ಕಾರಿಗೆ ಲಾರಿ ಡಿಕ್ಕಿ: ಆರ್‍ಟಿಓ ಬ್ರೇಕ್ ಇನ್ಸ್‍ಪೆಕ್ಟರ್ ಸಾವು
ಮೈಸೂರು

ಕಾರಿಗೆ ಲಾರಿ ಡಿಕ್ಕಿ: ಆರ್‍ಟಿಓ ಬ್ರೇಕ್ ಇನ್ಸ್‍ಪೆಕ್ಟರ್ ಸಾವು

September 13, 2019

ತಿ.ನರಸೀಪುರ, ಸೆ.12(ಎಸ್‍ಕೆ)- ಲಾರಿ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಚಾಮ ರಾಜನಗರ ಪ್ರಾದೇ ಶಿಕ ಸಾರಿಗೆ ಇಲಾಖೆಯ ಬ್ರೇಕ್ ಇನ್ಸ್‍ಪೆಕ್ಟರ್ ಸಾವನ್ನಪ್ಪಿ, ಕಾರು ಚಾಲಕ ತೀವ್ರವಾಗಿ ಗಾಯಗೊಂಡ ಘಟನೆ ತಾಲೂಕಿನ ಸೋಸಲೆ ಬಳಿ ಗುರುವಾರ ಸಂಜೆ ಸಂಭವಿಸಿದೆ. ಮೂಲತಃ ಮಳವಳ್ಳಿ ತಾಲೂಕು ಬ್ಲಫ್ ನಿವಾಸಿಯಾಗಿದ್ದು, ಹಾಲಿ ಮೈಸೂರಿನ ರಾಜೀವ್‍ನಗರದಲ್ಲಿ ವಾಸವಿದ್ದ ಆರ್‍ಟಿಓ ಬ್ರೇಕ್ ಇನ್ಸ್‍ಪೆಕ್ಟರ್ ಅಬ್ದುಲ್ ನಸೀಮ್ (45) ಅಪಘಾತದಲ್ಲಿ ಮೃತಪಟ್ಟವ ರಾಗಿದ್ದು, ಕಾರು ಚಾಲಕ ಮೈಸೂರಿನ ಫಾರುಕ್ ತೀವ್ರವಾಗಿ ಗಾಯಗೊಂಡು, ಕೆ.ಆರ್.ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿವರ: ಚಾಮರಾಜನಗರ ಆರ್‍ಟಿಓ ಕಚೇರಿಯ ಬ್ರೇಕ್ ಇನ್ಸ್‍ಪೆಕ್ಟರ್ ಅಬ್ದುಲ್ ನಸೀಮ್ ಅವರು ಈ ಹಿಂದೆ ಮಂಡ್ಯದಲ್ಲಿ ಸೇವೆ ಸಲ್ಲಿಸಿದ್ದು, ಅಲ್ಲಿನ ಪ್ರಕರಣವೊಂ ದಕ್ಕೆ ಸಂಬಂಧಿಸಿದಂತೆ ಇಂದು ಮಂಡ್ಯ ನ್ಯಾಯಾಲಯಕ್ಕೆ ತೆರಳಿ ಬನ್ನೂರು-ತಿ.ನರ ಸೀಪುರ ಮಾರ್ಗವಾಗಿ ವಾಪಸ್ಸಾಗುತ್ತಿದ್ದರು.

ಸೋಸಲೆ ಬಳಿ ಅಬ್ದುಲ್ ನಸೀಮ್ ಅವ ರಿದ್ದ ಕಾರಿಗೆ (ಕೆಎ09 ಡಿ-4789) ಎದುರಿ ನಿಂದ ಬಂದ ಲಾರಿ
(ಕೆಎ34 ಎ-4797) ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಲಾರಿ ಕಾರನ್ನು ಕೆಲ ಮೀಟರ್‍ಗಳ ದೂರ ತಳ್ಳಿಕೊಂಡು ಹೋಗಿ ರಸ್ತೆ ಬದಿ ವಿದ್ಯುತ್ ಕಂಬಕ್ಕೆ ಬಡಿದಿದೆ. ಒಂದು ವೇಳೆ ವಿದ್ಯುತ್ ಕಂಬ ಅಡ್ಡವಿಲ್ಲದಿದ್ದರೆ ಕಾರು ರಸ್ತೆ ಬದಿಯ ಜಮೀನಿಗೆ ಉರುಳಿ ಬೀಳುತ್ತಿತ್ತು. ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಎಡಭಾಗದಲ್ಲಿ ಕುಳಿತಿದ್ದ ಅಬ್ದುಲ್ ನಸೀಮ್ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರ ಚಾಲಕನಿಗೂ ಕೂಡ ಗಾಯಗಳಾಗಿವೆ. ಅಪಘಾತ ಸಂಭವಿಸುತ್ತಿದ್ದಂತೆಯೇ ಲಾರಿ ಚಾಲಕ ಪರಾರಿಯಾಗಿದ್ದಾನೆ. ಸ್ಥಳೀಯರು ಇಬ್ಬರೂ ಗಾಯಾಳುಗಳನ್ನು ಆಟೋದಲ್ಲಿ ತಿ.ನರಸೀಪುರದ ಸರ್ಕಾರಿ ಆಸ್ಪತ್ರೆಗೆ ತಂದು ಸೇರಿಸಿದ್ದಾರೆ. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಅಬ್ದುಲ್ ನಸೀಮ್ ಸಾವನ್ನಪ್ಪಿದ್ದಾರೆ. ಅವರ ಚಾಲಕ ಫಾರೂಕ್ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ತಿ.ನರಸೀಪುರ ಸರ್ಕಲ್ ಇನ್ಸ್‍ಪೆಕ್ಟರ್ ಎಂ.ಆರ್. ಲವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬನ್ನೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಲಾರಿಯು ಡಿಕ್ಕಿ ಹೊಡೆದ ರಭಸದಲ್ಲಿ ಕಾರನ್ನು ರಸ್ತೆ ಬದಿಯ ಜಮೀನಿನತ್ತ ಕೆಲ ಮೀಟರ್‍ಗಳ ದೂರ ದೂಡಿಕೊಂಡು ಹೋಗಿದ್ದು, ಅಡ್ಡಲಾಗಿ ವಿದ್ಯುತ್ ಕಂಬವಿದ್ದ ಕಾರಣ ಅದಕ್ಕೆ ಬಡಿದು ಕಾರು ನಿಂತಿದೆ. ಈ ದೃಶ್ಯವನ್ನು ಕಂಡರೆ ಇದು ಅಪಘಾತವಲ್ಲ, ವ್ಯವಸ್ಥಿತ ಕೊಲೆ ಇರಬಹುದು ಎಂಬ ಮಾತುಗಳು ಅಪಘಾತ ಸ್ಥಳದಲ್ಲಿ ನೆರೆದಿದ್ದ ಜನರ ನಡುವೆ ಕೇಳಿಬಂದವು.

Translate »