ಸೆ.4,5ರಂದು ಪಿ.ಆರ್.ತಿಪ್ಪೇಸ್ವಾಮಿ ಕಲಾ ಸಂಭ್ರಮ, ಪ್ರಶಸ್ತಿ ಪ್ರದಾನ ಸಮಾರಂಭ
ಮೈಸೂರು

ಸೆ.4,5ರಂದು ಪಿ.ಆರ್.ತಿಪ್ಪೇಸ್ವಾಮಿ ಕಲಾ ಸಂಭ್ರಮ, ಪ್ರಶಸ್ತಿ ಪ್ರದಾನ ಸಮಾರಂಭ

September 2, 2019

ಮೈಸೂರು,ಸೆ.1(ಎಂಟಿವೈ)- ಮೈಸೂರಿನ ವಿಜಯನಗರದ ಶ್ರೀ ಕಲಾನಿಕೇತನ ಸ್ಕೂಲ್ ಆಫ್ ಆರ್ಟ್ ಆವರಣದಲ್ಲಿ ಸೆ.4 ಮತ್ತು 5ರಂದು ಹೆಸ ರಾಂತ ಕಲಾವಿದ ದಿ.ಪಿ.ಆರ್.ತಿಪ್ಪೇಸ್ವಾಮಿ ಕಲಾಸಂಭ್ರಮ, ಪ್ರಶಸ್ತಿ ಪ್ರದಾನ ಸಮಾರಂಭ, ರಾಜ್ಯಮಟ್ಟದ ಚಿತ್ರಕಲಾ ಪ್ರದರ್ಶನ, ಸ್ಪರ್ಧೆ ಗಳನ್ನು ಮೈಸೂರಿನಲ್ಲಿ ಏರ್ಪಡಿಸಲಾಗಿದೆ ಎಂದು ಪಿ.ಆರ್.ತಿಪ್ಪೇ ಸ್ವಾಮಿ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಕದಂಬ ತಿಳಿಸಿದ್ದಾರೆ.

ಜಿಲ್ಲಾ ಪತ್ರಕರ್ತರ ಭÀವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಪಿ.ಆರ್.ತಿಪ್ಪೇಸ್ವಾಮಿ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಕಳೆದ ಐದು ವರ್ಷಗಳಿಂದ ಒಬ್ಬರಿಗೆ ಪ್ರಶಸ್ತಿ ನೀಡಿ 50 ಸಾವಿರ ರೂ. ನಗದು ಬಹುಮಾನ ನೀಡಲಾಗುತ್ತಿತ್ತು, ಈ ವರ್ಷದಿಂದ ಎರಡು ವಿಭಾಗಗಳಲ್ಲಿ ಒಬ್ಬರಿಗೆ ಪ್ರಶಸ್ತಿ ನೀಡಲಾಗುತ್ತಿದ್ದು, ತಲಾ 25 ಸಾವಿರ ರೂ. ನಗದು ಬಹುಮಾನ ನೀಡಲಾಗುತ್ತಿದೆ. ಈ ಬಾರಿ ದಾವಣಗೆರೆಯ ಚಿತ್ರ ಕಲಾವಿದ ಬಿ.ಆರ್.ಕೊರ್ತಿ ಮತ್ತು ಹೊಸಪೇಟೆಯ ಜಾನಪದ ಕಲಾವಿದೆ ಮಂಜಮ್ಮ ಜೋಗತಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸೆ.5ರಂದು ಸಂಜೆ 4.30ಕ್ಕೆ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಪ್ರಶಸ್ತಿ ಪ್ರದಾನ ಮಾಡಲಿದ್ದು, ಮೈಸೂರು ವಿವಿ ಕುಲಪತಿ ಪೆÇ್ರ.ಜಿ.ಹೇಮಂತಕುಮಾರ್ ಸಮಾರಂಭ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಅಡಗೂರು ಹೆಚ್.ವಿಶ್ವನಾಥ್ ಅಧ್ಯಕ್ಷ್ಷತೆ ವಹಿಸಲಿದ್ದಾರೆ ಎಂದರು.

ಸೆ.4ರಂದು ಬೆಳಿಗ್ಗೆ 10.30ಕ್ಕೆ ಮಕ್ಕಳ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ. ಸೆ.5ರಂದು ಬೆಳಗ್ಗೆ 11.30ಕ್ಕೆ ರಾಜ್ಯಮಟ್ಟದ ಚಿತ್ರಕಲಾ ಪ್ರದರ್ಶನವನ್ನು ರಂಗಾಯಣ ನಿರ್ದೇಶಕಿ ಭಾಗೀರಥಿಬಾಯಿ ಕದಂ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಚಿತ್ರಕಲಾ ಕ್ಷೇತ್ರ-ಪಿಆರ್‍ಟಿ ಮತ್ತು ಜನಪದ ಕ್ಷೇತ್ರ-ಪಿಆರ್‍ಟಿ ವಿಷಯ ಕುರಿತು ವಿಚಾರ ಸಂಕಿರಣ ನಡೆಯ ಲಿದೆ. ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಗೆ 200ಕ್ಕೂ ಹೆಚ್ಚು ಕಲಾಕೃತಿಗಳು ಬಂದಿವೆ. ಇದರಲ್ಲಿ ಅತ್ಯುತ್ತಮವಾದ 9 ಕಲಾಕೃತಿಗಳನ್ನು ಆಯ್ಕೆ ಮಾಡಿ 9 ಜನ ಕಲಾವಿದರಿಗೆ ತಲಾ 5 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. ಅಲ್ಲದೇ ಮಕ್ಕಳ ಚಿತ್ರಕಲಾ ಸ್ಪರ್ಧೆಯು ನಾಲ್ಕು ವಿಭಾಗಗಳಲ್ಲಿ ನಡೆಯಲಿದ್ದು, ಪ್ರತಿ ವಿಭಾಗದಲ್ಲೂ ಕ್ರಮವಾಗಿ 1 ಸಾವಿರ ರೂ., 750 ರೂ. ಹಾಗೂ 500 ರೂ. ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಕಾರ್ಯ ದರ್ಶಿ ಕೆ.ಸಿ.ಮಹದೇವಶೆಟ್ಟಿ, ಖಜಾಂಚಿ ಪೆÇ್ರ.ಎಚ್.ಎಂ.ಪರಮೇಶ್ವರಯ್ಯ, ನಿರ್ದೇ ಶಕರುಗಳಾದ ಸಿ.ಚಿಕ್ಕಣ್ಣ, ಮಾನಸ, ಮೈಲಳ್ಳಿ ರೇವಣ್ಣ ಉಪಸ್ಥಿತರಿದ್ದರು.
¸
Àಂಗೀತ ಸುಧೆಯಲ್ಲಿ ವಿದ್ಯಾಭೂಷಣ್ ಗಾನ ಸುಧೆ
ಮೈಸೂರು, ಸೆ.1(ಎಂಕೆ)- ಮೈಸೂರಿನ ಸರಸ್ವತಿಪುರಂನಲ್ಲಿರುವ ಕೃಷ್ಣಧಾಮದಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯ ವ್ರತ ಆಚರಣೆ ಯಲ್ಲಿ ಶನಿವಾರ ಆಯೋಜಿಸಿದ್ದ ‘ಸಂಗೀತ ಸುಧೆ’ಯಲ್ಲಿ ಪದ್ಮಭೂಷಣ ಪ್ರಶಸ್ತಿ ಪುರಸ್ಕøತ ಡಾ.ವಿದ್ಯಾಭೂಷಣ್ ಹಾಗೂ ಮೇಧಾ ವಿದ್ಯಾಭೂಷಣ್ ಅವರ ಗಾಯನ ಸಂಗೀತ ಪ್ರಿಯರ ಮನಗೆದ್ದಿತು. ವ್ಯಾಸರಾಜರು ಹಾಗೂ ಪುರಂದರದಾಸರು ರಚಿತ ಪದಗಳನ್ನು ಹಾಡುವ ಮೂಲಕ ಕಲಾಭಿಮಾನಿಗಳ ತಲೆ ತೂಗುವಂತೆ ಮಾಡಿದರು. ಖ್ಯಾತ ಗಾಯಕ ಡಾ.ವಿದ್ಯಾಭೂಷಣ್ ಅವರು, ‘ಅಭಿಮಾ ಭೀಮ, ಮದ್ವಾಮುನಿಯ ನೆನೆದು ಬದುಕಿರೋ’, ಆಂಜನೇಯನ ಕುರಿತಾದ ‘ಹನುಮತವೇ ಹರಿಯ ಮತವು’, ‘ವೀರ ಹನುಮ ಬಹು ಪರಾಕ್ರಮ’, ‘ಎಂತಾಬಲವಂತನೋ ಕುಂತಿಯ ಕಾಂತನು’ ಹಾಡುಗಳನ್ನು ಹಾಡಿ ಕಲಾರಸಿಕರ ಮನತಣಿಸಿದರು.

ಬಳಿಕ ಡಾ. ವಿದ್ಯಾಭೂಷಣ್ ಮಗಳಾದ ಮೇಧಾ ವಿದ್ಯಾಭೂಷಣ್ ಅವರು, ‘ನಮ್ಮ ಶಾರದೆ ಉಮಾ ಮಹೇಶ್ವರಿ’, ಗುಬ್ಬಿ ಹಾಡೋ ರಂಗ ಗುಬ್ಬಿ ಹಾಡೋ’, ಗೋವರ್ಧನ ಗಿರಿವಾಸ ಶ್ರೀನಿವಾಸ’, ‘ಕೃಷ್ಣ ನೀ ಬೇಗನೆ ಬಾರೋ’, ‘ಹರಿ ಸ್ಮರಣೆ ಮಾಡೋ ನಿರಂತರ’ ಹಾಡುಗಳನ್ನು ಹಾಡಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದರು.

ಉಡುಪಿ ಪೇಜಾವರ ಮಠದ ಹಿರಿಯ ಶ್ರೀಗಳಾದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಸಾಂಸ್ಕೃತಿಕ ಕಾರ್ಯಕ್ರಮದ ಕಾರ್ಯಾಧ್ಯಕ್ಷ ಎಸ್.ರವಿಕುಮಾರ್ ಉಪಸ್ಥಿತರಿದ್ದರು.

Translate »