ದೇಶ ಅಭಿವೃದ್ಧಿಗೊಳ್ಳುತ್ತಿದ್ದರೂ ಆದಿವಾಸಿ ಕುಟುಂಬಗಳ ಸ್ಥಿತಿ-ಗತಿ ಸುಧಾರಿಸಿಲ್ಲ
ಮೈಸೂರು

ದೇಶ ಅಭಿವೃದ್ಧಿಗೊಳ್ಳುತ್ತಿದ್ದರೂ ಆದಿವಾಸಿ ಕುಟುಂಬಗಳ ಸ್ಥಿತಿ-ಗತಿ ಸುಧಾರಿಸಿಲ್ಲ

September 15, 2019

ಮೈಸೂರು,ಸೆ.14(ಎಸ್‍ಪಿಎನ್)-ನಮ್ಮ ದೇಶ ಅಭಿ ವೃದ್ಧಿಗೊಳ್ಳುತ್ತಿದ್ದರೂ ಆದಿವಾಸಿ ಕುಟುಂಬಗಳ ಸಾಮಾ ಜಿಕ ಸ್ಥಿತಿ-ಗತಿ ಮಾತ್ರ ಸುಧಾರಿಸಿಲ್ಲ ಎಂದು ಮಧ್ಯ ಪ್ರದೇಶ ಸರ್ಕಾರದ ಆದಿವಾಸಿ ಕಲ್ಯಾಣ ಸಚಿವ ಓಂಕಾರ ಸಿಂಗ್ ಮರ್ಕಮ್ ತೀವ್ರ ಬೇಸರ ವ್ಯಕ್ತಪಡಿಸಿದರು.

ಮೈಸೂರು ಮಹಾರಾಜ ಕಾಲೇಜು ಶತಮಾನೋ ತ್ಸವ ಭವನದಲ್ಲಿ ಭಾರತ್ ಆದಿವಾಸಿ ಸಮನ್ವಯ ಮಂಚ್ ಹಾಗೂ ಕರ್ನಾಟಕ ರಾಜ್ಯ ಮೂಲ ಆದಿವಾಸಿ ವೇದಿಕೆ ಸಹಯೋಗದೊಂದಿಗೆ ಆಯೋಜಿಸಿರುವ ಎರಡು ದಿನಗಳ `ಮೂಲ ಆದಿವಾಸಿಗಳ ಹಕ್ಕು ಮತ್ತು ಅಧಿಕಾರ ದಿನಾಚರಣೆ-2019ರ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು. ಪ್ರಸ್ತುತ ದಿನಮಾನಗಳಲ್ಲಿ ಭಾರತ ಅಭಿವೃದ್ಧಿಶೀಲ ರಾಷ್ಟ್ರವಾಗಿ ಹೊರಹೊಮ್ಮಿದೆ. ಆದರೆ, ಆದಿವಾಸಿಗಳ ಬದುಕು-ಬವಣೆ ಸುಧಾರಣೆ ಯಾಗಿಲ್ಲ. ಅಲ್ಲದೆ, ದೇಶ ದಲ್ಲಿ ನಗರ ಪ್ರದೇಶಗಳು ಅಭಿವೃದ್ಧಿಯಾಗುತ್ತಿದ್ದರೂ ಆದಿವಾಸಿ ಕುಟುಂಬಗಳ ಅಭಿವೃದ್ಧಿ ಕಡೆಗಣಿಸಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆದಿವಾಸಿಗಳು ಜೀವನ ಸುಧಾರಿಸಲು ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿವೆ. ಆದರೆ, ಪರಿ ಣಾಮಕಾರಿಯಾಗಿ ಅನುಷ್ಠಾನವಾಗುತ್ತಿಲ್ಲ ಎಂದರು.

ಸರ್ಕಾರಗಳು ಆದಿವಾಸಿಗಳ ಏಳಿಗೆಗೆ ಕಾಯ್ದೆ ಗಳನ್ನು ರೂಪಿಸುವ ಮುನ್ನ ಆ ಫಲಾನುಭವಿಗಳ ಅನಿಸಿಕೆ ಮತ್ತು ಜೀವನ ಅಗತ್ಯತೆ ಬಗ್ಗೆ ಕೇಳುತ್ತಿಲ್ಲ. ಈ ಹಿನ್ನೆಲೆ ಯಲ್ಲಿ ಸರ್ಕಾರದ ಕಾರ್ಯಕ್ರಮಗಳು ವಿಫಲವಾಗು ತ್ತಿವೆ. ಆದ್ದರಿಂದ ದೇಶದ ಎಲ್ಲಾ ಆದಿವಾಸಿಗಳು ಒಗ್ಗೂಡಿ ತಮ್ಮ ಹಕ್ಕುಗಳ ರಕ್ಷಣೆಗೆ ಹೋರಾಟ ನಡೆಸುವುದು ಅನಿವಾರ್ಯ ಎಂದು ಅಭಿಪ್ರಾಯಪಟ್ಟರು.

ಒಳ ಮೀಸಲಾತಿ ಅಗತ್ಯ: ರಾಯಚೂರು ವಿವಿಯ ವಿಶೇಷಾಧಿಕಾರಿ ಪ್ರೊ.ಮುಜಾಫರ್ ಅಸಾದಿ ಮಾತ ನಾಡಿ, ಬಹಳಷ್ಟು ಆದಿವಾಸಿಗಳಿಗೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಅಳವಡಿಸಿರುವ ಮೀಸಲಾತಿ ಬಗ್ಗೆ ತಿಳಿವಳಿಕೆಯೇ ಇಲ್ಲ. ಆದ್ದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಆದಿವಾಸಿಗಳ ಅಭಿವೃದ್ಧಿಗೆ ಒಳ ಮೀಸ ಲಾತಿ ಕಾಯ್ದೆ ಜಾರಿಗೊಳಿಸಬೇಕು ಎಂದು ಒತ್ತಾಯಿ ಸಿದರು. ಪರಿಶಿಷ್ಟ ಪಂಗಡಕ್ಕೆ ಸೇರಿರುವ ಆದಿವಾಸಿಗಳು ಪ್ರಸ್ತುತ ಜಾರಿಯಲ್ಲಿರುವ ಮೀಸಲಾತಿ ಸೌಲಭ್ಯವನ್ನು ಪಡೆದಿಲ್ಲ. ಬದ ಲಾಗಿ ಇವರ ಹೆಸರಿನಲ್ಲಿ ಪರಿಶಿಷ್ಟ ಪಂಗಡದ ಮೇಲ್ವರ್ಗಗಳು ಮೀಸ ಲಾತಿ ಸೌಲಭ್ಯ ಅನುಭವಿಸು ತ್ತಿವೆ. ಈ ನಿಟ್ಟಿನಲ್ಲಿ ಆದಿವಾಸಿ ಗಳಿಗೆ ಮೀಸಲಾತಿ ಸೌಲಭ್ಯ ದೊರಕಬೇಕಾದರೆ, ಒಳ ಮೀಸಲಾತಿ ಅತ್ಯಗತ್ಯ ಎಂದು ಪ್ರತಿಪಾದಿಸಿದರು.

ಎನ್‍ಆರ್‍ಸಿ ಯೋಜನೆ ಜಾರಿಯಾದರೆ, ಆದಿವಾಸಿ ಗಳು ಇದಕ್ಕೆ ಬೇಕಾದ ಪೂರಕ ದಾಖಲಾತಿ ಒದಗಿ ಸುವುದು ಸವಾಲಿನ ವಿಷಯ. ಬಹುತೇಕ ಆದಿವಾಸಿ ಗಳಲ್ಲಿ ತಾವು ಭಾರತೀಯ ಪ್ರಜೆ ಎಂದು ದೃಢೀಕರಿ ಸುವ ದಾಖಲೆಗಳು ಅವರ ಬಳಿ ಇರುವುದಿಲ್ಲ. ಇನ್ನೂ ಮೂರು ತಲೆಮಾರಿನ ದಾಖಲೆ ಒದಗಿಸುವುದು ಕನಸಿನ ಮಾತು. ಈ ಹಿನ್ನೆಲೆಯಲ್ಲಿ ಬಹುತೇಕ ಆದಿವಾಸಿಗಳು ಎನ್‍ಆರ್‍ಸಿ ಜಾರಿಯಾದರೆ ದೇಶದ ಎಲ್ಲಾ ನಾಗರಿಕ ಹಕ್ಕುಗಳನ್ನು ಕಳೆದುಕೊಳ್ಳುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು. ಆದಿವಾಸಿಗಳು ದೇಶದೆಲ್ಲೆಡೆ ಇದ್ದಾರೆ. ಸದ್ಯ ಮಧ್ಯಪ್ರದೇಶ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಮಾತ್ರ ಆದಿವಾಸಿಗಳಿಗಾಗಿ ಪ್ರತ್ಯೇಕ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಿದ್ದು, ಇದು ದೇಶದ ಎಲ್ಲ ರಾಜ್ಯಗಳಲ್ಲೂ ಸ್ಥಾಪನೆಯಾಗಬೇಕು ಎಂದು ಪ್ರತಿಪಾದಿಸಿದರು. ವೇದಿಕೆಯಲ್ಲಿ ಶಾಸಕ ಎಸ್.ಎ. ರಾಮದಾಸ್, ತುಮಕೂರು ವಿವಿ ಕುಲಪತಿ ವೈ.ಎಸ್. ಸಿದ್ದೇಗೌಡ, ಡಾ.ಜೆರ್ರಿ ಪಯಾಸ್, ಆದಿವಾಸಿ ಸಮನ್ವಯ ಮಂಚ್ ಅಧ್ಯಕ್ಷ ಗುಜರಾತಿನ ಅಶೋಕ್ ಚೌಧರಿ, ಕಾರ್ಯದರ್ಶಿ ಅಮರ್‍ಸಿಂಗ್ ಚೌಧರಿ, ಕರ್ನಾಟಕ ರಾಜ್ಯದ ಆದಿವಾಸಿ ವೇದಿಕೆ ಅಧ್ಯಕ್ಷ ವಿಠ್ಠಲ್, ಕಾರ್ಯ ದರ್ಶಿ ಮುತ್ತಯ್ಯ, ಆದಿವಾಸಿ ಸಂಶೋಧನಾ ಸಂಸ್ಥೆಯ ಜಂಟಿ ನಿರ್ದೇಶಕಿ ಪ್ರತಿಭಾ, ಪ್ರೊ.ಎಚ್.ಪಿ.ಜ್ಯೋತಿ, ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಸ್.ಕುಮ್ರಾ ಮುಂತಾದವರು ಉಪಸ್ಥಿತರಿದ್ದರು.

Translate »