ನೆರೆ ಪರಿಹಾರ ಕಾಮಗಾರಿ ಸಮರ್ಪಕವಾಗಿ ನಡೆಸಲು ಆಗ್ರಹ: ವಾಟಾಳ್ ನಾಗರಾಜ್ ಪ್ರತಿಭಟನೆ
ಮೈಸೂರು

ನೆರೆ ಪರಿಹಾರ ಕಾಮಗಾರಿ ಸಮರ್ಪಕವಾಗಿ ನಡೆಸಲು ಆಗ್ರಹ: ವಾಟಾಳ್ ನಾಗರಾಜ್ ಪ್ರತಿಭಟನೆ

September 2, 2019

ಮೈಸೂರು, ಸೆ.1(ಪಿಎಂ)- ರಾಜ್ಯದ ನೆರೆ ಹಾವಳಿ ಪರಿಹಾರ ಕಾರ್ಯ ಸಮರ್ಪಕ ವಾಗಿ ನಡೆಸುತ್ತಿಲ್ಲ ಎಂದು ಆರೋಪಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಭಾನುವಾರ ಪ್ರತಿ ಭಟನೆ ನಡೆಸಿದರು. ಮೈಸೂರಿನ ರೈಲ್ವೆ ನಿಲ್ದಾಣ ದಲ್ಲಿ ಪ್ರತಿಭಟನೆ ನಡೆಸಿದ ಅವರು, ರಾಜ್ಯ ದಲ್ಲಿ ನೆರೆಯಿಂದ ಸಾವಿರಾರು ಕೋಟಿ ರೂ. ನಷ್ಟ ಉಂಟಾಗಿದೆ. ಉತ್ತರ ಕರ್ನಾಟಕ ಬಹು ತೇಕ ಮುಳುಗಡೆಯಾಗಿದೆ. ಕೊಡಗು ನೆರೆ ಯಿಂದ ತೀವ್ರತರ ಸಂಕಷ್ಟ ಎದುರಿಸುತ್ತಿದೆ. ಮೈಸೂರು-ಚಾಮರಾಜನಗರ ಜಿಲ್ಲೆಗಳಲ್ಲೂ ನೆರೆಯ ಆರ್ಭಟಕ್ಕೆ ಜನತೆ ನಲುಗಿದ್ದಾರೆ. ಇಂತಹ ಸಂಕಷ್ಟದ ಪರಿಸ್ಥಿತಿ ಇದ್ದರೂ ರಾಜ್ಯ ಸರ್ಕಾರ ಕೇವಲ ಮಾತಿನ ಪರಿಹಾರ ನೀಡುತ್ತಿದೆ ಎಂದು ಟೀಕಿಸಿದರು.

ರಾಜ್ಯದ ನೆರೆ ಪರಿಹಾರಕ್ಕೆ ಸಂಬಂಧಿಸಿ ದಂತೆ ಪ್ರಾಮಾಣಿಕವಾಗಿ ಯೋಜನೆ ಸಿದ್ಧ ಪಡಿಸಿಲ್ಲ. ಸರ್ಕಾರ ಮೂಲಸೌಲಭ್ಯ ಒದಗಿ ಸುವಲ್ಲಿ ವಿಫಲವಾಗಿದೆ. ಅತ್ತ ಕೇಂದ್ರ ಸರ್ಕಾರ ಪರಿಹಾರದ ಅನುದಾನ ಬಿಡುಗಡೆ ಮಾಡಿಲ್ಲ. ಕೇರಳ, ತಮಿಳುನಾಡು ಆಗಿದ್ದರೆ ಪ್ರಧಾನಿ ನರೇಂದ್ರ ಮೋದಿಯವರು ಇಷ್ಟೊತ್ತಿಗಾ ಗಲೇ ಪರಿಹಾರದ ಹಣ ಬಿಡುಗಡೆ ಮಾಡು ತ್ತಿದ್ದರು. ಸೆ.7ರಂದು ರಾಜ್ಯಕ್ಕೆ ಆಗಮಿಸುತ್ತಿ ರುವ ಪ್ರಧಾನಿಗಳು ಇದೇ ವೇಳೆ ನೆರೆಯ ಮೊದಲ ಕಂತಾಗಿ 50 ಸಾವಿರ ಕೋಟಿ ರೂ. ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಟಿಪ್ಪು ಎಕ್ಸ್‍ಪ್ರೆಸ್ ಹೆಸರು ಬದಲಾವಣೆ ಬೇಡಿ: ರಾಜ್ಯ ಮತ್ತು ಕೇಂದ್ರ ಸರ್ಕಾರ ಗಳು ನೆರೆಗೆ ಸಂಬಂಧಿಸಿದಂತೆ ಸೂಕ್ತ ಪರಿಹಾರ ಕಾಮಗಾರಿ ಕೈಗೊಳ್ಳದಿದ್ದರೆ ಕನ್ನಡ ಒಕ್ಕೂಟದಿಂದ ಕರ್ನಾಟಕ ಬಂದ್‍ಗೆ ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಟಿಪ್ಪು ದೇಶ ಕಂಡ ಮಹಾನ್ ಹೋರಾಟಗಾರ. ಟಿಪ್ಪು ಎಕ್ಸ್‍ಪ್ರೆಸ್ ರೈಲಿನ ಹೆಸರು ಬದಲಾವಣೆಗೆ ಸರ್ಕಾರ ಕೈ ಹಾಕ ಬಾರದು. ಇದಕ್ಕೆ ನಾವು ಅವಕಾಶ ನೀಡು ವುದಿಲ್ಲ ಎಂದರು.

Translate »