ಸಾಂಪ್ರದಾಯಿಕ ಉಡುಗೆ-ತೊಡುಗೆ, ನೃತ್ಯದೊಂದಿಗೆ ಮೆರವಣಿಗೆ
ಮೈಸೂರು

ಸಾಂಪ್ರದಾಯಿಕ ಉಡುಗೆ-ತೊಡುಗೆ, ನೃತ್ಯದೊಂದಿಗೆ ಮೆರವಣಿಗೆ

September 14, 2019

ಮೈಸೂರು, ಸೆ.13(ಎಂಟಿವೈ)- ಅರಣ್ಯ ಹಕ್ಕು ಕಾಯ್ದೆ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಮೈಸೂ ರಿನಲ್ಲಿ ಶುಕ್ರವಾರ ವಿವಿಧ ರಾಜ್ಯಗಳ ಆದಿವಾಸಿ ಮುಖಂಡರು ಸಾಂಪ್ರದಾಯಿಕ ನೃತ್ಯದೊಂದಿಗೆ ಮೆರವಣಿಗೆ ನಡೆಸಿ ಗಮನ ಸೆಳೆದರು.

ಮೈಸೂರಿನ ಮಹಾರಾಜ ಕಾಲೇಜಿನ ಶತ ಮಾನೋತ್ಸವ ಭವನದಲ್ಲಿ ಆದಿವಾಸಿ ಸಮನ್ವಯ ಮಂಚ್ ಹಾಗೂ ರಾಜ್ಯ ಮೂಲ ಆದಿವಾಸಿ ವೇದಿಕೆ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ `ಮೂಲ ಆದಿವಾಸಿ ಹಕ್ಕು ಅಧಿಕಾರ ದಿವಸ್’ ಕಾರ್ಯಕ್ರಮ ದಲ್ಲಿ ದೇಶದ 22 ರಾಜ್ಯಗಳಿಂದ ಆದಿವಾಸಿ ಮುಖಂ ಡರು ಆಗಮಿಸಿದ್ದು, ವಿವಿಧ ಗೋಷ್ಠಿಗಳಲ್ಲಿ ಪಾಲ್ಗೊಂ ಡಿದ್ದಾರೆ. ಕಾರ್ಯಕ್ರಮದ ಕೊನೆ ದಿನವಾದ ಇಂದು ಬೆಳಿಗ್ಗೆ ಅರಮನೆ ಉತ್ತರ ದ್ವಾರದ ಕೋಟೆ ಆಂಜ ನೇಯ ಸ್ವಾಮಿ ದೇವಾಲಯದ ಮುಂಭಾಗದಿಂದ ವರ್ಣರಂಜಿತ ಮೆರವಣಿಗೆ ನಡೆಸಿ ತಮ್ಮ ಹಕ್ಕು ಪ್ರತಿಪಾದಿಸಿದರು. ಕೋಟೆ ಆಂಜನೇಯಸ್ವಾಮಿ ದೇವಾ ಲಯದಿಂದ ಮೆರವಣಿಗೆಯಲ್ಲಿ ಹೊರಟ ಆದಿವಾಸಿ ಗಳು ಕೆ.ಆರ್.ವೃತ್ತದ ಕಡೆಗೆ ಬಂದರು. ರಾಷ್ಟ್ರೀಯ ಉತ್ಸವ ಹೊರತುಪಡಿಸಿ ಬೇರ್ಯಾವ ಮೆರವಣಿಗೆ ಕೆ.ಆರ್.ವೃತ್ತದಲ್ಲಿ ಸಾಗಲು ನಿರ್ಬಂಧಿಸಿರುವ ಹಿನ್ನೆಲೆ ಯಲ್ಲಿ ನಗರ ಬಸ್ ನಿಲ್ದಾಣದ ಮೂಲಕ ನ್ಯೂ ಸಯ್ಯಾಜಿರಾವ್ ರಸ್ತೆ ತಲುಪಿದರು. ಬಳಿಕ ಪಾಠ ಶಾಲೆ ವೃತ್ತ, ಚಾಮರಾಜ ಜೋಡಿ ರಸ್ತೆ, ರಾಮ ಸ್ವಾಮಿ ವೃತ್ತದ ಮೂಲಕ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನ ತಲುಪಿದರು.

ಮೆರವಣಿಗೆಯಲ್ಲಿ ಜೇನು ಕುರುಬರು, ಕಾಡು ಕುರುಬರು, ಗೊರವರು, ಗಿರಿಜನರು, ಸೋಲಿಗರು, ಬೇಡರು ಸೇರಿದಂತೆ ವಿವಿಧ ಪಂಗಡಗಳ ಹಾಗೂ ಬೇರೆ ಬೇರೆ ರಾಜ್ಯಗಳಿಂದ ಬಂದಿದ್ದ ಆದಿವಾಸಿ ಗಳು ತಮ್ಮ ಸಂಪ್ರದಾಯ ಬಿಂಬಿಸುವ ಸಾಂಸ್ಕøತಿಕ ಚಟುವಟಿಕೆಯನ್ನು ದಾರಿಯುದ್ದಕ್ಕೂ ಅನಾವರಣ ಮಾಡಿದರು. ಅಲ್ಲದೆ, ಅರಣ್ಯ ಹಕ್ಕು ಕಾಯ್ದೆ ಜಾರಿಗೊಳಿಸಿ, ಆದಿವಾಸಿಗಳು ಅರಣ್ಯ ಉತ್ಪನ್ನ ಸಂಗ್ರಹಿಸಲು ಅವಕಾಶ ಕಲ್ಪಿಸಬೇಕು. 5ನೇ ಅಧಿನಿಯಮ ಜಾರಿಗೆ ತರಬೇಕು. ಶಾಸನಬದ್ಧ ಅನುದಾನ ಬಿಡುಗಡೆ ಮಾಡಿ ಆದಿವಾಸಿಗಳ ಕಲ್ಯಾಣಕ್ಕೆ ವಿನಿಯೋಗಿಸ ಬೇಕು. ಬುಡಕಟ್ಟು ಉಪಯೋಜನೆಗೆ ಅನುದಾನ ಬಿಡುಗಡೆ ಮಾಡಬೇಕು. ಆದಿವಾಸಿಗಳ ಹಕ್ಕನ್ನು ಮೊಟಕುಗೊಳಿಸಿ, ಕಾನೂನಿನ ಹೆಸರಿನಲ್ಲಿ ದೌರ್ಜನ್ಯ ನಡೆಸುವವರ ವಿರುದ್ದ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಆದಿವಾಸಿ ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸುತ್ತಿದ್ದ ಕಲಾವಿದರನ್ನು ಕಂಡ ಸಾರ್ವಜನಿಕರು ಫೋಟೋ ತೆಗೆದುಕೊಂಡು ಸಂಭ್ರಮಿಸಿದರು.

Translate »