ತಮ್ಮ 14 ತಿಂಗಳ ಅಧಿಕಾರದ ಬಗ್ಗೆ ಮಾಜಿ ಸಿಎಂಕುಮಾರಸ್ವಾಮಿ ಆತ್ಮಾವಲೋಕನ ಮಾಡಿಕೊಳ್ಳಲಿ
ಮೈಸೂರು

ತಮ್ಮ 14 ತಿಂಗಳ ಅಧಿಕಾರದ ಬಗ್ಗೆ ಮಾಜಿ ಸಿಎಂಕುಮಾರಸ್ವಾಮಿ ಆತ್ಮಾವಲೋಕನ ಮಾಡಿಕೊಳ್ಳಲಿ

September 14, 2019

ಮೈಸೂರು, ಸೆ.13(ಆರ್‍ಕೆಬಿ)- ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ 14 ತಿಂಗಳ ಅಧಿಕಾರಾವಧಿಯಲ್ಲಿ ಯಾವ ರೀತಿ ಅಧಿಕಾರ ನಡೆಸಿದ್ದರು ಎಂಬ ಬಗ್ಗೆ ತಾಯಿ ಚಾಮುಂಡೇಶ್ವರಿ ಎದುರು ನಿಂತುಕೊಂಡು ಒಮ್ಮೆ ಯೋಚನೆ ಮಾಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ವಸತಿ ಸಚಿವ ವಿ.ಸೋಮಣ್ಣ ಇಂದಿಲ್ಲಿ ಕುಮಾರ ಸ್ವಾಮಿ ಅವರಿಗೆ ಟಾಂಗ್ ನೀಡಿದರು.

ಮೈಸೂರಿನ ಮುಡಾ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹ ಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಯುವಕರಂತೆ ಸುತ್ತಾಡಿದ್ದಾರೆ. ಆದರೆ ಕುಮಾರ ಸ್ವಾಮಿ ತಮ್ಮ ಕಾರ್ಯವೈಖರಿ ಬಗ್ಗೆ ಆತ್ಮಾವ ಲೋಕನ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು. ದಸರಾ ಪಾರಂಪರಿಕ ಆಚ ರಣೆಗೆ ನಾನು ಮೈಸೂರು ನಗರ ಸೇರಿ ದಂತೆ ಎಲ್ಲಾ ತಾಲೂಕುಗಳಲ್ಲೂ ಸುತ್ತಾಡಿದ್ದೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ದಸರೆಯ ಯಶಸ್ಸಿಗೆ ಶ್ರಮಿಸುತ್ತಿದ್ದೇನೆ ಎಂದರು.

ನಾನು ಎಲ್ ಬೋರ್ಡ್ ಅಲ್ಲ: ಇಲ್ಲಿ ಯಾರು ಯಾರಿಗೂ ದೊಡ್ಡವರಲ್ಲ. ಕಲಿ ಯುವುದು ನಿರಂತರವಾಗಿರುತ್ತದೆ. ನಾನು ಸಂಸದರು, ಶಾಸಕರು, ಜಿಪಂ ಮತ್ತು ಪಾಲಿಕೆ ಸದಸ್ಯರನ್ನು ಒಳಗೊಂಡಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ದಸರಾ ಯಶಸ್ಸಿಗೆ ಶ್ರಮಿಸುತ್ತಿದ್ದೇನೆ. ಹಾಗೆಂದು ನಾನು ಎಲ್ ಬೋರ್ಡ್ ಅಲ್ಲ. ನನಗೂ ಸ್ವಲ್ಪ ಅನುಭವ ವಿದೆ. ಎಲ್ಲರೂ ಒಟ್ಟಾಗಿ ಪಕ್ಷಾತೀತವಾಗಿ ಆಚ ರಿಸಬೇಕಾದ ನಾಡಹಬ್ಬ ಇದು. ಹಾಗಾಗಿ ದಸರಾ ಕುರಿತಂತೆ ಕುಮಾರಸ್ವಾಮಿ ಸಹ ಸಲಹೆ ನೀಡಲಿ. ಅವರು ಇದ್ದಲ್ಲಿಗೆ ಕರೆದರೆ ನಾನೇ ಅಲ್ಲಿಗೆ ಹೋಗಿ ಭೇಟಿ ಮಾಡಿ ಸಲಹೆ ಪಡೆಯುತ್ತೇನೆ ಎಂದು ಹೇಳಿದರು.

ಹೆಚ್‍ಡಿಕೆಗೆ ಅದೃಷ್ಟವಿತ್ತು ಸಿಎಂ ಆದ್ರು: ನಾನು ರಾಜಕೀಯಕ್ಕೆ ಬಂದಿದ್ದು 1983ರಲ್ಲಿ. ಕುಮಾರಸ್ವಾಮಿ ರಾಜಕಾರಣಕ್ಕೆ ಬಂದಿದ್ದು 96ರಲ್ಲಿ. ಕುಮಾರಸ್ವಾಮಿಗೆ ಅದೃಷ್ಟವಿತ್ತು ಮುಖ್ಯಮಂತ್ರಿಯಾದರು. ಆದರೆ ನನಗೆ ಅದೃಷ್ಟವಿಲ್ಲ ಮಂತ್ರಿಯಾಗಿದ್ದೇನೆ. ನಾನು ಎಲ್ಲರ ಅನುಭವ ಪಡೆಯುತ್ತಿದ್ದೇನೆ. ಹಾಗೆಂದು ನಾನು ಎಲ್ ಬೋರ್ಡ್ ಅಲ್ಲ. ಕಲಿಯುವುದು ನಿರಂತರವಾಗಿರುತ್ತದೆ ಎಂದರು. ದಸರಾ ಮುಗಿದ ಬಳಿಕ ನನ್ನ ವಸತಿ ಖಾತೆಯತ್ತ ಸಂಪೂರ್ಣ ಗಮನ ಕೊಟ್ಟು, ಒಂದು ಕ್ಷಣವೂ ವ್ಯರ್ಥ ಮಾಡದೆ ವಸತಿ ಇಲಾಖೆಯ ಕೆಲಸ ಮಾಡುತ್ತೇನೆ ಎಂದು ಸ್ಪಷ್ಪಪಡಿಸಿದರು.

Translate »