ವಿದ್ಯಾರ್ಹತೆ ನಿರ್ಬಂಧ ತೆರವು: ಇಂದಿನಿಂದ ಚಾಲನಾ ಪರಿಣಿತರೆಲ್ಲರಿಗೂ ಪರವಾನಗಿ
ಮೈಸೂರು

ವಿದ್ಯಾರ್ಹತೆ ನಿರ್ಬಂಧ ತೆರವು: ಇಂದಿನಿಂದ ಚಾಲನಾ ಪರಿಣಿತರೆಲ್ಲರಿಗೂ ಪರವಾನಗಿ

September 1, 2019

ಮೈಸೂರು,ಆ.31(ಎಂಟಿವೈ)- ವಾಹನ ಚಾಲನಾ ಪರವಾನಗಿ ನೀಡಲು ಕಡ್ಡಾಯ ವಿದ್ಯಾರ್ಹತೆಯ ಮಾನದಂಡ ತೆಗೆದು ಹಾಕುವಂತೆ ನಡೆಸಿದ ನಾಲ್ಕು ವರ್ಷಗಳ ಹೋರಾ ಟಕ್ಕೆ ಜಯ ಸಂದಿದ್ದು, ಕೇಂದ್ರ ಸರ್ಕಾರ ನಿಯಮವನ್ನು ಸಡಿಲ ಗೊಳಿಸಿ ಆದೇಶ ಹೊರಡಿಸಿದೆ. ಸೆ. 1ರಿಂದ ಜಾರಿಗೆ ಬರುವಂತೆ ಚಾಲನೆಯಲ್ಲಿ ಪರಿ ಣತಿ ಹೊಂದಿರುವವರಿಗೆಲ್ಲಾ ಪರವಾನಗಿ ನೀಡಲಿದೆ ಎಂದು ಶಾಸಕ ಎಸ್.ಎ. ರಾಮದಾಸ್ ತಿಳಿಸಿದ್ದಾರೆ.

ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ವಾಹನ ಚಾಲನಾ ಪರವಾನಗಿ ನೀಡಲು 8ನೇ ತರಗತಿ ವಿದ್ಯಾರ್ಹತೆ ಕಡ್ಡಾಯಗೊ ಳಿಸಲಾಗಿತ್ತು. ಇದರಿಂದ ದೇಶದಾದ್ಯಂತ 67 ಲಕ್ಷ ಚಾಲಕರು ಪರವಾನಗಿ ಇಲ್ಲದೆ ವಾಹನ ಚಲಾಯಿಸುತ್ತಿದ್ದಾರೆ. ಚಾಲಕರ ಸಂಕಷ್ಟವನ್ನು ಮನಗಂಡು ಕಳೆದ ನಾಲ್ಕು ವರ್ಷದ ಹಿಂದೆ ಭಾರತ್ ಇನ್ಫಾರ್‍ಮಲ್ ವರ್ಕರ್ಸ್ ಇನಿಷಿಯೇಟಿವ್ (ಬಿಹೆಚ್‍ಡಬ್ಲೂಐ) ಸಂಘಟನೆ ಹುಟ್ಟು ಹಾಕಿ ದೇಶದಾದ್ಯಂತ ಪ್ರವಾಸ ಮಾಡಿ ವಾಹನ ಚಾಲಕರ ಹಾಗೂ ಅಸಂಘಟಿತ ಕೆಲಸಗಾರರ ಸಮಸ್ಯೆ ಆಲಿಸಿ, ಅವರ ಬೇಡಿಕೆ ಮತ್ತು ಸಮಸ್ಯೆಗಳ ಕುರಿತು ಅಧ್ಯಯನ ನಡೆಸಿ ಕೇಂದ್ರ ಸರ್ಕಾ ರಕ್ಕೆ ವರದಿ ಸಲ್ಲಿಸಲಾಗಿತ್ತು. ಇದಕ್ಕೆ ಕೇಂದ್ರ ಮಂತ್ರಿಗಳಾಗಿದ್ದ ಅನಂತ್ ಕುಮಾರ್ ಅವರ ಸಹಕಾರವೂ ದೊರೆತಿತ್ತು. ಈ ಹಿಂದೆ ಲೋಕಸಭೆಯಲ್ಲಿ ತಿದ್ದುಪಡಿ ಯಾಗಿರುವ ಬಿಲ್ ಪಾಸ್ ಆಗಿತ್ತು. ರಾಜ್ಯ ಸಭೆಯಲ್ಲಿ ಪಾಸ್ ಆಗಿರಲಿಲ್ಲ. ಇದೀಗ ರಾಜ್ಯಸಭೆಯಲ್ಲೂ ಬಿಲ್ ಪಾಸ್ ಆಗಿದ್ದು, ದೇಶದಾದ್ಯಂತ ಸೆ.1ರಿಂದ ಹೊಸ ನಿಯಮ ಜಾರಿಗೊಳ್ಳಲಿದೆ ಎಂದರು.

ಹೊಸ ನಿಯಮಾನುಸಾರ ಸೆ.4 ರಂದು ಗನ್‍ಹೌಸ್ ವೃತ್ತದ ಬಳಿ ಇರುವ ವಿದ್ಯಾ ಶಂಕರ ಕಲ್ಯಾಣ ಮಂಟಪದಲ್ಲಿ ಆಟೋ, ಗೂಡ್ಸ್ ವಾಹನ, ಕಾರ್, ಮಿನಿ ಲಾರಿ, ಟ್ರ್ಯಾಕ್ಟರ್, ರೋಡ್ ರೋಲರ್, ಜೆಸಿಬಿ, ಟ್ರಕ್ ಇನ್ನಿತರ ವಾಹನ ಚಾಲಕರುಗಳೊಂದಿಗೆ ಸಭೆಯನ್ನು ಏರ್ಪಡಿಸ ಲಾಗಿದೆ. ಈ ವೇಳೆ ಸಾರಿಗೆ ಇಲಾಖೆ ಅಧಿ ಕಾರಿಗಳು ಪಾಲ್ಗೊಳ್ಳ ಲಿದ್ದು, ಚಾಲನಾ ಪರ ವಾನಗಿ ನೀಡಲು ನೋಂದಣಿ ಮಾಡಿ ಕೊಳ್ಳಲಿದ್ದಾರೆ. ಚಾಲಕರು ತಮ್ಮ ವಿಳಾಸ, ವಯಸ್ಸಿಗೆ ಸಂಬಂಧಿಸಿದ ದಾಖಲೆ, ಎರಡು ಪಾಸ್‍ಪೆÇೀರ್ಟ್ ಭಾವಚಿತ್ರ ತೆಗೆದುಕೊಂಡು ಸಭೆಗೆ ಹಾಜರಾಗ ಬೇಕೆಂದು ಮನವಿ ಮಾಡಿದರು.

ಸೆ.17ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಹಿನ್ನೆಲೆ ಯಲ್ಲಿ ಮೈಸೂರಿನಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತದೆ. ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ, ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರ ಸಮ್ಮುಖದಲ್ಲಿ ಪ್ರಥಮವಾಗಿ ಮೈಸೂರಿನ ಚಾಲಕರಿಗೆ ಡಿಎಲ್ ನೀಡುವ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ನೆರೆ ಸಂತ್ರಸ್ತರಿಗೆ 4 ಸಾವಿರ ಕಿಟ್ ವಿತರಣೆ: ನೆರೆ ಸಂತ್ರಸ್ತರಿಗಾಗಿ ಸುಮಾರು 3500 ವೆಲ್‍ಕಂ ಕಿಟ್ ವಿತರಿಸಲಾಗಿದೆ. ಅಂತಿಮವಾಗಿ ಅಥಣಿಗೆ 425 ಕಿಟ್‍ಗಳನ್ನು ಕಳುಹಿಸಲಾಗುತ್ತಿದೆ. ಒಂದು ವಾರಕ್ಕೆ ಸಾಕಾಗುವಷ್ಟು ಆಹಾರ ಪದಾರ್ಥ ಹಾಗೂ ಒಂದು ಕುಟುಂಬಕ್ಕೆ ಆಗುವಷ್ಟು ಬಟ್ಟೆಗಳ 3500 ಕಿಟ್‍ಗಳನ್ನು ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ, ಸರಗೂರು ಹಾಗೂ ನಂಜನಗೂಡು ತಾಲೂಕು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ವಿತರಿಸಲಾಗಿದೆ. ಆಸರೆ ಫೌಂಡೇಶನ್, ಲೆಟ್ಸ್ ಡು ಇಟ್ ಸಂಸ್ಥೆ, ಜಿಎಸ್‍ಎಸ್ ಯೋಗ ಸಂಸ್ಥೆ, ಡಿಆರ್‍ಸಿ ಮೊದಲಾದ ಸಂಸ್ಥೆಗಳು ಈ ಕಾರ್ಯದಲ್ಲಿ ಕೈಜೋಡಿಸಿದ್ದು, ಪರಿಹಾರ ಸಾಮಗ್ರಿ ವಿತರಣೆಯಲ್ಲಿ ನಾಗರಿಕರ ಸಹಕಾರವೂ ಉತ್ತಮವಾಗಿತ್ತು. ನೂರಾರು ಸ್ವಯಂಸೇವಕರು ಪರಿಹಾರ ಸಾಮಗ್ರಿ ವಿತರಣೆಗೆ ಶ್ರಮಿಸಿದರು. ಇಂದಿನಿಂದ ಸಾರ್ವ ಜನಿಕರಿಂದ ಅಗತ್ಯ ವಸ್ತುಗಳ ಸಂಗ್ರಹ ಅಭಿ ಯಾನವನ್ನು ಸ್ಥಗಿತಗೊಳಿಸುತ್ತಿದ್ದೇವೆ ಎಂದರು.

ಮೈಸೂರು ಜಿಲ್ಲೆಯ ನೆರೆ ಪೀಡಿತ ಎಲ್ಲ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿ ಸಿದ್ದೇವೆ. 2717 ಮನೆಗಳಿಗೆ ಹಾನಿಯಾಗಿರು ವುದನ್ನು ಗುರುತಿಸಲಾಗಿದೆ. ಇವರಿಗೆ ತಲಾ 5 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡಲು ಜಿಲ್ಲಾಡಳಿತಕ್ಕೆ ತಿಳಿಸಲಾಗಿದೆ. ಬಾಡಿಗೆ ಮನೆಯಲ್ಲಿದ್ದು ನಿರಾಶ್ರಿತರಾಗಿರು ವವರಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ಕೊಡಿಸುವ ಪ್ರಯತ್ನ ಮಾಡುವುದಾಗಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಎಸ್‍ಎಸ್ ಫೌಂಡೇಷನ್ ಮುಖ್ಯಸ್ಥ ಶ್ರೀಹರಿ, ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ಸೇಫ್ ವೀಲ್ಸ್ ಸಂಸ್ಥೆ ಬಿ.ಎಸ್.ಪ್ರಶಾಂತ್, ಲೆಟ್ಸ್ ಡೂ ಇಟ್ ಸಂಸ್ಥೆಯ ಶಿವಪ್ರಸಾದ್ ಇದ್ದರು.

Translate »