ಮೈಸೂರು, ಸೆ.6(ಎಂಕೆ)- ಮೈಸೂರಿನ ವಿಜಯನಗರ 2ನೇ ಹಂತದಲ್ಲಿರುವ ಶ್ರೀ ಕಲಾನಿಕೇತನ ಸ್ಕೂಲ್ ಆಫ್ ಆರ್ಟ್ ಆವ ರಣದಲ್ಲಿ ಪಿ.ಆರ್.ತಿಪ್ಪೇಸ್ವಾಮಿ ಪ್ರತಿಷ್ಠಾನ ಹಾಗೂ ಕನ್ನಡ ಸಂಸ್ಕøತಿ ಇಲಾಖೆ ವತಿ ಯಿಂದ ಆಯೋಜಿಸಿರುವ ‘ಪಿ.ಆರ್.ತಿಪ್ಪೇ ಸ್ವಾಮಿ ಕಲಾ ಸಂಭ್ರಮ ಕಾರ್ಯಕ್ರಮ’ದಲ್ಲಿ ಚಿತ್ರಕಲಾ ಪ್ರಶಸ್ತಿಯನ್ನು ದಾವಣಗೆರೆಯ ಹಿರಿಯ ಚಿತ್ರಕಲಾವಿದ ಬಿ.ಆರ್.ಕೊರ್ತಿ ಹಾಗೂ ಜಾನಪದ ಕಲಾ ಪ್ರಶಸ್ತಿಯನ್ನು ಹಿರಿಯ ಜಾನಪದ ಕಲಾವಿದೆ ಮಂಜಮ್ಮ ಜೋಗತಿ ಅವರಿಗೆ ಜಾನಪದ ವಿಶ್ವವಿದ್ಯಾ ಲಯದ ವಿಶ್ರಾಂತ ಕುಲಪತಿ ಪೆÇ್ರ.ಅಂಬಳಿಕ ಹಿರಿಯಣ್ಣ ಪ್ರದಾನ ಮಾಡಿದರು. ಬಳಿಕ ಪೆÇ್ರ.ಅಂಬಳಿಕ ಹಿರಿಯಣ್ಣ…
ಶಿಕ್ಷಕ, ಶಿಕ್ಷಕೇತರ ಸಮಸ್ಯೆಗಳ ಬಗೆಹರಿಸುವ ಜವಾಬ್ದಾರಿ ಕುಲಪತಿಗಳದ್ದು
September 6, 2019ಮೈಸೂರು, ಸೆ.5(ಆರ್‍ಕೆಬಿ)- ಶಿಕ್ಷಕ ಮತ್ತು ಶಿಕ್ಷಕೇತರ ಸಮಸ್ಯೆಗಳನ್ನು ಬಗೆ ಹರಿಸಬೇಕಾದ ಜವಾಬ್ದಾರಿ ಕುಲಪತಿ ಗಳಿಗಿದ್ದು, ಅದನ್ನು ಮಾಡಬೇಕು. ಸುಮ್ಮನೆ ಸರ್ಕಾರ ಮತ್ತು ಸಿಂಡಿಕೇಟ್‍ಗೆ ಬರೆದಿ ದ್ದೇನೆ ಎಂದು ಹೇಳದೆ, ಅವುಗಳ ಬಗ್ಗೆ ಕಾಳಜಿ ಇಟ್ಟು ಕೆಲಸ ಮಾಡುವಂತೆ ವಿಶ್ರಾಂತ ಕುಲಪತಿ ಎಸ್.ಎನ್.ಹೆಗ್ಡೆ ತಿಳಿಸಿದರು. ಮೈಸೂರು ವಿವಿ ಕ್ರಾಫರ್ಡ್ ಹಾಲ್ ನಲ್ಲಿ ಗುರುವಾರ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಬಹಳ ಜವಾಬ್ದಾರಿಯುತ ಶ್ರೇಷ್ಠ ಹುದ್ದೆಯಾಗಿರುವ ಶಿಕ್ಷಕರು, ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ, ಅಧಿಕಾರಿಗಳು, ರಾಜಕೀಯ ಎಲಾ ಕ್ಷೇತ್ರಗಳಲ್ಲಿ…
ಶಿಕ್ಷಕ ಸಮುದಾಯ ನಮ್ಮ ದೇಶದ ದೊಡ್ಡ ಸಂಪತ್ತು
September 6, 2019ಮೈಸೂರು,ಸೆ.5(ಪಿಎಂ)-ಶಿಕ್ಷಕ ಸಮು ದಾಯ ನಮ್ಮ ದೇಶದ ದೊಡ್ಡ ಸಂಪತ್ತು ಎಂದು ವಸತಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಭಿಮಾನ ವ್ಯಕ್ತಪಡಿಸಿದರು. ಮೈಸೂರಿನ ಕಲಾಮಂದಿರದಲ್ಲಿ ಜಿಲ್ಲಾಡ ಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾ ಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ…
ಸಕಲ ಭಾಷೆಯ ಐಕ್ಯತೆ ಸಂಸ್ಕøತ ಭಾಷೆಯಲ್ಲಿದೆ ಪೇಜಾವರ ಶ್ರೀಗಳು ಅಭಿಮತ
September 6, 2019ಮೈಸೂರು, ಸೆ.5(ಎಂಕೆ)- ಸಕಲ ಭಾಷೆಯ ಐಕ್ಯತೆ ಸಂಸ್ಕøತ ಭಾಷೆ ಯಲ್ಲಿದ್ದು, ಭಾರತೀಯ ಹೃದಯ ಕಮಲ ಅರಳಬೇಕಾದರೆ ಸಂಸ್ಕøತ ಭಾಷೆ ಅಗತ್ಯವಾಗಿದೆ ಎಂದು ಉಡು ಪಿಯ ಪೇಜಾವರ ಮಠದ ಶ್ರೀ ವಿಶ್ವೇಶÀತೀರ್ಥ ಸ್ವಾಮೀಜಿ ಹೇಳಿದರು. ನಗರದ ಸರಸ್ವತಿಪುರಂನಲ್ಲಿರುವ ವಿಜಯ ವಿಠಲ ವಿದ್ಯಾಶಾಲಾ ಸಭಾಂಗಣದಲ್ಲಿ ವಿಜಯ ವಿಠಲ ಸಂಯುಕ್ತ ಪದವಿ ಪೂರ್ವ ಕಾಲೇಜು ವತಿಯಿಂದ ಆಯೋಜಿಸಿದ್ದ ‘ಸಂಸ್ಕøತೋತ್ಸವ-2019’ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೈನಂದಿನ ವ್ಯವಹಾರದಲ್ಲಿ ಸಂಸ್ಕøತ ಭಾಷೆಯನ್ನು ಬಳಸುವಂತಾಗಬೇಕು ಎಂದರು. ಎಲ್ಲಾ ಭಾಷೆಗಳ ಮೂಲ ಸಂಸ್ಕøತವಾಗಿದೆ. ಸಂಸ್ಕøತ…
ದಸರೆ ಮುಗಿಯುವವರೆಗೆ ಬೇರೆ ಯಾವುದೇ ಸಭೆಗಳ ನಡೆಸಬೇಡಿ, ಅಧಿಕಾರಿಗಳು, ಸಿಬ್ಬಂದಿಗಳಿಗೂ ರಜೆ ಇಲ್ಲ
September 6, 2019ಮೈಸೂರು, ಸೆ.5(ಆರ್‍ಕೆ)- ದಸರಾ ಮಹೋತ್ಸವ ಮುಗಿಯುವವರೆಗೂ ಬೇರೆ ಯಾವುದೇ ಸಭೆಗಳನ್ನು ನಡೆಸಬೇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಇಂದಿಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮೈಸೂರಿನ ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಗೆ ಕೆಲ ಅಧಿ ಕಾರಿಗಳು ಗೈರು ಹಾಜರಾಗಿರುವುದಕ್ಕೆ ನಗರಪಾಲಿಕೆ ಕೌನ್ಸಿಲ್ ಸಭೆ, ವೀಡಿಯೋ ಕಾನ್‍ಫರೆನ್ಸ್ ಸಭೆಗಳಿರುವುದು ಕಾರಣ ಎಂಬುದನ್ನು ತಿಳಿದ ಸಚಿವರು, ದಸರಾ ಮುಗಿಯುವವರೆಗೆ ಮೈಸೂರಲ್ಲಿ ಬೇರೆ ಯಾವ ಸಭೆಗಳನ್ನೂ ಆಯೋಜಿಸಬೇಡಿ ಎಂದು ತಾಕೀತು ಮಾಡಿದರು. ರಜೆಗೂ ಕತ್ತರಿ: ಕೆಲ ಅಧಿಕಾರಿಗಳು…
ಕೇಂದ್ರ ಸರ್ಕಾರದ ಕಾರ್ಮಿಕ, ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ
September 6, 2019ಮೈಸೂರು, ಸೆ.5(ಪಿಎಂ)- ಕೇಂದ್ರದ ಬಿಜೆಪಿ ಸರ್ಕಾರ ಕಾರ್ಪೋರೇಟ್ ಪರ ವಾಗಿದ್ದು, ಕಾರ್ಮಿಕರು ಹಾಗೂ ರೈತರ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಸೆಂಟರ್ ಆಫ್ ಇಂಡಿಯನ್ ಟ್ರೆಡ್ ಯೂನಿಯನ್ (ಸಿಎಟಿಯು) ಹಾಗೂ ಆಲ್ ಇಂಡಿಯಾ ಕಿಸಾನ್ ಸಭಾ ಜಂಟಿ ಆಶ್ರಯದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾ ಕಾರರು, ಕೇಂದ್ರ ಸರ್ಕಾರದ ವಿರುದ್ಧ ನಾನಾ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡುವ ಪ್ರಯತ್ನದಿಂದ ಸರ್ಕಾರ ಹಿಂದೆ…
ಅಂಧ, ಶ್ರವಣದೋಷವುಳ್ಳ ಮಕ್ಕಳ ಶಾಲೆ ಶಿಕ್ಷಕರಿಗೆ ಸನ್ಮಾನ
September 6, 2019ಮೈಸೂರು,ಸೆ.5(ಎಂಟಿವೈ)- ಶಿಕ್ಷಕರ ದಿನಾಚರಣೆ ಹಿನ್ನೆಲೆ ಯಲ್ಲಿ ಮೈಸೂರಿನ ಬಂಬೂಬಜಾರ್‍ನಲ್ಲಿರುವ ಸರ್ಕಾರಿ ಅಂಧ ಮತ್ತು ಶ್ರವಣದೋಷವುಳ್ಳ ಮಕ್ಕಳ ಶಾಲೆಯ ಶಿಕ್ಷಕರನ್ನು ಇನ್ನರ್ ವ್ಹೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಬಂಬೂಬಜಾರ್ ಶಾಲಾ ಆವರಣದಲ್ಲಿ ಗುರುವಾರ ಮಧ್ಯಾಹ್ನ ನಡೆದ ಕಾರ್ಯಕ್ರಮದಲ್ಲಿ ಶಾಲೆಯ 12 ಶಿಕ್ಷಕರನ್ನು ಶಿಕ್ಷಕರ ದಿನದ ಹಿನ್ನೆಲೆಯಲ್ಲಿ ಗೌರವಿಸಿ, ಪುರ ಸ್ಕರಿಸಲಾಯಿತು. ಮಕ್ಕಳಿಗೆ ಪಾಠ-ಪ್ರವಚನಕ್ಕೆ ತೊಡಕಾಗದಂತೆ ಕಾರ್ಯಕ್ರಮವನ್ನು ಭೋಜನ ವಿರಾಮದಲ್ಲಿ ನಡೆಸಲಾಯಿತು. ಶಾಲೆಯ ಮುಖ್ಯ ಶಿಕ್ಷಕ ಸತೀಶ್, ಶಿಕ್ಷಕರಾದ ಅರುಣ್‍ಕುಮಾರ್, ಶಿವಕುಮಾರ್, ಉದಯ್ ಕುಮಾರ್,…
ಒಂದೇ ದಿನದಲ್ಲಿ ಮೀಟರ್ ಕಡ್ಡಿಗಳಿಗೆ ಮುದ್ರೆ ಹಾಕಿಸಿಕೊಂಡ 125ಕ್ಕೂ ಹೆಚ್ಚು ವರ್ತಕರು
September 6, 2019ಮೈಸೂರು, ಸೆ.5(ಆರ್‍ಕೆಬಿ)- ಮೈಸೂರು ಜವಳಿ ಮತ್ತು ಸಿದ್ಧ ಉಡುಪುಗಳ ವರ್ತಕರ ಸಂಘದ ಆಶ್ರಯ ದಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖೆ ವತಿಯಿಂದ ಗುರುವಾರ ಮೈಸೂರಿನ ದೇವರಾಜ ಅರಸು ರಸ್ತೆ ಶಿವಾಯನ ಮಠ ರಸ್ತೆಯ ಸಂಘದ ಕಚೇರಿಯಲ್ಲಿ ಜವಳಿ ವರ್ತಕರು ಬಳಸುವ ಮೀಟರ್ ಅಳತೆ ಕಡ್ಡಿಗಳಿಗೆ ಅಧಿಕೃತ ಮುದ್ರೆ ಹಾಕುವ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆದ ಶಿಬಿರದಲ್ಲಿ 125ಕ್ಕೂ ಹೆಚ್ಚು ಜವಳಿ ವರ್ತಕರು ತಮ್ಮ ಅಂಗಡಿಯ ಮೀಟರ್ ಅಳತೆ ಕಡ್ಡಿಗಳನ್ನು ಕಚೇರಿಗೆ ತಂದು ಕಾನೂನು ಮಾಪನ ಶಾಸ್ತ್ರ…
ಸೆ.8ರಂದು ಮೈಸೂರಲ್ಲಿ ಸಾಮೂಹಿಕ ಗಣಪತಿ ಮೆರವಣಿಗೆ, ವಿಸರ್ಜನೆ
September 6, 2019ಮೈಸೂರು, ಸೆ.5- ನಗರ ಸಾಮೂಹಿಕ ವಿನಾಯಕ ವಿಸರ್ಜನಾ ಮಂಡಳಿ ವತಿಯಿಂದ 16ನೇ ವರ್ಷದ ಭವ್ಯ ಮೆರ ವಣಿಗೆ ಮಾಹಿತಿ ಕರ ಪತ್ರ ಹಾಗೂ ಪ್ರಚಾರ ಸಾಮಗ್ರಿಗಳನ್ನು ಶ್ರೀ ಪೇಜಾವರ ಶ್ರೀಗಳು ಕೃಷ್ಣಧಾಮದಲ್ಲಿ ಬಿಡು ಗಡೆಗೊಳಿಸಿದರು. ನಗರದಲ್ಲಿ ಬೇರೆ ಬೇರೆ ಕಡೆಗಳಲ್ಲಿ ಪ್ರತಿಷ್ಠಾಪಿಸಿರುವ ಗಣಪತಿ ವಿಗ್ರಹಗಳನ್ನು ಒಂದೆಡೆ ಸೇರಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಸಾಮೂಹಿಕವಾಗಿ ವಿಸರ್ಜನೆ ಮಾಡುವ ಕಾರ್ಯ ಕ್ರಮವನ್ನು ಕಳೆದ 16 ವರ್ಷದಿಂದ ಮಂಡಳಿ ಹಮ್ಮಿಕೊಂಡು ಬಂದಿದೆ. ಅದೇ ರೀತಿ ಈ ವರ್ಷವೂ ಸೆ.8ರ ಭಾನುವಾರ…
ಇಂದು ಮೈಸೂರಲ್ಲಿ ಒಕ್ಕಲಿಗರ ಸಭೆ
September 6, 2019ಮೈಸೂರು, ಸೆ.5(ಆರ್‍ಕೆಬಿ)- ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಬಂಧನ ವನ್ನು ಖಂಡಿಸಿ, ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಸಂಬಂಧ ರೂಪುರೇಷೆ ಸಿದ್ಧಪಡಿ ಸಲು ಸೆ.6ರಂದು ಬೆಳಿಗ್ಗೆ 10.30 ಗಂಟೆಗೆ ಮೈಸೂರಿನ ವಿದ್ಯಾ ರಣ್ಯಪುರಂ ಒಕ್ಕಲಿಗರ ಸಮು ದಾಯ ಭವನದಲ್ಲಿ ಮೈಸೂರು ಜಿಲ್ಲಾ ಒಕ್ಕಲಿಗರ ಸಂಘ (ಚಾಮ ರಾಜನಗರ ಜಿಲ್ಲೆ ಒಳಗೊಂಡು)ದ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಸಂಘದ ಅಧ್ಯಕ್ಷ ಜಿ.ಮಂಜು ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭೆಯಲ್ಲಿ ಕೇಂದ್ರ, ರಾಜ್ಯ…










