ಕರ್ನಾಟಕ ಋಣ ಪರಿಹಾರ ಕಾಯ್ದೆ ವ್ಯಾಪ್ತಿಯಿಂದ ತಮ್ಮನ್ನು ಕೈಬಿಡುವಂತೆ ಪಾನ್ ಬ್ರೋಕರ್ಸ್ ಮನವಿ
ಮೈಸೂರು

ಕರ್ನಾಟಕ ಋಣ ಪರಿಹಾರ ಕಾಯ್ದೆ ವ್ಯಾಪ್ತಿಯಿಂದ ತಮ್ಮನ್ನು ಕೈಬಿಡುವಂತೆ ಪಾನ್ ಬ್ರೋಕರ್ಸ್ ಮನವಿ

September 1, 2019

ಮೈಸೂರು,ಆ.31(ಎಂಟಿವೈ)-ಸರ್ಕಾರಕ್ಕೆ ಎಲ್ಲಾ ಬಗೆಯ ತೆರಿಗೆ ಪಾವತಿಸಿ ಕಾನೂನು ಬದ್ಧವಾಗಿ ವ್ಯವಹಾರ ನಡೆ ಸುತ್ತಿರುವುದರಿಂದ ಕರ್ನಾಟಕ ಋಣ ಪರಿಹಾರ ಕಾಯ್ದೆ- 2018ರ ವ್ಯಾಪ್ತಿಗೆ ಪಾನ್ ಬ್ರೋಕರ್‍ಗಳನ್ನು ಸೇರಿಸದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪಾನ್ ಬ್ರೋಕರ್ಸ್ ಅಸೋಸಿಯೇಷನ್ ಮನವಿ ಸಲ್ಲಿಸಿದೆ.

ಈ ಹಿಂದಿನ ಸರ್ಕಾರ ಜಾರಿಗೆ ತಂದಿರುವ ಕರ್ನಾ ಟಕ ಋಣ ಪರಿಹಾರ ಕಾಯ್ದೆಯಡಿ ಪಾನ್ ಬ್ರೋಕರ್ಸ್ ಗಳಲ್ಲಿ ಗಿರಿವಿ ಇಟ್ಟಿರುವ ಆಭರಣಗಳು ಬರಲಿರುವ ಹಿನ್ನೆಲೆಯಲ್ಲಿ ಈಗಾಗಲೇ ಮೈಸೂರು ಸೇರಿದಂತೆ ರಾಜ್ಯದೆಲ್ಲೆಡೆ ಆಕಾಂಕ್ಷಿಗಳು ಋಣ ಪರಿಹಾರ ಕಾಯ್ದೆಯಡಿ ಗಿರಿವಿ ಇಟ್ಟಿರುವ ಆಭರಣಗಳ ಮಾಹಿತಿ ನೀಡುತ್ತಿರು ವುದರಿಂದ ಚಿಂತೆಗೀಡಾಗಿರುವ ಪಾನ್‍ಬ್ರೋಕರ್ಸ್ ಕಾನೂನು ಸಮರ ಸಾರಲು ಮುಂದಾಗಿದ್ದು, ತಮ್ಮನ್ನು ಈ ಕಾಯ್ದೆ ವ್ಯಾಪ್ತಿಗೆ ಸೇರಿಸದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ್ದಾರೆ. ಇದರೊಂದಿಗೆ ಋಣ ಪರಿಹಾರ ಕಾಯ್ದೆಯಡಿ ಪಾನ್ ಬ್ರೋಕÀರ್ಸ್‍ಗಳನ್ನು ಸೇರಿಸಿರುವ ಬಗ್ಗೆ ಸರ್ಕಾರದ ನಿಲು ವನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಪಾನ್ ಬ್ರೋಕರ್ಸ್ ಅಸೋಸಿಯೇಷನ್ ಮೈಸೂರು ಘಟಕದ ವಕ್ತಾರ ದೀಪಕ್ ಬೋರಾ `ಮೈಸೂರು ಮಿತ್ರ’ ನೊಂದಿಗೆ ಮಾತನಾಡಿ, ಸರ್ಕಾರದ ಅನುಮತಿ ಪಡೆದು ಕಾನೂನು ಬದ್ಧವಾಗಿ ಪಾನ್ ಬ್ರೋಕರ್ಸ್ ವಹಿವಾಟು ನಡೆಸುತ್ತಿದ್ದೇವೆ. ಸರ್ಕಾರ ಸೂಚಿಸಿರುವಂತೆ ಶೇ.14ಕ್ಕಿಂತ ಹೆಚ್ಚು ಬಡ್ಡಿ ಪಡೆಯುತ್ತಿಲ್ಲ. ಟ್ರೇಡ್ ಲೈಸನ್ಸ್ ಪಡೆದು ವಾಣಿಜ್ಯ ತೆರಿಗೆ, ಕಾರ್ಮಿಕ ತೆರಿಗೆ, ಮುನ್ಸಿಪಲ್ ಟ್ಯಾಕ್ಸ್ ಸೇರಿದಂತೆ ಎಲ್ಲಾ ವಿಧದ ತೆರಿಗೆಯನ್ನೂ ಪಾವತಿಸುತ್ತಿ ದ್ದೇವೆ. ಈ ವಹಿವಾಟು ಆರಂಭಕ್ಕೂ ಮುನ್ನ ಸರ್ಕಾರ ದಲ್ಲಿ 50 ಸಾವಿರ ಡಿಪಾಸಿಟ್ ಇಟ್ಟಿರುತ್ತೇವೆ. ಇದಕ್ಕೆ ಸರ್ಕಾರ ಬಡ್ಡಿ ನೀಡುತ್ತಿಲ್ಲ. ಇದರಿಂದ ವಾರ್ಷಿಕ 4500 ರೂ ನಷ್ಟವಾಗುತ್ತಿದೆ. ಸರ್ಕಾರ ಸಾಲಮನ್ನಾ ಯೋಜನೆ ಯನ್ನೂ ಜಾರಿಗೊಳಿಸಿದ ನಂತರ ಈಗ ಋಣ ಪರಿ ಹಾರ ಕಾಯ್ದೆಯನ್ನೂ ಅನುಷ್ಠಾನಕ್ಕೆ ತಂದು ಪಾನ್ ಬ್ರೋಕರ್ಸ್‍ಗಳನ್ನು ಅದರ ವ್ಯಾಪ್ತಿಗೆ ಸೇರಿಸಿರುವುದು ಸರಿಯಲ್ಲ. ನಮ್ಮನ್ನು ಕಾಯ್ದೆಯಿಂದ ಹೊರಗಿಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ನ್ಯಾಯಾ ಲಯದ ಮೆಟ್ಟಿಲು ಏರಿದ್ದೇವೆ. ಕಾನೂನು ಹೋರಾ ಟಕ್ಕೂ ನಿರ್ಧರಿಸಿದ್ದೇವೆ ಎಂದರು. ಮತ್ತೊಬ್ಬ ವಕ್ತಾರ ಸುನೀಲ್ ಸೇಥಿಯಾ ಮಾತನಾಡಿ, ಸರ್ಕಾರ ನಿಗದಿ ಮಾಡಿರುವುದಕ್ಕಿಂತ ಹೆಚ್ಚಿನ ಪ್ರಮಾಣದ ಬಡ್ಡಿ ಪಡೆದ ಒಂದೇ ಒಂದು ಪ್ರಕರಣ ಇಲ್ಲ. ಪಾನ್ ಬ್ರೋಕರ್‍ಗಳ ಮೇಲೆ ಕ್ರಿಮಿನಲ್ ಪ್ರಕರಣ ಯಾವ ಸಂದರ್ಭದಲ್ಲೂ ದಾಖಲಾಗಿಲ್ಲ. ಋಣ ಪರಿಹಾರ ಕಾಯ್ದೆ ಜಾರಿಗೆ ಬಂದ ನಂತರ ಎಲ್ಲೆಡೆ ಪಾನ್ ಬ್ರೋಕರ್‍ಗಳನ್ನು ಅಪರಾಧಿಗಳಂತೆ ನೋಡು ತ್ತಿದ್ದಾರೆ. ಈ ಕಾಯ್ದೆಯಿಂದ ನಮ್ಮ ಕುಟುಂಬ ಬೀದಿಗೆ ಬೀಳುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ಕಾಯ್ದೆಯಿಂದ ನಮ್ಮನ್ನು ಹೊರಗಿಡಬೇಕು. ಸಾವಿರಾರು ಕೋಟಿ ರೂ. ವಂಚನೆ ಮಾಡುವವರ ಮೇಲೆ ಯಾವುದೇ ಕ್ರಮ ಕೈಗೊಳ್ಳದ ಸರ್ಕಾರ ನಿಯಮಾನುಸಾರ ವಹಿವಾಟು ಮಾಡುವ ಪಾನ್ ಬ್ರೋಕರ್ಸ್‍ಗಳನ್ನು ಗುರಿ ಮಾಡಿ, ಶೋಷಣೆ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Translate »