ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್: ಇಬ್ಬರ ಬಂಧನ
ಮೈಸೂರು

ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್: ಇಬ್ಬರ ಬಂಧನ

September 14, 2019

ಮೈಸೂರು,ಸೆ.13(ವೈಡಿಎಸ್)-ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಕ್ರಮ ವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿ ರುವ ಸಿಸಿಬಿ ಪೊಲೀಸರು ಇಬ್ಬರನ್ನು ಬಂಧಿಸಿ, 45 ಗ್ಯಾಸ್ ಸಿಲಿಂಡರ್, 3180 ರೂ. ನಗದು ವಶಪಡಿಸಿಕೊಂಡಿದ್ದಾರೆ. ಹೆಬ್ಬಾಳ್‍ನ ಮಹದೇಶ್ವರ ಬಡಾವಣೆ ನಿವಾಸಿ, ಗಹನ್ ಎಂಟರ್ ಪ್ರೈಸಸ್ ಮಾಲೀಕ ಗಿರಿಗೌಡ(59), ಹೆಬ್ಬಾಳ್‍ನ ಹನುಮಾನ್ ಹೋಂ ಅಪ್ಲೆಯನ್ಸಸ್ ಮಾಲೀಕ ವಾಗಾರಂ(42) ಬಂಧಿತರು.

ಮೊದಲ ಪ್ರಕರಣದಲ್ಲಿ ಕುಂಬಾರಕೊಪ್ಪಲು-ಮಂಚೇಗೌಡನಕೊಪ್ಪಲು ಮುಖ್ಯ ರಸ್ತೆಯಲ್ಲಿರುವ ಗಹನ್ ಎಂಟರ್‍ಪ್ರೈಸಸ್ ಅಂಗಡಿಯಲ್ಲಿ ಅಕ್ರಮ ವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಗಿರಿಗೌಡನನ್ನು ಬಂಧಿಸಿ, 34 ಗ್ಯಾಸ್ ಸಿಲಿಂಡರ್, 2600 ನಗದು, ತೂಕದ ಯಂತ್ರ ಮತ್ತು ರೀಫಿಲ್ಲಿಂಗ್ ಪರಿಕರಗಳನ್ನು ವಶಪಡಿಸಿಕೊಂಡಿದ್ದು, ಮೇಟಗಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಹೆಬ್ಬಾಳ್ 1ನೇ ಹಂತದ ವಾಟರ್‍ಟ್ಯಾಂಕ್ ರಸ್ತೆ ಯಲ್ಲಿನ ಹನುಮಾನ್ ಹೋಂ ಅಪ್ಲೆಯನ್ಸಸ್ ಅಂಗಡಿ ಮೇಲೆ ಪೊಲೀಸರು ದಾಳಿ ನಡೆಸಿ, ವಾಗಾರಂನನ್ನು ಬಂಧಿಸಿದ್ದಾರೆ. ಈ ವೇಳೆ 11 ಗ್ಯಾಸ್ ಸಿಲಿಂಡರ್, 580 ರೂ.ನಗದು, ತೂಕದ ಯಂತ್ರ, ಮತ್ತಿತರೆ ಪರಿಕರಗಳನ್ನು ವಶಪಡಿಸಿ ಕೊಂಡಿದ್ದಾರೆ. ಈ ಸಂಬಂಧ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತ್ತೆ ಕಾರ್ಯದಲ್ಲಿ ಡಿಸಿಪಿ ಎಂ.ಮುತ್ತುರಾಜು ಮತ್ತು ಸಿಸಿಬಿ ಎಸಿಪಿ ಮರಿಯಪ್ಪ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಇನ್ಸ್‍ಪೆಕ್ಟರ್ ಎ.ಮಲ್ಲೇಶ್, ಆಹಾರ ನಿರೀಕ್ಷಕರಾದ ಟಿ.ಜೆ.ಲಕ್ಷ್ಮಿ, ಎಎಸ್‍ಐ ಆರ್.ರಾಜು, ಸಿಬ್ಬಂದಿ ಗಳಾದ ಜೋಸೆಫ್ ನರೋನ, ಶ್ರೀನಿವಾಸ್ ಪ್ರಸಾದ್, ರಾಜಶ್ರೀ ಜಾಲವಾದಿ, ಕೆ.ಜಿ.ಶ್ರೀನಿವಾಸ್, ಕಾಳಪ್ಪ ಪಾಲ್ಗೊಂಡಿದ್ದರು.

Translate »