ಮೈಸೂರು,ಸೆ.1(ಎಂಟಿವೈ)- ಮೈಸೂರಿನ ವಿಜಯನಗರದ ಶ್ರೀ ಕಲಾನಿಕೇತನ ಸ್ಕೂಲ್ ಆಫ್ ಆರ್ಟ್ ಆವರಣದಲ್ಲಿ ಸೆ.4 ಮತ್ತು 5ರಂದು ಹೆಸ ರಾಂತ ಕಲಾವಿದ ದಿ.ಪಿ.ಆರ್.ತಿಪ್ಪೇಸ್ವಾಮಿ ಕಲಾಸಂಭ್ರಮ, ಪ್ರಶಸ್ತಿ ಪ್ರದಾನ ಸಮಾರಂಭ, ರಾಜ್ಯಮಟ್ಟದ ಚಿತ್ರಕಲಾ ಪ್ರದರ್ಶನ, ಸ್ಪರ್ಧೆ ಗಳನ್ನು ಮೈಸೂರಿನಲ್ಲಿ ಏರ್ಪಡಿಸಲಾಗಿದೆ ಎಂದು ಪಿ.ಆರ್.ತಿಪ್ಪೇ ಸ್ವಾಮಿ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಕದಂಬ ತಿಳಿಸಿದ್ದಾರೆ. ಜಿಲ್ಲಾ ಪತ್ರಕರ್ತರ ಭÀವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಪಿ.ಆರ್.ತಿಪ್ಪೇಸ್ವಾಮಿ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಕಳೆದ ಐದು ವರ್ಷಗಳಿಂದ…
ಅಕ್ಟೋಬರ್ ನಲ್ಲಿ ಹುಣಸೂರು, ಕೆ.ಆರ್.ಪೇಟೆ ಸೇರಿದಂತೆ ರಾಜ್ಯದ 17 ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ
September 1, 2019ಬೆಂಗಳೂರು, ಆ.31(ಕೆಎಂಶಿ)-ಮಾಜಿ ಸಚಿವ ಹೆಚ್.ವಿಶ್ವನಾಥ್ ಅವರು ಪ್ರತಿನಿಧಿ ಸುತ್ತಿದ್ದ ಹುಣಸೂರು ಸೇರಿದಂತೆ ರಾಜ್ಯದ 17 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ ತಿಂಗಳಲ್ಲಿ ಉಪಚುನಾವಣೆ ನಡೆಯಲಿದೆ. ಆಯೋಗದ ಉನ್ನತ ಮೂಲಗಳ ಪ್ರಕಾರ ವಿಧಾನಸಭಾ ಅವಧಿ ಪೂರ್ಣಗೊಳ್ಳುತ್ತಿ ರುವ ಮಹಾರಾಷ್ಟ್ರ, ಹರಿಯಾಣ, ಛತ್ತೀಸ್ ಗಢ ರಾಜ್ಯಗಳಿಗೆ ಚುನಾವಣೆ ನಡೆಯ ಲಿದ್ದು, ಈ ಸಂದರ್ಭದಲ್ಲೇ ರಾಜ್ಯದಲ್ಲೂ ಉಪಚುನಾವಣೆ ಜರುಗಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನ 14, ಜೆಡಿಎಸ್‍ನ ಮೂವರು ಸದಸ್ಯರು ಈ ಕ್ಷೇತ್ರಗಳಲ್ಲಿ ಆಯ್ಕೆಗೊಂಡಿದ್ದು, ಅವರು ಇತ್ತೀಚೆಗೆ ತಮ್ಮ ಸ್ಥಾನಕ್ಕೆ ರಾಜೀ ನಾಮೆ…
ಎರಡನೇ ದಿನವೂ ಇಡೀ ದಿನ ಡಿಕೆಶಿಗೆ ಇಡಿ ಡ್ರಿಲ್
September 1, 2019ನವದೆಹಲಿ, ಆ. 31- ಅಕ್ರಮ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು 2ನೇ ದಿನವಾದ ಶನಿವಾರವೂ ನಿರಂತರವಾಗಿ ವಿಚಾರಣೆ ನಡೆಸಿದರು. ಸೋಮವಾರ ಬೆಳಿಗ್ಗೆ 11 ಗಂಟೆಗೆ ಮತ್ತೇ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿ ಗಳು ಡಿಕೆಶಿಗೆ ಸಮನ್ಸ್ ನೀಡಿದ್ದಾರೆ. ಸೋಮವಾರ ಗೌರಿ-ಗಣೇಶ ಹಬ್ಬವಿರುವ ಕಾರಣ ವಿಚಾರಣೆಗೆ ಹಾಜರಾಗುವು ದರಿಂದ ವಿನಾಯಿತಿ ನೀಡುವಂತೆ ಶಿವಕುಮಾರ್ ಮಾಡಿದ ಮನವಿಯನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ. ಶುಕ್ರವಾರ ರಾತ್ರಿ ಇಡಿ ವಿಚಾರಣೆ ಮುಗಿಸಿ ದೆಹಲಿ…
ಬಾಲಚಂದ್ರ ಜಾರಕಿಹೊಳಿ ಕೆಎಂಎಫ್ ನೂತನ ಅಧ್ಯಕ್ಷ
September 1, 2019ಬೆಂಗಳೂರು, ಆ. 31(ಕೆಎಂಶಿ)- ಜೆಡಿಎಸ್ ಮುಖಂಡ, ಮಾಜಿ ಸಚಿವ ಹೆಚ್.ಡಿ. ರೇವಣ್ಣ ಕರ್ನಾಟಕ ಸಹಕಾರಿ ಹಾಲು ಉತ್ಪಾ ದಕರ ಮಹಾಮಂಡಳಿ (ಕೆಎಂಎಫ್) ಅಧ್ಯಕ್ಷ ರಾಗುವ ಕನಸಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ತಣ್ಣೀರೆರಚಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಕೆಎಂಎಫ್ ಅಧ್ಯಕ್ಷರಾಗಲು ನಿರ್ದೇಶಕರನ್ನು ಬೆನ್ನ ಹಿಂದೆ ಕಟ್ಟಿಕೊಂಡು ತಿರುಗಿದ್ದ ರೇವಣ್ಣನಿಗೆ ಇಂದು ನಡೆದ ಚುನಾವಣೆಯಲ್ಲಿ ಆ ನಿರ್ದೇಶಕರೇ ನಿಲುವು ಬದಲಾಯಿಸಿದರು. ಅಧ್ಯಕ್ಷರಾಗಲು ಅನುಮೋದಕರು ಮತ್ತು ಸೂಚಕರು ಇಲ್ಲದಿರುವುದರಿಂದ ರೇವಣ್ಣ ನಾಮಪತ್ರ ಸಲ್ಲಿಸದ ಕಾರಣ ಮಾಜಿ ಸಚಿವ ಹಾಗೂ…
ದಸರಾ ವೆಬ್‍ಸೈಟ್, ಪೋಸ್ಟರ್ ಬಿಡುಗಡೆ
September 1, 2019ಮೈಸೂರು, ಆ.31(ಆರ್‍ಕೆ)- ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಾಗೂ ಶಾಸಕ ಎಸ್.ಎ.ರಾಮದಾಸ್ ಅವರು ಇಂದು ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ದಸರಾ ವೆಬ್‍ಸೈಟ್ ಹಾಗೂ ಪ್ರಚಾರ ಪೋಸ್ಟರ್ ಬಿಡುಗಡೆ ಮಾಡಿದರು. 2019ರ ಮೈಸೂರು ದಸರಾ ಮಹೋತ್ಸವ ಕುರಿತು ಎಲ್ಲಾ ಮಾಹಿತಿಗಳನ್ನು ಕನ್ನಡ, ಇಂಗ್ಲಿಷ್, ಅರೇಬಿಕ್, ಚೈನಿಸ್, ಡಚ್, ಫ್ರೆಂಚ್, ಜರ್ಮನ್, ಇಟಲಿಯನ್, ಪೋರ್ಚುಗೀಸ್, ರಷ್ಯನ್, ಸ್ಪಾನಿಷ್ ಸೇರಿದಂತೆ ಒಟ್ಟು 12 ಭಾಷೆಗಳಲ್ಲಿ ಪ್ರವಾಸಿಗರಿಗೆ ವೆಬ್‍ಸೈಟ್‍ನಲ್ಲಿ ನೀಡಲಾಗುವುದು ಎಂದು ಸಚಿವರು ತಿಳಿಸಿದರು. ಕಂಪ್ಯೂಟರ್, ಮೊಬೈಲ್, ಟ್ಯಾಬ್ ಕಂಪಾಟಿಬಲ್ ಮೂಲಕವೂ…
ಮೈಸೂರು ರಾಜ ಮಾರ್ಗದಲ್ಲಿ ಸಚಿವ ಸೋಮಣ್ಣ ರೌಂಡ್ಸ್
September 1, 2019ಮೈಸೂರು,ಆ.31(ಆರ್‍ಕೆ)-ದಸರಾ ಸಿದ್ಧತಾ ಕಾರ್ಯದಲ್ಲಿ ಸಕ್ರಿಯರಾಗಿರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಇಂದು ಬೆಳ್ಳಂಬೆಳಿಗ್ಗೆ ಮೈಸೂರಿನ ರಾಜಮಾರ್ಗದಲ್ಲಿ ಪಾದಯಾತ್ರೆ ನಡೆಸಿ, ಸ್ಥಿತಿ-ಗತಿಯನ್ನು ಪರಿಶೀಲಿಸಿದರು. ಬೆಳಿಗ್ಗೆ 6.30ಕ್ಕೆ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂದಿನಿಂದ ಪಾದಯಾತ್ರೆ ಆರಂಭಿಸಿದ ಸೋಮಣ್ಣ, ಬೆಳಿಗ್ಗೆ 9.30ಕ್ಕೆ ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನ ತಲುಪಿದರು. ಸಚಿವರಿಗೆ ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್. ನಾಗೇಂದ್ರ, ಮೇಯರ್ ಪುಷ್ಟಲತಾ ಜಗನ್ನಾಥ್ ಹಾಗೂ ಉಪ ಮೇಯರ್ ಶಫಿ ಅಹ್ಮದ್ ಸಾಥ್ ನೀಡಿದರು. ಡಸ್ಟ್‍ಬಿನ್ ಬದಲಿಸಿ: ಮುಖ್ಯಮಂತ್ರಿ…
ಪಂಜಿನ ಕವಾಯಿತು ಮೈದಾನದ ಅಭಿವೃದ್ಧಿಗೆ 30 ಕೋಟಿ ಅನುದಾನ ಕಲ್ಪಿಸಿ
September 1, 2019ಮೈಸೂರು,ಆ.31(ಆರ್‍ಕೆ)- ಮಳೆ ಯಿಂದ ರಕ್ಷಣೆ ಪಡೆಯಲು ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ವನ್ನಾಗಿ ಬನ್ನಿಮಂಟಪದ ಪಂಜಿನ ಕವಾ ಯಿತು ಮೈದಾನ ಅಭಿವೃದ್ಧಿ ಪಡಿಸಲು 30 ಕೋಟಿ ರೂ. ಅನುದಾನ ಕೊಡಿಸಿ ಎಂದು ಶಾಸಕ ತನ್ವೀರ್ ಸೇಟ್ ಅವರು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಗೆ ಇಂದಿಲ್ಲಿ ಮನವಿ ಮಾಡಿದರು. ಅರಮನೆಯಿಂದ ಜಂಬೂ ಸವಾರಿ ಸಾಗುವ ರಾಜಮಾರ್ಗದುದ್ದಕ್ಕೂ ಕಾಲ್ನ ಡಿಗೆ ಮೂಲಕ ಸಾಂಕೇತಿಕವಾಗಿ ಪರಿ ಶೀಲನೆ ನಡೆಸಿ ಬನ್ನಿಮಂಟಪ ತಲುಪಿದ ಸಚಿವರನ್ನು ಪಂಜಿನ ಕವಾಯಿತು ಮೈದಾನದಲ್ಲಿ ಸಂಪರ್ಕಿಸಿದ…
ಋಣ ಪರಿಹಾರ ಕಾಯ್ದೆ ಸೌಲಭ್ಯಕ್ಕೆ ಮುಗಿಬಿದ್ದ ಜನ
September 1, 2019ಮೈಸೂರು,ಆ.31(ಎಂಟಿವೈ)-ಮೈತ್ರಿ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದ `ಋಣ ಪರಿಹಾರ ಕಾಯ್ದೆ’ ಸೌಲಭ್ಯ ಪಡೆ ಯಲು ಜಿಲ್ಲೆಯ ವಿವಿಧೆಡೆಯಿಂದ ನಗರಕ್ಕೆ ಧಾವಿಸುತ್ತಿರುವ ಜನರು ಮೈಸೂರು ಜಿಲ್ಲಾ ಧಿಕಾರಿ ಕಚೇರಿಯಲ್ಲಿನ ಉಪ ವಿಭಾಗಾ ಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಲು ಮುಗಿ ಬೀಳುತ್ತಿದ್ದಾರೆ. ದಿನಕ್ಕೆ 2500ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗುತ್ತಿವೆ. ಖಾಸಗಿ ಲೇವಾದೇವಿದಾರರ ಹಾವಳಿ ತಡೆಗಟ್ಟುವುದರೊಂದಿಗೆ ಆರ್ಥಿಕವಾಗಿ ಜರ್ಝರಿತಗೊಂಡಿರುವ ಬಡ ಹಾಗೂ ಮಧÀ್ಯಮ ವರ್ಗದ ಜನರಿಗೆ ನೆರವಾಗ ಲೆಂದು ಹಿಂದಿನ ಸರ್ಕಾರ `ಕರ್ನಾಟಕ ಋಣ ಪರಿಹಾರ ಕಾಯ್ದೆ-2018’ ಜಾರಿಗೆ ತಂದಿತು. ಕಾಯ್ದೆಗೆ…
ಕರ್ನಾಟಕ ಋಣ ಪರಿಹಾರ ಕಾಯ್ದೆ ವ್ಯಾಪ್ತಿಯಿಂದ ತಮ್ಮನ್ನು ಕೈಬಿಡುವಂತೆ ಪಾನ್ ಬ್ರೋಕರ್ಸ್ ಮನವಿ
September 1, 2019ಮೈಸೂರು,ಆ.31(ಎಂಟಿವೈ)-ಸರ್ಕಾರಕ್ಕೆ ಎಲ್ಲಾ ಬಗೆಯ ತೆರಿಗೆ ಪಾವತಿಸಿ ಕಾನೂನು ಬದ್ಧವಾಗಿ ವ್ಯವಹಾರ ನಡೆ ಸುತ್ತಿರುವುದರಿಂದ ಕರ್ನಾಟಕ ಋಣ ಪರಿಹಾರ ಕಾಯ್ದೆ- 2018ರ ವ್ಯಾಪ್ತಿಗೆ ಪಾನ್ ಬ್ರೋಕರ್‍ಗಳನ್ನು ಸೇರಿಸದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪಾನ್ ಬ್ರೋಕರ್ಸ್ ಅಸೋಸಿಯೇಷನ್ ಮನವಿ ಸಲ್ಲಿಸಿದೆ. ಈ ಹಿಂದಿನ ಸರ್ಕಾರ ಜಾರಿಗೆ ತಂದಿರುವ ಕರ್ನಾ ಟಕ ಋಣ ಪರಿಹಾರ ಕಾಯ್ದೆಯಡಿ ಪಾನ್ ಬ್ರೋಕರ್ಸ್ ಗಳಲ್ಲಿ ಗಿರಿವಿ ಇಟ್ಟಿರುವ ಆಭರಣಗಳು ಬರಲಿರುವ ಹಿನ್ನೆಲೆಯಲ್ಲಿ ಈಗಾಗಲೇ ಮೈಸೂರು ಸೇರಿದಂತೆ ರಾಜ್ಯದೆಲ್ಲೆಡೆ ಆಕಾಂಕ್ಷಿಗಳು ಋಣ ಪರಿಹಾರ ಕಾಯ್ದೆಯಡಿ ಗಿರಿವಿ ಇಟ್ಟಿರುವ…
ವಿದ್ಯಾರ್ಹತೆ ನಿರ್ಬಂಧ ತೆರವು: ಇಂದಿನಿಂದ ಚಾಲನಾ ಪರಿಣಿತರೆಲ್ಲರಿಗೂ ಪರವಾನಗಿ
September 1, 2019ಮೈಸೂರು,ಆ.31(ಎಂಟಿವೈ)- ವಾಹನ ಚಾಲನಾ ಪರವಾನಗಿ ನೀಡಲು ಕಡ್ಡಾಯ ವಿದ್ಯಾರ್ಹತೆಯ ಮಾನದಂಡ ತೆಗೆದು ಹಾಕುವಂತೆ ನಡೆಸಿದ ನಾಲ್ಕು ವರ್ಷಗಳ ಹೋರಾ ಟಕ್ಕೆ ಜಯ ಸಂದಿದ್ದು, ಕೇಂದ್ರ ಸರ್ಕಾರ ನಿಯಮವನ್ನು ಸಡಿಲ ಗೊಳಿಸಿ ಆದೇಶ ಹೊರಡಿಸಿದೆ. ಸೆ. 1ರಿಂದ ಜಾರಿಗೆ ಬರುವಂತೆ ಚಾಲನೆಯಲ್ಲಿ ಪರಿ ಣತಿ ಹೊಂದಿರುವವರಿಗೆಲ್ಲಾ ಪರವಾನಗಿ ನೀಡಲಿದೆ ಎಂದು ಶಾಸಕ ಎಸ್.ಎ. ರಾಮದಾಸ್ ತಿಳಿಸಿದ್ದಾರೆ. ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ವಾಹನ ಚಾಲನಾ ಪರವಾನಗಿ ನೀಡಲು 8ನೇ ತರಗತಿ ವಿದ್ಯಾರ್ಹತೆ ಕಡ್ಡಾಯಗೊ ಳಿಸಲಾಗಿತ್ತು….










