ.ಎನ್.ವಿಜಯಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ನಾಗರಾಜೇಗೌಡ, ಉಪಾಧ್ಯಕ್ಷ ಅಶೋಕ್, ನಿರ್ದೇಶಕರಾದ ಮಲ್ಲೇಶ್, ಎಂ.ಪಿ.ಲೋಕೇಶ್, ನಂದೀಶ್, ವಸಂತಕುಮಾರ್, ಕೆ.ಬಿ.ನಾಗೇಶ್, ಪುರಸಭೆ ಸದಸ್ಯರಾದ ಕೆ.ಎಸ್.ಸಂತೋಷ್‍ಕುಮಾರ್. ಹೆಚ್.ಆರ್.ಲೋಕೇಶ್, ಗಿರೀಶ್ ಮತ್ತಿತರರಿದ್ದರು.

ಹೆಚ್.ಡಿ.ಕೆ ಗೈರು: ಇಂದಿನ ಸಭೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭಾಗವಹಿಸು ತ್ತಾರೆ. ಕಾರ್ಯಕ್ರಮದ ಮಧ್ಯದಲ್ಲಿ ಬರುತ್ತಾರೆ ಎಂದು ಕಾರ್ಯಕ್ರಮದ ಸಂಘಟಕರು ಸಭೆಯಲ್ಲಿ ಹೇಳಿದರೂ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಸುಳಿವು ಕಂಡು ಬರಲಿಲ್ಲ.

ಯಾರೂ ಜೆಡಿಎಸ್ ಬಿಜೆಪಿ ಬಿ ಟೀಮ್ ಎಂದು ಕರೆಯಕೂಡದು
 ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಎಚ್ಚರಿಕೆ
 ಮತ್ತೆ ‘ಕಾಂಗ್ರೆಸ್’ ಕದ ತಟ್ಟುತ್ತಿರುವ ಮಾಜಿ ಪ್ರಧಾನಿ ದೇವೇಗೌಡ
ಬೆಂಗಳೂರು: ನಮ್ಮ ಪಕ್ಷವನ್ನು ಇನ್ನುಮುಂದೆ ಯಾರೂ ಬಿಜೆಪಿಯ ಬಿ ಟೀಮ್ ಎಂದು ಕರೆಯಲು ಸಾಧ್ಯವಿಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಇಂದಿಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷವನ್ನು ಬಿ-ಟೀಮ್ ಎಂದು ಬಿಂಬಿಸಿ, 130 ಇದ್ದವರು, ಕೊನೆಗೆ 78ಕ್ಕೆ ಬಂದರು ಎಂದು ರಾಜ್ಯ ಕಾಂಗ್ರೆಸ್ ನಾಯಕರನ್ನು ಟೀಕಿಸಿದರು. ಜೆಪಿ ಭವನದಲ್ಲಿ ಪಕ್ಷದ ಅಧಿಕೃತ ವೆಬ್‍ಸೈಟ್‍ಗೆ ಚಾಲನೆ ನೀಡಿ, ಮಾತ ನಾಡಿದ ಅವರು, ಈಗ ವಿಧಾನಸಭೆಯಲ್ಲಿ ತೆರವಾಗಿರುವ 17 ಕ್ಷೇತ್ರಗಳಲ್ಲೂ ನಾವು ಸ್ಪರ್ಧಿಸಬೇಕು ಎಂದೆ ನ್ನಿಲ್ಲ. ಹಿಂದೆ ಕಾಂಗ್ರೆಸ್‍ಗೆ ಗುಂಡ್ಲುಪೇಟೆ, ನಂಜನಗೂಡು ಕ್ಷೇತ್ರಗಳನ್ನು ನಾನೇ ಬಿಟ್ಟುಕೊಟ್ಟಿದ್ದೆ. ಅಂದು ಆ ಪಕ್ಷ ನಮ್ಮವರನ್ನೇ ಅಭ್ಯರ್ಥಿಗಳನ್ನಾಗಿ ಮಾಡಿ, ಗೆಲ್ಲಿಸಿ ಕೊಂಡಿತ್ತು. ಈಗ ನಡೆಯುವ ಉಪಚುನಾವಣೆಯಲ್ಲೂ ಸೋನಿಯಾ ಗಾಂಧಿ ಅವರು ಏನು ತೀರ್ಮಾನ ಕೈಗೊಳ್ಳುತ್ತಾರೋ ಗೊತ್ತಿಲ್ಲ. ಅವರ ಜೊತೆ ಚರ್ಚೆ ಮಾಡಿದ ಬಳಿಕ ಮೈತ್ರಿ ಮುಂದುವರೆಸುವ ಬಗ್ಗೆ ತೀರ್ಮಾನಕ್ಕೆ ಬಂದರೆ, ಅದಕ್ಕೆ ನಮ್ಮ ಸಹಮತವಿರುತ್ತದೆ. ಮೈತ್ರಿ ಬಗ್ಗೆ ಸ್ಥಳೀಯ ಕಾಂಗ್ರೆಸ್ ನಾಯಕರ ಭಾವನೆ ಏನೆಂಬುದು ಗೊತ್ತಿಲ್ಲ. ನಾವಂತೂ ನಮ್ಮ ಪಕ್ಷವನ್ನು ಕಟ್ಟಿ ಬೆಳೆಸಲು, ನಿರಂತರವಾಗಿ ಕೆಲಸ ಮಾಡುತ್ತೇನೆ. ಯಂಗ್‍ಮ್ಯಾನ್ ಒಬ್ಬನನ್ನು ಪಾರ್ಲಿಮೆಂಟ್‍ಗೆ ಕಳುಹಿಸಿದ್ದೇನೆ. ನಾನು ಇಲ್ಲಿ ಇದ್ದುಕೊಂಡು ಪಕ್ಷ ಸಂಘಟನೆ ಮಾಡುತ್ತೇನೆ. ಹುಣಸೂರು ಇಲ್ಲವೆ ಕೆ.ಆರ್.ಪೇಟೆಯ ಉಪಚುನಾವಣೆಯಲ್ಲಿ ಪ್ರಜ್ವಲ್, ನಿಖಿಲ್ ಆಗಲಿ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Translate »