ಸಿಸಿಬಿ ಪೊಲೀಸರಿಂದ ಖದೀಮನ ಸೆರೆ: ಚಿನ್ನ, ಬೆಳ್ಳಿ ಆಭರಣ, ಕೋವಿ, ದೇವರ ವಿಗ್ರಹ ವಶ
ಮೈಸೂರು

ಸಿಸಿಬಿ ಪೊಲೀಸರಿಂದ ಖದೀಮನ ಸೆರೆ: ಚಿನ್ನ, ಬೆಳ್ಳಿ ಆಭರಣ, ಕೋವಿ, ದೇವರ ವಿಗ್ರಹ ವಶ

September 15, 2019

ಮೈಸೂರು, ಸೆ. 14 (ಆರ್‍ಕೆ)- ಖದೀಮ ನನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 4 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣ, ಕೋವಿ ಹಾಗೂ ದೇವರ ವಿಗ್ರಹಗಳನ್ನು ವಶ ಪಡಿಸಿಕೊಂಡಿದ್ದಾರೆ. ಕೊಡಗು ಜಿಲ್ಲೆ, ಮಡಿ ಕೇರಿ ತಾಲೂಕು, ನಾಲಡಿ ಗ್ರಾಮದ ನಿವಾಸಿ ಕೆ.ಸಿ. ಚಿನ್ನಪ್ಪ ಅವರ ಮಗ ಕೆ.ಸಿ. ಅಶೋಕ ಅಲಿಯಾಸ್ ಅಶೋಕ ರಾಜಪ್ಪ (30) ಬಂಧಿತ ಆರೋಪಿ. ಮೈಸೂರಿನ ಹೆಬ್ಬಾಳು ಸೂರ್ಯ ಬೇಕರಿ ಸರ್ಕಲ್ ಬಳಿಯ ಮುತ್ತೂಟ್ ಫಿನ್‍ಕಾಪ್ ಎದುರು ಕಾರ್ಯಾಚರಣೆ ನಡೆ ಸಿದ ಪೊಲೀಸರು, ಆತನನ್ನು ಸೆಪ್ಟೆಂಬರ್ 12ರಂದು ಬಂಧಿಸಿದರು.

ವಿಚಾರಣೆ ನಡೆಸಿದಾಗ ಆತನ ಬ್ಯಾಗಿನಲ್ಲಿ ಚಿನ್ನಾಭರಣ, ಬೆಳ್ಳಿ ಪದಾರ್ಥ ಹಾಗೂ ಕೋವಿ ದೊರೆತಿತ್ತು. ವಿರಾಜಪೇಟೆಯ ಕನ್ನಂಗಳ ಗ್ರಾಮದಲ್ಲಿ ಆಭರಣ, ಗೋಕ್ಲ ಸಿದ್ದಾಪುರ ಗ್ರಾಮ ದಲ್ಲಿ ಕೋವಿ, ಕಡಂಗ ಮರೂರ್ ಗ್ರಾಮದಲ್ಲಿ ಕೊಡವರು ಬಳಸುವ ಒಂದು ಪಿಚ್‍ಕತ್ತಿ, ಬೆಳ್ಳಿ ಪದಾರ್ಥ ಮತ್ತು ಹಿತ್ತಾಳೆ ದೇವರ ವಿಗ್ರಹ ಗಳನ್ನು ಮನೆಗಳಿಂದ ಕಳವು ಮಾಡಿದ್ದಾಗಿ ಆಶೋಕ ತಿಳಿಸಿದ್ದಾರೆ. ಡಿಸಿಪಿ ಎಂ. ಮುತ್ತುರಾಜ್ ಹಾಗೂ ಸಿಸಿಬಿ ಎಸಿಪಿ ವಿ.ಮರಿಯಪ್ಪ ಅವರ ಮಾರ್ಗ ದರ್ಶನದಲ್ಲಿ ನಡೆದ ಪತ್ತೆ ಕಾರ್ಯಾಚರಣೆಯಲ್ಲಿ ಸಿಸಿಇ ಇನ್ಸ್‍ಪೆಕ್ಟರ್ ಸಿ.ಕಿರಣ್‍ಕುಮಾರ್, ಎಎಸ್‍ಐ ಚಂದ್ರೇಗೌಡ, ಸಿಬ್ಬಂದಿಗಳಾದ ರಾಮಸ್ವಾಮಿ, ರಾಜೇಂದ್ರ, ಚಿಕ್ಕಣ್ಣ, ಎಂ.ಆರ್.ಗಣೇಶ್, ಲಕ್ಷ್ಮೀ ಕಾಂತ್, ಅಸ್ಗರ್ ಖಾನ್, ಶಿವರಾಜು, ರಾಮ ಸ್ವಾಮಿ, ಯಾಕುಬ್ ಷರೀಫ್, ನಿರಂಜನ್, ಚಾಮುಂಡಮ್ಮ, ಗೌತಮ್ ಪಾಲ್ಗೊಂಡಿದ್ದರು

Translate »