CBI ತನಿಖೆ ಆರಂಭ
ಮೈಸೂರು

CBI ತನಿಖೆ ಆರಂಭ

September 2, 2019

ಬೆಂಗಳೂರು, ಸೆ.1-ರಾಜ್ಯದಲ್ಲಿ ತೀವ್ರ ಸಂಚಲನ ಉಂಟು ಮಾಡಿರುವ, ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ದ್ದಾಗ ನಡೆದಿದೆ ಎನ್ನಲಾದ ಫೋನ್ ಟ್ಯಾಪಿಂಗ್ ಪ್ರಕರಣದ ತನಿಖೆಯನ್ನು ಸಿಬಿಐ ಇಂದು ಆರಂಭಿಸಿದೆ.

ರಾಜಕಾರಣಿಗಳು, ಗಣ್ಯವ್ಯಕ್ತಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಪತ್ರ ಕರ್ತರ ಫೋನ್ ಟ್ಯಾಪಿಂಗ್ ಮಾಡಲಾ ಗಿದೆ ಎಂಬ ಆರೋಪದಡಿ ದಾಖಲಾಗಿ ರುವ ಪ್ರಕರಣದ ವಿಚಾರಣೆಗಾಗಿ ಸಿಬಿಐ ತಂಡ ಇಂದು ಮುಂಜಾನೆ ಬೆಂಗಳೂರಿಗೆ ಆಗಮಿಸಿತು. ಸಿಬಿಐ ಎಸ್ಪಿ ಕಿರಣ್ ನೇತೃತ್ವ ದಲ್ಲಿ ಓರ್ವ ಡಿವೈಎಸ್ಪಿ, ಮೂವರು ಇನ್ಸ್ ಪೆಕ್ಟರ್‍ಗಳಿರುವ ತಂಡವು ಭಾನುವಾರ ಮುಂಜಾನೆ ಬೆಂಗಳೂರಿಗೆ ಆಗಮಿಸಿ, ರಾಜ್ಯದ ಡಿಜಿ-ಐಜಿಪಿ ನೀಲಮಣಿ ರಾಜು ಅವರ ಆದೇಶದಂತೆ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಅವರು ನಡೆಸಿದ್ದ ತನಿಖಾ ವರದಿಯ ಮಾಹಿತಿ ಯನ್ನು ಪಡೆಯಿತು. ಈ ತಂಡವು ಸಂದೀಪ್ ಪಾಟೀಲ್ ಅವರನ್ನು ಭೇಟಿ ಮಾಡಿ ಅವರು ಸಲ್ಲಿಸಿದ್ದ ವರದಿಯ ಕುರಿತು ಕೆಲವು ಸ್ಪಷ್ಟನೆಗಳನ್ನೂ ಕೂಡ ಪಡೆಯಿತು ಎಂದು ಹೇಳಲಾಗಿದೆ.

ಈಗ ತನಿಖೆ ಆರಂಭಿಸಿರುವ ತಂಡಕ್ಕೆ ಬೆಂಗಳೂರಿನ ಗಂಗಾ ನಗರದಲ್ಲಿರುವ ಸಿಬಿಐ ಅಧಿಕಾರಿಗಳೂ ಕೂಡ ಸಹಕಾರ ನೀಡಲಿದ್ದಾರೆ. ಸಿಬಿಐನಲ್ಲಿ ಫೋನ್ ಟ್ಯಾಪಿಂಗ್ ಸಂಬಂಧ ಐಟಿ ಕಾಯ್ದೆ-2000 ಹಾಗೂ ಇಂಡಿಯನ್ ಟೆಲಿಗ್ರಾಫಿಕ್ ಕಾಯ್ದೆ -1885ರ ಅಡಿ ಈಗಾಗಲೇ ಪ್ರಕರಣ ದಾಖ ಲಾಗಿದೆ. ಈ ಪ್ರಕರಣ ಸಂಬಂಧ ಪ್ರಾಥ ಮಿಕ ತನಿಖಾ ವರದಿಯನ್ನೂ ಕೂಡ ಸಿಬಿಐ ಅಧಿಕೃತವಾಗಿ ಇಂದು ಪಡೆಯಿತು. ಪ್ರಕ ರಣದಲ್ಲಿ ಐಪಿಎಸ್ ಅಧಿಕಾರಿಗಳ ಹೆಸರು ಗಳೂ ಸಹ ಕೇಳಿಬಂದಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸಿಆರ್ ಪಿಸಿ-91ರ ಅಡಿ ನೋಟಿಸ್ ನೀಡಿ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.

ಮೈತ್ರಿ ಸರ್ಕಾರ ಪತನಗೊಂಡು ಯಡಿ ಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್ ಅವರನ್ನು ವರ್ಗಾವಣೆ ಮಾಡಿ ಭಾಸ್ಕರ್‍ರಾವ್ ಅವರನ್ನು ಆ ಸ್ಥಾನಕ್ಕೆ ನಿಯೋಜಿಸಲಾಗಿತ್ತು.

ಈ ವೇಳೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಹುದ್ದೆಗಾಗಿ ಮೈತ್ರಿ ಸರ್ಕಾರದ ಅವಧಿಯಲ್ಲಿ ಭಾಸ್ಕರ ರಾವ್ ನಡೆಸಿದ್ದ ಲಾಬಿ ಸಂಬಂಧ ಕೆಲವು ಆಡಿಯೋಗಳು ಬಿಡುಗಡೆ ಆಗಿ ಸಂಚಲನ ಮೂಡಿಸಿತ್ತು. ಅದೇ ವೇಳೆ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಮತ್ತು ಮೈತ್ರಿ ಸರ್ಕಾರ ಅಸ್ಥಿರತೆಯಲ್ಲಿದ್ದಾಗ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಸೂಚನೆ ಮೇರೆಗೆ ಫೋನ್ ಟ್ಯಾಪಿಂಗ್ ನಡೆದಿತ್ತು ಎಂಬ ಆರೋಪಗಳು ಕೇಳಿಬಂದಿದ್ದವು. ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಗ ವಿಪಕ್ಷ ನಾಯಕರಾಗಿದ್ದ ಯಡಿಯೂರಪ್ಪ, ಮೈತ್ರಿ ಸರ್ಕಾರದ ವಿರುದ್ಧ ಅತೃಪ್ತಿ ಹೊಂದಿ ಮುಂಬೈಗೆ ತೆರಳಿದ್ದ ಶಾಸಕರುಗಳು, ಅವರ ಆಪ್ತರು, ಪತ್ರಕರ್ತರು ಹಾಗೂ ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳ ಫೋನ್ ಗಳನ್ನು ಟ್ಯಾಪ್ ಮಾಡಲಾಗಿತ್ತು ಎಂಬ ಕೂಗು ಕೇಳಿಬಂದಿದ್ದು, ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನವನ್ನೇ ಮೂಡಿಸಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನವರು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿದ್ದರು ಎಂಬುದನ್ನು ಸ್ಮರಿಸಬಹುದು.

Translate »