ಮಧ್ಯಪ್ರದೇಶದ ವೃದ್ಧನ ತಲೆಮೇಲೆ ಕೊಂಬು!
ಮೈಸೂರು

ಮಧ್ಯಪ್ರದೇಶದ ವೃದ್ಧನ ತಲೆಮೇಲೆ ಕೊಂಬು!

September 15, 2019

ಕತ್ತರಿಸಿದಷ್ಟೂ ದೊಡ್ಡದಾಗುತ್ತಿದ್ದ ಕೋಡಿಗೆ ಕಡೆಗೂ ಶಸ್ತ್ರಚಿಕಿತ್ಸೆ
ಭೋಪಾಲ್, ಸೆ.14- `ನಿನಗೇನು ತಲೆ ಮೇಲೆ ಕೊಂಬಿದೆಯಾ’? ಗ್ರಾಮೀಣ ಭಾಗದಲ್ಲಿ ಯಾರಾದರೂ ತಾನೇ ಮೇಲು ಎಂದು ಮೆರೆ ಯಲೆತ್ನಿಸಿದರೆ ಅಂತಹವರನ್ನು ಹಳಬರು ಪ್ರಶ್ನಿ ಸುತ್ತಿದ್ದ ರೀತಿ ಇದು! ಅರೆ, ಇಲ್ಲೊಬ್ಬ ವೃದ್ಧ ವ್ಯಕ್ತಿಗೆ ನಿಜ ವಾಗಿಯೂ ತಲೆ ಮೇಲೆ ಕೊಂಬು ಬೆಳೆದಿದೆ. ಕತ್ತರಿಸಿದ ಹಾಗೆಲ್ಲಾ ಮತ್ತೂ ಬೆಳೆಯುತ್ತಲೇ ಇದೆ! 74 ವರ್ಷದ ವೃದ್ಧ ಮಧ್ಯಪ್ರದೇಶದ ರಹ್ಲಿ ಗ್ರಾಮದ ಶ್ಯಾಮ್‍ಲಾಲ್ ಯಾದವ್‍ಗೆ ತಲೆಯ ಮೇಲೆ ಕೋಡು ಬೆಳೆಯುತ್ತಿದೆ. ಅವರು ಹಲವು ವರ್ಷಗಳಿಂದ ಈ ಅಪರೂಪದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಲವು ಪ್ರಾಣಿ ಪ್ರಭೇದದಲ್ಲಿಯಷ್ಟೇ ಕೋಡು ಇರುತ್ತದೆ. ಆದರೆ ಶ್ಯಾಮಲಾಲ್ ಈಗ ಕೊಂಬಿನ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ತಮ್ಮ ಸಮಸ್ಯೆಯ ಬಗ್ಗೆ ಶ್ಯಾಮ ಲಾಲ್ ಯಾದವ್ ಹೇಳುವುದೇನೆಂದರೆ, ವರ್ಷಗಳ ಹಿಂದೆ ತಲೆಗೆ ದೊಡ್ಡ ಗಾಯ ವಾಯಿತು. ಬಳಿಕ ತಲೆಯ ಚರ್ಮದಿಂದ ಹೀಗೆ ಕೊಂಬಿನಂತಹ ವಸ್ತುವೊಂದು ನಿಧಾನವಾಗಿ ಬೆಳೆಯಲು ಪ್ರಾರಂಭವಾಯಿತು. ಮೊದಲು ಚಿಕ್ಕದಾಗಿದ್ದ ಕೋಡು ಬರುಬರುÀತ್ತಾ ದೊಡ್ಡ ದಾಯಿತು. ನನಗೆ ವಿಪರೀತ ಅಚ್ಚರಿಯಾಯಿತು.

ಆ ಕೊಂಬನ್ನು ಮೊದಮೊದಲು ನಾನೇ ಕತ್ತರಿಸಿಕೊಳ್ಳುತ್ತಿದ್ದೆ. ಕತ್ತರಿಸಿಕೊಂಡಷ್ಟೂ ಬೆಳೆಯುತ್ತಿದ್ದ ಕೊಂಬನ್ನು ನೋಡಿ ಆತಂಕ ವಾಯಿತು. ಬಳಿಕ ವೈದ್ಯರ ಬಳಿ ತೆರಳಿದೆ. ಆದರೆ ವೈದ್ಯರಿಗೂ ಮೊದಲು ಇದಕ್ಕೆ ಕಾರಣವೇನು ಎಂಬುದು ತಿಳಿಯಲಿಲ್ಲ. ಪರಿಹಾರವೇನು ಎಂಬುದೂ ಅರಿಯಲಿಲ್ಲ. ಕಡೆಗೆ ಶಸ್ತ್ರಚಿಕಿತ್ಸೆ ನಡೆಸಿ ಯಾದವ್ ತಲೆ ಮೇಲಿದ್ದ ಕೊಂಬನ್ನು ತೆಗೆಯಲಾಗಿದೆ. ಶ್ಯಾಮ್‍ಲಾಲ್ ಸೆಬಾಸಿಯಸ್ ಗ್ರಂಥಿಗೆ ಸಂಬಂಧಪಟ್ಟ ಹಾರ್ಮೋನ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆ ಇದ್ದವರಿಗೆ ಸೂರ್ಯನ ಬಿಸಿಲು ನೇರವಾಗಿ ತಗುಲುವ ಚರ್ಮದ ಭಾಗದಲ್ಲಿ ಹೀಗೆ ಕೊಂಬುಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಇದನ್ನು ಸೆಬಾಸಿಯಸ್ ಹಾರ್ನ್ ಅಥವಾ ಡೆವಿಲ್ ಹಾರ್ನ್ ಎಂದೇ ಕರೆಯಲಾಗುತ್ತದೆ. ಶ್ಯಾಮಲಾಲ್ ಅವರದು ಅಪರೂಪದಲ್ಲಿ ಅಪರೂಪದ ಪ್ರಕರಣ ಎಂದು ವೈದ್ಯ ವಿಶಾಲ್ ಗಜ್ಭಿ ಹೇಳಿದ್ದಾರೆ.

Translate »