ಅಕ್ಟೋಬರ್ ನಲ್ಲಿ ಹುಣಸೂರು, ಕೆ.ಆರ್.ಪೇಟೆ ಸೇರಿದಂತೆ ರಾಜ್ಯದ 17 ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ
ಮೈಸೂರು

ಅಕ್ಟೋಬರ್ ನಲ್ಲಿ ಹುಣಸೂರು, ಕೆ.ಆರ್.ಪೇಟೆ ಸೇರಿದಂತೆ ರಾಜ್ಯದ 17 ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ

September 1, 2019

ಬೆಂಗಳೂರು, ಆ.31(ಕೆಎಂಶಿ)-ಮಾಜಿ ಸಚಿವ ಹೆಚ್.ವಿಶ್ವನಾಥ್ ಅವರು ಪ್ರತಿನಿಧಿ ಸುತ್ತಿದ್ದ ಹುಣಸೂರು ಸೇರಿದಂತೆ ರಾಜ್ಯದ 17 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ ತಿಂಗಳಲ್ಲಿ ಉಪಚುನಾವಣೆ ನಡೆಯಲಿದೆ.

ಆಯೋಗದ ಉನ್ನತ ಮೂಲಗಳ ಪ್ರಕಾರ ವಿಧಾನಸಭಾ ಅವಧಿ ಪೂರ್ಣಗೊಳ್ಳುತ್ತಿ ರುವ ಮಹಾರಾಷ್ಟ್ರ, ಹರಿಯಾಣ, ಛತ್ತೀಸ್ ಗಢ ರಾಜ್ಯಗಳಿಗೆ ಚುನಾವಣೆ ನಡೆಯ ಲಿದ್ದು, ಈ ಸಂದರ್ಭದಲ್ಲೇ ರಾಜ್ಯದಲ್ಲೂ ಉಪಚುನಾವಣೆ ಜರುಗಲಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನ 14, ಜೆಡಿಎಸ್‍ನ ಮೂವರು ಸದಸ್ಯರು ಈ ಕ್ಷೇತ್ರಗಳಲ್ಲಿ ಆಯ್ಕೆಗೊಂಡಿದ್ದು, ಅವರು ಇತ್ತೀಚೆಗೆ ತಮ್ಮ ಸ್ಥಾನಕ್ಕೆ ರಾಜೀ ನಾಮೆ ನೀಡಿ, ಮೈತ್ರಿ ಸರ್ಕಾರ ಅಧಿಕಾರ ದಿಂದ ಕೆಳಗಿಳಿಯುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಅಂದಿನ ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ರಾಜೀನಾಮೆ ಅಂಗೀ ಕಾರಕ್ಕೂ ಮುನ್ನವೇ ಈ ಸದಸ್ಯರ ಸದಸ್ಯತ್ವ ವನ್ನು ಅನರ್ಹಗೊಳಿಸಿದ್ದರು. ಇದರಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂ ರಪ್ಪ ವಿಧಾನಸಭೆಯ ಬಲಾಬಲದ ಆಧಾ ರದ ಮೇಲೆ ಬಹುಮತ ಪಡೆದು, ಕುಮಾರ ಸ್ವಾಮಿ ನೇತೃತ್ವದ ಸರ್ಕಾರವನ್ನು ಕೆಳಗಿಳಿಸಿ, ಮುಖ್ಯಮಂತ್ರಿಯಾದರು. ಅನರ್ಹ ಗೊಂಡ ಶಾಸಕರು ಸಭಾಧ್ಯಕ್ಷರ ತೀರ್ಪನ್ನು ಪ್ರಶ್ನಿಸಿ, ಸುಪ್ರೀಂಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ಇನ್ನೂ ನ್ಯಾಯಾಲಯ ವಿಚಾರಣೆಗೆ ತೆಗೆದುಕೊಂಡಿಲ್ಲ. ಅತಂತ್ರಗೊಂಡಿರುವ ಈ ಅನರ್ಹರು ಮತ್ತೆ ತಮ್ಮ ರಾಜಕೀಯ ಭವಿಷ್ಯ ರೂಪಿಸಿಕೊಳ್ಳಲು ತೆರೆಮರೆಯಲ್ಲಿ ಭಾರೀ ರಾಜಕೀಯ ಯತ್ನ ನಡೆಸಿದ್ದಾರೆ. ಇವರ ಬೆಂಬಲಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ ಇದ್ದಾರೆ, ಅಲ್ಲದೆ ಅನರ್ಹಗೊಂಡಿರುವ ಎಂಟರಿಂದ ಹತ್ತು ಸದಸ್ಯರನ್ನು ತಮ್ಮ ಮಂತ್ರಿಮಂಡಲಕ್ಕೆ ಸೇರ್ಪಡೆ ಮಾಡಿಕೊಂಡು ಒಳ್ಳೆ ಖಾತೆ ನೀಡಲು ಅವರಿಗಾಗಿ ಸಚಿವ ಸ್ಥಾನವನ್ನು ಖಾಲಿ ಉಳಿಸಿಕೊಂಡಿದ್ದಾರೆ.

ಹೀಗಾಗಿ ಕರ್ನಾಟಕದ ಉಪಚುನಾವಣೆಗೂ ಅಂದೇ ದಿನಾಂಕ ನಿಗದಿಯಾಗಲಿದೆ. ಇದರ ಸುಳಿವರಿತಿರುವ ಬಿಜೆಪಿ ಉಪಸಮರಕ್ಕೆ ಸದ್ದಿಲ್ಲದೆ ಅಭ್ಯರ್ಥಿಗಳ ಶೋಧಕ್ಕೆ ಮುಂದಾಗಿದೆ. ಈಗಾಗಲೇ ಸದಸ್ಯತ್ವ ನೋಂದಣಿ ಅಭಿಯಾನದ ಮೂಲಕ ಮನೆ ಮನೆಗೆ ಸಂಪರ್ಕಿಸಿ ಮತದಾರರ ಸೆಳೆಯುವ ಪ್ರಯತ್ನವನ್ನು ಮಾಡಿದೆ.

ಮೈಸೂರಿನ ಹುಣಸೂರು, ಮಂಡ್ಯದ ಕೆ.ಆರ್.ಪೇಟೆ, ಬೆಂಗಳೂರಿನ ಕೆ.ಆರ್.ಪುರಂ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ರಾಜರಾಜೇಶ್ವರಿನಗರ, ಶಿವಾಜಿನಗರ, ಬೆಳಗಾವಿಯ ಗೋಕಾಕ್, ಅಥಣಿ, ಕಾಗವಾಡ, ಹಾವೇರಿಯ ಹಿರೇಕೆರೂರು, ರಾಣೆಬೆನ್ನೂರು, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಕ್ಷೇತ್ರಗಳಿಗೆ ಚುನಾವಣೆ ನಡೆಯಬೇಕಾಗಿದೆ. ಉಪ ಚುನಾವಣೆ ಯಾವುದೇ ಸಂದರ್ಭದಲ್ಲಿ ಎದುರಾಗಬಹುದೆಂಬ ಹಿನ್ನೆಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಈಗಾಗಲೇ ಸರಣಿ ಸಭೆಗಳನ್ನು ನಡೆಸಿ, ಆಯಾ ಕ್ಷೇತ್ರಗಳಲ್ಲಿ ಪರ್ಯಾಯ ಅಭ್ಯರ್ಥಿ ಗಳನ್ನು ಹುಡುಕುವ ಕೆಲಸ ಆರಂಭವಾಗಿದೆ. ಬಿಜೆಪಿ ಈ ವಿಷಯದಲ್ಲಿ ಇನ್ನೂ ಅತಂತ್ರದಲ್ಲಿದೆ. ಅನರ್ಹಗೊಂಡವರ ವಿಚಾರದಲ್ಲಿ ನ್ಯಾಯಾಲಯ ನೀಡುವ ತೀರ್ಪಿನ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ನಡೆಯಬೇಕು.

ಇದರ ನಡುವೆ ಕೇಂದ್ರ ಚುನಾವಣಾ ಆಯೋಗ ದೊಡ್ಡ ಪ್ರಮಾಣದಲ್ಲಿ ಕ್ಷೇತ್ರಗಳನ್ನು ಖಾಲಿ ಉಳಿಸಲು ಇಚ್ಛಿಸದ ಕಾರಣ ರಾಜೀನಾಮೆ ನೀಡಿ, ತೆರವಾದ ಕ್ಷೇತ್ರಗಳಿಗೆ ಆರು ತಿಂಗಳೊಳಗಾಗಿ ಚುನಾವಣೆ ನಡೆಸಬೇಕು. ಈ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಭಾರಿ ಸಿದ್ಧತೆ ಮಾಡಿಕೊಂಡಿದೆ. ಪ್ರಸ್ತುತ ವಿಧಾನಸಭೆಯ 224 ಕ್ಷೇತ್ರಗಳಲ್ಲಿ ಅನರ್ಹರಿಂದ 17 ಕ್ಷೇತ್ರಗಳು ತೆರವಾಗಿರುವುದರಿಂದ ಪ್ರಸ್ತುತ ವಿಧಾನಸಭೆ ಬಲ 207.

ಆಡಳಿತಾರೂಢ ಬಿಜೆಪಿ 105, ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ 100, ಬಿಎಸ್‍ಪಿ ಹಾಗೂ ಪಕ್ಷೇತರರು ತಲಾ ಒಬ್ಬರು ಹೊಂದಿದೆ. ಒಂದು ವೇಳೆ ಚುನಾವಣೆ ನಡೆದು, 224 ಸದಸ್ಯ ಬಲ ಪಡೆದರೆ ಆಡಳಿತದಲ್ಲಿರುವ ಪಕ್ಷ ವಿಧಾನಸಭೆಯಲ್ಲಿ 113 ಮ್ಯಾಜಿಕ್ ಸಂಖ್ಯೆಯನ್ನು ತೋರಿಸಬೇಕಾಗುತ್ತದೆ. ಆಡಳಿತಾರೂಢ ಬಿಜೆಪಿ ಈ ಸಂಖ್ಯೆ ತೋರಿಸಲು ಎಂಟು ಸದಸ್ಯರನ್ನು ಉಪ ಚುನಾವಣೆಯಲ್ಲಿ ಗೆಲ್ಲಿಸಿಕೊಳ್ಳಲೇಬೇಕಾಗಿದೆ.

Translate »