ಇಡಿ, ಸಿಬಿಐ, ಲೋಕಾಯುಕ್ತಗಳಿಗೆ ಹೆಚ್ಚಿನ ಬಲ ನೀಡಲು ಆಗ್ರಹಿಸಿ ಶಿಲ್ಪಿ ಊದುವ ಪ್ರತಿಭಟನೆ
ಮೈಸೂರು

ಇಡಿ, ಸಿಬಿಐ, ಲೋಕಾಯುಕ್ತಗಳಿಗೆ ಹೆಚ್ಚಿನ ಬಲ ನೀಡಲು ಆಗ್ರಹಿಸಿ ಶಿಲ್ಪಿ ಊದುವ ಪ್ರತಿಭಟನೆ

September 14, 2019

ಮೈಸೂರು, ಸೆ.13(ಆರ್‍ಕೆಬಿ)- ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿರುವ ಜಾರಿ ನಿರ್ದೇ ಶನಾಲಯ ಮತ್ತು ಸಿಬಿಐ, ಲೋಕಾಯುಕ್ತ ಗಳಿಗೆ ಹೆಚ್ಚಿನ ಬಲ ನೀಡಿ, ಭ್ರಷ್ಟ ರಾಜ ಕಾರಣಿಗಳು ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿಯ ಮೈಸೂರು ಜಿಲ್ಲಾ ಘಟಕದ ಕಾರ್ಯಕರ್ತರು ಶುಕ್ರವಾರ ಮೈಸೂರು ಡಿಸಿ ಕಚೇರಿ ಬಳಿ ಶಿಲ್ಪಿಗಳನ್ನು ಊದುವ ಮೂಲಕ ಪ್ರತಿಭಟನೆ ನಡೆಸಿದರು.

ಬಂಧಿಸಲ್ಪಟ್ಟಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ದೊಡ್ಡ ಮತ್ತು ಗಂಭೀರ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ. ಜಾತಿವಾದಿಗಳಿಂದ ಹೋರಾಟವೂ ನಡೆ ದಿದೆ. ಇದು ಅಕ್ಷಮ್ಯ ಅಪರಾಧ. ಇಲ್ಲಿ ಸತ್ಯ ಮತ್ತು ನ್ಯಾಯಕ್ಕಿಂತ ವ್ಯಕ್ತಿಯ ಸೇಡು, ಪಕ್ಷ ಕ್ಕಾಗುವ ಲಾಭ ಇನ್ನಿತರ ಅಂಶಗಳೇ ಪ್ರಮುಖ ಪಾತ್ರ ವಹಿಸಿದ್ದರೂ. ತಪ್ಪಿತಸ್ತರಿಗೆ ಶಿಕ್ಷೆ ಯಾಗಲೇಬೇಕು. ಶೇ.75ರಷ್ಟು ಜನಪ್ರತಿ ನಿಧಿಗಳು, ಅಧಿಕಾರಿಗಳು ಭ್ರಷ್ಟರೇ ಇರುವು ದರಿಂದ ಪ್ರಜಾಪ್ರಭುತ್ವ ರಕ್ಷಿಸಲು ಜಾರಿ ನಿರ್ದೇಶನಾಲಯ, ಸಿಬಿಐ, ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡಬೇಕು ಎಂದು ಪ್ರತಿ ಭಟನಾಕಾರರು ಆಗ್ರಹಿಸಿದರು. ಸಮಿತಿ ಜಿಲ್ಲಾ ಧ್ಯಕ್ಷ ವೇಣುಗೋಪಾಲ್, ಪದಾಧಿಕಾರಿ ಗಳಾದ ಎಂ.ಮಹದೇವ್, ಮಲ್ಲಿಕಾರ್ಜುನ ಸ್ವಾಮಿ, ಉಡಿಗಾಲ ಮಹದೇವಪ್ಪ, ಅಕ್ರಂ ಪಾಷಾ, ನಿಂಗೇಗೌಡ, ರಾಜಮ್ಮ, ಎಂ.ಆರ್. ಮುಜೀಬುಲ್ಲಾ ಷರೀಫ್, ಕೆ.ಎಸ್.ಸೋಮ ಸುಂದರ್, ಸರೋಜಮ್ಮ, ಮಾಲಿನಿ, ಅಮ್ಜದ್ ಪಾಷಾ, ಗೌರಮ್ಮ, ಸುಹೇಲ್ ಖಾಲಿದ್, ರಿಯಾಜ್, ಹೇಮಲತಾ, ವೆಂಕಟೇಶ್ ಇನ್ನಿ ತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Translate »