ಗೌರಿ-ಗಣೇಶ ಮೂರ್ತಿಗಳ ಭರ್ಜರಿ ಮಾರಾಟ
ಮೈಸೂರು

ಗೌರಿ-ಗಣೇಶ ಮೂರ್ತಿಗಳ ಭರ್ಜರಿ ಮಾರಾಟ

September 2, 2019

ಮೈಸೂರು, ಸೆ.1(ಎಂಟಿವೈ)- ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಭಾನುವಾರ ಮೈಸೂರಿನಲ್ಲಿ ಗೌರಿ-ಗಣೇಶ ಮೂರ್ತಿ ಹಾಗೂ ಪೂಜಾ ಸಾಮಗ್ರಿಗಳ ಮಾರಾಟ ಭರ್ಜರಿಯಾಗಿ ನಡೆಯಿತು.

ಮೈಸೂರಿನ ದೇವರಾಜ ಮಾರುಕಟ್ಟೆ, ಧನ್ವಂತರಿ ರಸ್ತೆ, ಶೇಷಾದ್ರಿ ಅಯ್ಯರ್ ರಸ್ತೆ, ಅಗ್ರಹಾರ ವೃತ್ತ, ರಾಮಕೃಷ್ಣನಗರ ವೃತ್ತ, ಕುವೆಂಪುನಗರ, ಪಡುವಾರಹಳ್ಳಿ, ಒಂಟಿ ಕೊಪ್ಪಲು, ಕುಂಬಾರಕೊಪ್ಪಲು, ಟೆರೆಷಿ ಯನ್ ಕಾಲೇಜು ವೃತ್ತ ಸೇರಿದಂತೆ ವಿವಿ ಧೆಡೆ ಹೂವು, ಹಣ್ಣು, ಬಾಳೆಕಂಬ, ಮಾವಿನ ಸೊಪ್ಪು ಸೇರಿದಂತೆ ಪೂಜಾ ಸಾಮಗ್ರಿಗಳ ಮಾರಾಟ ಉತ್ತಮವಾಗಿ ಸಾಗಿತು. ಬೆಳಗ್ಗಿ ನಿಂದ ಮಧ್ಯಾಹ್ನದವರೆಗೂ ತುಂತುರು ಹನಿ ಹಾಗೂ ಮೋಡಕವಿದ ವಾತಾ ವರಣವಿದ್ದ ಹಿನ್ನೆಲೆಯಲ್ಲಿ ಪೂಜಾ ಸಾಮಗ್ರಿ ಗಳ ಮಾರಾಟ ಮಂಕಾಗಿತ್ತು. ಅಗತ್ಯ ವಸ್ತು ಗಳನ್ನು ಖರೀದಿಸಲು ಮಾರುಕಟ್ಟೆಗೆ ಬಂದ ಜನರ ಸಂಖ್ಯೆ ಕ್ಷೀಣಿಸಿತ್ತು. ಜನರಲ್ಲಿ ಹಬ್ಬ ಆಚರಣೆಯಲ್ಲಿ ಉತ್ಸಾಹ ಇಲ್ಲದಂತೆ ಕಂಡು ಬಂದ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಪೆಚ್ಚು ಮೋರೆ ಹಾಕಿಕೊಳ್ಳುವಂತಾಗಿತ್ತು. ಆದರೆ ಮಧ್ಯಾಹ್ನ 12.30ರ ನಂತರ ಹಬ್ಬದ ವಸ್ತು ಗಳ ಖರೀದಿಗೆ ಮಾರುಕಟ್ಟೆಗೆ ತಂಡೋಪ ತಂಡವಾಗಿ ಆಗಮಿಸಿದ್ದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ನೂಕುನುಗ್ಗಲು ಉಂಟಾಗಿತ್ತು. ಅಹಿತಕರ ಘಟನೆ ನಡೆದಂತೆ ದೇವರಾಜ ಪೊಲೀಸರು ಕಟ್ಟೆಚ್ಚರವಹಿಸಿದ್ದರು. ಏಕಮುಖ ಸಂಚಾರದ ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ಒಂದು ದ್ವಾರದಿಂದ ಮಾರುಕಟ್ಟೆಗೆ ಬಂದವರು ಮತ್ತೊಂದು ದ್ವಾರದ ಮೂಲಕ ವಾಪಸ್ಸಾಗಬೇಕಾಗಿತ್ತು. ಇದರಿಂದ ಹಣ್ಣು, ತರಕಾರಿ ಖರಿದಿಸಲು ಬಂದವರು ಅಡೆತಡೆಯಿಲ್ಲದೆ ಸಂಚರಿಸಲು ಸಾಧ್ಯವಾಯಿತು.

ತರಕಾರಿಗೂ ಬೇಡಿಕೆ: ಹಬ್ಬದ ಹಿನ್ನೆಲೆಯಲ್ಲಿ ಪೂಜಾ ಸಾಮಗ್ರಿಗಳ ಮಾರಾಟ ದೊಂದಿಗೆ ತರಕಾರಿಗಳ ಖರಿದಿಯೂ ಭರ್ಜರಿಯಾಗಿ ನಡೆಯಿತು. ಬೀನ್ಸ್ ಕೆಜಿ 70, ತೆಂಗಿನ ಕಾಯಿವೊಂದಕ್ಕೆ 15-20 ರೂ., ಮೆಣಸಿನಕಾಯಿ ಕೆಜಿ 30 ರೂ., ಬೆಳ್ಳುಳ್ಳಿ ಕೆಜಿಗೆ 160 ರೂ. ಅವರೆಕಾಯಿ ಕೆ.ಜಿಗೆ 30 ರೂ., ಬೆಂಡೆಕಾಯಿ 20 ರೂ., ಕರಿಬೇವು 1 ಕಂತೆಗೆ 5 ರೂ., ಸೊಪ್ಪುಗಳು ದಂಟು ಎರಡೂವರೆ, ಸಪ್ಸಿಗೆ 3 ರೂ., ಕೊತ್ತಂಬರಿ 3 ರೂ. ಪಲಕ್ 3 ರೂ. ಮೆಂತ್ಯಾ 5 ರೂ. ದರ ನಿಗದಿ ಮಾಡಲಾಗಿತ್ತು. ಮಲ್ಲಿಗೆ-ಮರಳೆ ಹೂ ಗಳ.ದರದಲ್ಲಿ ಶನಿವಾರಕ್ಕಿಂತ ಕೊಂಚಮಟ್ಟಿಗೆ ಏರಿಕೆ ಕಂಡಿದೆ. ಮಲ್ಲಿಗೆ ಕೆ.ಜಿಗೆ 800- 1000 ರೂ. ಮರಳೆ 600-800 ರೂ. ಸೇವಂತಿಗೆ ಮಾರಿಗೆ 30-60ರವರೆಗೆ ಹೀಗೆ ವಿವಿಧ ಬೆಲೆಗಳಲ್ಲಿ ಮಾರಾಟವಾದವು ಕಂಡುಬಂತು. ಬೀನ್ಸ್ ಕೆ.ಜಿ.ಗೆ 70, ಕ್ಯಾರೆಂಟ್ ಕೆ.ಜಿ.ಗೆ 30 ರೂ.ತೆಂಗಿನ ಕಾಯಿ 12-15-20, ಮೆಣಸಿನಕಾಯಿ ಕೆ.ಜಿ.30ರೂ. ಬೆಳ್ಳುಳ್ಳಿ ಕೆ.ಜಿಗೆ 160ರೂ. ಅವರೆಕಾಯಿ 30ರೂ. ಗರಿಕೆ 10ರೂ. ವಿಶೇಷವಾಗಿ ಜನರು ತಳಿರು ತೋರಣ ಗಳನ್ನು ಕಟ್ಟುವ ಸಲುವಾಗಿ ಬಾಳೆಗೊನೆಗಳನ್ನು ಹೆಚ್ಚಾಗಿ ವ್ಯಾಪಾರ ಕಂಡು ಬಂತು.

Translate »