ಪಂಜಿನ ಕವಾಯಿತು ಮೈದಾನದ ಅಭಿವೃದ್ಧಿಗೆ 30 ಕೋಟಿ ಅನುದಾನ ಕಲ್ಪಿಸಿ
ಮೈಸೂರು

ಪಂಜಿನ ಕವಾಯಿತು ಮೈದಾನದ ಅಭಿವೃದ್ಧಿಗೆ 30 ಕೋಟಿ ಅನುದಾನ ಕಲ್ಪಿಸಿ

September 1, 2019

ಮೈಸೂರು,ಆ.31(ಆರ್‍ಕೆ)- ಮಳೆ ಯಿಂದ ರಕ್ಷಣೆ ಪಡೆಯಲು ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ವನ್ನಾಗಿ ಬನ್ನಿಮಂಟಪದ ಪಂಜಿನ ಕವಾ ಯಿತು ಮೈದಾನ ಅಭಿವೃದ್ಧಿ ಪಡಿಸಲು 30 ಕೋಟಿ ರೂ. ಅನುದಾನ ಕೊಡಿಸಿ ಎಂದು ಶಾಸಕ ತನ್ವೀರ್ ಸೇಟ್ ಅವರು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಗೆ ಇಂದಿಲ್ಲಿ ಮನವಿ ಮಾಡಿದರು.

ಅರಮನೆಯಿಂದ ಜಂಬೂ ಸವಾರಿ ಸಾಗುವ ರಾಜಮಾರ್ಗದುದ್ದಕ್ಕೂ ಕಾಲ್ನ ಡಿಗೆ ಮೂಲಕ ಸಾಂಕೇತಿಕವಾಗಿ ಪರಿ ಶೀಲನೆ ನಡೆಸಿ ಬನ್ನಿಮಂಟಪ ತಲುಪಿದ ಸಚಿವರನ್ನು ಪಂಜಿನ ಕವಾಯಿತು ಮೈದಾನದಲ್ಲಿ ಸಂಪರ್ಕಿಸಿದ ತನ್ವೀರ್ ಸೇಟ್, ನಾನು ದಸರಾಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ತಿಳಿಸಿದರು.

ಟಾರ್ಚ್‍ಲೈಟ್ ಪರೇಡ್‍ನಲ್ಲಿ ಮುಡಾ ದಿಂದ ಅರ್ಧದಷ್ಟು ಅಭಿವೃದ್ಧಿ ಮಾಡ ಲಾಗಿದೆ. ಮಳೆ ಬಂದರೆ ಇಲ್ಲಿ ಜನರು ಬರಲು ಸಾಧ್ಯವಾಗುವುದಿಲ್ಲ. ಉಳಿದರ್ಧ ಭಾಗದ ಅಭಿವೃದ್ಧಿ ಹಾಗೂ ವರ್ಷ ಪೂರ್ತಿ ಉಪಯೋಗಿಸುವಂತೆ ಅಂತಾ ರಾಷ್ಟ್ರೀಯ ಮಟ್ಟದ ಕ್ರೀಡಾಂಗಣವನ್ನಾಗಿ ಪರಿವರ್ತಿಸಲು ಕ್ರಿಯಾಯೋಜನೆ ತಯಾರಿಸಿ 30 ಕೋಟಿ ರೂ. ಅನುದಾನ ಕೋರಿ ಈ ಹಿಂದೆಯೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಆ ಬಗ್ಗೆ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತನ್ವೀರ್‍ಸೇಟ್ ತಿಳಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಸಚಿವ ವಿ. ಸೋಮಣ್ಣ, ಪ್ರಸ್ತಾವನೆ ಕುರಿತು ಮತ್ತೊಮ್ಮೆ ತಮ್ಮೊಂದಿಗೆ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸುತ್ತೇನೆ. ಈಗ ದಸರಾ ಕಾರ್ಯ ಕ್ರಮಗಳು ಯಶಸ್ವಿಯಾಗಿ ನಡೆಯಲು ತಮ್ಮ ಸಹಕಾರ ಅಗತ್ಯವಿದೆ ಎಂದರು.
ಗವರ್ನರ್, ಸಿಎಂ ಸೇರಿದಂತೆ ಗಣ್ಯರು, ಅತಿಗಣ್ಯರು ಸಾಗುವ ಪ್ರವೇಶ ದ್ವಾರ ಗಳನ್ನು ತೆರೆದು ಯಾವುದೇ ಗೊಂದಲ ಉಂಟಾಗದಂತೆ ವ್ಯವಸ್ಥೆ ಮಾಡಬೇಕು ಹಾಗೂ ಇಡೀ ಪಂಜಿನ ಕವಾಯಿತು ಮೈದಾನದಲ್ಲಿ ಸುವ್ಯವಸ್ಥೆ ಕಲ್ಪಿಸಿ ಭದ್ರತೆ ಒದಗಿಸಿ ಎಂದು ಸೋಮಣ್ಣ ಅವರು ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಅವರಿಗೆ ಸೂಚನೆ ನೀಡಿದರು.

Translate »