ಕ್ಯಾಂಟೀನ್ ವಿರುದ್ಧ ಮಹಾರಾಣಿ ವಿದ್ಯಾರ್ಥಿನಿಯರ ಪ್ರತಿಭಟನೆ
ಮೈಸೂರು

ಕ್ಯಾಂಟೀನ್ ವಿರುದ್ಧ ಮಹಾರಾಣಿ ವಿದ್ಯಾರ್ಥಿನಿಯರ ಪ್ರತಿಭಟನೆ

September 14, 2019

ಮೈಸೂರು,ಸೆ.13(ಆರ್‍ಕೆಬಿ)-ಕ್ಯಾಂಟೀನ್ ಸ್ವಚ್ಛ ವಾಗಿಲ್ಲ. ಗುಣಮಟ್ಟದ ಉಪಾಹಾರ ನೀಡುತ್ತಿಲ್ಲ ಎಂದು ಆರೋಪಿಸಿ ಮೈಸೂರು ಮಹಾರಾಣಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಕ್ಯಾಂಟೀನ್ ಬಳಿ ಮಹಾರಾಣಿ ಕಲಾ ಕಾಲೇಜಿನ ವಿದ್ಯಾರ್ಥಿನಿ ಯರು ಶುಕ್ರವಾರ ಪ್ರತಿಭಟನೆ ನಡೆಸಿದರು. ಕ್ಯಾಂಟೀನ್ ಮುಂದೆ ಜಮಾಯಿಸಿದ ನೂರಾರು ವಿದ್ಯಾರ್ಥಿ ನಿಯರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು. ಸ್ಥಳಕ್ಕೆ ಶಾಸಕರು ಬರಬೇಕು ಎಂದು ಪಟ್ಟು ಹಿಡಿದರು. ವಿಷಯ ಅರಿತ ಶಾಸಕ ಎಲ್.ನಾಗೇಂದ್ರ ಜಿಲ್ಲಾ ಆರೋಗ್ಯ ಅಧಿಕಾರಿ ಮತ್ತು ಇನ್ನಿತರ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿಯರ ದೂರುಗಳನ್ನು ಆಲಿಸಿದರು. ಬಳಿಕ ಕ್ಯಾಂಟೀನ್ ಪರಿಶೀಲಿಸಿದರು. ಟೆಂಡರ್ ದಾರರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Translate »