ಬೆಂಗಳೂರು,ಸೆ.4(ಕೆಎಂಶಿ)-ಹವಾಲಾ ಹಣ ವರ್ಗಾವಣೆ ಪ್ರಕ ರಣಕ್ಕೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ವಿಚಾರಣೆ ಮುಗಿದಿದೆ ಎಂದಿದ್ದ ಜಾರಿ ನಿರ್ದೇಶನಾಲಯ ನಂತರ ಮೇಲಧಿಕಾರಿಗಳ ನಿರ್ದೇ ಶನದ ಹಿನ್ನೆಲೆಯಲ್ಲಿ ಹಠಾತ್ತನೆ ಬಂಧನಕ್ಕೊಳಪಡಿಸಿತು ಎಂದು ಸಹೋದರ ಹಾಗೂ ಸಂಸದ ಡಿ.ಕೆ.ಸುರೇಶ್ ಆರೋಪಿಸಿದ್ದಾರೆ. ದೆಹಲಿಯ ರಾಮಮನೋಹರ ಲೋಹಿಯಾ ಆಸ್ಪತ್ರೆ ಎದುರು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇಡಿ ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೂ ತಮ್ಮ ಸಹೋದರ ಸಮರ್ಪಕ ಉತ್ತರ ಕೊಟ್ಟಿದ್ದಾರೆ. ಆದರೂ 2 ವರ್ಷಗಳ ಹಿಂದೆ ನಡೆದ ಆದಾಯ ತೆರಿಗೆ ದಾಳಿ ಸಂದರ್ಭದಲ್ಲಿ ಬೇರೆ ಮನೆಗಳಲ್ಲಿ…
ನಟರು ಪ್ರೇಕ್ಷಕರನ್ನು ನಿರ್ಲಕ್ಷ್ಯ ಮಾಡಬಾರದೆಂಬ ನಿಲುವು ಹೊಂದಿದ್ದ ಮೇರು ವ್ಯಕ್ತಿತ್ವದ ಗುಬ್ಬಿ ವೀರಣ್ಣ
September 4, 2019ಮೈಸೂರು, ಆ.31(ಪಿಎಂ)- ರಂಗಭೂಮಿ ಕಲಾವಿ ದರು ಪ್ರೇಕ್ಷಕರನ್ನು ನಿರ್ಲಕ್ಷ್ಯ ಮಾಡಬಾರದೆಂದು ಹೇಳು ತ್ತಿದ್ದ ಗುಬ್ಬಿ ವೀರಣ್ಣ, ನಟರಿಗೆ ನಾಟಕ ಕಂಪನಿ ಮಾಲೀ ಕರು ಗೌರವ ನೀಡಬೇಕೆಂಬ ನಿಲುವು ಹೊಂದಿದ್ದವರು ಎಂದು ಗುಬ್ಬಿ ವೀರಣ್ಣನವರ ಮೊಮ್ಮಗಳೂ ಆದ ರಂಗಕರ್ಮಿ ಡಾ.ಬಿ.ಜಯಶ್ರೀ ಹೇಳಿದರು. ಮೈಸೂರು ವಿವಿ ಗುಬ್ಬಿ ವೀರಣ್ಣ ರಂಗಪೀಠದ ವತಿಯಿಂದ ಮಾನಸಗಂಗೋತ್ರಿಯ ಲಲಿತಕಲಾ ಕಾಲೇಜು ಸಭಾಂಗಣ ದಲ್ಲಿ ಹಮ್ಮಿಕೊಂಡಿದ್ದ ರಂಗಧ್ವನಿ ಉಪನ್ಯಾಸ ಮಾಲಿಕೆ-1ರ ಉದ್ಘಾಟನಾ ಸಮಾರಂಭದಲ್ಲಿ `ಡಾ.ಗುಬ್ಬಿ ವೀರಣ್ಣರ ಬದುಕು-ಸಾಧನೆ’ ಕುರಿತು ಅವರು ಮಾತನಾಡಿದರು. ನಟರು ಪ್ರೇಕ್ಷಕರ ಅಪೇಕ್ಷೆ…
CBI ತನಿಖೆ ಆರಂಭ
September 2, 2019ಬೆಂಗಳೂರು, ಸೆ.1-ರಾಜ್ಯದಲ್ಲಿ ತೀವ್ರ ಸಂಚಲನ ಉಂಟು ಮಾಡಿರುವ, ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ದ್ದಾಗ ನಡೆದಿದೆ ಎನ್ನಲಾದ ಫೋನ್ ಟ್ಯಾಪಿಂಗ್ ಪ್ರಕರಣದ ತನಿಖೆಯನ್ನು ಸಿಬಿಐ ಇಂದು ಆರಂಭಿಸಿದೆ. ರಾಜಕಾರಣಿಗಳು, ಗಣ್ಯವ್ಯಕ್ತಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಪತ್ರ ಕರ್ತರ ಫೋನ್ ಟ್ಯಾಪಿಂಗ್ ಮಾಡಲಾ ಗಿದೆ ಎಂಬ ಆರೋಪದಡಿ ದಾಖಲಾಗಿ ರುವ ಪ್ರಕರಣದ ವಿಚಾರಣೆಗಾಗಿ ಸಿಬಿಐ ತಂಡ ಇಂದು ಮುಂಜಾನೆ ಬೆಂಗಳೂರಿಗೆ ಆಗಮಿಸಿತು. ಸಿಬಿಐ ಎಸ್ಪಿ ಕಿರಣ್ ನೇತೃತ್ವ ದಲ್ಲಿ ಓರ್ವ ಡಿವೈಎಸ್ಪಿ, ಮೂವರು ಇನ್ಸ್ ಪೆಕ್ಟರ್‍ಗಳಿರುವ ತಂಡವು ಭಾನುವಾರ ಮುಂಜಾನೆ…
ಶೂಟಿಂಗ್ ವಿಶ್ವಕಪ್: ಚಿನ್ನ ಗೆದ್ದ ಯಶಸ್ವಿನಿ ಒಲಂಪಿಕ್‍ಗೆ ಅರ್ಹತೆ
September 2, 2019ರಿಯೋ ಡಿ ಜನೈರೋ, ಸೆ.1- ಬ್ರೆಜಿಲ್‍ನ ರಿಯೋ ಡಿ ಜನೈರೊದಲ್ಲಿ ನಡೆಯುತ್ತಿರುವ ಶೂಟಿಂಗ್ ವಿಶ್ವಕಪ್‍ನಲ್ಲಿ ಭಾರತದ ಶೂಟರ್ ಯಶಸ್ವಿನಿ ಸಿಂಗ್ ದೇಸ್ವಾಲ್ ರಾಷ್ಟ್ರ ಕ್ಕಾಗಿ 9ನೇ ಒಲಿಂಪಿಕ್ ಕೋಟಾವನ್ನು ಪಡೆದರು ಮತ್ತು ಭಾನುವಾರ ಮುಂಜಾನೆ ನಡೆದ ಐಎಸ್‍ಎಸ್‍ಎಫ್ ವಿಶ್ವಕಪ್ ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದು ವಿಶ್ವ ಚಾಂಪಿಯನ್ ಆದರು. 22 ವರ್ಷದ ಯಶಸ್ವಿನಿ ಫೈನಲ್ ಹಂತದಲ್ಲಿ ವಿಶ್ವ ನಂ.1 ಶೂಟರ್ ಉಕ್ರೇನ್‍ನ ಒಲಿನಾ ಕೋಸ್ಟೆವಿಚ್ ಅವರನ್ನು ಹಿಂದಿಕ್ಕಿ ಒಟ್ಟಾರೆ 236.7 ಪಾಯಿಂಟ್‍ಗಳೊಂದಿಗೆ…
ರಾಜಕಾರಣದಲ್ಲಿ ನಂಬಿಕೆ ಅನ್ನೊ ಪದಕ್ಕೆ ಅರ್ಥ ಇಲ್ಲದಂತಾಗಿದೆ
September 2, 2019ಮೈಸೂರು, ಸೆ.1(ಎಂಕೆ)- ರಾಜಕಾರಣದಲ್ಲಿ ಯಾರನ್ನ ನಂಬೋದು ಅನ್ನೊದೇ ಗೊತ್ತಾಗ್ತಿಲ್ಲ. ನಾನೇ ಟಿಕೆಟ್ ಕೊಟ್ಟವರು ಶಾಸಕರಾಗಿ ನಂತರ ನನ್ನ ವಿರುದ್ಧವೇ ನಿಂತಿದ್ದಾರೆ. ಇಂದಿನ ರಾಜ ಕೀಯದಲ್ಲಿ ನಂಬಿಕೆ ಅನ್ನೊ ಪದಕ್ಕೆ ಅರ್ಥ ಇಲ್ಲದಂತಾಗಿದೆ ಎಂದು ಮಾಜಿ ಸಿಎಂ ಸಿದ್ದ ರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು. ಮೈಸೂರಿನ ರಾಮಕೃಷ್ಣನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾ ಡಿದ ಅವರು, ಬೈ ಎಲೆಕ್ಷನ್‍ಗೆ ನಾವು ರೆಡಿಯಾ ಗಿದ್ದು, ಮಧ್ಯಂತರ ಚುನಾವಣೆಗೂ ರೆಡಿಯಾಗಿ ಎಂದು ಕಾರ್ಯಕರ್ತರಿಗೆ ಹೇಳಿದ್ದೇನೆ. ನಿನ್ನೆ ದಕ್ಷಿಣ ಕನ್ನಡಕ್ಕೆ ಹೋಗಿದ್ದೆ. ಆಗ ನಮ್ಮ…
ಇಂದಿನಿಂದ ಸ್ವಿಸ್ ಬ್ಯಾಂಕ್ ಖಾತೆ ರಹಸ್ಯ ಭಾರತಕ್ಕೆ ರವಾನೆ
September 2, 2019ನವದೆಹಲಿ, ಸೆ.1- ಭಾರತ ಹಾಗೂ ಸ್ವಿಸ್ ಬ್ಯಾಂಕ್‍ನ ರಹಸ್ಯಗಳು ದಶಕಗಳ ಹಳೆಯ ಸುದ್ದಿಯಾಗಿದೆ. ಆದರೆ ಇಂದಿ ನಿಂದ ಸ್ವಿಸ್ ಬ್ಯಾಂಕಿನ ಖಾತೆಗಳು ರಹಸ್ಯ ವಾಗಿರಲು ಸಾಧ್ಯವಿಲ್ಲ. ಸ್ವಿಸ್ ಖಾತೆಯ ಲ್ಲಿನ ಎಲ್ಲಾ ಮಾಹಿತಿಗಳು ಇನ್ನು ನೇರ ವಾಗಿ ಭಾರತ ಸರ್ಕಾರಕ್ಕೆ ಇಂದಿನಿಂದ ರವಾನೆಯಾಗಲಿದೆ. 2018 ಕ್ಯಾಲೆಂಡರ್ ವರ್ಷದಿಂದ ಹಿಡಿದು ಸ್ವಿಸ್ ಬ್ಯಾಂಕ್‍ನಲ್ಲಿನ ಎಲ್ಲಾ ಭಾರತೀಯರ ಖಾತೆಗಳ ಮಾಹಿತಿ ಇಂದಿನಿಂದ ಭಾರತಕ್ಕೆ ವರ್ಗಾವಣೆಯಾಗಲಿದೆ. ಖಾತೆದಾರರ ವಿವರ, ಹಣ, ವರ್ಗಾ ವಣೆ, ಖಾತೆ ರದ್ದತಿ ಸೇರಿ ಪ್ರತಿ ವಿವರಗಳು ಕೂಡ…
ಗೌರಿ-ಗಣೇಶ ಮೂರ್ತಿಗಳ ಭರ್ಜರಿ ಮಾರಾಟ
September 2, 2019ಮೈಸೂರು, ಸೆ.1(ಎಂಟಿವೈ)- ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಭಾನುವಾರ ಮೈಸೂರಿನಲ್ಲಿ ಗೌರಿ-ಗಣೇಶ ಮೂರ್ತಿ ಹಾಗೂ ಪೂಜಾ ಸಾಮಗ್ರಿಗಳ ಮಾರಾಟ ಭರ್ಜರಿಯಾಗಿ ನಡೆಯಿತು. ಮೈಸೂರಿನ ದೇವರಾಜ ಮಾರುಕಟ್ಟೆ, ಧನ್ವಂತರಿ ರಸ್ತೆ, ಶೇಷಾದ್ರಿ ಅಯ್ಯರ್ ರಸ್ತೆ, ಅಗ್ರಹಾರ ವೃತ್ತ, ರಾಮಕೃಷ್ಣನಗರ ವೃತ್ತ, ಕುವೆಂಪುನಗರ, ಪಡುವಾರಹಳ್ಳಿ, ಒಂಟಿ ಕೊಪ್ಪಲು, ಕುಂಬಾರಕೊಪ್ಪಲು, ಟೆರೆಷಿ ಯನ್ ಕಾಲೇಜು ವೃತ್ತ ಸೇರಿದಂತೆ ವಿವಿ ಧೆಡೆ ಹೂವು, ಹಣ್ಣು, ಬಾಳೆಕಂಬ, ಮಾವಿನ ಸೊಪ್ಪು ಸೇರಿದಂತೆ ಪೂಜಾ ಸಾಮಗ್ರಿಗಳ ಮಾರಾಟ ಉತ್ತಮವಾಗಿ ಸಾಗಿತು. ಬೆಳಗ್ಗಿ ನಿಂದ ಮಧ್ಯಾಹ್ನದವರೆಗೂ ತುಂತುರು ಹನಿ…
ಭಾರತೀಯ ಸೇನಾ ಉಪ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ನಾರವಾನೆ ಅಧಿಕಾರ ಸ್ವೀಕಾರ
September 2, 2019ನವದೆಹಲಿ, ಸೆ.1- ಈಸ್ಟರ್ನ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಮನೋಜ್ ಮುಕುಂದ್ ನಾರವಾನೆ ಅವರು ಸೇನಾ ಸಿಬ್ಬಂದಿ ಉಪ ಮುಖ್ಯಸ್ಥ ರಾಗಿ ಅಧಿಕಾರ ವಹಿಸಿಕೊಂಡರು. ಲೆಫ್ಟಿನೆಂಟ್ ಜನ ರಲ್ ದೇವರಾಜ್ ಅನ್ಬು ಅವರಿಂದ ಖಾಲಿಯಾದ ಸ್ಥಾನವನ್ನು ನಾರವಾನೆ ಅಲಂಕರಿಸಿದ್ದಾರೆ. ಲೆಫ್ಟಿನೆಂಟ್ ಜನರಲ್ ನಾರವಾನೆ, ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ಭಾರತೀಯ ಮಿಲಿಟರಿ ಅಕಾಡೆಮಿಯ ಹಳೆಯ ವಿದ್ಯಾರ್ಥಿ ಎಂದು ಭಾರತೀಯ ಸೇನೆಯ ವಕ್ತಾರ ಕರ್ನಲ್ ಅಮನ್ ಆನಂದ್ ಹೇಳಿದ್ದಾರೆ. ಜೂನ್ 1980ರಲ್ಲಿ ಅವರನ್ನು 7ನೇ ಬೆಟಾಲಿಯನ್, ದಿ ಸಿಖ್ ಲೈಟ್…
ಮೂಲ ಆಶಯ ತಿರುಚಿ ಸಮಾಜ ಒಡೆಯಲಾಗುತ್ತಿದೆ
September 2, 2019ಮೈಸೂರು,ಸೆ.1(ಪಿಎಂ)-ಮೂಲ ಆಶಯಗಳನ್ನು ತಿರುಚಿ ಸಮಾಜ ಒಡೆಯಲಾಗುತ್ತಿದೆ ಎಂದು ಗಾಂಧಿ ವಾದಿ, ಹಿರಿಯ ರಂಗಕರ್ಮಿ ಪ್ರಸನ್ನ ವಿಷಾದಿಸಿದರು. ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ದೇಸಿರಂಗ ಸಾಂಸ್ಕøತಿಕ ಸಂಸ್ಥೆ ವತಿಯಿಂದ ರಾಜ ಶೇಖರ ಕೋಟಿ ಸ್ಮರಣಾರ್ಥ ಭಾನುವಾರ ಹಮ್ಮಿ ಕೊಂಡಿದ್ದ `ಸಾಮಾಜಿಕ ಚಳುವಳಿ ಮತ್ತು ಪತ್ರಿಕೆಗಳು’ ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜಾತಿ ಸೇರಿದಂತೆ ಎಲ್ಲಾ ಸಂಕೇತ ಗಳ ಮೂಲ ಆಶಯ ಒಳ್ಳೆಯದೇ. ಆದರೆ ಅವು ಗಳನ್ನು ತಿರುಚಿ ಸಮಾಜ ಒಡೆಯಲಾಗುತ್ತಿದ್ದು, ಇದಕ್ಕೆ ಯುವ ಸಮುದಾಯ ಬಲಿಯಾಗಬಾರದು. ಎಲ್ಲರೂ…
ನೆರೆ ಪರಿಹಾರ ಕಾಮಗಾರಿ ಸಮರ್ಪಕವಾಗಿ ನಡೆಸಲು ಆಗ್ರಹ: ವಾಟಾಳ್ ನಾಗರಾಜ್ ಪ್ರತಿಭಟನೆ
September 2, 2019ಮೈಸೂರು, ಸೆ.1(ಪಿಎಂ)- ರಾಜ್ಯದ ನೆರೆ ಹಾವಳಿ ಪರಿಹಾರ ಕಾರ್ಯ ಸಮರ್ಪಕ ವಾಗಿ ನಡೆಸುತ್ತಿಲ್ಲ ಎಂದು ಆರೋಪಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಭಾನುವಾರ ಪ್ರತಿ ಭಟನೆ ನಡೆಸಿದರು. ಮೈಸೂರಿನ ರೈಲ್ವೆ ನಿಲ್ದಾಣ ದಲ್ಲಿ ಪ್ರತಿಭಟನೆ ನಡೆಸಿದ ಅವರು, ರಾಜ್ಯ ದಲ್ಲಿ ನೆರೆಯಿಂದ ಸಾವಿರಾರು ಕೋಟಿ ರೂ. ನಷ್ಟ ಉಂಟಾಗಿದೆ. ಉತ್ತರ ಕರ್ನಾಟಕ ಬಹು ತೇಕ ಮುಳುಗಡೆಯಾಗಿದೆ. ಕೊಡಗು ನೆರೆ ಯಿಂದ ತೀವ್ರತರ ಸಂಕಷ್ಟ ಎದುರಿಸುತ್ತಿದೆ. ಮೈಸೂರು-ಚಾಮರಾಜನಗರ ಜಿಲ್ಲೆಗಳಲ್ಲೂ ನೆರೆಯ ಆರ್ಭಟಕ್ಕೆ ಜನತೆ ನಲುಗಿದ್ದಾರೆ….










