ಮೈಸೂರು,ಸೆ.1(ಪಿಎಂ)-ಮೂಲ ಆಶಯಗಳನ್ನು ತಿರುಚಿ ಸಮಾಜ ಒಡೆಯಲಾಗುತ್ತಿದೆ ಎಂದು ಗಾಂಧಿ ವಾದಿ, ಹಿರಿಯ ರಂಗಕರ್ಮಿ ಪ್ರಸನ್ನ ವಿಷಾದಿಸಿದರು.
ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ದೇಸಿರಂಗ ಸಾಂಸ್ಕøತಿಕ ಸಂಸ್ಥೆ ವತಿಯಿಂದ ರಾಜ ಶೇಖರ ಕೋಟಿ ಸ್ಮರಣಾರ್ಥ ಭಾನುವಾರ ಹಮ್ಮಿ ಕೊಂಡಿದ್ದ `ಸಾಮಾಜಿಕ ಚಳುವಳಿ ಮತ್ತು ಪತ್ರಿಕೆಗಳು’ ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜಾತಿ ಸೇರಿದಂತೆ ಎಲ್ಲಾ ಸಂಕೇತ ಗಳ ಮೂಲ ಆಶಯ ಒಳ್ಳೆಯದೇ. ಆದರೆ ಅವು ಗಳನ್ನು ತಿರುಚಿ ಸಮಾಜ ಒಡೆಯಲಾಗುತ್ತಿದ್ದು, ಇದಕ್ಕೆ ಯುವ ಸಮುದಾಯ ಬಲಿಯಾಗಬಾರದು. ಎಲ್ಲರೂ ಒಳಿತು ಮಾಡುತ್ತೇವೆಂದು ಹೇಳಿಕೊಂಡೇ ಹಿಂಸಾ ಮಾರ್ಗ ಹಿಡಿಯುತ್ತಿದ್ದು, ಜಾತಿ ವ್ಯವಸ್ಥೆ ಗಟ್ಟಿಗೊಳ್ಳ ಬೇಕೆಂದು ಪ್ರತಿಪಾದಿಸುವವರೂ ಅದು ಸಮಾಜದ ಒಳಿತಿಗಾಗಿಯೇ ಎಂದು ಹೇಳಿಕೊಳ್ಳುತ್ತಾರೆ. ಜಾತಿ ನೈಜ ಸಂಕೇತವನ್ನು ತಿರುಚಿ ನಮ್ಮದು ಸರಿ, ಅವ ರದು ಕೆಟ್ಟದ್ದು ಎಂದು ಬಡಿದಾಡುವ ಹಂತಕ್ಕೆ ತಲು ಪಿಸುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಯುವ ಸಮುದಾಯ ಈ ರೀತಿಯ ತಿರುಚಿದ ಸಂಕೇತಗಳಿಗೆ ಬಲಿಯಾಗದೇ ಯಾವುದೇ ಸಂಕೇತ ವಾದರೂ ಅದರ ಮೂಲ ಆಶಯ ಶೋಧಿಸಿ ನೋಡಬೇಕು. ಜನಿವಾರ ಜಾತಿಯ ಸಂಕೇತವಲ್ಲ, ಬದಲಿಗೆ ಅದು ಕೈ ಉತ್ಪನ್ನದ ಸಂಕೇತ. ಆದರೆ ಇಂದು ಜನಿವಾರ, ಶಿವದಾರದಿಂದ ಸಮಾಜ ಒಡೆಯ ಲಾಗುತ್ತಿದೆ ಎಂದು ವಿಷಾದಿಸಿದರು.
`ಇಂದಿರಾ ಅಂದರೆ ಇಂಡಿಯಾ’ ಆಗಿತ್ತು: ಪ್ರಸ್ತುತ ಒಂದು ದೇಶ, ಒಂದು ಪಕ್ಷ, ಒಂದು ಭಾಷೆ, ಒಂದು ಜಾತಿ ಹಾಗೂ ಒಬ್ಬ ನಾಯಕ ಎಂಬ ವಿಚಾರಗಳು ಮುನ್ನೆಲೆಗೆ ಬಂದಿವೆ. ಆ ಮೂಲಕ ವಿವಿಧತೆಯಲ್ಲಿ ಏಕತೆ, ಹಲವು ವಿಚಾರಗಳ ಸಂಗಮ, ಸಾಮರಸ್ಯ-ಸಹಬಾಳ್ವೆ ಎಂಬುದನ್ನು ಗುಡಿಸಿ ಹಾಕುವ ಪ್ರಯತ್ನ ನಡೆಯುತ್ತಿದೆ. ಈ ರೀತಿ ಏಕಚಕ್ರಾಧಿಪತ್ಯ ಪ್ರಯತ್ನ ಇಂದು ಮಾತ್ರವಲ್ಲ, 70ರ ದಶಕದಲ್ಲೂ ನಡೆದಿತ್ತು. 1975ರಲ್ಲಿ ನಾನು ನಿಮ್ಮಂತೆ ಯುವಕನಾಗಿದ್ದ ಸಂದರ್ಭ. ಆಗ ಇಡೀ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿತ್ತು. `ಇಂದಿರಾ ಅಂದರೆ ಇಂಡಿಯಾ’ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರ ವಿರುದ್ಧ ಹೋರಾಟಕ್ಕಿಳಿ ದವರನ್ನು ಜೈಲು ಪಾಲು ಮಾಡಲಾಗುತ್ತಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ಅಂದಿನ ತುರ್ತು ಪರಿಸ್ಥಿತಿಗೆ ಆರ್‍ಎಸ್‍ಎಸ್‍ನವರು ಬಲಿಪಶುವಾಗಬೇಕಾಯಿತು. ಆರ್‍ಎಸ್‍ಎಸ್ ಮುಖಂ ಡರು, ಸ್ವಯಂ ಸೇವಕರು ಯಾವ ಜೈಲಿನಲ್ಲಿ ಇದ್ದಾರೆ ಎಂದು ತಿಳಿಯದೇ ಅವರ ಪೋಷಕರು ಆತಂಕದಲ್ಲೇ ಕಾಲ ಕಳೆಯುಂತಾಗಿತ್ತು. ಆಗ ನನ್ನಂತವರು ಅವರ ಜೊತೆಯಲ್ಲಿ ನಿಂತು ಏಕಚಕ್ರಾಧಿಪತ್ಯದ ಅಪಾಯದ ವಿರುದ್ಧ ದನಿ ಎತ್ತಿದ್ದೆವು ಎಂದರು.
ಅನಾಹುತಕ್ಕೆ ನಾಂದಿ: ಮೊನ್ನೆ ಬೆಂಗಳೂರಿನಲ್ಲಿ ಕೆಲ ಕಾಶ್ಮೀರಿ ಯುವ ಜನರು ಅಲ್ಲಿನ ಪುರಭವನದ ಎದುರು ಸಣ್ಣ ಸಭೆ ನಡೆಸಲು ಮುಂದಾಗಿದ್ದರು. ಕಾಶ್ಮೀರದಲ್ಲಿ ರುವ ತಮ್ಮ ಪೋಷಕರಿಗೆ ಫೋನ್ ಕರೆಗೆ ಅವಕಾಶ ಕಲ್ಪಿಸಬೇಕೆಂದು ಅವರು ಬೇಡಿಕೆಯಾಗಿತ್ತು. ಇವರ ಸಭೆಗೆ ಆಕ್ಷೇಪ ವ್ಯಕ್ತಪಡಿಸಿ ಎಬಿವಿಪಿ ಸಂಘಟನೆಯ ಕಾರ್ಯ ಕರ್ತರು ಸ್ಥಳದಲ್ಲಿ ಜಮಾಯಿಸಿದ್ದರು. `ಇವರು ಜಮ್ಮು -ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದನ್ನು ವಿರೋಧಿಸಿ ಸಭೆ ನಡೆಸುತ್ತಿದ್ದಾರೆ. ನೀವೇಕೆ ಈ ಸಭೆ ಯಲ್ಲಿ ಪಾಲ್ಗೊಂಡಿದ್ದೀರಿ’ ಎಂದು ನನ್ನನ್ನೂ ಪ್ರಶ್ನಿಸಿ ದರು. ಆಗ ಅವರಿಗೆ ಕಾಶ್ಮೀರಿ ಯುವ ಜನರ ಸಮಸ್ಯೆ ಮನವರಿಕೆ ಮಾಡಿಕೊಟ್ಟೆ ಎಂದರು. ನಮ್ಮ ವಿಚಾ ರವೇ ಸರಿ, ನಾವೇ ದೇಶ, ನಮ್ಮಿಂದಲೇ ದೇಶ ನಾವು ಮಾತ್ರ ದೇಶ ಪ್ರೇಮಿಗಳು ಎಂಬ ಭಾವನೆ ಯಾರಿಗೂ ಇರಬಾರದು. ಇದ್ದರೆ ಅದು ಅನಾಹುತಕ್ಕೆ ನಾಂದಿ ಯಾಗುತ್ತದೆ ಎಂಬ ಕಾರಣಕ್ಕೆ ಬೆಂಗಳೂರಿನ ಈ ಪ್ರಸಂಗ ಹೇಳಬೇಕಾಯಿತು ಎಂದು ತಿಳಿಸಿದರು. ಸಂಸ್ಕøತಿ ಚಿಂತಕ ಜಗದೀಶ್ ಕೊಪ್ಪ, ದೇಸಿರಂಗದ ಕೃಷ್ಣಜನ ಮನ, ಬಿ.ಎಸ್.ದಿನಮಣಿ ಮತ್ತಿತರರು ಹಾಜರಿದ್ದರು.