ಮೈಸೂರು,ಸೆ.7(ಎಂಕೆ)-ಎಲ್ಲರೂ ದೇಶದ ಆರ್ಥಿಕತೆ ಬಗ್ಗೆ ಮಾತ್ರ ಮಾತ ನಾಡುತ್ತಾರೆಯೇ ಹೊರತು ಪರಿಸರ ಸಂರ ಕ್ಷಣೆ, ನೈಸರ್ಗಿಕ ಸಂಪನ್ಮೂಲ ಕುರಿತು ಯಾರೂ ಚಿಂತಿಸುವುದಿಲ್ಲ ಎಂದು ಈಶಾ ಫೌಂಡೇಷನ್ ಮುಖ್ಯಸ್ಥ ಸದ್ಗುರು ಜಗ್ಗಿ ವಾಸುದೇವ್ ವಿಷಾದಿಸಿದರು. ಮೈಸೂರಿನ ವಿಜಯನಗರ 3ನೇ ಹಂತ ದಲ್ಲಿರುವ ಆಶಾ ಪ್ರಕಾಶ್ ಶೆಟ್ಟಿ ಬಂಟ್ಸ್ ಸಮುದಾಯ ಭವನದಲ್ಲಿ ಅಸೋಸಿ ಯೇಷನ್ ಇನ್ನರ್‍ವ್ಹೀಲ್ ಕ್ಲಬ್ ಆಫ್ ಇಂಡಿಯಾ ಹಾಗೂ ಇನ್ನರ್‍ವ್ಹೀಲ್ ಡಿಸ್ಟ್ರಿಕ್ಟ್ 318 ಮೈಸೂರು ವತಿಯಿಂದ ಆಯೋಜಿ ಸಿದ್ದ ‘ಮೈಲಿಗಲ್ಲು’ ಎರಡು ದಿನಗಳ ದಕ್ಷಿಣ ವಲಯ ಸಭೆ-2019…
ಚಾ.ಬೆಟ್ಟ ವ್ಯಾಪಾರಿಗಳೊಂದಿಗೆ ಅಧಿಕಾರಿಗಳ ಸಭೆ
September 8, 2019ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೆ ಅಂಗಡಿಗಳ ತೆರವುಗೊಳಿಸದಂತೆ ಮನವಿ ಮೈಸೂರು,ಸೆ.7(ಎಸ್‍ಬಿಡಿ)- ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೆ ನಮ್ಮನ್ನು ತೆರವು ಗೊಳಿಸಬೇಡಿ ಎಂದು ಚಾಮುಂಡಿ ಬೆಟ್ಟದ ವ್ಯಾಪಾರಿಗಳು ಮನವಿ ಮಾಡಿಕೊಂಡಿದ್ದಾರೆ. ಚಾಮುಂಡಿ ಬೆಟ್ಟದ ದಾಸೋಹ ಭವನ ದಲ್ಲಿ ಶನಿವಾರ ಅಪರ ಜಿಲ್ಲಾಧಿಕಾರಿ ಬಿ.ಆರ್. ಪೂರ್ಣಿಮಾ ಹಾಗೂ ಜಿ.ಪಂ. ಸಿಇಓ ಕೆ.ಜ್ಯೋತಿ ನೇತೃತ್ವದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ವ್ಯಾಪಾರಿಗಳು, ಸ್ಥಳೀಯ ಜನಪ್ರತಿ ನಿಧಿಗಳಿಂದ ಅಭಿಪ್ರಾಯ ಸಂಗ್ರಹಿಸಲಾಯಿತು. ಚಾಮುಂಡೇಶ್ವರಿ ಸನ್ನಿಧಿಯಲ್ಲಿ ದಶಕ ಗಳಿಂದ ವ್ಯಾಪಾರ ಮಾಡಿಕೊಂಡಿರುವ ನಮ್ಮನ್ನು ಏಕಾಏಕಿ ತೆರವುಗೊಳಿಸಬೇಡಿ. ಜೀವನ ನಿರ್ವಹಣೆಗೆ ವ್ಯಾಪಾರವನ್ನೇ…
ದಸರಾ ಗಜಪಡೆ 2ನೇ ತಂಡ ಸೆ.9ರಂದು ಅರಮನೆ ಆವರಣ ಪ್ರವೇಶ
September 8, 2019ಮೈಸೂರು,ಸೆ.7(ಎಂಟಿವೈ)- ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಗಜಪಡೆಯ ಎರಡನೇ ತಂಡದ 8 ಆನೆ ಸೆ.9ರಂದು ಸಂಜೆ ವಿವಿಧ ಕ್ಯಾಂಪ್ ಗಳಿಂದ ಮೈಸೂರು ಅರಮನೆ ಆವರಣಕ್ಕೆ ಆಗಮಿಸಲಿವೆ. ಈ ಸಾಲಿನ ದಸರಾ ಮಹೋತ್ಸವದಲ್ಲಿ 14 ಆನೆಗಳು ಪಾಲ್ಗೊಳ್ಳುತ್ತಿದ್ದು, ಆ.22 ರಂದು ಮೊದಲ ತಂಡದಲ್ಲಿ ಅಂಬಾರಿ ಆನೆ ಅರ್ಜುನ ನೇತೃತ್ವದಲ್ಲಿ ಅಭಿಮನ್ಯು, ಧನಂಜಯ, ಈಶ್ವರ, ವರಲಕ್ಷ್ಮೀ ಮತ್ತು ವಿಜಯ ಮೈಸೂರು ಅಶೋಕಪುರಂ ಅರಣ್ಯ ಭವನಕ್ಕೆ ಆಗಮಿಸಿ, ಆ.26ರಂದು ಅರಮನೆ ಅಂಗಳ ಪ್ರವೇಶಿಸಿದ್ದವು. ಜಂಬೂಸವಾರಿ 30 ದಿನ ಇರುವಂತೆ ಎರಡನೇ ತಂಡದ…
ಪಾರಂಪರಿಕ ಆಟಗಳ ಸ್ಪರ್ಧೆ
September 8, 2019ಮೈಸೂರು,ಸೆ.7-ಮೈಸೂರು ದಸರಾ ಮಹೋತ್ಸವ-2019ರ ಅಂಗವಾಗಿ ಪುರಾ ತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ವತಿಯಿಂದ ಅಕ್ಟೋಬರ್ 3ರಂದು ಬೆಳಿಗ್ಗೆ 10 ಗಂಟೆಗೆ ಪಾರಂಪರಿಕ ಆಟಗಳ ಸ್ಪರ್ಧೆಯನ್ನು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ಎಲ್ಲಾ ವಯೋಮಾನದವರಿಗೂ ಪಾರಂಪರಿಕ ಆಟಗಳ ಸ್ಪರ್ಧೆ ಯನ್ನು ಆಯೋಜಿಸಿದ್ದು, 10-16 ವರ್ಷದೊಳಗಿನ ಮಕ್ಕಳಿಗೆ ಕಣ್ಣಾ ಮುಚ್ಚಾಲೆ, ಕುಂಟಾಬಿಲ್ಲೆ, ಹಾವು-ಏಣಿ, ಗೋಲಿ, ಚೌಕಾಬಾರ ಮೂರು ಕಾಲಿನ ಓಟ ಆಟಗಳನ್ನು, 17-25 ವರ್ಷದೊಳಗಿನ ಯುವಕ-ಯುವತಿಯರಿಗೆ ಅಳಿಗುಳಿ ಮನೆ, ಹಗ್ಗ ಜಗ್ಗಾಟ, ಹಾವು-ಏಣಿ, ಗೋಲಿ, ಬಿಲ್ಲು…
ಸೆ.29ರಿಂದ ಆಹಾರ ಮೇಳ ಆರಂಭ
September 8, 2019ಮೈಸೂರುಸೆ.7-ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ನಿಮಿತ್ತ ದಸರಾ ಆಹಾರ ಮೇಳ ಉಪ ಸಮಿತಿಯ ವತಿಯಿಂದ ಆಹಾರ ಮೇಳವು ಸೆ.29 ರಿಂದ ಅ.10ರವರೆಗೆ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನ ಹಾಗೂ ಲಲಿತ್ ಮಹಲ್ ಪ್ಯಾಲೆಸ್ ಹೋಟೆಲ್ ಪಕ್ಕದ ಮುಡಾ ಮೈದಾನದಲ್ಲಿ ನಡೆಯಲಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮತೋಲನ ಆಹಾರ ಸೇವನೆಯಿಂದ ಆರೋಗ್ಯ ರಕ್ಷಣೆ
September 8, 2019ಮೈಸೂರು, ಸೆ.7(ಎಂಟಿವೈ)- ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕವಾದ ಸಮ ತೋಲನ ಆಹಾರ ಸೇವಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವಂತೆ ಮೈಸೂರು ವಿಶ್ವವಿದ್ಯಾ ನಿಲಯದ ಆಹಾರ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಅಸ್ನಾ ಉರೂಜ್ó ಸಲಹೆ ನೀಡಿದ್ದಾರೆ. ಮೈಸೂರಿನ ಚೆಲುವಾಂಬ ಆಸ್ಪತ್ರೆ ಆವರಣದಲ್ಲಿ ರುವ ಅರಿವು-ನೆರವು ಕೇಂದ್ರದ ಸಭಾಂಗಣದಲ್ಲಿ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ `ಪೋಷಣ್ ಅಭಿಯಾನ್’ ದಿನಾಚರಣೆ ಹಾಗೂ `ರಾಷ್ಟ್ರೀಯ ಪೋಷಣ್ ಸಪ್ತಾಹ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೆಚ್ಚುತ್ತಿರುವ ಜನಸಂಖ್ಯೆ ದೇಶದ…
ಇಸ್ರೋ ಕಾರ್ಯ ಅತ್ಯದ್ಭುತ: ವಿಜ್ಞಾನಿಗಳಿಗೆ ರಾಹುಲ್ ಗಾಂಧಿ ಅಭಿನಂದನೆ
September 8, 2019ನವದೆಹಲಿ,ಸೆ.7- ಚಂದ್ರಯಾನ-2 ಕಾರ್ಯಾಚರಣೆ ಭಾಗ ವಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ವಿಜ್ಞಾನಿಗಳ ಅದ್ಭುತ ಕಾರ್ಯಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಜ್ಞಾನಿಗಳನ್ನು ಶ್ಲಾಘಿಸಿದ್ದಾರೆ. ಚಂದ್ರಯಾನ-2 ಪ್ರಮುಖ ಹಂತವಾಗಿ ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗುವ ಪ್ರಕ್ರಿಯೆಯ ಕೊನೆಯ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡ ಬಳಿಕ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ಇಸ್ರೋ ತಂಡದ ಮಹತ್ವದ ಕಾರ್ಯಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.ನಿಮ್ಮ ಉತ್ಸಾಹ ಮತ್ತು ಸಮರ್ಪಣೆಯು ಪ್ರತಿ ಭಾರತ
ಇದು ಯಶಸ್ಸಿನ ಮುಂದೂಡಿಕೆ ಮಾತ್ರ, ನಿಮ್ಮೊಡನೆ ನಾವಿದ್ದೇವೆ: ಯಡಿಯೂರಪ್ಪ
September 8, 2019ಬೆಂಗಳೂರು, ಸೆ.7- ಭಾರತೀಯ ಬಾಹ್ಯಾಕಾಶ ಸಂಸೊಧನಾ ಸಂಸ್ಥೆ (ಇಸ್ರೋ) ಚಂದ್ರ ಯಾನ -2 ಭಾಗವಾದ ವಿಕ್ರಂ ಲ್ಯಾಂಡರ್ ಕಡೇ ಕ್ಷಣದಲ್ಲಿ ಸಂವಹನ ವನ್ನು ಕಳೆದುಕೊಂಡಿದೆ. ಇದರಿಂದಾಗಿ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯಬೇಕಾಗಿದ್ದ ವಿಕ್ರಂ ಸಾಫ್ಟ್ ಲ್ಯಾಂಡಿಂಗ್ ಆಗುವಲ್ಲಿ ತೊಡಕಾ ಗಿದ್ದು ವಿಜ್ಞಾನಿಗಳಿಗೆ ಭಾರೀ ನಿರಾಶೆಯಾಗಿದೆ. ಆದರೆ ಪ್ರಧಾನಿ ಮೋದಿ ಸೇರಿ ರಾಷ್ಟ್ರ ನಾಯಕರು ವಿಜ್ಞಾನಿಗಳಿಗೆ ಧೈರ್ಯ ತುಂಬಿದ್ದು ಇದು ವೈಫಲ್ಯವಲ್ಲ. ಕೇವಲ ಪ್ರಯೋಗ ಮಾತ್ರವೆಂದು ಹೇಳಿ ದೇಶದ ಸಾಧನೆ ಬಗೆಗೆ ಹೆಮ್ಮೆಯ ಮಾತನ್ನಾಡಿದ್ದಾರೆ. ಇನ್ನು ರಾಜ್ಯದ ಮುಖ್ಯಮಂತ್ರಿ…
ಶಾಸಕರಿಂದ ಒಳಚರಂಡಿ ಕೊಳವೆ ಕಾಮಗಾರಿ ಪರಿಶೀಲನೆ
September 8, 2019ಮೈಸೂರು, ಸೆ.7- ಮೈಸೂರಿನ ಅಶೋಕ ರಸ್ತೆಯ ಮಹದೇಶ್ವರ ದೇವಸ್ಥಾನದ ಬಳಿ ನಗರಪಾಲಿಕೆ ಅನುದಾನ 40 ಲಕ್ಷ ರೂ. ವೆಚ್ಚದಲ್ಲಿ ಪ್ರಗತಿಯಲ್ಲಿರುವ ಒಳಚರಂಡಿ ಕೊಳವೆ ಕಾಮಗಾರಿಯನ್ನು ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಶನಿವಾರ ಪರಿಶೀಲನೆ ನಡೆಸಿದರು. ದಸರಾಗೆ ಕೆಲವೇ ದಿನಗಳು ಬಾಕಿ ಇದ್ದು, ವಿವಿಧ ಭಾಗ ದಿಂದ ಪ್ರವಾಸಿಗರು ಭೇಟಿ ನೀಡುವ ಹಿನ್ನೆಲೆಯಲ್ಲಿ ಅಶೋಕ ರಸ್ತೆಯಲ್ಲಿ ಕೈಗೆತ್ತಿ ಕೊಂಡಿರುವ ಒಳಚರಂಡಿ ಕಾಮಗಾರಿಯನ್ನು ದಸರಾ ಆರಂಭಕ್ಕೆ ಮುನ್ನವೇ ಮುಗಿ ಸುವಂತೆ ಗುತ್ತಿಗೆದಾರರಿಗೆ ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವೇಳೆ…
ಚಂದಿರನ ನೆಲದಲ್ಲಿ ಭಾರತದ ‘ವಿಕ್ರಮ’
September 7, 2019ಬೆಂಗಳೂರು,ಸೆ.6- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮುಕುಟಕ್ಕೆ ಮಗ ದೊಂದು ಸಾಧನೆಯ ಗರಿ ಸೇರ್ಪಡೆಯಾಗುವ ಗಳಿಗೆ ಬಂದೇ ಬಿಟ್ಟಿದೆ. 2 ದಿನದಿಂದ ಅತ್ಯಂತ ಸಮೀಪ ದಿಂದ ಚಂದ್ರನನ್ನೇ ದಿಟ್ಟಿಸಿ ನೋಡುತ್ತಿರುವ ಭಾರತದ ಉಪಗ್ರಹ `ವಿಕ್ರಂ ಲ್ಯಾಂಡರ್’, ಸೆ.7ರ ಶನಿವಾರ ನಸುಕಿನ 1.55ರಲ್ಲಿ ಚಂದ್ರನ ಮೇಲೆ ಕಾಲೂರಲಿದೆ. ಆ ಅದ್ಭುತ ಕ್ಷಣವನ್ನು ಕಣ್ತುಂಬಿಕೊಳ್ಳಲು ಭಾರತ ವಷ್ಟೇ ಅಲ್ಲ, ಇಡೀ ಜಗತ್ತೇ ಎದುರು ನೋಡುತ್ತಿದೆ. ಈವರೆಗೆ ಮೂರು ದೇಶಗಳು ಚಂದ್ರನನ್ನು ಮುಟ್ಟಿ ಬಂದಿದ್ದರೂ, ಚಂದಮಾಮನ ದಕ್ಷಿಣ ಧ್ರುವದತ್ತ ಈವರೆಗೆ…










