ನವದೆಹಲಿ, ಸೆ.1- ಭಾರತ ಹಾಗೂ ಸ್ವಿಸ್ ಬ್ಯಾಂಕ್‍ನ ರಹಸ್ಯಗಳು ದಶಕಗಳ ಹಳೆಯ ಸುದ್ದಿಯಾಗಿದೆ. ಆದರೆ ಇಂದಿ ನಿಂದ ಸ್ವಿಸ್ ಬ್ಯಾಂಕಿನ ಖಾತೆಗಳು ರಹಸ್ಯ ವಾಗಿರಲು ಸಾಧ್ಯವಿಲ್ಲ. ಸ್ವಿಸ್ ಖಾತೆಯ ಲ್ಲಿನ ಎಲ್ಲಾ ಮಾಹಿತಿಗಳು ಇನ್ನು ನೇರ ವಾಗಿ ಭಾರತ ಸರ್ಕಾರಕ್ಕೆ ಇಂದಿನಿಂದ ರವಾನೆಯಾಗಲಿದೆ. 2018 ಕ್ಯಾಲೆಂಡರ್ ವರ್ಷದಿಂದ ಹಿಡಿದು ಸ್ವಿಸ್ ಬ್ಯಾಂಕ್‍ನಲ್ಲಿನ ಎಲ್ಲಾ ಭಾರತೀಯರ ಖಾತೆಗಳ ಮಾಹಿತಿ ಇಂದಿನಿಂದ ಭಾರತಕ್ಕೆ ವರ್ಗಾವಣೆಯಾಗಲಿದೆ. ಖಾತೆದಾರರ ವಿವರ, ಹಣ, ವರ್ಗಾ ವಣೆ, ಖಾತೆ ರದ್ದತಿ ಸೇರಿ ಪ್ರತಿ ವಿವರಗಳು ಕೂಡ ತನ್ನಿಂತಾನೆ ವರ್ಗಾವಣೆಯಾಗ ಲಿದೆ. ಕಪ್ಪು ಹಣ ನಿಯಂತ್ರಣ ಸಲುವಾಗಿ ಭಾರತ ಸರ್ಕಾರ ಈ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿತ್ತು. ಭಾರತದ ಸಿಬಿಟಿಡಿ ಹಾಗೂ ಸ್ವಿಸ್ ಬ್ಯಾಂಕ್ ನಡುವೆ ಎಲ್ಲಾ ನೀತಿ-ನಿಯಮಗಳು ಅಂತಿಮಗೊಂಡ ಬಳಿಕ ನೇರ ಮಾಹಿತಿ ರವಾನೆ ವ್ಯವಸ್ಥೆ ಅಂತಿಮಗೊಂಡಿದೆ. ಒಂದು ಕಾಲದಲ್ಲಿ ಸಾವಿರಾರು ಕೋಟಿ ಹಣವನ್ನು ಸ್ವಿಸ್ ಬ್ಯಾಂಕ್‍ನಲ್ಲಿ ಭಾರತೀಯರು ಇರಿಸಿದ್ದರು. ಆದರೆ ಈ ಒಪ್ಪಂದ ಆಗುತ್ತಿದ್ದಂತೆ ಅಲ್ಲಿಂದ ಹಣವನ್ನು ಬೇರೆಡೆ ವರ್ಗಾಯಿಸಲಾಗಿದೆ ಎಂಬ ಆರೋಪವಿದೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಸ್ವಿಸ್ ಬ್ಯಾಂಕ್ ಖಾತೆಯಲ್ಲಿನ ಹಣ ಕಡಿಮೆಯಾಗುತ್ತಿದೆ. ಸದ್ಯಕ್ಕೆ ಸ್ವಿಸ್ ಬ್ಯಾಂಕ್‍ನಲ್ಲಿ ಭಾರತೀಯರು ಕೇವಲ 2,500 ಕೋಟಿ ರೂ ಠೇವಣಿ ಹೊಂದಿದ್ದಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಸ್ವಿಸ್ ಬ್ಯಾಂಕ್‍ನಲ್ಲಿ ಖಾತೆ ಹೊಂದಿದ್ದರೆಲ್ಲರದ್ದೂ ಅಕ್ರಮ ಖಾತೆ ಎಂದೇನಲ್ಲ. ತೆರಿಗೆ ಪಾವತಿಸಿ ಕಾನೂನು ಬದ್ಧವಾಗಿಯೂ ಖಾತೆ ಹೊಂದಲು ಅವಕಾಶವಿದೆ.