ಅನ್ಯರ ಪಾಲಾಗುತ್ತಿದೆ ಚಾಮುಂಡೇಶ್ವರಿ ದೇವಸ್ಥಾನದ ಆಸ್ತಿ
ಮೈಸೂರು

ಅನ್ಯರ ಪಾಲಾಗುತ್ತಿದೆ ಚಾಮುಂಡೇಶ್ವರಿ ದೇವಸ್ಥಾನದ ಆಸ್ತಿ

September 15, 2019

ಮೈಸೂರು,ಸೆ.14(ಪಿಎಂ)-ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದ ಸುಪರ್ದಿಗೆ ಅಂದು ಮೈಸೂರು ಮಹಾ ರಾಜರು ಕೆಆರ್ ನಗರ ತಾಲೂಕಿನ ಅರ್ಜುನ ಹಳ್ಳಿ ಮತ್ತು ಗಳಿಗೆಕೆರೆಹುಂಡಿಯಲ್ಲಿ ಸುಮಾರು 100 ಎಕರೆ ಭೂಮಿಯನ್ನು ದಾನವಾಗಿ ನೀಡಿ ದ್ದರು. ಆದರೆ ಮುಜರಾಯಿ ಇಲಾಖೆ ದೇವ ಸ್ಥಾನದ ಈ ಆಸ್ತಿ ಉಳಿಸಿಕೊಳ್ಳುವಲ್ಲಿ ವಿಫಲ ವಾಗಿದೆ ಎಂದು ನಾಲ್ವಡಿ ಫೌಂಡೇಷನ್ ಅಧ್ಯಕ್ಷ ನಂದೀಶ್ ಜಿ.ಅರಸ್ ತಿಳಿಸಿದರು.

ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಜರು ದೇವಸ್ಥಾನಕ್ಕೆ ಸದರಿ ಗ್ರಾಮಗಳಲ್ಲಿ ಸುಮಾರು 100 ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದರು. ಭೂಮಿ ಮೂಲಕ ಬರುವ ಆದಾಯದಲ್ಲಿ ದಾಸೋಹ ಕಾರ್ಯ ನಡೆಯಲು ಅನುಕೂಲವಾಗಲಿ ಎಂಬ ಉದ್ದೇಶ ದಿಂದ ಭೂಮಿ ದಾನ ಮಾಡಲಾಗಿತ್ತು ಎಂದು ಹೇಳಿದರು. ಆದರೆ ಈಗ ಭೂಮಿ ಭೂ ಮಾಫಿಯಾ ಪಾಲಾಗುವ ಆತಂಕವಿದ್ದು, ಮುಜ ರಾಯಿ ಇಲಾಖೆ ದಾಖಲೆ ಇಲ್ಲವೆಂದು ಕೈಚೆಲ್ಲು ತ್ತಿದೆ. ಆದರೆ ಮಹಾರಾಜರು ದೇವಸ್ಥಾನಕ್ಕೆ ಸದರಿ ಭೂಮಿಯನ್ನು ದಾನವಾಗಿ ನೀಡಿರುವ ಬಗ್ಗೆ ದಾಖಲೆಗಳಿದ್ದು, 1950ರಲ್ಲಿ ಭಾರತದ ಒಕ್ಕೂಟ ವ್ಯವಸ್ಥೆಗೆ ಮೈಸೂರು ಪ್ರಾಂತ್ಯ ಸೇರ್ಪಡೆಗೊಳಿ ಸುವ ಸಂಬಂಧ ಅಂದಿನ ಮಹಾರಾಜ ಜಯ ಚಾಮರಾಜ ಒಡೆಯರ್ ಕೇಂದ್ರ ಸರ್ಕಾರದೊಂ ದಿಗೆ ತಮ್ಮ ಆಸ್ತಿಪಾಸ್ತಿ ಕುರಿತಂತೆ ಪತ್ರ ವ್ಯವಹಾರ ನಡೆಸಿದ್ದರು. ಇದರಲ್ಲಿ ದಾನ ನೀಡಿರುವ ಬಗ್ಗೆ ಉಲ್ಲೇಖವಿದೆ. ದೇವಸ್ಥಾನಕ್ಕೆ ಸೇರಬೇಕಾದ ಆಸ್ತಿಯನ್ನು ಮುಜರಾಯಿ ಇಲಾಖೆ ವಶಪಡಿಸಿ ಕೊಳ್ಳಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ನಾಗರಿಕ ವೇದಿಕೆ ಸಂಚಾಲಕಿ ಹೆಚ್.ಎಲ್. ಯಮುನಾ ಮಾತನಾಡಿ, ಮೈಸೂರಿನ ಪಾರಂ ಪರಿಕ ಕಟ್ಟಡಗಳ ಪೈಕಿ ಕೆಲವು ಅಲ್ಪಸ್ವಲ್ಪ ಶಿಥಿಲ ಗೊಂಡಿದ್ದು, ಅವುಗಳನ್ನು ದುರಸ್ತಿಗೊಳಿಸಲು ಅವಕಾಶವಿದ್ದರೂ ನೆಲಸಮಗೊಳಿಸುವ ಮಾತು ಗಳು ಕೇಳಿಬರುತ್ತಿರುವುದು ದುರಂತ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅರಮನೆ ಉಳಿಸಿ ಹೋರಾಟ ಸಮಿತಿ ಸಂಚಾಲಕ ರಾಮೇಗೌಡ, ಕರ್ನಾಟಕ ಸೇನಾ ಪಡೆ ಉಪಾಧ್ಯಕ್ಷ ಡಾ.ಪಿ. ಶಾಂತರಾಜೇ ಅರಸು ಸುದ್ದಿಗೋಷ್ಠಿಯಲ್ಲಿದ್ದರು.

Translate »