ಋಣ ಪರಿಹಾರ ಕಾಯ್ದೆ ಸೌಲಭ್ಯಕ್ಕೆ ಮುಗಿಬಿದ್ದ ಜನ
ಮೈಸೂರು

ಋಣ ಪರಿಹಾರ ಕಾಯ್ದೆ ಸೌಲಭ್ಯಕ್ಕೆ ಮುಗಿಬಿದ್ದ ಜನ

September 1, 2019

ಮೈಸೂರು,ಆ.31(ಎಂಟಿವೈ)-ಮೈತ್ರಿ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದ `ಋಣ ಪರಿಹಾರ ಕಾಯ್ದೆ’ ಸೌಲಭ್ಯ ಪಡೆ ಯಲು ಜಿಲ್ಲೆಯ ವಿವಿಧೆಡೆಯಿಂದ ನಗರಕ್ಕೆ ಧಾವಿಸುತ್ತಿರುವ ಜನರು ಮೈಸೂರು ಜಿಲ್ಲಾ ಧಿಕಾರಿ ಕಚೇರಿಯಲ್ಲಿನ ಉಪ ವಿಭಾಗಾ ಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಲು ಮುಗಿ ಬೀಳುತ್ತಿದ್ದಾರೆ. ದಿನಕ್ಕೆ 2500ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗುತ್ತಿವೆ.

ಖಾಸಗಿ ಲೇವಾದೇವಿದಾರರ ಹಾವಳಿ ತಡೆಗಟ್ಟುವುದರೊಂದಿಗೆ ಆರ್ಥಿಕವಾಗಿ ಜರ್ಝರಿತಗೊಂಡಿರುವ ಬಡ ಹಾಗೂ ಮಧÀ್ಯಮ ವರ್ಗದ ಜನರಿಗೆ ನೆರವಾಗ ಲೆಂದು ಹಿಂದಿನ ಸರ್ಕಾರ `ಕರ್ನಾಟಕ ಋಣ ಪರಿಹಾರ ಕಾಯ್ದೆ-2018’ ಜಾರಿಗೆ ತಂದಿತು. ಕಾಯ್ದೆಗೆ 2019ರ ಜುಲೈ 16ರಂದು ರಾಷ್ಟ್ರಪತಿಗಳು ಅಂಕಿತ ಹಾಕಿ ದ್ದರು. ಈ ಕಾಯ್ದೆಯಡಿ 2019ರ ಜು.27ಕ್ಕೂ ಹಿಂದೆ ಗಿರಿವಿ ಇಟ್ಟಿರುವ ಆಭರಣ, ಅಡ ಮಾನವಿಟ್ಟಿರುವ ಭೂಮಿಯನ್ನು ಸರ್ಕಾ ರವೇ ಬಿಡಿಸಿಕೊಡಲಿದೆ. ಈ ಸಂಬಂಧ ಅರ್ಜಿ ಸ್ವೀಕರಿಸಲಾಗುತ್ತಿದ್ದು, ಆಯಾ ಜಿಲ್ಲೆಗಳಲ್ಲಿ ಉಪ ವಿಭಾಗಾಧಿಕಾರಿಗಳನ್ನು ನೋಡಲ್ ಅಧಿಕಾರಿಯಾಗಿ ನಿಯೋಜಿಸ ಲಾಗಿದೆ. ಆ.16ರಿಂದ ದಿನಕ್ಕೆ ಸರಾಸರಿ 2500 ಅರ್ಜಿ ಸಲ್ಲಿಕೆಯಾಗುತ್ತಿದ್ದು, ಇದು ವರೆಗೆ 11 ಸಾವಿರ ಅರ್ಜಿಗಳನ್ನು ಫಲಾನು ಭವಿಗಳು ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಲು ಅ.22ರಂದು ಕೊನೆ ದಿನವಾಗಿದೆ.

ವ್ಯಾಪ್ತಿ: ಋಣ ಪರಿಹಾರ ಕಾಯ್ದೆ ಸೌಲಭ್ಯ ಪಡೆಯಲು ಯಾವ ತಾಲೂಕಿ ನಲ್ಲಿ ಅಡಮಾನ ಇಟ್ಟಿರುತ್ತಾರೋ ಆ ವ್ಯಾಪ್ತಿಗೆ ಬರುವ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಮಂಡ್ಯ, ಚಾಮರಾಜನಗರ ಹಾಗೂ ಇನ್ನಿ ತರೆ ಜಿಲ್ಲೆಗಳಿಂದ ಬಂದು ಮೈಸೂರಿನಲ್ಲಿ ಆಭರಣ ಗಿರಿವಿ ಇಟ್ಟಿರುವವರು ಅರ್ಜಿ ಸಲ್ಲಿಸಲು ಮುಗಿಬೀಳುತ್ತಿದ್ದಾರೆ. ಇದರಿಂದ ಬೇರೆ ಜಿಲ್ಲೆಗೆ ಹೋಲಿಸಿದರೆ ಹೆಚ್ಚಿನ ಅರ್ಜಿ ಮೈಸೂರಿನಲ್ಲಿಯೇ ಸಂಗ್ರಹ ವಾಗುತ್ತಿವೆ. ಇಲ್ಲಿ ಸಲ್ಲಿಕೆಯಾಗುವ ಅರ್ಜಿ ಗಳನ್ನು ಪಡೆಯಲು ಪ್ರತ್ಯೇಕ ಕೌಂಟರ್ ತೆರೆದು, ಉತ್ತಮ ವ್ಯವಸ್ಥೆ ಮಾಡಿರುವುದು ಮೈಸೂರಿನಲ್ಲಿ ಮಾತ್ರ.

ಮೂರು ವರ್ಗದವರು ಅರ್ಜಿ ಸಲ್ಲಿಸ ಬಹುದು: ಋಣ ಪರಿಹಾರ ಕಾಯ್ದೆ ಸೌಲಭ್ಯ ವನ್ನು ಭೂರಹಿತ ಕೃಷಿ ಕಾರ್ಮಿಕರು, ದುರ್ಬಲ ವರ್ಗದವರು ಹಾಗೂ ಸಣ್ಣ ರೈತರು ಪಡೆದುಕೊಳ್ಳಬಹುದು. ಭೂರಹಿತ ಕೃಷಿ ಕಾರ್ಮಿಕರು ದೃಢೀಕರಿಸಿದ ಆಧಾರ್, ಪಡಿತರ ಚೀಟಿ ನಕಲು ಪ್ರತಿ, ಭೂರಹಿತ ಕೃಷಿ ಕಾರ್ಮಿಕ ಪ್ರಮಾಣ ಪತ್ರ, ಕುಟುಂಬದ ವಾರ್ಷಿಕ ವರಮಾನ ದೃಢೀಕೃತ ಪತ್ರದ ಪ್ರತಿಯನ್ನು ಅರ್ಜಿ ನಮೂನೆಯೊಂದಿಗೆ ಸಲ್ಲಿಸಬೇಕು. ಜು.23ರಿಂದ ಹಿಂದಿನ ಒಂದು ವರ್ಷದ ಅವಧಿಯಲ್ಲಿ ಸಾಲ ಪಡೆದಿರುವ, ಚರಾಸ್ತಿ ಅಡಮಾನ ಇಟ್ಟಿ ರುವ ಅಥವಾ ಜಾಮೀನು ಆಗಿರುವ ದಾಖಲೆಗಳನ್ನು ಸಲ್ಲಿಸಬೇಕು. ಸಣ್ಣ ರೈತ ರಲ್ಲದ, ಭೂರಹಿತ ಕೃಷಿ ಕಾರ್ಮಿಕರಲ್ಲದ ಎಲ್ಲಾ ಮೂಲಗಳಿಂದ 1.20 ಲಕ್ಷ ರೂ. ವಾರ್ಷಿಕ ವರಮಾನ ಹೊಂದಿರುವವ ರನ್ನು `ದುರ್ಬಲ ವರ್ಗ’ ಎಂದು ಗುರುತಿ ಸಲಾಗಿದೆ. ಸಣ್ಣ ರೈತರು ಸಹ ಇವೇ ದಾಖಲೆ ಗಳ ಜತೆ ಅರ್ಜಿ ಸಲ್ಲಿಬಹುದಾಗಿದೆ.

ಕಳೆದ ಒಂದು ವಾರದಿಂದ ಆಕಾಂಕ್ಷಿ ಗಳ ಸಂಖ್ಯೆ ಜಿಲ್ಲಾಧಿಕಾರಿ ಕಚೇರಿ ಬಳಿ ಹೆಚ್ಚಾಗಿ ಕಂಡು ಬರುತ್ತಿದೆ. ಗ್ರಾಮೀಣ ಪ್ರದೇಶದಿಂದ ಬರುವವರೇ ಹೆಚ್ಚಾಗುತ್ತಿರು ವುದರಿಂದ ಅರ್ಜಿ ಭರ್ತಿ ಮಾಡಿಕೊಡ ಲೆಂದೇ ಕೆಲವು `ಬರಹಗಾರರು’ ಹಣ ಪಡೆದು ಅರ್ಜಿ ಭರ್ತಿ ಮಾಡಿಕೊಡುತ್ತಿದ್ದಾರೆ.

ಹಣದ ಡಿಮ್ಯಾಂಡ್: `ಉರಿಯುವ ಮನೆಯ ಗಳ ಹಿರಿದಂತೆ’ ಎನ್ನುವಂತೆ ಅರ್ಜಿ ನಮೂನೆಗೂ ಹಣ ಪಡೆಯುತ್ತಿ ದ್ದಾರೆ. ಕೆಲವರು ಹತ್ತಾರು ಅರ್ಜಿಗಳನ್ನು ಇಟ್ಟುಕೊಂಡು 100ರಿಂದ 500 ರೂ. ವರೆಗೆ ಮಾರಾಟ ಮಾಡುತ್ತಿದ್ದಾರೆ. ಅದ ರಲ್ಲೂ ತಾಲೂಕು ಕೇಂದ್ರಗಳಲ್ಲಿ ಅರ್ಜಿ ಗಾಗಿ ಹಣದ ಡಿಮ್ಯಾಂಡ್ ಹೆಚ್ಚಾಗಿದೆ. ಗುಂಡ್ಲುಪೇಟೆಯಲ್ಲಿ ಕೆಲವು ಏಜೆಂಟರು ಅರ್ಜಿವೊಂದಕ್ಕೆ 500 ರೂ. ಪಡೆದು ಕೊಳ್ಳುತ್ತಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

Translate »